Latest Updates
-
UGC-NET ಪರೀಕ್ಷೆಯ ಗೊಂದಲ: ವಿದ್ಯಾರ್ಥಿಗಳ ಆತಂಕ ದೂರ ಮಾಡಲು ಪೋಷಕರಿಗೆ ಇಲ್ಲಿದೆ 48 ಗಂಟೆಗಳ ಸ್ಟಡಿ-ರಿಸೆಟ್ ಪ್ಲಾನ್! -
ದೆಹಲಿ ಮಳೆ: ಗುಡುಗು-ಮಿಂಚಿನಿಂದ ನಿಮ್ಮ ಎಲೆಕ್ಟ್ರಾನಿಕ್ ವಸ್ತುಗಳನ್ನು ರಕ್ಷಿಸಲು ಈ 15 ನಿಮಿಷದ ಟಿಪ್ಸ್ ಪಾಲಿಸಿ! -
ಎನರ್ಜಿ ಡ್ರಿಂಕ್ಸ್ ಕುಡಿಯುವ ಮುನ್ನ ಎಚ್ಚರ! FSSAI ಹೊಸ ನಿಯಮ ಮತ್ತು ಆರೋಗ್ಯಕರ ಪರ್ಯಾಯಗಳು -
ಗುರುಗ್ರಾಮದಲ್ಲಿ ವರುಣನ ಆರ್ಭಟ: ಕಚೇರಿಗೆ ಹೋಗ್ಬೇಡಿ, ಮನೆಯಿಂದಲೇ ಕೆಲಸ ಮಾಡಿ - ಪೊಲೀಸರ ಮಹತ್ವದ ಸೂಚನೆ -
ಮಳೆಗಾಲದ ಜಡತ್ವಕ್ಕೆ ಗುಡ್ ಬೈ: ಮುಂಬೈ-ಪುಣೆ ಜನರಿಗಾಗಿ 10 ನಿಮಿಷದ ಸರಳ ವ್ಯಾಯಾಮಗಳು -
ಮುಂಬೈ ಮಳೆ ಆರ್ಭಟ: ಸಂಗಾತಿಯ ಸುರಕ್ಷತೆಗಾಗಿ ನೀವು ಮಾಡಬೇಕಾದ ಪ್ರಮುಖ ಕೆಲಸಗಳಿವು! -
ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆಯ ಮಳೆನೀರು ಕೊಯ್ಲು ವ್ಯವಸ್ಥೆ ಹಾಳಾಗದಂತೆ ತಡೆಯುವುದು ಹೇಗೆ? -
ಮಳೆಗಾಲದಲ್ಲಿ ಮಕ್ಕಳ ಲಂಚ್ಬಾಕ್ಸ್ ಸುರಕ್ಷತೆ: ಆರೋಗ್ಯಕರ ಮತ್ತು ಹೈ-ಪ್ರೋಟೀನ್ ಆಹಾರದ ಟಿಪ್ಸ್ -
ಮುಂಬೈನಲ್ಲಿ ಭಾರೀ ಮಳೆ: ಇಂದು ಶಾಲೆ-ಕಾಲೇಜುಗಳಿಗೆ ರಜೆ ಘೋಷಣೆ, ಪೋಷಕರು ಗಮನಿಸಿ! -
ಕರಾವಳಿ ರೆಡ್ ಅಲರ್ಟ್: ಮನೆಯಲ್ಲೇ ಸುರಕ್ಷಿತವಾಗಿ ಫಿಟ್ ಆಗಿರಲು ಈ 12 ನಿಮಿಷಗಳ ವರ್ಕೌಟ್ ಟ್ರೈ ಮಾಡಿ!
ಕನ್ನಡ ಭಾಷೆ ಉಳಿಸಲು, ಬೆಳೆಸಲು ಈ 4 ಚಿಕ್ಕ ಬದಲಾವಣೆ ಮಾಡಿದರೆ ಸಾಕು
ಕನ್ನಡಿಗರಿಗೆ ಈ ದಿನ ದೀಪಾವಳಿ ಹಾಗೂ ಕನ್ನಡ ರಾಜ್ಯೋತ್ಸವ ಜೊತೆ ಜೊತೆಗೆ ಬಂದಿರುವುದರಿಂದ ಸಂಭ್ರಮ ಮತ್ತಷ್ಟು ಹೆಚ್ಚಾಗಿದೆ. 1956ರಲ್ಲಿ ಅಲ್ಲಲ್ಲಿ ಚದುರಿದ್ದ ಕನ್ನಡ ಪ್ರಾಂತ್ಯಗಳೆನ್ನೆಲ್ಲಾ ಒಂದುಗೂಡಿಸಿ ಕರ್ನಾಟಕ ಎಂದು ನಾಮಕರಣ ಮಾಡಲಾಯ್ತು.
ಕನ್ನಡ ನೆಲ, ಕರ್ನಾಟಕದ ಸಂಸ್ಕೃತಿ, ಕನ್ನಡ ಭಾಷೆ ಎಲ್ಲವೂ ಸುಂದರ, ಅದೇ ಕರ್ನಾಟಕದಲ್ಲಿ ಕನ್ನಡ ಭಾಷೆಗಾಗಿ ಹೋರಾಟ ಮಾಡುವಂತಾಗಿದೆ. ಹಾಗಾದರೆ ಕನ್ನಡಿಗರೇ ನಾವು ಮಾಡುತ್ತಿರುವ ತಪ್ಪಾದರೂ ಏನು? ಇದರ ಬಗ್ಗೆ ಚಿಂತನೆ ಮಾಡಬೇಕಾಗಿದೆ. ಆವಾಗ ಮಾತ್ರ ಕನ್ನಡ ಭಾಷೆಯ ಶ್ರೀಮಂತಿಕೆ ಉಳಿಸಿಕೊಂಡು ಹೋಗಲು ಸಾಧ್ಯವಾಗುದು.

ಕನ್ನಡಿಗರೇ ಕನ್ನಡ ಭಾಷೆ ಉಳಿವಿಗಾಗಿ ನಮ್ಮ ಭಾಷೆ ಮತ್ತಷ್ಟು ಬೆಳೆಯುವಂತಾಗಲು ನಮ್ಮಲ್ಲಿಯೇ ನಾವು ಈ ಬದಲಾವಣೆ ಮಾಡಿದರೆ ಸಾಕು ಬೆಂಗಳೂರಿನ ನಗರದಲ್ಲಿ ತುಂಬಾನೇ ಬದಲಾವಣೆ ಕಾಣಬಹುದು:
ಕನ್ನಡದಲ್ಲಿಯೇ ಮಾತನಾಡೋಣ: ನಾವು ಶಾಪಿಂಗ್, ರೆಸ್ಟೋಂಟ್‌ಗೆ ಹೋದಾಗ ಭೈಯ್ಯಾ ಕಿತನಾ? ಅಂತ ಕೇಳುವುದನ್ನು ಮೊದಲು ನಿಲ್ಲಿಸಬೇಕು, ನಾವು ಕನ್ನಡದಲ್ಲಿಯೇ ಕೇಳಬೇಕು, ಅವರ ಜೊತೆ ಶಾಪಿಂಗ್ ಚರ್ಚೆಗಳನ್ನು ಕನ್ನಡದಲ್ಲಿಯೇ ಮಾಡಬೇಕು, ಆವಾಗ ಅವರಿಗೆ ಕನ್ನಡ ಕಲಿಯಬೇಕಾದ ಅನಿವಾರ್ಯತೆ ಬರುತ್ತದೆ, ಏಕೆಂದೆ ಬ್ಯುಸ್‌ನೆಸ್ ಮಾಡಬೇಕಾಗಿರುವುದು ಅವರ ಅವಶ್ಯಕತೆ ತಾನೆ? ರೆಸ್ಟೋರೆಂಟ್‌ಗಳಿಗೆ ಹೋದಾಗಲೂ, ಈ ಪಿಜ್ಜಾ ಬರ್ಗರ್ ಸೆಂಟರ್‌ಗಳಿಗೆ ಹೋದಾಗಲೂ ಕನ್ನಡದಲ್ಲಿಯೇ ಕೇಳಿ, ಇಂಗ್ಲಿಷ್ ಮೆನು ಕೊಡುವಾಗ ಕನ್ನಡ ಮೆನುವಿದ್ದರೆ ಕೊಡಿ ಅಂತ ಕೇಳಿ, ಒಂದು ಹತ್ತು ಮಂದಿ ಕೇಳಲಾರಂಭಿಸಿದಾಗ ರೆಸ್ಟೋರೆಂಟ್‌ನವರು ಕೂಡ ಬದಲಾಗುತ್ತಾರೆ.
ಮನೆಯಲ್ಲಿ ಕನ್ನಡ ಮಾತನಾಡಿ
ಎಷ್ಟೋ ಪೋಷಕರು ತಮ್ಮ ಮಕ್ಕಳ ಜೊತೆ ಇಂಗ್ಲಿಷ್‌ನಲ್ಲಿ ಮಾತನಾಡುತ್ತಾರೆ, ಇಂಗ್ಲಿಷ್‌ನಲ್ಲಿ ಮಾತನಾಡುವುದು ತಪ್ಪಲ್ಲ, ಆದರೆ ಮಕ್ಕಳಿಗೆ ಕನ್ನಡವೇ ಗೊತ್ತಿಲ್ಲದಂತೆ ಮಾಡುವುದು ತಪ್ಪು, ಅವರ ಜೊತೆ ಮಾತನಾಡುವಾಗ ಕನ್ನಡದಲ್ಲಿ ಮಾತನಾಡಿ, ಮಕ್ಕಳು ಪ್ರೈಮರಿಯಲ್ಲಿ ಇರುವಾಗ ಪ್ರತಿದಿನ ಕನ್ನಡ ನ್ಯೂಸ್ ಪೇಪರ್ ಕೊಟ್ಟು ಒಂದು 5 ನಿಮಿಷ ಜೋರಾಗಿ ಓದಲು ಹೇಳಿ, ತಪ್ಪಿದ್ದಾಗ ಸಮಧಾನದಿಂದ ಸರಿಪಡಿಸಿ, ಹೀಗೆ ಮಾಡುವುದರಿಂದ ನಿಮ್ಮ ಮಕ್ಕಳು ಕನ್ನಡ ಭಾಷೆಯಲ್ಲಿ ಉತ್ತಮ ಹಿಡಿತ ಸಾಧಿಸುತ್ತಾರೆ. ಶಾಲೆಯಲ್ಲಿ ಕನ್ನಡವಿಲ್ಲದಿದ್ದರೂ ಕೂಡ ಕನ್ನಡ ಕಲಿಸಬಹುದು. ಪೋಷಕರು ಪ್ರಯತ್ನ ಹಾಕಬೇಕು.
ಈಗ ಸ್ಪರ್ಧಾತ್ಮಕ ಯುಗದಲ್ಲಿ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಕಳುಹಿಸುವುದು ತಪ್ಪಲ್ಲ, ಅವರು ಇಂಗ್ಲಿಷ್‌ನೋ, ಹಿಂದಿನೋ ಕಲಿಯಲಿ, ಆದರೆ ಕನ್ನಡ ಅವರಿಗೆ ಅಷ್ಟೇ ಚೆನ್ನಾಗಿ ಬರುವಂತೆ ಮಾಡುವುದು ಪ್ರತಿಯೊಬ್ಬ ಪೋಷಕರ ಕರ್ತವ್ಯವಾಗಿದೆ.
ಇತರ ಭಾಷೆಯವರ ಜೊತೆಗೆ ಕನ್ನಡದಲ್ಲಿಯೇ ಮಾತನಾಡಿಸೋಣ: ಇತರ ಭಾಷೆಯವರನ್ನು ದ್ವೇಷಿಸುವುದು ಬೇಡ, ಅವರ ಜೊತೆ ಮಾತನಾಡುವಾಗ ಕನ್ನಡ ಭಾಷೆಯಲ್ಲಿಯೇ ಮಾತನಾಡೋಣ, ನಮ್ಮ ಪಕ್ಕದ ಮನೆಯವರು ಬೇರೆ ಭಾಷೆಯವರು ಇದ್ದರೆ ದಿನಾ ಒಂದೆರಡು ಪದ ಕನ್ನಡದಲ್ಲಿ ಕೇಳಿದಾಗ ಅವರಿಗೂ ಕನ್ನಡ ಭಾಷೆ ಅರ್ಥವಾಗಲಾರಂಭಿಸುತ್ತದೆ.
ಕನ್ನಡ ಭಾಷೆಯಲ್ಲಿಓದಿದವರಿಗೆ ಕೀಳೆರಿಮೆ ಬೇಡ
ಎಷ್ಟೋ ಕನ್ನಡ ಮಾಧ್ಯಮ ಮಕ್ಕಳು ಓದಿನಲ್ಲಿ ತುಂಬಾ ಚುರುಕಾಗಿರುತ್ತಾರೆ, ಆದರೆ ಒಂದು ಕೆಲಸಕ್ಕೆ ಪ್ರಯತ್ನಿಸುವಾಗ ಅವರಲ್ಲಿ ಕೀಳೆರಿಮೆ ಉಂಟಾಗುವುದು. ಇಂಗ್ಲಿಷ್ ಬರಲ್ಲ ಎಂಬ ಕಾರಣಕ್ಕೆ ನಮ್ಮ ಕರ್ನಾಟಕದಲ್ಲಿ ಅನೇಕ ಉದ್ಯೋಗವಕಾಶ ಸಿಗುತ್ತಿಲ್ಲ, ಆ ರೀತಿ ಆಗಬಾರದು, ಕೆಲವೊಂದು ಕೆಲಸಗಳಲ್ಲಿ ಕೌಶಲ್ಯ ಮುಖ್ಯವಾಗಿರುತ್ತದೆ, ಭಾಷೆಯಲ್ಲ, ಆದರೆ ಅಲ್ಲಿಯ ಸಂದರ್ಶನದಲ್ಲಿ ಉತ್ತರ ಕೊಡಲು ಸಾಧ್ಯವಾಗದೆ ಉದ್ಯೋಗ ಪಡೆಯಲು ವಿಫಲರಾಗಿರುತ್ತಾರೆ, ಆ ರೀತಿ ಆಗುವುದನ್ನು ತಡೆಯಬೇಕಾಗಿದೆ. ಈಗ ಇಂಗ್ಲಿಷ್ ಪೇಪರ್‌ನಲ್ಲಿ ಕೆಲಸ ಮಾಡಬೇಕೆಂದರೆ ಇಂಗ್ಲಿಷ್ ಬೇಕು, ಅದೇ ಒಂದು ಟೆಕ್ನಿಕಲ್ ಕಂಪನಿಯ ಉದ್ಯೋಗಿಯಾಗಲು ಅಲ್ಲಿ ಭಾಷೆಗಿಂತ ಕೌಶಲ್ಯ ಬೇಕು, ಇಂಥ ಕಡೆ ಕೌಶಲ್ಯವಿದ್ದರೂ ಇಂಗ್ಲಿಷ್ ಬರಲ್ಲ ಎಂಬ ಕಾರಣಕ್ಕೆ ಎಷ್ಟೋ ಜನರಿಗೆ ಉದ್ಯೋಗ ಸಿಗುತ್ತಿಲ್ಲ, ಈ ರೀತಿ ಆಗುವುದು ತಡೆಗಟ್ಟಬೇಕಾಗಿದೆ.



Click it and Unblock the Notifications