Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಕಾಗೆಗಳು ನಮ್ಮ ಪೂರ್ವಜರೇ? ಪಿತೃಪಕ್ಷಕ್ಕೂ ಕಾಗೆಗಳಿಗೂ ಇರುವ ನಂಟೇನು? ಗರುಡ ಪುರಾಣ ಹೇಳೋದಿದು!
ಪಿತೃ ಪಕ್ಷ ನಡೆಯುತ್ತಿದೆ. ಈ ಸಮಯದಲ್ಲಿ ಪೂರ್ವಜರಿಗೆ ಅನ್ನ ಆಹಾರ ನೀಡುವುದು ನೋಡಬಹುದು. ಅದ್ರಲ್ಲೂ ಪೂರ್ವಜನ ಆಶೀರ್ವಾದ ಪಡೆಯಲು ಹಾಗೆ ಅವರ ಆತ್ಮಕ್ಕೆ ಗೌರವ ಸಲ್ಲಿಸುವ ಸಲುವಾಗಿ ಈ ಶ್ರಾದ್ಧ, ಪಿಂಡದಾನ, ತರ್ಪಣ ಸಂಪ್ರದಾಯವನ್ನು ಬಹಳ ಹಿಂದಿನಿಂದ ಮಾಡಿಕೊಂಡು ಬರಲಾಗಿದೆ. ಹಾಗೆ ಇದನ್ನು ಹಿಂದೂಗಳ ಪಾಲಿನ ಪ್ರಮುಖ ಸಂಪ್ರದಾಯ ಎಂಬುದಾಗಿ ಬಿಂಬಿಸಲಾಗಿದೆ.
ಪೂರ್ವಜರಿಗೆ ಅನ್ನ ಆಹಾರ ನೀಡಿ ಅವರಿಂದ ಆಶೀರ್ವಾದ ಪಡೆಯಲು ಕೂಡ ಸ್ಥಳಗಳ ಆಯ್ದುಕೊಳ್ಳಲಾಗುತ್ತದೆ. ಹಾಗೆ ಒಂದಿಷ್ಟು ವಿಧಿ ವಿಧಾನಗಳನ್ನು ಸಹ ಪಾಲಿಸಲಾಗುತ್ತದೆ. ಹಾಗೆ ಇದೊಂದು ಪ್ರಮುಖ ಆಚರಣೆಯಾಗಿ ನೋಡಲಾಗುತ್ತದೆ. ಹಿರಿಯರಿಗೆ ಇಷ್ಟದ ಖಾದ್ಯಗಳ ಮಾಡಲಾಗುತ್ತದೆ. ಹಾಗೆ ಅವರ ಇಷ್ಟದ ವಸ್ತುಗಳ ಇಟ್ಟು ಪೂಜಿಸಲಾಗುತ್ತದೆ. ಇದರಿಂದ ಅವರು ಸಂತೃಪ್ತರಾಗುತ್ತಾರೆ ಎಂಬ ನಂಬಿಕೆ ಇದೆ.

ಇನ್ನು ಈ ಪಿತೃ ಪಕ್ಷದ ಆಚರಣೆಯಲ್ಲಿ ಪೂರ್ವಜರಿಗೆ ಅನ್ನ ನೀಡುವುದು ಪ್ರಮುಖ. ಅವರಿಗೆ ಯಾವೆಲ್ಲಾ ಖಾದ್ಯಗಳು ಇಷ್ಟವೋ ಅದನ್ನೆಲ್ಲಾ ಮಾಡಲಾಗುತ್ತದೆ. ಹಾಗೆ ಅವರಿಗಾಗಿ ಬಾಳೆ ಎಲೆ ಮೇಲೆ ಹಾಕಿ ಪೂಜೆ ಸಲ್ಲಿಸುತ್ತಾರೆ. ಮನೆಯ ಎಲ್ಲಾ ಸದಸ್ಯರು ಪೂಜೆ ಸಲ್ಲಿಸಿದ ಬಳಿಕ ಆ ಬಾಳೆ ಎಲೆಯಲ್ಲಿನ ಖಾದ್ಯವನ್ನು ಮನೆಯಿಂದ ಹೊರಗೆ ಇಡುತ್ತಾರೆ.
ಈ ಎಲೆಯಲ್ಲಿ ಇಟ್ಟ ಖಾದ್ಯವನ್ನು ಕಾಗೆ ಬಂದು ತಿನ್ನಬೇಕು ಅದಾದ ಬಳಿಕವೇ ಊಟ ಮಾಡುವ ಸಂಪ್ರದಾಯವನ್ನು ಪಾಲಿಸಲಾಗುತ್ತದೆ. ಆದ್ರೆ ಕೆಲವರು ಈ ಆಹಾರ ಹೊರಗೆ ಇಟ್ಟು ಬಂದು ಊಟ ಮಾಡುತ್ತಾರೆ. ಕಾಗೆ ಯಾವಾಗಲಾದರು ಬಂದು ಅದನ್ನು ತಿನ್ನಲಿದೆ ಎಂದು ಭಾವಿಸುತ್ತಾರೆ. ಕೆಲವರು ಇಡೀ ಒಂದು ದಿನ ಅದನ್ನು ಕಾಗೆಗಳಿಗಾಗಿ ಇಡುತ್ತಾರೆ.
ಆದ್ರೆ ಕಾಗೆಗಳನ್ನು ನಾವು ಪೂರ್ವಜರು ಎಂದು ನಂಬಿರುವುದ್ಯಾಕೆ? ಇದರ ಹಿಂದಿರುವ ಸತ್ಯಾಂಶವೇನು? ಬೇರೆ ಪ್ರಾಣಿಗಳನ್ನು ಆ ದಿನ ಏಕೆ ಪವಿತ್ರವಾಗಿ ನೋಡಲಾಗಿಲ್ಲ. ಹಾಗೆ ಕಾಗೆಗಳಿಗೂ ನಮ್ಮ ಪೂರ್ವಜರಿಗೂ ಇರುವ ನಂಟೇನು ಎಂಬುದನ್ನು ನಾವಿಲ್ಲಿ ತಿಳಿದುಕೊಳ್ಳಬೇಕಿದೆ.

ಕಾಗೆಗಳನ್ನು ಅಪಶಕುನದ ಸಂಕೇತವಾಗಿ ನೋಡಲಾದರು ಹಲವು ಸಮಯದಲ್ಲಿ ಅದನ್ನು ಶುಭ ಶಕುನವಾಗಿ ಪರಿಗಣಿಸಲಾಗುತ್ತದೆ. ಪಿಂಡ ದಾನದ ಸಮಯದಲ್ಲಿ ಕಾಗೆ ಆಹಾರ ಮುಟ್ಟದಿದ್ದರೆ ಪೂರ್ವಜರು ಸಂತೃಪ್ತರಾಗಿಲ್ಲ ಎಂದು ಭಾವಿಸಲಾಗುತ್ತದೆ. ಹಾಗೆ ಇದರಿಂದ ಪಿತೃ ದೋಷ ಉಂಟಾಗುತ್ತದೆ ಎಂದು ಸಹ ನಂಬಲಾಗಿದೆ.
ಕಾಗೆಗಳು ನಮ್ಮ ಪೂರ್ವಜನರ ಲೋಕದ ವಾಸಿಗಳು
ನಮ್ಮ ಪೂರ್ವಜರು ಮರಣದ ನಂತರ ಪಿತೃ ಲೋಕದಲ್ಲಿ ನೆಲೆಸುತ್ತಾರೆ ಎಂದು ಪುರಾಣದಲ್ಲಿ ಹೇಳಲಾಗಿದೆ. ಅದೇ ಲೋಕದಲ್ಲಿ ಕಾಗೆಗಳು ನೆಲೆಸುತ್ತವೆ ಎಂದು ಹೇಳಲಾಗಿದೆ. ಗರುಡ ಪುರಾಣದ ಪ್ರಕಾರ ವ್ಯಕ್ತಿಯೋರ್ವನ ಕರ್ಮದ ಅನುಸಾರವಾಗಿ ಆತ ಬ್ರಹ್ಮ ಲೋಕ, ಸ್ವರ್ಗ ಲೋಕ, ಪಿತೃ ಲೋಕ ಮತ್ತು ನರಕ ಲೋಕ ಎಂದು ಹೇಳಲಾಗಿದೆ.
ಕಾಗೆಗಳು ಆಹಾರ ಸೇವನೆ ಮಾಡುವುದರಿಂದ ನಮ್ಮ ಪೂರ್ವಜರಿಗೆ ಒಳಿತಾಗಲಿದೆ ಎಂಬ ನಂಬಿಕೆಯೂ ಇದೆ. ಕಾಗೆಗಳು ಬ್ರಾಹ್ಮಿ ಮುಹೂರ್ತದಲ್ಲಿ ಎದ್ದೇಳುತ್ತವೆ. 1 ಗಂಟೆ 36 ನಿಮಿಷಗಳ ಮೊದಲು ಪ್ರಾರಂಭವಾಗಿ ಸೂರ್ಯೋದಯಕ್ಕೆ 45 ನಿಮಿಷಗಳ ಮೊದಲು ಕೊನೆಗೊಳ್ಳುವ ಸಮಯವಾಗಿದೆ. ಇದು ಜ್ಞಾನ, ಧ್ಯಾನ ಮತ್ತು ಆಧ್ಯಾತ್ಮಿಕ ಅಭ್ಯಾಸಗಳಿಗೆ ಅತ್ಯಂತ ಮಂಗಳಕರ ಸಮಯವೆಂದು ಪರಿಗಣಿಸಲ್ಪಟ್ಟಿದೆ. ಈ ಮುಹೂರ್ತದಲ್ಲಿ ಏಳುವ ಕಾಗೆಗಳು ಸೂರ್ಯಾಸ್ತದ ಬಳಿಕ ಆಹಾರ ಸೇವಿಸುವುದಿಲ್ಲ. ಹಾಗೆ ಹಾರಾಡುವುದಿಲ್ಲ. ರಾತ್ರಿ ಸಮಯದಲ್ಲಿ ಕಾಗೆಗಕೂ ಕೂಗಿದರೆ ಅದು ಕೆಟ್ಟದರ ಸಂಕೇತ ಎಂದು, ಪೂರ್ವಜರು ಕೆಟ್ಟದನ್ನು ಸಂದೇಶವಾಗಿ ಕಳುಹಿಸಿದ್ದಾರೆ ಎಂದು ಹೇಳಲಾಗುತ್ತದೆ.

ಹಾಗೆ ಪುನರ್‌ಜನ್ಮದ ಪ್ರಕಾರವಾಗಿ ವ್ಯಕ್ತಿಯೋರ್ವ 4 ರೀತಿಯ ಹಂತಗಳಲ್ಲಿ ಹಾದು ಹೋಗುತ್ತಾನೆ. ಕ್ಷಿನೋದ್ರ್ಕದಲ್ಲಿ ಆತ್ಮವು ಭೂಮಿಗೆ ಹಿಂತಿರುಗುತ್ತದೆ. ಆದಾಗ್ಯೂ ಅದು ಸಂತನ ರೂಪವನ್ನು ಪಡೆಯುತ್ತದೆ. ಇದರ ನಂತರ ಭೂಮೋದರ್ಕ ಆಗತಿ ರೂಪ ಇದರಲ್ಲಿ ವ್ಯಕ್ತಿಯು ಶ್ರೀಮಂತ ಕುಟುಂಬದಲ್ಲಿ ಜನಿಸುತ್ತಾನೆ. ನಂತರ ಅಧೋಮುಖ ಚಲನೆ. ಇದರಲ್ಲಿ ವ್ಯಕ್ತಿಯು ಪ್ರಾಣಿ ರೂಪದಲ್ಲಿ ಜನ್ಮ ಪಡೆಯುತ್ತಾನೆ. ಕೊನೆಯಲ್ಲಿ ಕೆಟ್ಟ ಚಲನೆ ಇರುತ್ತದೆ. ಇದರಲ್ಲಿ ಒಬ್ಬ ವ್ಯಕ್ತಿಯು ಮರಣದ ನಂತರ ಕೀಟದ ರೂಪದಲ್ಲಿ ಜನ್ಮ ಪಡೆಯುತ್ತಾನೆ ಇದೆಲ್ಲವು ಆತನ ಕರ್ಮಾನುಸಾರವಾಗಿ ನಡೆಯಲಿದೆ ಎಂದು ಹೇಳಲಾಗಿದೆ.
ಈ ಎಲ್ಲಾ ಪ್ರಕಾರಗಳ ಪಡೆಯುವಾಗ ಆತ ಪಿತೃಲೋಕದಲ್ಲಿ ನೆಲೆಸುತ್ತಾನೆ ಎಂದು ಗರುಡ ಪುರಾಣ ಹೇಳುತ್ತದೆ. ಹಾಗೆ ಆತ್ಮವು ತನ್ನ ಹಿಂದಿನ ಜನ್ಮದ ಕರ್ಮದ ಫಲವಾಗಿ ಅಚಿ ಮಾರ್ಗ, ಧೂಮ ಮಾರ್ಗ ಅಥವಾ ಜನ್ಮ-ಮೃತ್ಯು ಮಾರ್ಗವನ್ನು ಪಡೆಯುತ್ತದೆ ಎಂಬುದನ್ನು ವಿವರಿಸಲಾಗಿದೆ. ಅಚಿ ಮಾರ್ಗದಲ್ಲಿ ಪ್ರಯಾಣಿಸುವವನು ಬ್ರಹ್ಮ ಲೋಕದಲ್ಲಿ ಸ್ಥಾನ ಪಡೆಯುತ್ತಾನೆ. ಧೂಮ ಮಾರ್ಗದಲ್ಲಿ ಪ್ರಯಾಣಿಸುವವರು ಪಿತೃ ಲೋಕಕ್ಕೆ ಹೋಗುತ್ತಾರೆ. ಆದರೆ ಜನ್ಮ-ಮೃತ್ಯು ಮಾರ್ಗದಲ್ಲಿ ಪ್ರಯಾಣಿಸುವವರು ನರಕ ಲೋಕಕ್ಕೆ ಹೋಗುತ್ತಾರೆ. ಧಾರ್ಮಿಕ ಅಭಿಪ್ರಾಯವೆಂದರೆ ಯಮರಾಜನು ಪಿತೃ ಲೋಕದಲ್ಲಿಯೂ ವಾಸಿಸುತ್ತಾನೆ. ಪಿತೃ ಲೋಕದಲ್ಲಿ ಪೂರ್ವಜರನ್ನು ಕ್ರಮವಾಗಿ ದೇವ ಪಿತೃ ಮತ್ತು ಮನುಷ್ಯ ಪಿತೃ ಎಂದು ಎರಡು ವರ್ಗಗಳಾಗಿ ವಿಂಗಡಿಸಲಾಗಿದೆ. ಪೂರ್ವಜರ ಮುಖ್ಯಸ್ಥ ಯಮರಾಜ ಮತ್ತು ಆರ್ಯಮ ಪೂರ್ವಜರ ಮುಖ್ಯಸ್ಥ ಎಂದು ಪರಿಗಣಿಸಲಾಗಿದೆ.
ಪಿತೃ ಲೋಕ ಎಲ್ಲಿದೆ?
ಪುರಾತನ ಗ್ರಂಥಗಳ ಆಧಾರದ ಪ್ರಕಾರ, ಯಮಲೋಕವು ಮರ್ತ್ಯ ಜಗತ್ತಿನ ಮೇಲೆ ದಕ್ಷಿಣ ದಿಕ್ಕಿನಲ್ಲಿ 86,000 ಯೋಜನೆಗಳ ದೂರದಲ್ಲಿದೆ. ಇದನ್ನು ಗರುಡ ಪುರಾಣದಲ್ಲಿ ಉಲ್ಲೇಖಿಸಲಾಗಿದೆ. ಪಿತೃ ಪಕ್ಷದ ಸಮಯದಲ್ಲಿ ಇಡೀ ಜಗತ್ತು ಕಿರಣಗಳ ಸೋಕಿದಾಗ ಪಿತೃಲೋಕದಿಂದ ಆತ್ಮವು ಭೂಲೋಕ ಪ್ರವೇಶಿಸಲಿದೆ ಎಂದು ಗರುಡ ಪುರಾಣ ಹೇಳುತ್ತದೆ.



Click it and Unblock the Notifications