Latest Updates
-
ಸಿಸ್ಟರ್.. 30+ ಬಳಿಕ ಈ ಸೂತ್ರಗಳನ್ನು ಬೆಳೆಸಿಕೊಳ್ಳಿ! ಆರೋಗ್ಯ ಸದಾ ಚೆನ್ನಾಗಿ ಇರುತ್ತೆ -
10 ನಿಮಿಷದ ಹಾಟ್ ಹಾಟ್ ಪರೋಟ! ಈ ರೀತಿ ಮಾಡಿದ್ರೆ ಮೃದು & ಕ್ರಿಸ್ಪಿಯಾಗಿ ಬರುತ್ತೆ.. ಹೋಟೆಲ್ ಸ್ಟೈಲ್ ಸೀಕ್ರೆಟ್ ಇಲ್ಲಿದೆ -
ಹೋಟೆಲ್ ಸ್ಟೈಲ್ ರಾಯಲ್ ಚಟ್ನಿ! ಈ ಒಂದು ವಸ್ತು ಸೇರಿಸಿ ನೋಡಿ.. ರುಚಿ ಡಬಲ್, 2 ಇಡ್ಲಿ ಜಾಸ್ತಿ ತಿಂತೀರಾ -
ಈ ದಿನ ಆರ್ಥಿಕ ಲಾಭದ ಸಾಧ್ಯತೆಗಳೂ ಇವೆ! ನಿಮ್ಮ ಕ್ರಶ್ ಭೇಟಿಯಾಗುವ ಯೋಗ -
March 07 Horoscope: ಪ್ರಯಾಣ ಮಾಡುವಾಗ ಎಚ್ಚರವಿಡಿ! -
ಅಬ್ಬಬ್ಬಾ ಎಂಥಾ ರುಚಿ ಈ ಈರುಳ್ಳಿ ಮಂಚೂರಿಯನ್: ನೀವೂ ಕೂಡ ಟ್ರೈ ಮಾಡಿ -
ಮಾರ್ಚ್ನಲ್ಲಿ ಕಾಳಸರ್ಪ ಯೋಗ: ಈ ರಾಶಿಯವರಿಗೆ ಯೋಗದಿಂದ ಇದೆ ದೊಡ್ಡ ಲಾಭ! -
ದೇಹದಲ್ಲಿ ರಕ್ತ ಕಡಿಮೆ ಆಗಿದ್ರೆ ಈ ಎಳ್ಳುಂಡೆ ಮಾಡಿ: ತಿಂಗಳ ಕಾಲ ಇಟ್ಟು ಸವಿಯಬಹುದು! -
ಕರ್ನಾಟಕ ಬಜೆಟ್ 2026: ಆರೋಗ್ಯ ವಲಯಕ್ಕೆ ಬಂಪರ್, ಹೊಸ ಯೋಜನೆಗಳೇನು ನೋಡಿ! -
ನಾಳೆ ಸೂರ್ಯ-ಬುಧ ಸಂಯೋಗ: ಬುಧಾದಿತ್ಯ ಯೋಗದಿಂದ ಈ ರಾಶಿಯವರ ಬದುಕಲ್ಲಿ ಬೆಳಕು!
Jagannath Temple: ಅಪ್ಪಿ-ತಪ್ಪಿಯೂ 3ನೇ ಮೆಟ್ಟಿಲ ಮೇಲೆ ಕಾಲಿಡಬೇಡಿ! ಯಮನಿಗೂ ಇದಕ್ಕೂ ಏನು ಸಂಬಂಧ?
Jagannath Temple: ಪುರಿ ಜಗನ್ನಾಥ ರಥಯಾತ್ರೆ ಎಲ್ಲರಿಗೂ ಚಿರಪರಿಚಿತ. ಆದರೆ, ಭಗವಾನ್ ಜಗನ್ನಾಥ ದೇವಾಲಯದಲ್ಲಿ ಭಕ್ತರು ಮೂರನೇ ಹೆಜ್ಜೆಯನ್ನು ಏಕೆ ತಪ್ಪಿಸುತ್ತಾರೆ ಎಂದು ಹಲವರಿಗೆ ತಿಳಿದಿಲ್ಲ. ಯಮನಿಗೂ ಇದಕ್ಕೂ ಸಂಬಂಧವಿದೆ ಎನ್ನುವುದನ್ನು ನೀವು ನಂಬಲೇಬೇಕು. ಹೌದು, ದೇಶದಲ್ಲಿ ಅನೇಕ ಪ್ರಾಚೀನ ಮತ್ತು ನಿಗೂಢ ದೇವಾಲಯಗಳಿವೆ. ಇವುಗಳಿಗೆ ಸಂಬಂಧಿಸಿದ ವಿಶಿಷ್ಟ ನಂಬಿಕೆಗಳು ಮತ್ತು ಪವಾಡಗಳು ಇನ್ನೂ ಜನರ ನಂಬಿಕೆಯ ಕೇಂದ್ರವಾಗಿ ಉಳಿದಿವೆ. ಇವುಗಳಲ್ಲಿ ಒಂದು ಒಡಿಶಾದ ಪುರಿ ನಗರದಲ್ಲಿರುವ ಜಗನ್ನಾಥನ ಭವ್ಯ ದೇವಾಲಯ. ಈ ದೇವಾಲಯಕ್ಕೆ ಸಂಬಂಧಿಸಿದ ಅನೇಕ ರಹಸ್ಯಗಳು ಭಕ್ತರು ಮತ್ತು ಸಂಶೋಧಕರಿಗೆ ವರ್ಷಗಳಿಂದ ಕುತೂಹಲಕಾರಿ ವಿಷಯವಾಗಿದೆ. ಆದರೆ, ಅವುಗಳಲ್ಲಿ ಅತ್ಯಂತ ಪ್ರಸಿದ್ಧ ಮತ್ತು ನಿಗೂಢವೆಂದರೆ ದೇವಾಲಯದ 'ಮೂರನೇ ಮೆಟ್ಟಿಲು ಅಥವಾ ಹೆಜ್ಜೆ'ಗೆ ಸಂಬಂಧಿಸಿದ ನಂಬಿಕೆ.
ಜಗನ್ನಾಥ ದೇವಾಲಯವು ಧಾರ್ಮಿಕ ದೃಷ್ಟಿಕೋನದಿಂದ ಮಾತ್ರವಲ್ಲದೆ, ಅದರ ರಹಸ್ಯಗಳು ಮತ್ತು ಪವಾಡಗಳು ಸಹ ಇದನ್ನು ಬಹಳ ವಿಶೇಷವಾಗಿಸುತ್ತವೆ. ಹಿಂದೂಗಳ ನಾಲ್ಕು ಧಾಮಗಳಾದ ಬದರಿನಾಥ, ದ್ವಾರಕ, ರಾಮೇಶ್ವರಂ ಮತ್ತು ಜಗನ್ನಾಥಪುರಿಗಳಲ್ಲಿ ಸೇರಿಸಲಾದ ಈ ದೇವಾಲಯವು ಶ್ರೀಕೃಷ್ಣನಿಗೆ ಸಮರ್ಪಿತವಾಗಿದೆ. ಅವರನ್ನು ಇಲ್ಲಿ 'ಜಗನ್ನಾಥ' ಎಂದು ಪೂಜಿಸಲಾಗುತ್ತದೆ. ಈ ಪವಿತ್ರ ಸ್ಥಳವಾದ ಪುರಿಯನ್ನು 'ವೈಕುಂಠ ಭೂಮಿ' ಎಂದೂ ಕರೆಯಲಾಗುತ್ತದೆ. ಕಾರಣ, ಇಲ್ಲಿ ಭಗವಾನ್ ಶ್ರೀಹರಿ ವಾಸಿಸುತ್ತಾನೆ ಎಂಬ ಪ್ರತೀತಿ ಮತ್ತು ನಂಬಿಕೆ. ಹಾಗಿದ್ರೆ, ಜಗನ್ನಾಥ ದೇವಾಲಯದ ಮೂರನೇ ಮಿಟ್ಟಿಲಿನ ರಹಸ್ಯವೇನು? ಅದರ ಮೇಲೆ ಹೆಜ್ಜೆ ಹಾಕುವುದನ್ನು ಏಕೆ ನಿಷೇಧಿಸಲಾಗಿದೆ? ತಿಳಿಯಲು ಮುಂದೆ ಓದಿ.

ಮೂರನೇ ಮೆಟ್ಟಿಲಿನ ರಹಸ್ಯವೇನು?
ಜಗನ್ನಾಥ ದೇವಾಲಯದ ಮುಖ್ಯ ದ್ವಾರದಲ್ಲಿರುವ 22 ಮೆಟ್ಟಿಲುಗಳಲ್ಲಿ ಮೂರನೇ ಮೆಟ್ಟಿಲನ್ನು 'ಯಮಶಿಲಾ' ಎಂದು ಕರೆಯಲಾಗುತ್ತದೆ. ವರದಿಯ ಪ್ರಕಾರ, ಒಮ್ಮೆ ಭಕ್ತರು ಜಗನ್ನಾಥನನ್ನು ನೋಡುವ ಮೂಲಕ ಪಾಪಗಳಿಂದ ಮುಕ್ತರಾಗಲು ಪ್ರಾರಂಭಿಸಿದರು. ಯಮರಾಜನು ಇದರ ಬಗ್ಗೆ ಚಿಂತಿತನಾಗಿ ಜಗನ್ನಾಥನನ್ನು ಭೇಟಿಯಾಗಲು ಬರುತ್ತಾನೆ. ಪ್ರತಿಯೊಬ್ಬ ವ್ಯಕ್ತಿಯು ನಿನ್ನನ್ನು ನೋಡುವ ಮೂಲಕ ಪಾಪಗಳಿಂದ ಮುಕ್ತನಾದರೆ, ಯಮಲೋಕ ಏನಾಗುತ್ತದೆ? ಎಂದು ಯಮರಾಜ ಪ್ರಶ್ನೆ ಮಾಡುತ್ತಾನೆ. ಯಮರಾಜನ ಈ ಪ್ರಶ್ನೆಗೆ ಜಗನ್ನಾಥ ಉತ್ತರಿಸುತ್ತಾನೆ.
ಯಮನಿಗೂ ಇದಕ್ಕೂ ಸಂಬಂಧವಿದೆ?
ಜಗನ್ನಾಥ ಒಂದು ಪರಿಹಾರವನ್ನು ನೀಡಿ, ಯಮರಾಜ ನೀವು ದೇವಾಲಯದ ಮುಖ್ಯ ದ್ವಾರದ ಮೂರನೇ ಮೆಟ್ಟಿಲು ಮೇಲೆ ವಾಸಿಸುತ್ತೀರಿ ಎಂದು ಹೇಳುತ್ತಾನೆ. ನನ್ನ ದರ್ಶನದ ನಂತರ ಯಾರಾದರೂ ಆ ಮೂರನೇ ಮೆಟ್ಟಿಲು ಮೇಲೆ ಹೆಜ್ಜೆ ಹಾಕಿದರೆ, ಅವರ ಎಲ್ಲಾ ಒಳ್ಳೆಯ ಕಾರ್ಯಗಳು ಕೊನೆಗೊಳ್ಳುತ್ತವೆ. ಅವರು ಯಮಲೋಕಕ್ಕೆ ಹೋಗಬೇಕಾಗುತ್ತದೆ ಎಂದು ಜಗನ್ನಾಥ ನಿಯಮ ರೂಪಿಸುತ್ತಾನೆ. ಅಂದಿನಿಂದ ಭಕ್ತರು ದೇವಾಲಯದಲ್ಲಿ ದರ್ಶನದ ಬಳಿಕ ಹಿಂತಿರುಗುವಾಗ, ಮೂರನೇ ಮೆಟ್ಟಿಲು ಮೇಲೆ ಹೆಜ್ಜೆ ಹಾಕುವುದಿಲ್ಲ. ಇಂದಿಗೂ ಈ ಸಂಪ್ರದಾಯ ಪಾಲನೆಯಾಗುತ್ತಿದೆ.
ಇದು ಹೇಗಿದೆ ಮತ್ತು ಗುರುತಿಸುವುದು ಹೇಗೆ?
ಜಗನ್ನಾಥ ದೇವಾಲಯದಲ್ಲಿ ಒಟ್ಟು 22 ಮೆಟ್ಟಿಲುಗಳಿವೆ. ಇದು ಕೆಳಗಿನಿಂದ ಎಣಿಸಿದ ಮೂರನೇ ಹೆಜ್ಜೆಯಾಗಿದೆ. ಈ ನಿಗೂಢ ಮೆಟ್ಟಿಲುಗಳ ವಿಶೇಷತೆಯೆಂದರೆ, ಇದರ ಬಣ್ಣ ಉಳಿದ ಮೆಟ್ಟಿಲುಗಳಿಗಿಂತ ಭಿನ್ನವಾಗಿದೆ. ಇದು ಕಪ್ಪು ಬಣ್ಣದ್ದಾಗಿದೆ. ಇದನ್ನು ಎಚ್ಚರಿಕೆಯಿಂದ ನೋಡಿದಾಗ, ಇದು ಉಳಿದ ಕಲ್ಲುಗಳಿಗಿಂತ ಭಿನ್ನವಾಗಿದೆ ಎಂಬುದು ಸ್ಪಷ್ಟವಾಗುತ್ತದೆ. ಭಕ್ತರು ದೇವಸ್ಥಾನವನ್ನು ಪ್ರವೇಶಿಸುವಾಗ, ಸಾಮಾನ್ಯವಾಗಿ ಮೆಟ್ಟಿಲುಗಳ ಮೂಲಕ ಒಳಗೆ ಹೋಗುತ್ತಾರೆ. ಆದರೆ, ದರ್ಶನದ ಬಳಿಕ ಹಿಂತಿರುಗುವಾಗ, ಮೂರನೇ ಹೆಜ್ಜೆಯನ್ನು ಬಳಸದಂತೆ ಅವರಿಗೆ ನಿರ್ದಿಷ್ಟವಾಗಿ ಸೂಚಿಸಲಾಗಿದೆ. ಈ ಮೆಟ್ಟಿಲು ಮೇಲೆ ಹೆಜ್ಜೆ ಇಟ್ಟರೆ, ದರ್ಶನದ ಪುಣ್ಯ ವ್ಯರ್ಥವಾಗುತ್ತದೆ ಎನ್ನುವುದು ಭಕ್ತರ ನಂಬಿಕೆ.
ಜಗನ್ನಾಥ ದೇವಾಲಯದ ರಹಸ್ಯಗಳಿವು!
ಜಗನ್ನಾಥ ದೇವಾಲಯವು ಮೂರನೇ ಮೆಟ್ಟಿಲು ಮಾತ್ರವಲ್ಲದೆ, ಇತರೆ ಅನೇಕ ನಿಗೂಢತೆಗಳಿಗೂ ಹೆಸರುವಾಸಿ. ಇವುಗಳನ್ನು ಇಲ್ಲಿಯವರೆಗೆ ಯಾವುದೇ ವಿಜ್ಞಾನಿ ಅಥವಾ ತಜ್ಞರು ಸಂಪೂರ್ಣವಾಗಿ ಪರಿಹರಿಸಲು ಸಾಧ್ಯವಾಗಿಲ್ಲ. ದೇವಾಲಯದ ಮೇಲ್ಭಾಗದಲ್ಲಿರುವ ಧ್ವಜವು ಯಾವಾಗಲೂ ಗಾಳಿಯ ವಿರುದ್ಧ ದಿಕ್ಕಿನಲ್ಲಿ ಹಾರುತ್ತದೆ. ಇದು ಸಾಮಾನ್ಯ ಭೌತಿಕ ನಿಯಮಗಳಿಗೆ ವಿರುದ್ಧವಾಗಿದೆ. ಇಲ್ಲಿಯವರೆಗೆ ಯಾವುದೇ ಪಕ್ಷಿ ಅಥವಾ ವಿಮಾನವು ದೇವಾಲಯದ ಮೇಲೆ ಹಾರುತ್ತಿರುವುದು ಕಂಡುಬಂದಿಲ್ಲ.
ದಿನದ ಯಾವುದೇ ಸಮಯದಲ್ಲಿ ದೇವಾಲಯದ ನೆರಳು ನೆಲದ ಮೇಲೆ ಸ್ಪಷ್ಟವಾಗಿ ಗೋಚರಿಸುವುದಿಲ್ಲ. ಕಡಲತೀರದಿಂದ ಕೇವಲ 2 ರಿಂದ 3 ಕಿ.ಮೀ ದೂರದಲ್ಲಿದ್ದರೂ, ದೇವಾಲಯದ ಆವರಣವನ್ನು ಪ್ರವೇಶಿಸುತ್ತಿದ್ದಂತೆ ಸಮುದ್ರದ ಅಲೆಗಳ ಶಬ್ದ ಸಂಪೂರ್ಣವಾಗಿ ನಿಲ್ಲುತ್ತದೆ. ಈ ಎಲ್ಲಾ ವೈಶಿಷ್ಟ್ಯಗಳು ಈ ದೇವಾಲಯವನ್ನು ಕೇವಲ ಧಾರ್ಮಿಕ ಸ್ಥಳವನ್ನಾಗಿ ಮಾತ್ರವಲ್ಲದೆ, ನಿಗೂಢ ರಚನೆಯನ್ನಾಗಿಯೂ ಮಾಡುತ್ತವೆ. ಈ ಪವಾಡಗಳ ಮುಂದೆ ವಿಜ್ಞಾನವೂ ಮೌನವಾಗಿದೆ ಎನ್ನಬಹುದು.



Click it and Unblock the Notifications












