ಭಾರತದಲ್ಲೇ ಇದ್ದು ಚೀನಾವನ್ನೇ ಆಳಿದ್ದ ರಾಜ ಈತ..! ಯಾರು ಗೊತ್ತಾ?

ದಕ್ಷಿಣ ಭಾರತದ ರಾಜ ಮನೆತನವು ಇಡೀ ಏಷ್ಯಾ ಖಂಡದ ತುಂಬೆಲ್ಲಾ ತಮ್ಮ ಆಡಳಿತ ನಡೆಸಿದ್ದರು ಎಂಬುದನ್ನು ನಾವು ತಿಳಿದಿದ್ದೇವೆ. ರಾಜ್ಯ ಆಳುತ್ತಿದ್ದ ಅದೆಷ್ಟೋ ರಾನ ಮನೆತನಗಳು ತಮ್ಮ ಸಾಮ್ರಾಜ್ಯವನ್ನ ಏಷ್ಯಾದ ಹಲವು ಭಾಗದಲ್ಲೂ ವಿಸ್ತರಿಸಿತ್ತು. ಹೀಗಾಗಿ ಭಾರತದ ಸಂಸ್ಕೃತಿ, ಸಾಂಸ್ಕೃತಿಕ ವೈಭವ ಏಷ್ಯಾದ ಹಲವು ಭಾಗದಲ್ಲಿ ನಾವು ನೋಡಬಹುದು.

ಆದರೆ ಭಾರತದ ಒಬ್ಬ ರಾಜ ಚೀನಾದಲ್ಲೂ ಆಳ್ವಿಕೆ ನಡೆಸಿದ್ದ, ಹೌದು ಭಾರತದಲ್ಲಿ ಕುಳಿತು ಚೀನಾದ ಪ್ರದೇಶವನ್ನು ತನ್ನ ಹಿಡಿತದಲ್ಲಿಟ್ಟುಕೊಂಡಿದ್ದ. ಆತ ಕಾಶ್ಮೀರದಲ್ಲಿ ಹಿಡಿತ ಸಾಧಿಸಿದ್ದ ರಾಜ ಲಲಿತಾದಿತ್ಯ ಮುಕ್ತಾಬಿತಾನ ಎಂಬ ರಾಜನ ಆಳ್ವಿಕೆ ಇದಾಗಿತ್ತು. ಕಾಶ್ಮೀರದ ಅನಂತನಾಗ್ ಪ್ರದೇಶದಲ್ಲಿ 1300 ವರ್ಷಗಳ ಹಿಂದೆ ನಿರ್ಮಿಸಲಾದ ಪುರಾತನ ಮರ್ದಾನ್ ಸೂರ್ಯ ದೇವಾಲಯವಿದೆ. ಇಂದು ಅದು ಶಿಥಿಲಗೊಂಡು ಪಾಳು ಬಿದ್ದಿದ್ದು, ಆ ಯುಗದ ಭವ್ಯತೆಯನ್ನು ಸೂಚಿಸುತ್ತದೆ.

Indian King Who Ruled China While Staying In India

ಲಲಿತಾದಿತ್ಯ ಮುಕ್ತಾಬಿತ (724 CE-760 CE) ಕಾಶ್ಮೀರದ ಕಾರ್ಕೋಟ ರಾಜವಂಶದ ಪ್ರಬಲ ದೊರೆ. 12 ನೇ ಶತಮಾನದ ಇತಿಹಾಸಕಾರ ಕಲ್ಹಣ, ಲಲಿತಾದಿತ್ಯ ಮುಕ್ತಾಬಿತ ರಾಜನನ್ನು ವಿಶ್ವದ ರಾಜ ಎಂದು ಕರೆಯುತ್ತಾನೆ, ಮಧ್ಯ ಏಷ್ಯಾದಿಂದ ಹಿಡಿದು ಚೀನಾದ ವರೆಗೂ ಆತನ ಸಾಮ್ರಾಜ್ಯ ವಿಸ್ತರಣೆ ಮಾಡಿದ್ದ.

ಕಲ್ಹಣನ ಪ್ರಕಾರ, ಲಲಿತಾದಿತ್ಯನು ಕನ್ನೌಜ್ ರಾಜ ಯಶೋವರ್ಮನನ್ನು ಸೋಲಿಸಿದ್ದ ಮತ್ತು ನಂತರ ಭಾರತದ ಪೂರ್ವ ಮತ್ತು ದಕ್ಷಿಣ ಭಾಗಗಳಿಗೆ ದಂಡೆತ್ತಿ ಹೋಗಿದ್ದ. ಲಲಿತಾದಿತ್ಯನ ಸಾಮ್ರಾಜ್ಯವು ಆಧುನಿಕ ಅಫ್ಘಾನಿಸ್ತಾನದ ಹಿಂದೂ ಕುಶ್ ಪರ್ವತಗಳಿಂದ ಅಸ್ಸಾಂ, ರಾಜಸ್ಥಾನ, ಗುಜರಾತ್ ಮತ್ತು ಮಧ್ಯ ಭಾರತದ ಕೆಲವು ಭಾಗಗಳು ಮತ್ತು ದಕ್ಷಿಣ ಭಾರತದ ಕೆಲವು ಭಾಗಗಳಿಗೆ ವಿಸ್ತರಿಸಿತು. ಲಲಿತಾದಿತ್ಯ ಸಮುದ್ರ ದಾಟಿ ಟಿಬೆಟ್ ಹಾಗೂ ಚೀನಾಗೂ ತೆರಳಿದ್ದ. ಅಲ್ಲಿಯೂ ರಾಜರ ಮೇಲೆ ಯುದ್ಧ ಮಾಡಿ ವಿಜಯ ಪತಾಕೆ ಹಾರಿಸಿದ್ದ.

ಲಲಿತಾದಿತ್ಯನನ್ನು ಅವನ ವಂಶದ ಅತ್ಯಂತ ಶಕ್ತಿಶಾಲಿ ರಾಜ ಎಂದು ಕರೆಯಲಾಗುತ್ತದೆ. ಅಶೋಕನ ನಂತರ ದೊಡ್ಡ ಸಾಮ್ರಾಜ್ಯವನ್ನು ನಿರ್ಮಿಸಿದ್ದ ಮತ್ತೋರ್ವ ರಾಜ ಯಾರಾದರೂ ಇದ್ದರೆ ಅದು ಲಲಿತಾದಿತ್ಯ ಮಾತ್ರ. ವಾಯುವ್ಯ ಭಾರತದಿಂದ ಅರಬ್ಬರನ್ನು ಹೊರಹಾಕುವ ಮೂಲಕ ಮತ್ತು ಆಗಿನ ಶಕ್ತಿಶಾಲಿ ಟಿಬೆಟ್ ಮೇಲೆ ದಂಡೆತ್ತಿ ಹೋಗಿ ಪದೇ ಪದೇ ಅಲ್ಲಿನ ರಾಜರ ಸೋಲಿಸುವ ಮೂಲಕ ಟೋಕರಿಸ್ತಾನದಿಂದ ಚೀನಾಕ್ಕೆ ಅಂತರರಾಷ್ಟ್ರೀಯ ವ್ಯಾಪಾರ ಮಾರ್ಗಗಳನ್ನು ನಿಯಂತ್ರಿಸಲು ಅವನು ಟೋಕರಿಸ್ತಾನವನ್ನು ವಶಪಡಿಸಿಕೊಂಡನೆಂದು ನಂಬಲಾಗಿದೆ.

ಅವರು ತಮ್ಮ ರಾಜತಾಂತ್ರಿಕತೆಯಿಂದ ಚೀನಾವನ್ನು ವಶಪಡಿಸಿಕೊಂಡರು. ಅವರು ಪರಿಹಾಶಪುರಂನಲ್ಲಿ ಹೊಸ ರಾಜಧಾನಿ ಸೇರಿದಂತೆ ಹಲವಾರು ನಗರಗಳನ್ನು ಸ್ಥಾಪಿಸಿದರು. ಕಾಲದ ಏರಿಳಿತಗಳನ್ನು ಎದುರಿಸಿ ನಿಂತ ಮಹಾನ್ ಕಟ್ಟಡಗಳನ್ನು ನಿರ್ಮಿಸಿದರು.

ರಾಜ ಲಲಿತಾದಿತ್ಯ ಕಾಶ್ಮೀರದಲ್ಲಿ ಮಾರ್ತಾಂಡ ಸೂರ್ಯ ದೇವಾಲಯವನ್ನು ದಕ್ಷಿಣ ಕಾಶ್ಮೀರದ ಮಟ್ಟಾನ್ ಪಟ್ಟಣದ ಸಮೀಪವಿರುವ ಪ್ರಸ್ಥಭೂಮಿಯಲ್ಲಿ ನಿರ್ಮಿಸಿದನು. ಈ ದೇವಾಲಯದಿಂದ ಇಂದಿನ ಬಿಜ್ಬಿಹಾರ ನಗರದ ಸಮೀಪವಿರುವ ಸಂಪೂರ್ಣ ಲಿಡಾರ್ ಕಣಿವೆ ಮತ್ತು ವಿಜಯಸ್ವರದ ಪಾಳುಬಿದ್ದ ದೇವಾಲಯದ ಶಿಖರವನ್ನು ನೋಡಬಹುದು.

ರಾಜ ಲಲಿತಾದಿತ್ಯನು ಸೂರ್ಯನ ಆರಾಧಕನಾಗಿದ್ದನು ಮತ್ತು ಕೇಶವ ವಿಷ್ಣುವಿನ ಆರಾಧನೆಗೆ ಸಮರ್ಪಿತವಾದ ವೈಷ್ಣವ ಆರಾಧನೆಯ ಅನುಯಾಯಿಯಾಗಿದ್ದನು ಎಂಬುದು ಇತಿಹಾಸದ ಉಲ್ಲೇಖಗಳ ಮೂಲಕ ತಿಳಿದುಬರುತ್ತದೆ. ಈ ದೇವಾಲಯದ ಗೋಡೆಗಳ ಮೇಲೆ ಅನೇಕ ಮೂರು ಮುಖದ ವಿಷ್ಣು ಮತ್ತು ಕೆಲವು ಚತುರ್ಭುಜ ವಿಷ್ಣುವಿನ ಆಕೃತಿಗಳನ್ನು ಪ್ರಮುಖವಾಗಿ ಕೆತ್ತಲಾಗಿದೆ. ನಿರ್ವಹಣೆ ಕೊರತೆ ಹಾಗೂ ಹವಾಮಾನ ವೈಪರೀತ್ಯದಿಂದ ಬಹುತೇಕ ವಿಗ್ರಹಗಳು ಶಿಥಿಲಗೊಂಡಿವೆ. ಅಲ್ಲದೆ ಹಲವು ದೇವಾಲಯಗಳ ನಿರ್ಮಿಸಿ ಅವುಗಳ ಜೀರ್ಣೋದ್ದಾರ ಮಾಡಿದ ಕೀರ್ತಿಯೂ ಈ ರಾಜನಿಗೆ ಸಲ್ಲುತ್ತದೆ.

English summary

Indian King Who Ruled China While Staying In India

Lalitaditya Muktabita (724 CE-760 CE) was a powerful ruler of the Karkota dynasty of Kashmir. The 12th-century historian Kalhana calls King Lalitaditya Muktabitha a world king, who also had his empire in China.
Story first published: Tuesday, July 9, 2024, 10:21 [IST]
X
Desktop Bottom Promotion