Latest Updates
-
ಅಮಾವಾಸ್ಯೆಯ ದಿನ ಜಗಳ ಬೇಡ: ದಂಪತಿಗಳ ನಡುವಿನ ಪ್ರೀತಿ ಹೆಚ್ಚಿಸಲು ಈ ಸಂಭಾಷಣೆ ಸೂತ್ರಗಳು -
ಆರೆಂಜ್ ಅಲರ್ಟ್: ಭಾರಿ ಮಳೆಯಿಂದ ಮನೆ ರಕ್ಷಿಸಲು ಈ 5 ಟಿಪ್ಸ್ ಪಾಲಿಸಿ, ಸುರಕ್ಷಿತವಾಗಿರಿ! -
ಪ್ರೊಟೀನ್ ಪೌಡರ್ನಲ್ಲಿ ಹುಳುಗಳು! ಬಾಲಿವುಡ್ ನಟಿಯ ಆತಂಕ, ಎಫ್ಡಿಎ ತನಿಖೆ ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಟಿಪ್ಸ್ -
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ! -
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ -
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು
ಕಂಪನಿ ಮಾರಿದ ಹಣದಿಂದ 400 ಉದ್ಯೋಗಿಗಳನ್ನು ಮಿಲಿನಿಯರ್ ಮಾಡಿ ಕಲಿಯುಗದ ಕರ್ಣನಾದ ಜ್ಯೋತಿ ಬನ್ಸಾಲ್
ಇತ್ತೀಚೆಗಷ್ಟೇ ಚೆನ್ನೈ ಮೂಲದ ಉದ್ಯಮಿಯೊಬ್ಬರು ಆಯುಧ ಪೂಜೆಗೆ ತನ್ನ ಉದ್ಯೋಗಿಗಳು, ಕಾರು, ಬೈಕ್, ಮದುವೆ ಗೊತ್ತಾಗಿರುವ ಉದ್ಯೋಗೊಗಳಿಗೆ ಲಕ್ಷ ರುಪಾಯಿ ಚೆಕ್ ಹೀಗೆಲ್ಲಾ ನೀಡಿ ದೊಡ್ಡ ಸುದ್ದಿ ಮಾಡಿದ್ದರು, ಇದೀಗ ಭಾರತ ಮೂಲದ ಅಮೆರಿಕದಲ್ಲಿ ನೆಲೆಸಿರುವ ಜ್ಯೋತಿ ಬನ್ಸಾಲ್ ಎಂಬ ಉದ್ಯಮಿ ತನ್ನ ಕಂಪನಿಯ 400 ಉದ್ಯೋಗಿಗಳಿಗೆ ತನ್ನ ಕಂಪನಿಯ ಆಸ್ತಿ ನೀಡಿ ಮಿಲಿನಿಯರ್ ಮಾಡುವ ಮೂಲಕ ಕಲಿಯುಗದ ಕರ್ಣನಾಗಿದ್ದಾರೆ.
ಅವರ ಉದ್ಯೋಗಿಗಳು ಕನಸ್ಸಿನಲ್ಲಿಯೂ ಊಹಿಸಿರದ ಹಣ ಉದ್ಯೋಗಿಗಳ ಕೈ ಸೇರಿದೆ. ಲಾಟರಿ ಹೊಡೆದು ರಾತ್ರೋ ರಾತ್ರಿ ಮಿಲಿಯನರ್ ಆಗಿರುವವರನ್ನು ನೋಡಿದ್ದೇವೆ, ಆದರೆ ಒಂದು ಕಂಪನಿಯ ಅಷ್ಟೂ ಉದ್ಯೋಗಿಗಳು ಇದ್ದಕ್ಕಿದ್ದಂತೆ ಮಿಲಿನಿಯರ್ ಪಟ್ಟವನ್ನೇರಿದ್ದಾರೆ, ಅದಕ್ಕೆ ಕಾರಣವಾಗಿರುವುದು ಅವರ ಬಾಸ್‌ನ ದೊಡ್ಡ ಮನಸ್ಸು.

ಸ್ಟಾರ್ಟ್‌ಅಪ್ ಕಟ್ಟಿ ಬೆಳೆಸಿ ಈಗ ಮಾರಿದ ಹಣವನ್ನೂ ಉದ್ಯೋಗಿಗಳಿಗೆ ಹಂಚಿದ ಉದ್ಯಮಿ
AppDynamics ಎಂಬ ಕಂಪನಿಯ ಸಂಸ್ಥಾಪಕ ಜ್ಯೋತಿ ಬನ್ಸಾಲ್, ಸ್ಟಾರ್ಟ್‌ಅಪ್ ಆಗಿ ಈ ಸಂಸ್ಥೆ ಕಟ್ಟಿ ಬೆಳೆಸಿದವರು, ಈಗ ಈ ಕಂಪನಿಯನ್ನು
$3.7 ಬಿಲಿಯನ್ ಡಾಲರ್‌ಗೆ ಮಾರಾಟ ಮಾಡಲಾಗಿದ್ದು ಬಂದ ಹಣವನ್ನು ತನ್ನ ಕಂಪನಿ ಬೆಳೆಯಲು ಕಾರಣವಾದ ಉದ್ಯೋಗಿಗಳಿಗೆ ನೀಡಿದ್ದಾರೆ. ಈ ಕಂಪನಿಯನ್ನು ಸಿಸ್ಕೋಗೆ ಮಾರಾಟ ಮಾಡಲಾಗಿದ್ದು AppDynamicsನಲ್ಲಿ ಕೆಲಸ ಮಾಡುತ್ತಿದ್ದ ಉದ್ಯೋಗಿಗಳು $1 ಮಿಲಿಯನ್ ಹಾಗೂ ಅದಕ್ಕಿಂತ ಹೆಚ್ಚು ಹಣ ಪಡೆಯಲಿದ್ದಾರೆ. ಇದರ ಬಗ್ಗೆ ಸಿಎನ್‌ಬಿಸಿ ಜೊಎತ ಮಾತನಾಡಿದ ಬನ್ಸಾಲ್ ಇಷ್ಟೊಂದು ದುಡ್ಡು ನಮಗೆ ಬರುತ್ತೆ ಎಂದು ಉದ್ಯೋಗಿಗಳು ಅಂದುಕೊಂಡಿರಲಿಲ್ಲ, ಇದ್ದಕ್ಕಿದ್ದಂತೆ ಇಷ್ಟೊಂದು ಹಣ ಬಂದಿರುವುದಕ್ಕೆ ಅವರಿಗೆಲ್ಲಾ ತುಂಬಾ ಖುಷಿಯಾಗಿದೆ, ಅವರ ಬದುಕೇ ಬದಲಾಗಿದೆ ಎಂದು ಹೇಳಿದ್ದಾರೆ.
ಹೊಸ ಕಾರು, ಮನೆ ಖರೀದಿಸುತ್ತಿರುವ ಉದ್ಯೋಗಿಗಳು
ಉದ್ಯೋಗಳ ಖುಷಿ ಹೇಳಲತೀರದು, ತಾವು ಊಹಿಸಿರದ ತಮ್ಮ ಜೀವಮಾನದಲ್ಲಿ ಇಷ್ಟೊಂದು ಹಣ ಮಾಡಬಹುದು ಎಂದು ಅಂದುಕೊಂಡಿರದ ಉದ್ಯೋಗಿಗಳು ಇದ್ದಕ್ಕಿದ್ದಂತೆ ಮಿಲಿನಿಯರ್ ಆದಾಗ ಅವರ ಖುಷಿ ಹೇಳ ತೀರದಾಗಿದೆ. ಆ ಖುಷಿಯಲ್ಲಿ ಮನೆ ಖರೀದಿಸಿದ್ದಾರೆ, ದುಬಾರಿ ಕಾರುಗಳನ್ನು ಖರೀದಿಸಿದ್ದಾರೆ.
ನನ್ನ ಒಬ್ಬ ಉದ್ಯೋಗಿ ಅವರಿದ್ದ ಮನೆಯನ್ನು ಬಾಡಿಗೆಗೆ ಕೊಟ್ಟು 6 ತಿಂಗಳಿಗೆ ವರ್ಲ್ಡ್ ಟೂರ್ ಹೋಗಿದ್ದಾರೆ, ನನಗೆ ಉದ್ಯೋಗಿಗಳಿಗೆ ಐಷಾರಾಮಿ ಬದುಕು ನೀಡಿದ್ದಕ್ಕೆ ಖುಷಿಯಾಗಿದೆ, ಆದರೆ ಒಂದು ಮೂಲೆಯಲ್ಲಿ ನನ್ನ ನಿರ್ಧಾರದ ಬಗ್ಗೆ ಪಶ್ಚಾತಾಪವೂ ಇದೆ ಎಂದಿದ್ದಾರೆ.
'ನ್ನ ಸ್ಟಾರ್ಟ್‌ಅಪ್ ಮಾರಾಟ ಮಾಡಿದ್ದಕ್ಕೆ ನನಗೆ ಬೇಸರವಿದೆ, ನೋವಿದೆ, ನಾವು ನನ್ನ ಬದುಕಿನ ಒಂಭತ್ತು ವರ್ಷ ಈ ಕಂಪನಿಗಾಗಿ ಕಳೆದಿದ್ದೇನೆ, ಇದ್ದಕ್ಕಿದ್ದಂತೆ ಎಂಡ್ ಆಫ್ ದಿ ಚಾಪ್ಟರ್‌ಗೆ ಬಂದಿದ್ದೇವೆ, ಈ ಕಂಪನಿ ಮಾರಾಟ ಮಾಡಿರುವುದು ಖುಷಿಯೂ ಇದೆ, ದುಃಖವೂ, ಈಗ ಮಾತನಾಡಿ ಪ್ರಯೋಜನವಿಲ್ಲ, ಆ ಚಾಪ್ಟರ್ ಮುಗಿದಿದೆ, ನಾವಿನ್ನೂ ಮುಂದುವರೆಯಬೇಕಾಗಿದೆ' ಎಂದು ಹೇಳಿದ್ದಾರೆ.
ಬನ್ಸಾಲ್ AppDynamics ಕಂಪನಿ ಮಾರಾಟ ಮಾಡಿದರೂ ಅವರ ಬಳಿ ಇನ್ನೆರಡು ಕಂಪನಿಯಿದೆ ಅದರ ಮಾರ್ಕೆಟ್ ಬೆಲೆ ಕೂಡ AppDynamics ಕಂಪನಿಯಷ್ಟೇ ಇದೆ ಹಾಗಾಗಿ ಉದ್ಯಮ ಲೋಕದಲ್ಲಿ ಬನ್ಸಾಲ್ ಓಟ ಮತ್ತಷ್ಟು ಚುರುಕುಗೊಳ್ಳಲಿದೆ.
ಕಂಪನಿಯಲ್ಲಿ ದುಡಿದವರ ಬದುಕು ಸೆಟ್ಲ್ ಮಾಡಿದ್ದಾರೆ
ಸಾಮಾನ್ಯವಾಗಿ ಒಂದು ಕಂಪನಿ ಮಾರಾಟವಾಗುವಾಗ ಮುಂದೆ ಬರುವ ಮ್ಯಾನೇಜ್ಮೆಂಟ್ ಹೇಗೋ ಎಂಬ ಆತಂಕ ಉದ್ಯೋಗಿಗಳಿಗೆ ಇರುತ್ತದೆ, ಹೊಸದಾಗಿ ಬರುವ ಮ್ಯಾನೇಜ್ಮೆಂಟ್ ಹಲವಾರು ಬದಲಾವಣೆಯನ್ನು ತರುತ್ತದೆ, ಆವಾಗ ಈಗ ಕೆಲಸ ಮಾಡುತ್ತಿರುವ ಹಲವಾರು ಉದ್ಯೋಗಿಗಳು ಕೆಲಸವನ್ನು ಕಳೆದುಕೊಳ್ಳಬಹುದು ಅಥವಾ ಹೊಸ ಕಂಪನಿಯ ರೂಲ್ಸ್ ರೆಗ್ಯೂಲೇಷನ್‌ಗಳಿಗೆ ಸೆಟ್ ಆಗುವುದು ಕೂಡ ಕಷ್ಟವಾಗುವುದು.
ಆದರೆ ಜ್ಯೂತಿ ಬನ್ಸಾಲ್ ಕಾರ್ಯ ಮಾತ್ರ ನಿಜಕ್ಕೂ ಯಾರೂ ಊಹಿಸಿರಲಿಲ್ಲ, ಕಂಪನಿ ಮಾರಾಟ ಮಾಡಿದ ಹಣದಲ್ಲಿ ಉದ್ಯೋಗಿಗಳಿಗೆ ಶೇರ್ ನೀಡಿದ್ದಾರೆ, 400 ಉದ್ಯೋಗಿಗಳ ಬದುಕನ್ನು ಭದ್ರತೆಗೊಳಿಸಿರುವುದು ಮಾತ್ರವಲ್ಲ ಅವರ ಜೀವನವನ್ನೇ ಬದಲಾಯಿಸಿದ್ದಾರೆ. ಒಂದು ಸ್ಟಾರ್ಟ್‌ಅಪ್ ಆಗಿದ್ದ ಕಂಪನಿ ಇಷ್ಟು ದೊಡ್ಡ ಮಟ್ಟಕ್ಕೆ ಬೆಳೆಯಲು ಕಾರಣವಾದ ಉದ್ಯೋಗಿಗಳಿಗೆ ಉದ್ಯಮಿ ಜ್ಯೋತಿ ಬನ್ಸಾಲ್ ನೀಡಿರುವ ಕೊಡಗೆ ಮಾತ್ರ ಅತ್ಯಾದ್ಭುತ...



Click it and Unblock the Notifications
