Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಮನೆ ಮುಂದೆ ನಿಂಬೆಹಣ್ಣು ಹಾಗೂ ಹಸಿ ಮೆಣಸು ನೇತು ಹಾಕುವುದೇಕೆ? ವೈಜ್ಞಾನಿಕ ಕಾರಣದಿಂದ ನೋಡಿದರೂ ಪ್ರಯೋಜನವಿದೆ
ಗಾಡಿಗೆ, ಮನೆ ಮುಂದೆ, ಶಾಪ್ ಮುಂದೆ ನಿಂಬೆಹಣ್ಣು ಮತ್ತು ಮೆಣಸಿನಕಾಯಿ ಪೋಣಿಸಿರುವ ಧಾರವನ್ನು ಕಟ್ಟಿರುವುದನ್ನು ನೋಡುತ್ತೇವೆ. ಭಾರತದಲ್ಲಿ ಈ ದೃಶ್ಯ ಎಲ್ಲಾ ಕಡೆ ಬರುವುದು.
ಯಾವುದೇ ಕೆಟ್ಟ ದೃಷ್ಟಿ ತಾಗದಿರಲಿ ಎಂದು ಈ ರೀತಿ ಕಟ್ಟಲಾಗುವುದು, ಕೆಲವರಿಗೆ ಇದು ನಂಬಿಕೆ, ಇನ್ನು ಕೆಲವರಿಗೆ ಮೂಢ ನಂಬಿಕೆಯಷ್ಟೇ.. ಆದರೆ ಇದರ ಹಿಂದೆ ವೈಜ್ಞಾನಿಕ ಕಾರಣಗಳಿವೆ ಎಂಬುವುದು ಗೊತ್ತೇ? ಬನ್ನಿ ಇದರ ಬಗ್ಗೆ ನೋಡೋಣ:

ನಿಂಬೆಹಣ್ಣು, ಮೆಣಸಿನಕಾಯಿ ಮಾಲೆ ನೇತು ಹಾಕುವುದರ ಹಿಂದೆ ಇರುವ ಧಾರ್ಮಿಕ ಕಾರಣಗಳೇನು?
ಧಾರ್ಮಿಕ ನಂಬಿಕೆಗಳ ಪ್ರಕಾರ ಲಕ್ಷ್ಮಿಯ ಜೊತೆಗೆ ಅಲಕ್ಷ್ಮಿಯೂ ಇರುತ್ತಾಳೆ, ಆದರೆ ಎಲ್ಲಿ ಲಕ್ಷ್ಮಿ ಲಕ್ಷ್ಮಿಯನ್ನು ನಿರ್ಲಕ್ಷ್ಯ ಮಾಡುತ್ತಾಳೋ ಅಲಕ್ಷ್ಮಿ ಬಂದು ಕೂತು ಬಿಡುತ್ತಾಳೆ, ಇವಳು ದರಿದ್ರ ಲಕ್ಷ್ಮಿ, ಈ ದರಿದ್ರ ಲಕ್ಷ್ಮಿ ಬಂದರೆ ತುಂಬಾನೇ ಕಷ್ಟ ಪಡಬೇಕಾಗುತ್ತದೆ, ಈ ರೀತಿ ಮನೆ ಮುಂದೆ, ಅಂಗಡಿ ಮುಂದೆ ನಿಂಬೆಹಣ್ಣು, ಹಸಿ ಮೆಣಸಿನಕಾಯಿ ಅಲಕ ಲಕ್ಷ್ಮಿಯನ್ನು ಒಳ ಬರದಂತೆ ತಡೆಯುತ್ತದೆ, ಅಲ್ಲದೆ ಮನೆಗೆ ದೃಷ್ಟಿ ಬೀಳುವುದಿಲ್ಲ ಎಂದು ಹೇಳಲಾಗುವುದು.
ಲಕ್ಷ್ಮಿಯನ್ನು ಸಿಹಿ ವಸ್ತುಗಳನ್ನು ಇಷ್ಟಪಡುತ್ತಾಳೆ, ಹಾಗಾಗಿ ಲಕ್ಷ್ಮಿಗೆ ಸಿಹಿ ಪದಾರ್ಥಗಳನ್ನು ನೈವೇದ್ಯವಾಗಿ ಇಡಲಾಗುವುದು. ಅದೇ ದರಿದ್ರ ಲಕ್ಷ್ಮಿ ಹುಳಿ, ಖಾರದ ವಸ್ತುಗಳನ್ನು ಇಷ್ಟಪಡುತ್ತಾಳೆ, ಈ ರೀತಿ ಮನೆ ಮುಂದೆ ಕಟ್ಟಿದಾಗ ದರಿದ್ರ ಲಕ್ಷ್ಮಿ ಮನೆಯ ಹೊರಗಡೆ ಇರುತ್ತಾಳೆ, ಮನೆಯ ಒಳಗಡೆ ಬರುವುದಿಲ್ಲ. ಇದರಿಂದ ಲಕ್ಷ್ಮಿ ಕೃಪೆಯಿಂದ ಮನೆಯಲ್ಲಿ ಆರ್ಥಿಕ ಸ್ಥಿತಿ ತುಂಬಾ ಚೆನ್ನಾಗಿರಲಿದೆ.
ಇದರ ಹಿಂದಿದೆ ವೈಜ್ಞಾನಿಕ ಕಾರಣ
ನಮ್ಮ ಹಿರಿಯರು ಮಾಡಿರುವ ಧಾರ್ಮಿಕ ಆಚರಣೆಗಳ ಹಿಂದೆ ವೈಜ್ಞಾನಿಕ ಕಾರಣಗಳಿರುತ್ತದೆ, ಆದರೆ ಆವಾಗ ಅದು ಜನರಿಗೆ ಅರ್ಥವಾಗಲಿ ಎಂದು ಯಾವುದೋ ಕತೆ ರೂಪದಲ್ಲಿ ಹೇಳಿರುತ್ತಾರೆ. ಆದರೆ ಅದರ ಹಿಂದೆ ಇರುವ ವೈಜ್ಞಾನಿಕ ಕಾರಣ ತಿಳಿಯದೆ ಮೂಢನಂಬಿಕೆ ಅಂತ ಅನುಮಾನದಿಂದ ನೋಡುತ್ತೇವೆ.
ಇದರ ಹಿಂದೆ ಇರುವ ವೈಜ್ಞಾನಿಕ ಕಾರಣಗಳೇನು ಎಂದು ನೋಡೋಣ ಬನ್ನಿ:
ಹಿಂದೆ ಜನರು ಕಾಡಿನ ಜೊತೆಗೆ ತುಂಬಾನೇ ಸಂಪರ್ಕ ಹೊಂದಿದ್ದರು ಒಂದು ಕಡೆಯಿಂದ ಮತ್ತೊಂದು ಕಡೆಗೆ ಹೋಗುವಾಗ ಕಾಡಿನ ಮೂಲಕ ಹೋಗುತ್ತಿದ್ದರು. ತಮ್ಮ ರಕ್ಷಣೆಗೆ ಇದನ್ನು ಜೊತೆಗೆ ಕೊಂಡೊಯ್ಯುತ್ತಿದ್ದರು, ಬಾಯಾರಿಕೆಯಾದರೆ ನಿಂಬೆಹಣ್ಣು ನೀರಿಗೆ ಹಿಂಡಿ ಕುಡಿದರೆ ಬಾಯಾರಿಕೆ ಕಡಿಮೆ, ದೇಹಕ್ಕೆ ಚೈತನ್ಯ ಸಿಗುವುದು.
ಇನ್ನು ಹಸಿಮೆಣಸು ಬಗ್ಗೆ ಹೇಳುವುದಾದರೆ ಕಾಡಿನಲ್ಲಿ ಹಾವಿನ ಕಾಟ ಹೆಚ್ಚಿರುತ್ತದೆ, ಆವಾಗ ಹಾವು ಕಚ್ಚಿ ತುಂಬಾ ಜನರು ಸಾಯುತ್ತಿದ್ದರು. ತಮಗೆ ಕಚ್ಚಿದ ಹಾವು ವಿಷಕಾರಿಯೇ ಇಲ್ಲವೇ ಎಂದು ತಿಳಿಯಲು ಹಸಿಮೆಣಸು ಬಳಸುತ್ತಿದ್ದರಂತೆ. ಹಾವು ಕಚ್ಚಿದರೆ ಇವರು ಹಸಿ ಮೆಣಸು ಕಚ್ಚಿ ನೋಡುತ್ತಿದ್ದರು ಬಾಯಿಗೆ ಖಾರ ಬಂದರೆ ಕಚ್ಚಿರುವುದು ವಿಷಕಾರಿ ಅಲ್ಲ ಎಂದು ಖಾತರಿಯಾಗುತ್ತಿತ್ತು, ಅದೇ ವಿಷಕಾರಿ ಹಾವು ಕಚ್ಚಿದರೆ ನರಗಳೆಲ್ಲಾ ಮರಕಟ್ಟುವುದು, ಕಚ್ಚಿದಾಗ ಯಾವುದೇ ರುಚಿ ಗೊತ್ತಾಗುವುದಿಲ್ಲ ಆವಾಗ ಅದು ವಿಷಕಾರಿ ಎಂದು ತಿಳಿಯುವುದು.
ಹಾಗಾಗಿ ಹಿಂದಿನ ಕಾಲದಲ್ಲಿ ನಿಂಬೆಹಣ್ಣು, ಹಸಿ ಮೆಣಸು ಜೊತೆಗೆ ಕೊಂಡೊಯ್ಯುತ್ತಿದ್ದರು.
ಕೀಟಗಳು
ನಿಂಬೆಹಣ್ಣು, ಹಸಿ ಮೆಣಸು ಕೀಟಗಳನ್ನು ತಡೆಗಟ್ಟುತ್ತದೆ. ಇದು ಜೊತೆಗಿದ್ದರೆ ಇದರ ಘಾಟು ವಾಸನೆಗೆ ಕೀಟಗಳು ಕಚ್ಚುವುದಿಲ್ಲ ಎಂದು ಹೇಳಲಾಗುವುದು.
ಋಣಾತ್ಮಕ ಶಕ್ತಿಯನ್ನು ಹೊರ ಹಾಕುತ್ತದೆ.
ನಂಬಿಕೆಗಳ ಪ್ರಕಾರ ನಿಂಬೆಹಣ್ಣು ಮತ್ತು ಹಸಿ ಮೆಣಸನ್ನು ಮನೆ ಮುಂದುಗಡೆ ಹಾಕುವುದರಿಂದ ಕೆಟ್ಟ ದೃಷ್ಟಿ ಬೀಳುವುದಿಲ್ಲ ಎಂದು ಹೇಳಲಾಗುವುದು. ಅಲ್ಲದೆ ಋಣಾತ್ಮಕ ಮನೆಯೊಳಗಡೆ ಬರಲು ಬಿಡುವುದಿಲ್ಲ ಎಂದು ಹೇಳಲಾಗುವುದು, ಹಾಗಾಗಿ ಇದನ್ನು ಮನೆಮುಂದೆ ನೇತು ಹಾಕಲಾಗುವುದು.



Click it and Unblock the Notifications
