Latest Updates
-
ಸಮಲಿಂಗಿ ಜೋಡಿಗಳೇ ಎಚ್ಚರ: ಗಿಫ್ಟ್ ಟ್ಯಾಕ್ಸ್ನಿಂದ ಪಾರಾಗಲು ಈ ದಾಖಲೆಗಳು ಕಡ್ಡಾಯ! -
ಅಡುಗೆ ಎಣ್ಣೆ ಬೆಲೆ ಏರಿಕೆ: ಬಜೆಟ್ ಮತ್ತು ಆರೋಗ್ಯ ಕಾಪಾಡಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ಯುಪಿಐನಲ್ಲಿ ಎಐ ಕ್ರಾಂತಿ: ಇನ್ಮುಂದೆ ನಿಮ್ಮ ಬಿಲ್ ಪಾವತಿಗಳನ್ನು ಡಿಜಿಟಲ್ ಏಜೆಂಟ್ ನೋಡಿಕೊಳ್ಳಲಿದೆ! -
ಉತ್ತರಾಖಂಡದಲ್ಲಿ ಆರೆಂಜ್ ಅಲರ್ಟ್: ಹೋಟೆಲ್ ರೂಮ್ನಲ್ಲೇ ಫಿಟ್ ಆಗಿರಲು ಈ ಸರಳ ವ್ಯಾಯಾಮಗಳನ್ನು ಮಾಡಿ! -
UGC-NET ಪರೀಕ್ಷೆಯ ಗೊಂದಲ: ವಿದ್ಯಾರ್ಥಿಗಳ ಆತಂಕ ದೂರ ಮಾಡಲು ಪೋಷಕರಿಗೆ ಇಲ್ಲಿದೆ 48 ಗಂಟೆಗಳ ಸ್ಟಡಿ-ರಿಸೆಟ್ ಪ್ಲಾನ್! -
ದೆಹಲಿ ಮಳೆ: ಗುಡುಗು-ಮಿಂಚಿನಿಂದ ನಿಮ್ಮ ಎಲೆಕ್ಟ್ರಾನಿಕ್ ವಸ್ತುಗಳನ್ನು ರಕ್ಷಿಸಲು ಈ 15 ನಿಮಿಷದ ಟಿಪ್ಸ್ ಪಾಲಿಸಿ! -
ಎನರ್ಜಿ ಡ್ರಿಂಕ್ಸ್ ಕುಡಿಯುವ ಮುನ್ನ ಎಚ್ಚರ! FSSAI ಹೊಸ ನಿಯಮ ಮತ್ತು ಆರೋಗ್ಯಕರ ಪರ್ಯಾಯಗಳು -
ಗುರುಗ್ರಾಮದಲ್ಲಿ ವರುಣನ ಆರ್ಭಟ: ಕಚೇರಿಗೆ ಹೋಗ್ಬೇಡಿ, ಮನೆಯಿಂದಲೇ ಕೆಲಸ ಮಾಡಿ - ಪೊಲೀಸರ ಮಹತ್ವದ ಸೂಚನೆ -
ಮಳೆಗಾಲದ ಜಡತ್ವಕ್ಕೆ ಗುಡ್ ಬೈ: ಮುಂಬೈ-ಪುಣೆ ಜನರಿಗಾಗಿ 10 ನಿಮಿಷದ ಸರಳ ವ್ಯಾಯಾಮಗಳು -
ಮುಂಬೈ ಮಳೆ ಆರ್ಭಟ: ಸಂಗಾತಿಯ ಸುರಕ್ಷತೆಗಾಗಿ ನೀವು ಮಾಡಬೇಕಾದ ಪ್ರಮುಖ ಕೆಲಸಗಳಿವು!
ಜನವರಿ ಮಾಸದಲ್ಲಿ ಮಕರ ಸಂಕ್ರಾಂತಿ ಸೇರಿ ಈ ವಿಶೇಷ ದಿನಗಳಿವೆ
ಹೊಸ ವರ್ಷವು ನಿಮಗೆ ಹೊಸ ಹರ್ಷ ತರಲಿ, ನಿಮ್ಮೆಲ್ಲಾ ಕೆಲಸ ಕಾರ್ಯಗಳು ಉತ್ತಮವಾಗಿ ನಡೆಯಲಿ, ಬದುಕು ಬಂಗಾರವಾಗಲಿ ಎಂದು ಹೇಳುತ್ತಾ, ಜನವರಿ ಮಾಸದಲ್ಲಿ ಬರುವ ವಿಶೇಷ ದಿನಗಳು, ಆಚರಣೆಗಳು, ಹಬ್ಬಗಳು, ವ್ರತಗಳು ಇವುಗಳ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ:

ಜನವರಿ 3, ವಿನಾಯಕ ಚತುರ್ಥಿ
ಜನವರಿ 5: ಸ್ಕಂದ ಷಷ್ಠಿ
ಜನವರಿ 10: ವೈಕುಂಠ ಏಕಾದಶಿ
ಜನವರಿ 10: ಶನಿ ತ್ರಯೋದಶಿ
ಜನವರಿ 11: ರೋಹಿಣಿ ವ್ರತ, ವಿವೇಕಾನಂದ ಜಯಂತಿ
ಜನವರಿ 12: ರಾಷ್ಟ್ರೀಯ ಯುವ ದಿನ
ಜನವರಿ 13: ಪುಷ್ಯ ಪೂರ್ಣಿಮಾ
ಜನವರಿ 14: ಮಕರ ಸಂಕ್ರಾಂತಿ, ಪೊಂಗಲ್
ಜನವರಿ 14, ಉತ್ತರಾಯಣ
ಜನವರಿ 14, ಮಕರವಿಳಕ್ಕು
ಜನವರಿ 17 ಲಂಬೋದರಾ ಸಂಕಷ್ಠಿ ಚತುರ್ಥಿ
ಜನವರಿ 22: ಸುಭಾಷ್ ಚಂದ್ರ ಬೋಸ್ ಜಯಂತಿ
ಜನವರಿ 26: ಗಣ ರಾಜ್ಯೋತ್ಸವ ದಿನ
ಜನವರಿ 27: ಮೌನಿ ಅಮವಾಸ್ಯೆ
ಜನವರಿ ಮಾಸದಲ್ಲಿ ಹಲವು ಹಬ್ಬಗಳು, ವ್ರತಗಳಿವೆ, ಅದರಲ್ಲಿ ಪ್ರಮುಖವೆಂದರೆ ಮಕರ ಸಂಕ್ರಾಂತಿ, ಇದನ್ನು ಪೊಂಗಲ್ ಎಂದು ಕೂಡ ಆಚರಿಸಲಾಗುವುದು,ಇನ್ನು ಈ ದಿನ ಶಬರಿಮಲೆ ಅಯ್ಯಪ್ಪ ಮಾಲೆ ಧರಿಸಿರುವವರೆಗೂ ತುಂಬಾ ವಿಶೇಷವಾದ ದಿನವಾಗಿದೆ. ಈ ದಿನ ಲಕ್ಷಾಂತರ ಭಕ್ತರು ಮಕರವಿಳಕ್ಕು ದರ್ಶನ ಪಡೆಯಲು 41 ದಿನದ ಕಠಿಣ ವ್ರತ ನಿಯಮ ಪಾಲಿಸಿ ಶಬರಿ ಮಲೆಗೆ ಹೋಗಿರುತ್ತಾರೆ.
ಮಕರ ಸಂಕ್ರಾಂತಿ: ಎಲ್ಲಾ ಹಬ್ಬಗಳಂತೆ ಮಕರ ಸಂಕ್ರಾಂತಿಯನ್ನು ಹಬ್ಬವನ್ನು ವಿಶಿಷ್ಠವಾಗಿ, ವಿಶೇಷವಾಗಿ ಆಚರಿಸಲಾಗುವುದು. ಈ ದಿನ ಎಳ್ಳು, ಬೆಲ್ಲ ಹಂಚಿ ಹಬ್ಬವನ್ನು ಆಚರಿಸಲಾಗುವುದು. ಈ ಹಬ್ಬದ ಹಿಂದೆ ವೈಜ್ಞಾನಿಕ ಕಾರಣವೂ ಇದು. ಇದು ಸುಗ್ಗಿಯ ಕಾಲ, ಸುಗ್ಗಿ ಮುಗಿದು ಬೆಳೆಗಳನ್ನು ಮನೆಗೆ ತಂದು ಸಂಭ್ರಮಿಸುವ ದಿನ, ಇನ್ನು ಸಂಕ್ರಾಂತಿ ಹಬ್ಬದಲ್ಲಿ ಹಂಚುವ ಎಳ್ಳು ಬೆಲ್ಲ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು, ಚಳಿಯಿಂದ ರಕ್ಷಣೆ ನೀಡುವುದು ಜೊತೆಗೆ ತ್ವಚೆ ಆರೋಗ್ಯಕ್ಕೂ ಒಳ್ಳೆಯದು.,
ಪೊಂಗಲ್: ದಕ್ಷಿಣ ಭಾರತದಲ್ಲಿ ಪೊಂಗಲ್ ಕೂಡ ತುಂಬಾ ಅದ್ಧೂರಿಯಿಂದ ಆಚರಣೆ ಮಾಡಲಾಗುವುದು. ಪೊಂಗಲ್ ಹಬ್ಬದಲ್ಲಿ ಸಿಹಿ ಪೊಂಗಲ್ ಮಾಡಿ ಸವಿಯಲಾಗುವುದು. ಪೊಂಗಲ್ ಹಬ್ಬ ಕೂಡ ತುಂಬಾ ಸಂತೋಷ ಸಡಗರದಿಂದ ಆಚರಿಸಲಾಗುವುದು.
ಮಕರ ವಿಳಕ್ಕು:ಕೇರಳದಲ್ಲಿ ಇದೇ ದಿನದಂದು ಮಕರ ವಿಳಕ್ಕು ಎಂದು ಎಂದು ಆಚರಿಸಲಾಗುವುದು. ಈ ದಿನ ಮಾತ್ರ ಪವಾಡದ ಜ್ಯೋತಿ ಆಕಾಶದಲ್ಲಿ 3 ಬಾರಿ ಮಿಂಚಿ ಮರೆಯಾಗುವುದು. ಅಯ್ಯಪ್ಪಸ್ವಾಮಿಯೇ ಭಕ್ತಾಧಿಗಳಿಗೆ ನಕ್ಷತ್ರದ ರೂಪದಲ್ಲಿ ದರ್ಶನ ನೀಡುತ್ತಾರೆ ಎಂಬುವುದು ಧಾರ್ಮಿಕ ನಂಬಿಕೆ.
ಉತ್ತರಾಯಣ: ವರ್ಷವನ್ನು ಉತ್ತರಾಯಣ ಹಾಗೂ ದಕ್ಷಿಣಾಯನ ಎಂದು ಎರಡು ಭಾಗ ಮಾಡಲಾಗಿದೆ. ಉತ್ತರಾಯಣ ಶುಭ ಕಾರ್ಯಗಳಿಗೆ ಶ್ರೇಷ್ಠವಾದ ಕಾಲ, ದಕ್ಷಿಣಾಯನ ಧಾರ್ಮಿಕ ಕಾರ್ಯಗಳಿಗೆ ಶ್ರೇಷ್ಠವಾಗಿದೆ.
ಜನವರಿ ಮಾಸದಲ್ಲಿ ಎರಡು ಪ್ರಮುಖ ಏಕಾದಶಿ ಬರುತ್ತದೆ ಒಂದು ವೈಕುಂಠ ಏಕಾದಶಿ, ನಂತರ ಶಟಿಲಾ ಏಕಾದಶಿ. ಏಕಾದಶಿ ದಿನ
ಶ್ರೀ ವಿಷ್ಣುವಿನ ಆರಾಧನೆಗೆ ಮೀಸಲಾಗಿರುವ ದಿನವಾಗಿದೆ.
ಇದಲ್ಲದೆ ಪ್ರದೋಷ ವ್ರತ, ಸಂಕಷ್ಟಿ, ಮೌನಿ ಅಮವಾಸಸ್ಯೆ ಹೀಗೆ ಅನೇಕ ಧಾರ್ಮಿಕ ಆಚರಣೆಗಳಿವೆ. ರಾಷ್ಟ್ರೀಯ ಹಬ್ಬವಾದ ಗಣರಾಜ್ಯೋತ್ಸವ ಹೀಗೆ ವರ್ಷದ ಮೊದಲ ತಿಂಗಳು ತುಂಬಾನೇ ವಿಶೇಷವಾಗಿದೆ.



Click it and Unblock the Notifications