Latest Updates
-
ಸಮಲಿಂಗಿ ಜೋಡಿಗಳೇ ಎಚ್ಚರ: ಗಿಫ್ಟ್ ಟ್ಯಾಕ್ಸ್ನಿಂದ ಪಾರಾಗಲು ಈ ದಾಖಲೆಗಳು ಕಡ್ಡಾಯ! -
ಅಡುಗೆ ಎಣ್ಣೆ ಬೆಲೆ ಏರಿಕೆ: ಬಜೆಟ್ ಮತ್ತು ಆರೋಗ್ಯ ಕಾಪಾಡಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ಯುಪಿಐನಲ್ಲಿ ಎಐ ಕ್ರಾಂತಿ: ಇನ್ಮುಂದೆ ನಿಮ್ಮ ಬಿಲ್ ಪಾವತಿಗಳನ್ನು ಡಿಜಿಟಲ್ ಏಜೆಂಟ್ ನೋಡಿಕೊಳ್ಳಲಿದೆ! -
ಉತ್ತರಾಖಂಡದಲ್ಲಿ ಆರೆಂಜ್ ಅಲರ್ಟ್: ಹೋಟೆಲ್ ರೂಮ್ನಲ್ಲೇ ಫಿಟ್ ಆಗಿರಲು ಈ ಸರಳ ವ್ಯಾಯಾಮಗಳನ್ನು ಮಾಡಿ! -
UGC-NET ಪರೀಕ್ಷೆಯ ಗೊಂದಲ: ವಿದ್ಯಾರ್ಥಿಗಳ ಆತಂಕ ದೂರ ಮಾಡಲು ಪೋಷಕರಿಗೆ ಇಲ್ಲಿದೆ 48 ಗಂಟೆಗಳ ಸ್ಟಡಿ-ರಿಸೆಟ್ ಪ್ಲಾನ್! -
ದೆಹಲಿ ಮಳೆ: ಗುಡುಗು-ಮಿಂಚಿನಿಂದ ನಿಮ್ಮ ಎಲೆಕ್ಟ್ರಾನಿಕ್ ವಸ್ತುಗಳನ್ನು ರಕ್ಷಿಸಲು ಈ 15 ನಿಮಿಷದ ಟಿಪ್ಸ್ ಪಾಲಿಸಿ! -
ಎನರ್ಜಿ ಡ್ರಿಂಕ್ಸ್ ಕುಡಿಯುವ ಮುನ್ನ ಎಚ್ಚರ! FSSAI ಹೊಸ ನಿಯಮ ಮತ್ತು ಆರೋಗ್ಯಕರ ಪರ್ಯಾಯಗಳು -
ಗುರುಗ್ರಾಮದಲ್ಲಿ ವರುಣನ ಆರ್ಭಟ: ಕಚೇರಿಗೆ ಹೋಗ್ಬೇಡಿ, ಮನೆಯಿಂದಲೇ ಕೆಲಸ ಮಾಡಿ - ಪೊಲೀಸರ ಮಹತ್ವದ ಸೂಚನೆ -
ಮಳೆಗಾಲದ ಜಡತ್ವಕ್ಕೆ ಗುಡ್ ಬೈ: ಮುಂಬೈ-ಪುಣೆ ಜನರಿಗಾಗಿ 10 ನಿಮಿಷದ ಸರಳ ವ್ಯಾಯಾಮಗಳು -
ಮುಂಬೈ ಮಳೆ ಆರ್ಭಟ: ಸಂಗಾತಿಯ ಸುರಕ್ಷತೆಗಾಗಿ ನೀವು ಮಾಡಬೇಕಾದ ಪ್ರಮುಖ ಕೆಲಸಗಳಿವು!
25 ಕೋಟಿ ಲಾಟರಿ ಹೊಡೆದ ಅಲ್ತಾಫ್‌ಗೆ ಸಿಗುವುದು ಮಾತ್ರ ಇಷ್ಟೇ ಹಣ, ಕೇರಳದ ಅನೂಪ್ ಪರಿಸ್ಥಿತಿ ಇವರಿಗೆ ಬರದಿರಲಿ
ಕರ್ನಾಟಕದಿಂದ ಕೇರಳಕ್ಕೆ ಹೋದಾಗ ಅಲ್ಲಿ ಸಾಲು ಸಾಲು ಲಾಟರಿ ಮಾರಾಟ ಮಾಡುವವರನ್ನು ಕೆಲವರು ಯಾರಿಗೆ ಗೊತ್ತು ಲಾಟರಿ ಹೊಡೆದರೂ ಹೊಡೆಯಬಹುದು ಎಂದು ತಮಾಷೆ ಮಾಡಿಕೊಂಡೇ ಖರೀದಿಸುತ್ತಾರೆ.
ಇನ್ನು ಲಾಟರಿ ಹುಚ್ಚು ಇರುವವರಂತೂ ಲಾಟರಿ ಖರೀದಿಸಿರುವುದರಿಂ ನನ್ನ ಜೇಬು ಖಾಲಿಯಾಗುತ್ತೆ ಎಂದು ತಿಳಿದೂ ಕೂಡ ಲಾಟರಿ ಖರೀದಿಸುತ್ತಾರೆ.ಲಾಟರಿ ಖರೀದಿ ಹುಚ್ಚಿನಿಂದ ಮನೆಯನ್ನು ಸಂಕಷ್ಟಕ್ಕೆ ದೂಡಿರುವ ಹಲವಾರು ಜನರಿದ್ದಾರೆ, ಕೇರಳದಲ್ಲಿ ಲಾಟರಿ ಹುಚ್ಚಿರುವವರ ಮನೆಯ ನಿತ್ಯದ ಗೋಳಾಗಿದೆ.
ಕಳೆದ ಒಂದು ವಾರದಿಂದ ಲಾಟರಿ ನಮ್ಮ ಕರ್ನಾಟಕದಲ್ಲಿ ಸದ್ದು ಮಾಡುತ್ತಿದೆ, ಅದಕ್ಕೆ ಕಾರಣ ಕೇರಳದ ಲಾಟರಿ ಖರೀದಿಸಿ ಕರ್ನಾಟದ ಮಂಡ್ಯ ವ್ಯಕ್ತಿಯೊಬ್ಬರು 25 ಕೋಟಿ ಗೆದ್ದಿದ್ದಾರೆ.

ಕೇರಳದ ಒಣಂ ಲಾಟರಿಯಲ್ಲಿ ಬಂಪರ್ ಗೆದ್ದ ಮಂಡ್ಯದ ಅಲ್ತಾಫ್
ಅಲ್ತಾಫ್ ಒಬ್ಬ ಸಾಧಾರಣ ಮೆಕ್ಯಾನಿಕ್. ಕೇರಳಕ್ಕೆ ಹೋದಾಗ 500 ರುಪಾಯಿ ತೆಗೆದು ಲಾಟರಿ ಖರೀದಿಸುತ್ತಾರೆ, ಅವರು ಖರೀದಿ ಮಾಡುವಾಗ ಅಷ್ಟು ದೊಡ್ಡ ಮೊತ್ತ ಲಾಟರಿ ದೊರೆಯುತ್ತದೆ ಎಂದು ಕನಸು ಮನಸ್ಸಿನಲ್ಲಿಯೂ ಅಂದುಕೊಂಡಿರಲಿಲ್ಲ, ಈ ರೀತಿ ಲಾಟರಿ ಖರೀದಿ ಮಾಡಿದಾಗ ಕೆಲವೊಮ್ಮೆ 10 ಸಾವಿರ, 20 ಸಾವಿರ ಅಂತ ಪ್ರೈಸ್ ಮನಿ ಬರುವುದುಂಟು, ಹಾಗಾಗಿ ತುಂಬಾ ಜನ ಲಾಟರಿ ಖರೀದಿ ಮಾಡುತ್ತಾರೆ, ಇವರು ಕೂಡ 25 ಕೋಟಿ ಸಿಗುತ್ತೆ ಅಂತ ಭಾವಿಸಿ ಲಾಟರಿ ಖರೀದಿ ಮಾಡಿರಲಿಲ್ಲ, ಆದರೆ ಅದೃಷ್ಟ ಲಕ್ಷ್ಮಿ ಅವರ ಪಾಲಿಗೆ ಒಲಿದು ರಾತ್ರೋರಾತ್ರಿ ಕೋಟ್ಯಾಧಿಪತಿಯಾಗಿದ್ದಾರೆ.
ಅಲ್ತಾಫ್‌ಗೆ ಲಾಟರಿ ಹೊಡೆದಿದೆ ಎಂಬ ಸುದ್ದಿ ಹೊರ ಬರ್ತಾ ಇದ್ದಂತೆ ಮಾಧ್ಯಮಗಳು ಇವರ ಬಗ್ಗೆ ಸ್ಪೆಷಲ್ ಸುದ್ದಿ ಮಾಡಿದರು, ಎಲ್ಲರೂ ಅಲ್ತಾಫ್‌ಗೆ 25 ಕೋಟಿ ಬಂದಿದೆ ಅಂತಿದ್ದಾರೆ.
ಆದರೆ ಅಲ್ತಾಫ್ ಅವರೇ ಹೇಳಿರುವಂತೆ ಅವರಿಗೆ ಬರುವ ಹಣವೆಷ್ಟು?
ಯೂಟ್ಯೂಬರ್ ಒಬ್ಬರು ಅವರ ಬಳಿ ನಿಮಗೆ ಎಷ್ಟು ಹಣ ಕೈ ಸೇರಲಿದೆ ಎಂದಾಗ 12 ಕೋಟಿ 10 ಲಕ್ಷ ಸಿಗಲಿದೆ ಎಂದಿದ್ದಾರೆ, ಉಳಿದೆಲ್ಲಾ ಹಣ ಲಾಟರಿ ತೆರಿಗೆ, ಸರ್ಕಾರದ ತೆರಿಗೆ ಅಂತ ಕಟ್ ಆಗಲಿದೆ. ಹಾಗಾಗಿ ಇವರಲ್ಲಿ 25 ಕೋಟಿ ಹಣವಿದೆ ಎಂದು ಭಾವಿಸಿದರೆ ತಪ್ಪಾಗುತ್ತೆ, ಅದರ ಅರ್ಧದಷ್ಟು ಇವರ ಬ್ಯಾಂಕ್ ಅಕೌಂಟ್‌ಗೆ ಬರಲಿದೆ. 12 ಕೋಟಿ 10 ಲಕ್ಷ ಹಣವೇನೂ ಚಿಕ್ಕ ಅಮೌಂಟ್ ಅಲ್ಲ. ಅಲ್ಲದೆ ಅಲ್ತಾಫ್ ಈ ಹಣವನ್ನು ಸರಿಯಾಗಿ ಬಳಸಿಕೊಂಡರೆ 100 ಕೋಟಿಯೂ ಮಾಡಬಹುದು, ಏಕೆಂದರೆ ಏನಾದರೂ ವ್ಯವಹಾರ ಮಾಡಲು ಮೂಲ ಬಂಡವಾಳ ಇವರ ಕೈಯಲ್ಲಿದೆ. ಈ ಹಣವನ್ನು ಅಲ್ತಾಫ್ ತಮ್ಮ ಮಕ್ಕಳ ಮದುವೆಗೆ ಬಳಸುವುದಾಗಿ ಹೇಳಿದ್ದರೆ, ಅಲ್ಲದೆ ಅಗ್ಯತವಿರುವ ಕೆಲವರಿಗೆ ಸಹಾಯ ಮಾಡುವುದಾಗಿ ಹೇಳಿದ್ದಾರೆ.
ಲಾಟರಿ ಹೊಡೆದ ಖುಷಿಯಲ್ಲಿರುವ ಅಲ್ತಾಫ್‌ಗೆ ಕೇರಳ ಆಟೋರಿಕ್ಷಾ ಡ್ರೈವರ್‌ಗೆ ಆದ ತೊಂದರೆಯಾಗದೆ ಇರಲಿ
2022ರಲ್ಲಿ ಕೇರಳದ ಆಟೋರಿಕ್ಷಾ ಡ್ರೈವರ್‌ಗೆ 25 ಕೋಟಿ ಹಣ ಲಾಟರಿ ರೂಪದಲ್ಲಿ ಬಂತು. ಆತನ ಹೆಸರು ಅನೂಪ್,ತಂದೆ ತೀರಿ ಹೋದ ಮೇಲೆ ತುಂಬಾನೇ ಆರ್ಥಿಕ ಸಂಕಟದಲ್ಲಿದ್ದರು, ಈ ಹಿಂದೆ ಅವರಿಗೆ ಲಾಟರಿ ಪ್ರೈಸ್ ರುಪಾಯಿ 500 ಬಂದಿತ್ತು, ಅವರು ಸಹೋದರಿ ಲಾಟರಿ ಏಜೆನ್ಸಿಯಾಗಿದ್ದರು, ಮಗನ ಹೆಸರಿನಲ್ಲಿ ಕಟ್ಟುತ್ತಿದ್ದ ಪಿಗ್ಮಿ ಹಣದಿಂದ ಲಾಟರಿ ಖರೀದಿಸುತ್ತಾರೆ. ನೋಡಿದರೆ 25 ಕೋಟಿ ಬಂಪರ್, ಖುಷಿಯಾಗುತ್ತೆ, ಈ ಸುದ್ದಿ ಪ್ರಕಟವಾಗಿದ್ದೇ ತಡ ಅನೂಪ್ ನಿದ್ದೆ ಹೋಗುತ್ತೆ. ಜನರು ದೂರ ಊರುಗಳಿಂದ ಸಹಾಯ ಕೇಳಿ ಬರಲಾರಂಭಿಸುತ್ತಾರೆ. ಎಷ್ಟರಮಟ್ಟಿಗೆ ಎಂದರೆ ಮಗನಿಗೆ ಜ್ವರ ಬಂದಾಗ ಆಸ್ಪತ್ರೆಗೆ ಕೊಂಡೊಯ್ಯಲು ಕೂಡ ಸಾಧ್ಯವಾಗಿರಲಿಲ್ಲ, ಮನೆ ಮುಂದೆ ಎಲ್ಲಾ ನಮಗೂ ಸ್ವಲ್ಪ ಸಹಾಯ ಮಾಡಿ ಎಂದು ಕೇಳಿ ಬಂದಿರುವ ಜನ, ಆದರೆ ಲಾಟರಿ ಹಣ ಇನ್ನೂ ಅನೂಪ್ ಕೈ ಸೇರಿರಲಿಲ್ಲ, ಜನರು ಕೊಟ್ಟ ಟಾರ್ಚರ್‌ಗೆ ಅನೂಪ್‌ಗೆ ಸ್ವಂತ ಮನೆ ಬಿಟ್ಟು ಬೇರೆ ಕಡೆ ಹೋಗಬೇಕಾದ ಪರಿಸ್ಥಿತಿ ಉಂಟಾಯ್ತು.
ಇದೀಗ ಅಲ್ತಾಫ್‌ಗೆ ಹಣ ಬಂದಿದೆ, ಇಷ್ಟು ದಿನ ಪರಿಚಯವೇ ಇಲ್ಲ ಎಂದು ನಡೆದುಕೊಂಡಿರುವ ಕೆಲ ಸಂಬಂಧಿಕರಿಂದ ಹಿಡಿದು ಬಹುತೇಕರು ಬರಬಹುದು, ಇನ್ನು ಕೆಲವರಿಗೆ ಅಷ್ಟು ಮೊತ್ತದ ಹಣ ಹೇಗೆ ಬಳಸಬೇಕು ಎಂಬುವುದು ಗೊತ್ತಾಗದೆ ಬೇಕಾಬಿಟ್ಟಿ ಬಳಸಿ ಖರ್ಚು ಮಾಡುತ್ತಾರೆ, ಅಲ್ತಾಫ್‌ಗೆ ಹಣ ಕೈ ಸೇರಿದೆ, ಇದುವರೆಗೆ ಅವರಲ್ಲಿದ್ದ ನೆಮ್ಮದಿಯೂ ಹಾಗೆ ಇರಲಿ ಅಷ್ಟೇ..
ಇದರಿಂದ ಪ್ರಭಾವಿತರಾಗಿ ಯಾರೂ ಲಾಟರಿ ಖರೀದಿಸಬೇಡಿ?
ಮನಗೆ ಅಕ್ಕಿ ತರುವ ಹಣದಿಂದ ಲಾಟರಿ ಖರೀದಿ ಮಾಡುವವರು ಇದ್ದಾರೆ, ಆ ತಪ್ಪು ಮಾಡಬೇಡಿ, ಲಾಟರಿಯಿಂದ ಒಂದು ಕುಟುಂಬಕ್ಕೆ ಒಳ್ಳೆಯದಾದರೆ ಸಾವಿರಾರು ಕುಟುಂಬವನ್ನು ಮತ್ತಷ್ಟು ಆರ್ಥಿಕ ಸಂಕಷ್ಟಕ್ಕೆ ದೂಡುತ್ತದೆ, ಹಾಗಾಗಿ ರಮ್ಮಿ, ಆನ್‌ಲೈನ್ ಬೆಟ್ಟಿಂಗ್ ಇಂಥ ಚಟಗಳಿಂದ ದೂರವಿರಿ.



Click it and Unblock the Notifications