Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
100 ವರ್ಷಗಳ ನಂತರ ಕೇಂದ್ರ ತ್ರಿಕೋನ ರಾಜಯೋಗ : 3 ರಾಶಿಯವರಿಗೆ ವೃತ್ತಿ ಜೀವನ, ಉದ್ಯೊಗದಲ್ಲಿ ಯಶಸ್ಸು!
ಬರೋಬ್ಬರಿ ನೂರು ವರ್ಷಗಳ ನಂತರ ಕೇಂದ್ರ ತ್ರಿಕೋನ ರಾಜಯೋಗ ಏರ್ಪಡುತ್ತಿದೆ. ಇದರ ಪರಿಣಾಮ ದ್ವಾದಶ ರಾಶಿಗಳ ಮೇಲೂ ಬೀಳಲಿದೆ. ಆದರೆ ಈ ರಾಜಯೋಗದ ಪರಿಣಾಮದಿಂದ ಕೆಲ ರಾಶಿಗಳಿಗಂತೂ ತುಂಬಾನೇ ಒಳ್ಳೆಯದಾಗಲಿದೆ. ಮಂಗಳ ಗ್ರಹವು ಸಿಂಹ ರಾಶಿಯನ್ನು ಪ್ರವೇಶಿಸಿದೆ ಮತ್ತು ಶುಕ್ರನು ಈಗಾಗಲೇ ಅದೇ ರಾಶಿಯಲ್ಲಿ ಇದ್ದಾನೆ.
ಈ ಎರಡು ಗ್ರಹಗಳ ಒಟ್ಟುಗೂಡುವಿಕೆಯಿಂದ 100 ವರ್ಷಗಳ ನಂತರ ಶಕ್ತಿಯುತವಾದ ಕೇಂದ್ರ ತ್ರಿಕೋನ ರಾಜಯೋಗವನ್ನು ಉಂಟಾಗುತ್ತಿದೆ. ಅಷ್ಟಕ್ಕೂ ಕೇಂದ್ರ ತ್ರಿಕೋನ ರಾಜಯೋಗದಿಂದ ಈ 3 ರಾಶಿಗಳ ಮೇಲೆ ಯಾವ ರೀತಿ ಪರಿಣಾಮ ಬೀಳಲಿದೆ ಅನ್ನೋದನ್ನು ತಿಳಿಯೋಣ.

ವೈದಿಕ ಜ್ಯೋತಿಷ್ಯದಲ್ಲಿ ಕೇಂದ್ರ ತ್ರಿಕೋನ ರಾಜಯೋಗಕ್ಕೆ ವಿಶೇಷ ಸ್ಥಾನವನ್ನು ನೀಡಲಾಗಿದೆ. ಇದನ್ನು ಶಕ್ತಿಯುತ ರಾಜಯೋಗಗಳಲ್ಲಿ ಒಂದು ಎಂದು ಪರಿಗಣಿಸಲಾಗಿದೆ. ಇದರ ಫಲವಾಗಿ ಒರ್ವ ವ್ಯಕ್ತಿಯ ಬಾಳಿನಲ್ಲಿ ಅದೃಷ್ಟ ಮತ್ತು ಸಂಪತ್ತು ಹೆಚ್ಚಾಗುತ್ತದೆ. ಗ್ರಹಗಳ ಶಕ್ತಿಯುತ ಸಂಯೋಜನೆಯು ವೈಯಕ್ತಿಕ ಜೀವನದಲ್ಲಿ ಮತ್ತು ವೃತ್ತಿಪರ ವೃತ್ತಿಜೀವನದಲ್ಲಿ ಯಶಸ್ಸನ್ನು ತರುತ್ತದೆ. ಇದಿಷ್ಟೇ ಅಲ್ಲದೇ, ಒರ್ವ ವ್ಯಕ್ತಿ ತನ್ನ ಆಧ್ಯಾತ್ಮಿಕ ಆಸಕ್ತಿಗಳಲ್ಲಿ ಬದಲಾವಣೆಯನ್ನು ಕಾಣಬಹುದು.
ಮೇಷ ರಾಶಿ
ಕೇಂದ್ರ ತ್ರಿಕೋನ ರಾಜಯೋಗದ ಲಾಭವನ್ನು ಮೇಷ ರಾಶಿಯವರು ಕೂಡ ಪಡೆಯಲಿದ್ದಾರೆ. ನಿಮ್ಮ ವೃತ್ತಿಪರ ಬದುಕಿನಲ್ಲಿ ಅದೃಷ್ಟ ಖುಲಾಯಿಸಲಿದೆ. ನಿಮ್ಮ ಆರ್ಥಿಕ ಸ್ಥಿತಿ ಸುಧಾರಿಸುತ್ತದೆ ಮತ್ತು ಆದಾಯದ ಮಟ್ಟವು ಹೆಚ್ಚಾಗುತ್ತದೆ. ವ್ಯವಹಾರದಲ್ಲಿ ಮಾಡಿದ ಹೂಡಿಕೆಗಳು ನಿಮ್ಮ ಜೀವನದಲ್ಲಿ ಫಲಪ್ರದ ಫಲಿತಾಂಶಗಳನ್ನು ತರುತ್ತವೆ. ಮೇಷ ರಾಶಿಯ ವಿದ್ಯಾರ್ಥಿಗಳಿಗೂ ಕೂಡ ಇದು ಉತ್ತಮ ಸಮಯ.
ವಿದ್ಯಾರ್ಥಿಗಳು ತಮ್ಮ ಪರೀಕ್ಷೆಗಳಲ್ಲಿ ಉತ್ತಮ ಫಲಿತಾಂಶಗಳನ್ನು ಪಡೆಯುತ್ತಾರೆ. ಮತ್ತು ಅಧ್ಯಯನದಲ್ಲಿ ನಿಮ್ಮ ಏಕಾಗ್ರತೆಯ ಮಟ್ಟವೂ ಹೆಚ್ಚಾಗುತ್ತದೆ. ಕೌಟುಂಬಿಕ ಒತ್ತಡ ಕಡಿಮೆ ಇರುತ್ತದೆ. ಮತ್ತು ದಂಪತಿಗಳ ನಡುವೆ ಪ್ರೀತಿ ಹೆಚ್ಚಾಗುತ್ತದೆ. ಜೀವನದಲ್ಲಿ ಹೆಚ್ಚಿನ ಅವಕಾಶಗಳನ್ನು ಪಡೆಯಲು ಮತ್ತು ವೈಯಕ್ತಿಕ ಮತ್ತು ವೃತ್ತಿಪರ ಪ್ರಯಾಣಗಳಲ್ಲಿ ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳಲು ಉತ್ತಮ ಸಮಯವಿದು.
ಸಿಂಹ ರಾಶಿ
ಸಿಂಹ ರಾಶಿಯವರಿಗೆ ತಮ್ಮ ಉದ್ಯೋಗವನ್ನು ಬದಲಾಯಿಸಲು ಇದು ಒಳ್ಳೆಯ ಸಮಯ. ಇದ್ರ ಜೊತೆಗೆ ನೀವು ನಿಮ್ಮ ಪ್ರಸ್ತುತ ಕೆಲಸದಲ್ಲಿ ಮನ್ನಣೆಯನ್ನು ಪಡೆಯುತ್ತೀರಿ. ವ್ಯಾಪಾರದ ಬೆಳವಣಿಗೆಗೆ ಇದ್ದ ಅಡೆತಡೆಗಳೆಲ್ಲಾ ನಿವಾರಣೆಯಾಗಿ ಎಲ್ಲವೂ ಒಳ್ಳೆಯದಾಗುತ್ತದೆ. ಈ ಅವಧಿಯಲ್ಲಿ ಕಠಿಣ ಪರಿಶ್ರಮವು ಫಲಪ್ರದ ಫಲಿತಾಂಶಗಳನ್ನು ನೀಡುತ್ತದೆ. ಹಾಗೂ ನಿಮ್ಮ ಜೀವನದಲ್ಲಿ ನೀವು ಶಾಂತಿಯನ್ನು ಕಂಡುಕೊಳ್ಳಲು ಸಾಧ್ಯವಾಗುತ್ತದೆ.
ಸಂಪತ್ತಿನಿಂದಾಗಿ ನೀವು ಲಾಭವನ್ನು ಗಳಿಸೋದಕ್ಕೆ ಸಾಧ್ಯವಾಗುತ್ತದೆ. ಈ ಸಮಯದಲ್ಲಿ ನೀವು ನಿಮ್ಮ ಸಂಗಾತಿಯೊಂದಿಗೆ ಸಂತೋಷದ ಜೀವನವನ್ನು ಕಳೆಯುವ ಸಾಧ್ಯತೆಗಳಿದೆ. ಕುಟುಂಬದಲ್ಲಿ ಉತ್ಸಾಹವು ಹೆಚ್ಚಾಗಿರುತ್ತದೆ. ಮತ್ತು ಕುಟುಂಬ ಸದಸ್ಯರಲ್ಲಿ ಯಾವುದೇ ತೊಂದರೆಗಳು ಇರುವುದಿಲ್ಲ. ನಿಮ್ಮ ಕೌಟುಂಬಿಕ ಸಮಸ್ಯೆಗಳೆಲ್ಲಾ ಬಗೆಹರಿಯುತ್ತದೆ.
ಧನು ರಾಶಿ
ಧನು ರಾಶಿಯವರಿಗೆ ಕೇಂದ್ರ ತ್ರಿಕೋನ ರಾಜಯೋಗದಿಂದ ನಿಮ್ಮ ಜೀವನದಲ್ಲಿ ಸಮೃದ್ಧಿ ಉಂಟಾಗುತ್ತದೆ. ಹಾಗೂ ನಿಮ್ಮ ವೃತ್ತಿಜೀವನದಲ್ಲಿ ಯಶಸ್ಸು ಸಿಗುವ ಸಾಧ್ಯತೆಗಳು ಹೆಚ್ಚಿದೆ. ಹೊಸ ವ್ಯಾಪಾರ ಚಟುವಟಿಕೆಗಳಲ್ಲಿ ಹೂಡಿಕೆ ಇದು ಉತ್ತಮ ಸಮಯ. ನೀವು ಏನಾದರೂ ಇಷ್ಟು ದಿನ ಸಂಕಷ್ಟದ ಪರಿಸ್ಥಿತಿಯನ್ನು ಎದುರಿಸುತ್ತಿದ್ದರೆ ಅದರಿಂದ ಖಂಡಿತ ಹೊರಬರುತ್ತೀರಿ.
ಕೆಲಸದ ಸ್ಥಳದಲ್ಲಿ ಜ್ಞಾನದ ಬಳಕೆಯು ಜೀವನದಲ್ಲಿ ಧನಾತ್ಮಕ ಫಲಿತಾಂಶಗಳನ್ನು ತರುತ್ತದೆ. ನೀವು ಬಯಸಿದ್ದಕ್ಕಿಂತಲೂ ಉತ್ತಮ ಬದಲಾವಣೆ ನಿಮ್ಮ ಬಾಳಿನಲ್ಲಿ ಆಗುತ್ತದೆ. ಮತ್ತು ನಿಮ್ಮ ವೃತ್ತಿಜೀವನವನ್ನು ಸ್ಥಿರಗೊಳಿಸುತ್ತದೆ. ಆಧ್ಯಾತ್ಮಿಕ ಆಕಾಂಕ್ಷೆಗಳು ಹೆಚ್ಚಾಗುತ್ತದೆ. ನಿಮ್ಮ ಜೀವನದಲ್ಲಿ ಶಾಂತಿಯನ್ನು ಕಂಡುಕೊಳ್ಳುತ್ತೀರಿ.



Click it and Unblock the Notifications
