Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಟಿ-20 ವಿಶ್ವಕಪ್ ಮುಡಿಗೇರಿಸಿದ ಭಾರತ: ಬಹುಮಾನದ ಮೊತ್ತ ಎಷ್ಟು ಕೋಟಿ ಗೊತ್ತಾ?
ಕೋಟಿ ಕೋಟಿ ಭಾರತೀಯರ ಕನಸಾಗಿದ್ದ ವಿಶ್ವಕಪ್ ಭಾರತ ಕ್ರಿಕೆಟ್ ತಂಡಕ್ಕೆ ಒಲಿದಿದೆ. ಬರೋಬ್ಬರಿ 11 ವರ್ಷಗಳ ನಂತರ ಐಸಿಸಿ ಟ್ರೋಪಿಯೊಂದನ್ನ ಭಾರತ ತಂಡ ಗೆದ್ದುಕೊಂಡಿದೆ. ನಿನ್ನೆ ನಡೆದ ಟಿ-20 ವಿಶ್ವಕಪ್ ಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಭಾರತ ತಂಡ ಗೆದ್ದು ಬೀಗಿದೆ.
ನಾಯಕ ರೋಗಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿಯ ಕೊನೆಯ ವಿಶ್ವಕಪ್ ಟೂರ್ನಿ ಇದಾಗಿರಲಿದೆ ಎನ್ನಲಾಗಿತ್ತು. ಹೀಗಾಗಿ ಭಾರತಕ್ಕೆ ಗೆಲ್ಲಲೇಬೇಕಾದ ಒತ್ತಡವೂ ಇತ್ತು. ಕೊನೆಯ ಓವರ್‌ನಲ್ಲಿ ಭಾರತ ತಂಡ ಗೆಲುವಿನ ನಗೆ ಬೀರಿ ಕೋಟಿ ಕೋಟಿ ಅಭಿಮಾನಿಗಳಲ್ಲಿ ಸಂತೋಷದ ಕಣ್ಣೀರು ತರಿಸಿದೆ. 11 ವರ್ಷಗಳಿಂದ ಕಾದಿದ್ದ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿದೆ. ಪ್ರಶಸ್ತಿ ಗೆದ್ದ ಬಳಿಕ ನಾಯಕ ರೋಹಿತ್ ಹಾಗೂ ವಿರಾಟ್ ಕೊಹ್ಲಿ ಸೇರಿ ಆಟಗಾರರು ಮೈದಾನದಲ್ಲೇ ಭಾವುಕರಾಗಿದ್ದರು.

ಈ ಹಿಂದೆ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಹಾಗೂ ಏಕದಿನ ವಿಶ್ವಕಪ್ ಫೈನಲ್‌ನಲ್ಲಿ ಮುಗ್ಗರಿಸಿ ಭಾರೀ ನಿರಸೆ ಮೂಡಿಸಿದ್ದರು. ಹೀಗಾಗಿ ಈ ಟೂರ್ನಿಯಲ್ಲಿ ಗೆಲುವಿಗಾಗಿ ಕಾಯುತ್ತಿದ್ದರು. ಜೊತೆಗೆ ಕೋಚ್ ರಾಹುಲ್ ದ್ರಾವಿಡ್‌ಗೂ ಸಹ ಇದು ಕೊನೆಯ ಟೂರ್ನಿಯಾಗಿರಲಿದೆ. ಇದಾದ ಬಳಿಕ ಮಾಜಿ ಆಟಗಾರ ಗೌತಮ್ ಗಂಭೀರ್ ಭಾರತ ಕ್ರಿಕೆಟ್ ತಂಡದ ಕೋಚ್ ಆಗಿ ಕಾರ್ಯ ನಿರ್ವಹಿಸಲಿದ್ದಾರೆ. ದ್ರಾವಿಡ್‌ಗೂ ಸಹ ಈ ಕಪ್ ಗೆಲ್ಲಬೇಕಾದ ಒತ್ತಡವೂ ಹಾಗೂ ಯಶಸ್ಸಿನ ಬೀಳ್ಕೊಡುಗೆಯ ಅನಿವಾರ್ಯತೆ ಇತ್ತು.
ಸದ್ಯ ಐಸಿಸಿಯ ಅತ್ಯುತ್ತಮ ಟೂರ್ನಿಗಳಲ್ಲಿ ಟಿ-20 ವಿಶ್ವಕಪ್ ಟೂರ್ನಿ ಸಹ ಒಂದಾಗಿದೆ. ಈ ಬಾರಿ ಹೊಸ ತಂಡಗಳು ಸಹ ಈ ಟೂರ್ನಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿವೆ. ಅಲ್ಲದೆ ಐಸಿಸಿಯಿಂದ ಒಂದಿಷ್ಟು ಹಣ ಪಡೆದಿವೆ, ಹಾಗಾದ್ರೆ ಫೈನಲ್‌ನಲ್ಲಿ ಆಡಿರುವ ಎರಡು ತಂಡಗಳಿಗೆ ಐಸಿಸಿಯಿಂದ ಎಷ್ಟು ಹಣ ಸಿಗಲಿದೆ ಎಂಬುದು ನಿಮಗೆ ಗೊತ್ತಾ?
ಐಸಿಸಿ ಈ ಟೂರ್ನಿಯ ಎಲ್ಲಾ ಪ್ರಾಯೋಜಕತ್ವ ಹಾಗೂ ಟಿಕೆಟ್ ಮಾರಾಟದಿಂದ ಬರುವ ಹಣದ ಪಾಲು ಹೊಂದಿರಲಿದೆ. ಹೀಗಾಗಿ ಐಸಿಸಿ ಫೈನಲ್ ಪಂದ್ಯ ಆಡಿರುವ ಎರಡು ತಂಡಗಳು ಸೇರಿ ಪ್ರತಿ ತಂಡಗಳಿಗೂ ಇಂತಿಷ್ಟು ಎಂದು ಹಣ ನೀಡಲಿದೆ. ಅದ್ರಲ್ಲೂ ಪ್ರಶಸ್ತಿ ಮೊತ್ತ ದುಪ್ಪಟ್ಟಾಗಿರಲಿದೆ.
2024 ರ T20 ವಿಶ್ವಕಪ್ ಚಾಂಪಿಯನ್ ಟೀಮ್ ಇಂಡಿಯಾ, ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ICC)ನಿಂದ ಅಂದಾಜು 20.42 ಕೋಟಿ ರೂಪಾಯಿ ಮೊತ್ತ ಪಡೆಯಲಿದೆ. ಇನ್ನು ರನ್ನರ್ ಅಪ್ ತಂಡವಾದ ಸೌತ್ ಆಫ್ರಿಕಾ ಸುಮಾರು 10.67 ಕೋಟಿ ರೂಪಾಯಿ ಹಣ ಬಹುಮಾನ ಮೊತ್ತವಾಗಿ ಪಡೆದುಕೊಳ್ಳಲಿದೆ ಎಂದು ತಿಳಿದುಬಂದಿದೆ.
ಈ ಎರಡು ತಂಡ ಮಾತ್ರವಲ್ಲದೆ ಭಾರತ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧ ಕ್ರಮವಾಗಿ ಸೆಮಿಫೈನಲ್‌ನಲ್ಲಿ ಸೋತ ಇಂಗ್ಲೆಂಡ್ ಮತ್ತು ಅಫ್ಘಾನಿಸ್ತಾನ ಎರಡೂ ತಂಡಗಳು ತಲಾ 6.56 ಕೋಟಿ ರೂಪಾಯಿ ಪಡೆದುಕೊಂಡಿವೆ. ಇನ್ನುಳಿದಂತೆ ಹಲವು ತಂಡಗಳು ತಾವಾಡಿದ ಪ್ರತಿ ಪಂದ್ಯಕ್ಕೂ ಇಂತಿಷ್ಟು ಮೊತ್ತ ನಿಗದಿಯಾಗಿರುತ್ತದೆ.
T20 ವಿಶ್ವಕಪ್ 2024ರಲ್ಲಿ ಒಟ್ಟು ಬಹುಮಾನದ ಮೊತ್ತವು $ 11.25 ಮಿಲಿಯನ್ ಆಗಿದೆ, ಇದು ಸುಮಾರು 93 ಕೋಟಿ ರೂಪಾಯಿಗಳಿಗೆ ಸಮನಾಗಿರುತ್ತದೆ. ಇದು ಟೂರ್ನಿಯುದ್ಧಕ್ಕೂ ನೀಡಲಾಗುವ ಹಲವು ರೀತಿಯ ಪ್ರಶಸ್ತಿಗಳ ಒಳಗೊಂಡಿರಲಿದೆ.
ಇದಲ್ಲದೆ ಫೈನಲ್ ಪಂದ್ಯದಲ್ಲಿ ಅಬ್ಬರಿಸಿ 76 ರನ್‌ಗಳಿಸಿದ ವಿರಾಟ್ ಕೊಹ್ಲಿ ಪ್ಲೇಯರ್ ಆಫ್ ದಿ ಮ್ಯಾಚ್ ಅವಾರ್ಡ್ ಪಡೆದುಕೊಂಡಿದ್ದಾರೆ. ಅವರಿಗೆ ಬಹುಮಾನದ ಮೊತ್ತವಾಗಿ $5000 ನೀಡಲಾಗಿದೆ. ಇತ್ತ ಸೂರ್ಯ ಕುಮಾರ್ ಯಾದವ್ ಹಿಡಿದ ಕ್ಯಾಚ್‌ಗೆ ಸ್ಮಾರ್ಟ್ ಕ್ಯಾಚ್ ಆಫ್ ದಿ ಮ್ಯಾಚ್ ಅವಾರ್ಡ್ ನೀಡಲಾಗಿದ್ದು $3000 ಬಹುಮಾನದ ಮೊತ್ತವಾಗಿದೆ. ಅಲ್ಲದೆ ಪ್ಲೇಯರ್ ಆಫ್ ದಿ ಸೀರಿಸ್ ಅವಾರ್ಡ್ ಜಸ್ಪ್ರೀತ್ ಬುಮ್ರಾಗೆ ನೀಡಲಾಗಿದ್ದು, ಅವರು 9 ವಿಕೆಟ್ ಪಡೆದಿದ್ದಾರೆ. ಈ ಬಹುಮಾನದ ಮೊತ್ತ $15000 ಆಗಿದೆ.



Click it and Unblock the Notifications
