Latest Updates
-
ಬಿರುಗಾಳಿ ಮತ್ತು ಬಿಸಿಲ ಬೇಗೆ: ನಿಮ್ಮ ಮನೆ ಮತ್ತು ಗಿಡಗಳನ್ನು ರಕ್ಷಿಸಿಕೊಳ್ಳುವುದು ಹೇಗೆ? -
ಬಿಸಿಲ ಬೇಗೆಯಿಂದ ಸುಸ್ತಾಗಿದ್ದೀರಾ? ನಿಮ್ಮ ಜೀವ ಉಳಿಸುವ ಸರಳ ಮನೆಮದ್ದುಗಳಿವು! -
ಬಿಸಿಲಿನ ಬೇಗೆಗೆ ತತ್ತರಿಸಿದ್ದೀರಾ? ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ಈ ಕೂಲಿಂಗ್ ಹ್ಯಾಕ್ಸ್ ಮಿಸ್ ಮಾಡ್ಬೇಡಿ! -
ಬದಲಾಗುತ್ತಿರುವ ಹವಾಮಾನ: ನಿಮ್ಮ ಫಿಟ್ನೆಸ್ ದಿನಚರಿಯನ್ನು ಬದಲಾಯಿಸದಿದ್ದರೆ ಕಾದಿದೆ ಅಪಾಯ! -
ವಾಟ್ಸಾಪ್ನಲ್ಲಿ ಪ್ರೀತಿಯ ಬಲೆ: ನಿಮ್ಮ ಖಾತೆ ಖಾಲಿಯಾಗುವ ಮುನ್ನ ಈ ಎಚ್ಚರಿಕೆ ವಹಿಸಿ! -
ದೆಹಲಿ-ಎನ್ಸಿಆರ್ನಲ್ಲಿ ಧೂಳಿನ ಬಿರುಗಾಳಿ ಅಬ್ಬರ: ನಿಮ್ಮ ಮನೆ ಮತ್ತು ಗಿಡಗಳನ್ನು ರಕ್ಷಿಸಿಕೊಳ್ಳುವುದು ಹೇಗೆ? -
ಬೇಸಿಗೆಯ ಧಗೆಗೆ ಸುಸ್ತಾಗಿದ್ದೀರಾ? ಈ ಸಾಂಪ್ರದಾಯಿಕ ಆಹಾರಗಳಿದ್ದರೆ ಬಿಸಿಲು ನಿಮ್ಮನ್ನೇನೂ ಮಾಡಲ್ಲ! -
ಅಂತರಾಷ್ಟ್ರೀಯ ನೃತ್ಯ ದಿನ: ಸೋಶಿಯಲ್ ಮೀಡಿಯಾದಲ್ಲಿ ಡ್ಯಾನ್ಸ್ ಅಬ್ಬರ, ನೀವು ಮಿಸ್ ಮಾಡ್ಬೇಡಿ! -
ಬಿಸಿಲ ಧಗೆಯಲ್ಲಿ ವರ್ಕೌಟ್ ಮಾಡ್ತಿದ್ದೀರಾ? ನಿಮ್ಮ ಆರೋಗ್ಯಕ್ಕೆ ಕಾದಿದೆ ದೊಡ್ಡ ಅಪಾಯ, ಈ ತಪ್ಪುಗಳನ್ನು ಮಾಡಬೇಡಿ! -
ಬಿಸಿಲಿನ ಬೇಗೆಯಲ್ಲಿ ಮದುವೆ ಸಂಭ್ರಮ: ಅತಿಥಿಗಳ ಆರೋಗ್ಯ ಕಾಪಾಡಲು ಪ್ಲಾನ್ ಬದಲಾಯಿಸುವುದು ಅನಿವಾರ್ಯವೇ?
ಲಕ್ಷ್ಮೀ ನಾರಾಯಣ ರಾಜಯೋಗ : ಈ 3 ರಾಶಿಯವರು ಮುಟ್ಟಿದ್ದೆಲ್ಲಾ ಚಿನ್ನವಾಗಲಿದೆ!
ಕರ್ಕಾಟಕ ರಾಶಿಯಲ್ಲಿ ಬುಧ ಮತ್ತು ಶುಕ್ರನ ಸಂಯೋಗ ಆಗುತ್ತಿರೋದ್ರಿಂದ ಮಂಗಳಕರವಾದ ಲಕ್ಷ್ಮೀ ನಾರಾಯಣ ರಾಜಯೋಗ ರೂಪುಗೊಳ್ಳಲಿದೆ. ಈ ಯೋಗವು ಮೂರು ರಾಶಿಯವರಿಗೆ ಅದೃಷ್ಟವನ್ನು ಹೊತ್ತು ತರಲಿದೆ. ಇನ್ನೂ ಬುಧ ಹಾಗೂ ಶುಕ್ರನ ಸಂಯೋಗದಿಂದ ದ್ವಾದಶ ರಾಶಿಗಳ ಮೇಲೂ ಪರಿಣಾಮವನ್ನು ಬೀರಲಿದ್ದು, ಅದ್ರಲ್ಲಿ ಮುಖ್ಯವಾಗಿ ಈ ಮೂರು ರಾಶಿಗಳು ಪ್ರಯೋಜನ ಪಡೆದುಕೊಳ್ಳಲಿದೆ. ಹಾಗಾದ್ರೆ ಆ ಮೂರು ರಾಶಿಗಳು ಯಾವುದು ಅನ್ನೋದನ್ನು ತಿಳಿಯೋಣ.
ಮೇಷ ರಾಶಿ
ಕರ್ಕಾಟಕ ರಾಶಿಯಲ್ಲಿ ಬುಧ ಮತ್ತು ಶುಕ್ರನ ಸಂಯೋಗವಾಗುತ್ತಿರೋದ್ರಿಂದ ಮೇಷ ರಾಶಿಯವರಿಗೆ ಅದೃಷ್ಟದ ಬಾಗಿಲು ತೆರೆಯಲಿದೆ. ಈ ಸಂದರ್ಭದಲ್ಲಿ ನೀವು ಹೊಸ ಮನೆ ಅಥವಾ ವಾಹನ ಖರೀದಿ ಮಾಡುವ ಸಾಧ್ಯತೆಯಿದೆ. ಅಥವಾ ಯಾವುದಾದರೂ ಐಷಾರಾಮಿ ವಸ್ತುವನ್ನು ಈ ಸಮಯದಲ್ಲಿ ನೀವು ಖರೀದಿ ಮಾಡಲಿದ್ದೀರಿ.

ಇನ್ನೂ ಉದ್ಯೋಗದಲ್ಲಿ ಇರುವವರು ಉತ್ತಮ ಪ್ರಗತಿಯನ್ನು ಕಾಣಲಿದ್ದಾರೆ. ಇನ್ನೂ ಅಂದುಕೊಂಡಕ್ಕೆ ಕೆಲಸಕ್ಕೆ ನೀವು ಕೆಲಸವನ್ನು ಮಾಡಿ ಮುಗಿಸಲಿದ್ದೀರಿ. ಇನ್ನೂ ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಇರುವವರು ಈ ಸಮಯದಲ್ಲಿ ಉತ್ತಮ ಪ್ರಯೋಜನವನ್ನು ಪಡೆಯಲಿದ್ದಾರೆ. ಒಂದು ರೀತಿ ನೀವು ಮುಟ್ಟಿದ್ದೆಲ್ಲಾ ಚಿನ್ನ ಆಗಲಿದೆ.
ತುಲಾ ರಾಶಿ
ಕರ್ಕಾಟಕ ರಾಶಿಯಲ್ಲಿ ಬುಧ ಮತ್ತು ಶುಕ್ರ ಸಂಯೋಗವಾಗುತ್ತಿರೋದ್ರಿಂದ ತುಲಾ ರಾಶಿಯವರ ಬಾಳಿನಲ್ಲಿ ಎಲ್ಲವೂ ಶುಭ ಆಗಲಿದೆ. ಈ ಸಮಯದಲ್ಲಿ ನಿಮ್ಮ ಉದ್ಯೋಗ ಹಾಗೂ ವ್ಯಾಪಾರದಲ್ಲಿ ಉತ್ತಮ ಅಭಿವೃದ್ಧಿಯನ್ನು ಕಾಣಲಿದ್ದೀರಿ. ಇನ್ನೂ ನೀವು ಅಂದುಕೊಂಡ ಕೆಲಸಗಳೆಲ್ಲಾ ನೆರವೇರುತ್ತದೆ. ಯಶಸ್ಸು ಸಿಗುತ್ತದೆ. ಹಾಗೂ ನೀವು ಸಾಧನೆಯ ಶಿಖರವನ್ನೇರುತ್ತೀರಿ.
ಈ ಸಂದರ್ಭದಲ್ಲಿ ನಿಮಗೆ ಉತ್ತಮ ಹೊಸ ಕೆಲಸದ ಅವಕಾಶಗಳು ಕೂಡ ಒಲಿದು ಬರುವ ಸಾಧ್ಯತೆ ಹೆಚ್ಚಾಗಿದೆ. ಇನ್ನೂ ಹೊಸ ಜನರ ಪರಿಚಯದಿಂದ ನಿಮ್ಮ ಬಾಳಿನಲ್ಲಿ ಎಲ್ಲವೂ ಒಳ್ಳೆಯದೇ ಆಗಲಿದೆ. ಇನ್ನೂ ವ್ಯಾಪಾರಸ್ಥರು ಈ ಸಮಯದಲ್ಲಿ ಉತ್ತಮ ಲಾಭವನ್ನು ಗಳಿಸಲಿದ್ದಾರೆ. ಹಾಗೂ ನಿಮ್ಮ ಆರ್ಥಿಕ ಪರಿಸ್ಥಿತಿ ಕೂಡ ಉತ್ತಮಗೊಳ್ಳಲಿದೆ.
ಮಕರ ರಾಶಿ
ಕರ್ಕಾಟಕ ರಾಶಿಯಲ್ಲಿ ಬುಧ ಮತ್ತು ಶುಕ್ರ ಸಂಯೋಗವಾಗುತ್ತಿರೋದ್ರಿಂದ ಮಕರ ರಾಶಿಯವರಿಗೆ ಈ ಸಮಯ ತುಂಬಾನೇ ಶುಭಕರವಾಗಿರಲಿದೆ. ಈ ಸಮಯದಲ್ಲಿ ಮಕರ ರಾಶಿಯವರು ಕೆಲಸ ಹಾಗೂ ವ್ಯಾಪಾರದಲ್ಲಿ ಯಶಸ್ಸನ್ನು ಪಡೆಯಲಿದ್ದಾರೆ. ಇನ್ನೂ ಇಷ್ಟು ದಿನ ಮದುವೆಯಾಗೋದಕ್ಕಾಗಿ ಸಂಗಾತಿಯನ್ನು ಹುಡುಕುತ್ತಿದ್ದವರಿಗಾಗಿ ಈ ಸಮಯದಲ್ಲಿ ಕಂಕಣ ಭಾಗ್ಯ ಕೂಡಿ ಬರಲಿದೆ. ಮದುವೆಯ ದಿನಾಂಕ ಕೂಡ ಖಾತರಿ ಆಗುವ ಸಾಧ್ಯತೆಗಳಿದೆ.
ಇನ್ನೂ ಹೊಸ ವ್ಯಾಪಾರ ಆರಂಭಿಸಲು ಉದ್ದೇಶಿಸುತ್ತಿರುವವರಿಗೆ ಇದು ಶುಭ ಕಾಲ. ನೀವು ಅಂದುಕೊಂಡ ಕೆಲಸಗಳು ಯಾವುದೇ ವಿಘ್ನಗಳಿಲ್ಲದೇ ನೆರವೇರಲಿದೆ. ಇನ್ನೂ ಯಾವುದೇ ರೀತಿ ಕೌಂಟುಬಿಕ ಸಮಸ್ಯೆ ಎದುರಾಗೋದಿಲ್ಲ. ಎಲ್ಲರ ಜೊತೆಗೆ ಉತ್ತಮ ಕಾಲವನ್ನು ಕಳೆಯಲಿದ್ದೀರಿ.
ನಿತ್ಯವು ಈ ಮಂತ್ರವನ್ನು ಪಠಿಸುವುದರ ಮೂಲಕ ಲಕ್ಷ್ಮೀಯನ್ನು ಒಲಿಸಿಕೊಳ್ಳಬಹುದು :
- ಓಂ ಶ್ರೀ ಹ್ರೀ ಶ್ರೀ ಕಮಲೇ ಕಮಲಾಯೇ ಪ್ರಸೀದ್ ಪ್ರಸೀದ್ ಶ್ರೀ ಹ್ರೀ ಶ್ರೀ ಓಂ ಮಹಾಲಕ್ಷ್ಮೀ ನಮಃ - ಇದು ಮಾಹಾಲಕ್ಷ್ಮಿಯ ಬೀಜ ಮಂತ್ರ. ಈ ಮಂತ್ರದ ಪಠಣವು ಸಂತೋಷ ಮತ್ತು ಸಮೃದ್ಧಿಯನ್ನು ತರುತ್ತದೆ.
- ಓಂ ಹ್ರೀ ಶ್ರೀ ಕ್ರೀಂ ಕ್ಲೀಂ ಶ್ರೀ ಲಕ್ಷ್ಮೀ ಮಾಂ ಗೃಹೇ ಧನ್ ಪುರಯೇ, ಧನ್ ಪುರಯೇ, ಚಿಂತೆ ಫರಾಯೇ ಫರಾಯೇ ಸ್ವಾಹಾ - ಇದು ಶ್ರೀ ಲಕ್ಷ್ಮೀ ಮಹಾಮಂತ್ರ. ಇದನ್ನು ಪಠಣ ಮಾಡೋದ್ರಿಂದ ಸಂತೋಷ ಮತ್ತು ಸಮೃದ್ಧಿಯನ್ನು ತರುತ್ತದೆ. ಹಾಗೂ ಆರ್ಥಿಕ ಲಾಭವನ್ನು ತರಲಿದೆ.
- ಶ್ರೀ ಹ್ರೀ ಕ್ಲೀಂ ತಥಾ ಕಮಲವಾಸಿನ್ಯ ಸ್ವಾಹಾ - ತಾಯಿ ಲಕ್ಷ್ಮಿ ದೇವಿಯ ಈ ಮಂತ್ರದಿಂದ ಎಲ್ಲಾ ಇಷ್ಟಾರ್ಥಗಳು ಈಡೇರುತ್ತವೆ.
- ಓಂ ಶ್ರೀ ಹ್ರೀ ಕ್ಲೀಂ ಶ್ರೀ ಸಿದ್ಧ ಲಕ್ಷ್ಮ್ಯೈ ನಮಃ - ನಿಮಗೆ ಯಾವುದೇ ಕೆಲಸದಲ್ಲಿ ಯಶಸ್ಸನ್ನು ಸಾಧಿಸಲಾಗದಿದ್ದರೆ, ಮಾಹಾ ಲಕ್ಷ್ಮಿಯ ಈ ಮಂತ್ರವನ್ನು ಜಪಿಸಬೇಕು.
- ಲಕ್ಷ್ಮೀ ನಾರಾಯಣ ನಮಃ - ದಾಂಪತ್ಯದಲ್ಲಿ ಸಂತೋಷಕ್ಕಾಗಿ ಲಕ್ಷ್ಮಿ ದೇವಿಯ ಈ ಮಂತ್ರವನ್ನು ಪಠಿಸಬೇಕು.
- ಯಾ ರಕ್ತಾಂಬುಜವಾಸಿನೀ ವಿಲಾಸಿನೀ ಚನ್ದಾಂಶು ತೇಜಸ್ವಿನೀ ।
- ಯಾ ರಕ್ತಾ ರುಧಿರಾಮ್ಬರಾ ಹರಿಶಾಖೀ ಅಥವಾ ಶ್ರೀ ಮನೋಲಹಾದಿನೀ ॥
- ಯಾ ರತ್ನಾಕರಮನ್ತನಾತ್ಪ್ರಗತಿತಾ ವಿಷ್ಣೋಸ್ವಯ ಗೇಹಿನೀ ।
- ಸಾ ಮಾಂ ಪಾತು ಮನೋರಮಾ ಭಗವತೀ ಲಕ್ಷ್ಮೀಶ್ಚ ಪದ್ಮಾವತಿ ॥



Click it and Unblock the Notifications
