Latest Updates
-
ಪ್ರತಿಭಟನೆಯಲ್ಲಿ ಪ್ರೀತಿ: 'ಪ್ರೊಟೆಸ್ಟ್ ನೇ ಬನಾ ದಿ ಜೋಡಿ' ಟ್ರೆಂಡ್ ಹಿಂದೆ ಅಡಗಿದೆ ದೊಡ್ಡ ಅಪಾಯ! -
ಮಳೆಗಾಲದಲ್ಲಿ ಮನೆಯಲ್ಲಿ ಬೂಷ್ಟು ಹರಡುತ್ತಿದೆಯೇ? ಈ 20 ನಿಮಿಷದ ಟಿಪ್ಸ್ ಪಾಲಿಸಿ, ಮನೆ ಫ್ರೆಶ್ ಆಗಿಡಿ! -
ಕೇವಲ 200 ರೂಪಾಯಿಯಲ್ಲಿ ಪರಿಸರ ಸ್ನೇಹಿ ಊಟ: ವಿಶ್ವ ಪ್ರಕೃತಿ ಸಂರಕ್ಷಣಾ ದಿನಕ್ಕೆ ನಿಮ್ಮ ಅಡುಗೆಮನೆಯೇ ಮೊದಲ ಹೆಜ್ಜೆ! -
CWG 2026: 6ನೇ ದಿನ ಭಾರತದ ಪದಕದ ಬೇಟೆ; ಮನೆಯಲ್ಲೇ ಕಮ್ಮಿ ಬಜೆಟ್ನಲ್ಲಿ ಅದ್ಭುತ ವಾಚ್ ಪಾರ್ಟಿ ಪ್ಲಾನ್! -
ವಿಶ್ವ ಹೆಪಟೈಟಿಸ್ ದಿನ: ಲಿವರ್ ಆರೋಗ್ಯ ಹೆಚ್ಚಿಸಲು ಈ 10 ನಿಮಿಷದ ಬೆಳಗಿನ ದಿನಚರಿ ಪಾಲಿಸಿ! -
ಮಳೆಗಾಲದ ರಜೆ: ವರ್ಕ್ ಫ್ರಮ್ ಹೋಮ್ ಪೋಷಕರಿಗೆ ಮಕ್ಕಳನ್ನು ನಿಭಾಯಿಸುವುದು ಹೇಗೆ? ಇಲ್ಲಿದೆ ಸರಳ ಟಿಪ್ಸ್ -
ಮಳೆಗಾಲದಲ್ಲಿ ನಿಮ್ಮ ಮನೆಯ ಗಿಡಗಳು ಸಾಯುತ್ತಿವೆಯೇ? ಈ 15 ನಿಮಿಷದ ಟಿಪ್ಸ್ ಪಾಲಿಸಿ! -
ಮಳೆಗಾಲದಲ್ಲಿ ಕರೆಂಟ್ ಹೋದರೆ ಫ್ರಿಜ್ ಆಹಾರ ಹಾಳಾಗುತ್ತಾ? ಸುರಕ್ಷಿತವಾಗಿಡಲು ಇಲ್ಲಿವೆ ಸರಳ ಟಿಪ್ಸ್ -
ಐಟಿಆರ್ ಸಲ್ಲಿಕೆಗೆ ಇನ್ನು 4 ದಿನ ಬಾಕಿ: ಭಾರಿ ದಂಡದಿಂದ ಪಾರಾಗಲು ಈ ಕೆಲಸಗಳನ್ನು ಇಂದೇ ಮಾಡಿ! -
IMD ಮಳೆ ಎಚ್ಚರಿಕೆ: ಹೊರಗೆ ಹೋಗಬೇಡಿ, ಮನೆಯಲ್ಲೇ ಈ 12 ನಿಮಿಷದ ವರ್ಕೌಟ್ ಮಾಡಿ ಫಿಟ್ ಆಗಿರಿ!
ಸೈಕಲ್‌ನ ಒಂದೇ ಚಕ್ರದಲ್ಲಿ ಕನ್ಯಾಕುಮಾರಿಯಿಂದ ಕಾಶ್ಮೀರಕ್ಕೆ ಹೊರಟ ಯುವಕ: ವಿಶ್ವ ದಾಖಲೆ ಮಾತ್ರವಲ್ಲ ಮತ್ತೊಂದು ಉದ್ದೇಶವಿದೆ
ಕನ್ಯಾಕುಮಾರಿಯಿಂದ ಕಾಶ್ಮೀರಕ್ಕೆ ಸೈಕಲ್‌ನಲ್ಲಿ ಅದೂ ಒಂದೇ ಚಕ್ರದಲ್ಲಿ ಚಲಿಸುತ್ತಾ ಆ ಯುವಕರ ತಂಡ ಗಮನ ಸೆಳೆಯುತ್ತಿದೆ, ಅವರು ಗುರಿ ಈ ರೀತಿ ವಿಭಿನ್ನವಾಗಿ ಕಾಶ್ಮೀರ ತಲುಪುವುದು ಮಾತ್ರವಲ್ಲ ಅದರ ಹಿಂದೆ ಒಂದು ಒಳ್ಳೆಯ ಉದ್ದೇಶ ಕೂಡ ಇದೆ. ಇವರು ಇನ್ನು 6 ತಿಂಗಳಿನಲ್ಲಿ ಹೀಗೆ ಸೈಕಲ್ ತುಳಿದು ಕಾಶ್ಮೀರ ತಲುಪಲಿದ್ದಾರೆ.

ಕೇರಳದ ಮೂವರ ಈ ಯುವಕರ ತಂಡದಲ್ಲಿ ಸವಿದ್ ಎಂಬುವರು ಒಂದೇ ಚಕ್ರದಲ್ಲಿ ಸೈಕಲ್‌ನಲ್ಲಿ ಹೋಗುವ ಮೂಲಕ ದಾರಿ ಹೋಕರ ಗಮನ ಸೆಳೆಯುತ್ತಿದ್ದಾರೆ. ಕೇರಳದ ಕಣ್ಣೂರಿನ ಸವಿದ್, ತಾಹೀರ್ ಹಾಗೂ ಪಾಲಕ್ಕಾಡ್‌ನ ಅಭಿಷೇಕ್ ಒಂದು ಒಳ್ಳೆಯ ಕಾರ್ಯಕ್ಕೆ ಸೈಕಲ್ ತುಳಿದು ದೇಶದ ಗಮನ ಸೆಳೆಯಲು ಬಯಸುತ್ತಿದ್ದಾರೆ, ಅವರ ಉದ್ದೇಶ ಡ್ರಗ್ಸ್ ಫ್ರೀ ಕೇರಳವಾಗಿದೆ.
ಸವಿದ್ ಸಾಹಸ ದಾಖಲೆಯನ್ನು ಮಾಡಲಿದೆ
ಇದುವರೆಗೆ ಯಾರೂ ಒಂದು ಚಕ್ರದಲ್ಲಿ ಸೈಕಲ್ ತುಳಿದು ಕನ್ಯಾ ಕುಮಾರಿಯಿಂದ ಕಾಶ್ಮೀರ ತಲುಪಿರಲಿಲ್ಲ, ಆದರೆ ಸಾಹಿದ್ ಆ ಸಾಹಸ ಮಾಡುವ ಮೂಲಕ ವಿಶ್ವ ದಾಖಲೆ ಮಾಡಲಿದ್ದಾರೆ. ಈಗಾಗಲೇ ಈ ಯುವಕರ ತಂಡ ಕನ್ಯಾಕುಮಾರಿಯಿಂದ ಹೊರಟು ಸುಮಾರು 2300 ಕಿ,ಮೀ ಸವಾರಿ ಮಾಡಿದ್ದಾರೆ. ಸವಿದ್ ವೃತ್ತಿಯಲ್ಲಿ ಸಾಫ್ಟ್‌ವೇರ್ ಆಗಿದ್ದು ಕಳೆದ ಒಂದು ವರ್ಷದಿಂದ ಒಂದು ಚಕ್ರದಲ್ಲಿ ಸವಿಸುವುದನ್ನು ಅಭ್ಯಾಸ ಮಾಡುತ್ತಿದ್ದರು, ಇದೀಗ ತುಂಬಾ ಆರಾಮವಾಗಿ ಚಲಿಸುತ್ತಿದ್ದಾರೆ,
ಡ್ರಗ್ಸ್‌ನ ದುಷ್ಪರಿಣಾಮದ ಬಗ್ಗೆ ಜಾಗೃತಿ
ಯುವಕರು ಡ್ರಗ್ಸ್ ಚಟಕ್ಕೆ ಬಲಿಯಾಗುವುದರಿಂದ ಉಂಟಾಗುವ ಕೆಟ್ಟ ಪರಿಣಾಮಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿ ಕೇರಳವನ್ನು ಡ್ರಗ್ಸ್ ಫ್ರೀ ಕೇರಳ ಮಾಡುವ ಉದ್ದೇಶದಿಂದ ಇವರ ಕನ್ಯಾಕುಮಾರಿಯಿಂದ ಕಾಶ್ಮೀರವರೆಗೆ ಸೈಕಲ್ ಪ್ರಯಾಣ ಮಾಡುತ್ತಿದ್ದಾರೆ.
ಡ್ರಗ್ಸ್ ಚಟಕ್ಕೆ ಬಲಿಯಾಗಿ ಅನೇಕ ಯುವಕರ ಬಾಳು ನರಕವಾಗುತ್ತಿದೆ
ಡ್ರಗ್ಸ್ ಚಟಕ್ಕೆ ಬಿದ್ದರೆ ಆ ಯುವಕರ ಬದುಕೇ ನರಕವಾಗುವುದು, ಇದರಿಂದ ಎಷ್ಟೋ ಸಂಸಾರಗಳು ಹಾಳಾಗುತ್ತಿದೆ, ಡ್ರಗ್ಸ್ ಚಟಕ್ಕೆ ಬಲಿಯಾಗಿ ಬದುಕು ಹಾಳು ಮಾಡಿಕೊಳ್ಳುತ್ತಿದ್ದಾರೆ ಇದರ ಬಗ್ಗೆ ಅರಿವು ಮೂಡಿಸಲು ಈ ಯುವಕರು ಸೈಕಲ್ ಯಾತ್ರೆ ಮಾಡುತ್ತಿದ್ದಾರೆ. ಇವರ ಉದ್ದೇಶ ಒಳ್ಳೆಯದಿದೆ, ಇವರ ಉದ್ದೇಶ ಯುವ ಜನಗಳಿಗೆ ತಲುಪುವಂತಾಗಲಿ, ಇವರ ನಡೆ ಬೇರೆ ಯುವಕರಿಗೆ ಸ್ಪೂರ್ತಿಯಾಗುವಲ್ಲಿ ಯಾವುದೇ ಸಂಶಯವಿಲ್ಲ.



Click it and Unblock the Notifications