Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಭಾರತ-ಐರೋಪ್ಯ ಒಕ್ಕೂಟ ಮುಕ್ತ ವ್ಯಾಪಾರ ಒಪ್ಪಂದ: ರಾಜ್ಯಕ್ಕೂ ಇದೆ ಭರ್ಜರಿ ಲಾಭ!
ಭಾರತ ಮತ್ತು ಯುರೋಪಿಯನ್ ಒಕ್ಕೂಟದ ನಡುವಿನ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಕೊನೆಗೂ ಸಹಿ ಹಾಕಲಾಗಿದೆ. ಗಣರಾಜ್ಯೋತ್ಸವ ಅಂಗವಾಗಿ ಭಾರತದಲ್ಲಿದ್ದ ಹಲವು ಪ್ರಮುಖರನನ್ನು ಒಳಗೊಂಡ ಪ್ರಧಾನಿ ಮೋದಿ ಅವರ ಅಧ್ಯಕ್ಷತೆಯ ಸಭೆ ನಡೆದಿತ್ತು, ಇದರಲ್ಲಿ ಹಲವು ಒಪ್ಪಂದಕ್ಕೆ ಸಹಿ ಹಾಕಲಾಗಿದೆ. ಇದು 18 ವರ್ಷಗಳಿಂದ ಮಾತುಕತೆ ಹಂತದಲ್ಲಿದ್ದ ಹಲವು ಒಪ್ಪಂದಗಳಿಗೆ ಅಂತಿಮ ಸಹಿ ಹಾಕಿದಂತಾಗಿದೆ.
ಈ ಐತಿಹಾಸಿಕ ಒಪ್ಪಂದವನ್ನು ಎಲ್ಲಾ ಒಪ್ಪಂದಗಳ ತಾಯಿ ಎಂದು ಕರೆಯಲಾಗಿದೆ. ಈ ಒಪ್ಪಂದವು ಭಾರತ ಮತ್ತು ಯುರೋಪಿನ ಸಾರ್ವಜನಿಕರಿಗೆ ಪ್ರಮುಖ ಅವಕಾಶಗಳನ್ನು ಒದಗಿಸುವ ಕೆಲಸ ಮಾಡಲಿದೆ. ಹಾಗೆ ಹಲವು ವಸ್ತುಗಳು ಭಾರತದಲ್ಲೂ ಅಗ್ಗವಾಗುವ ನಿರೀಕ್ಷೆ ಹುಟ್ಟಿಸಿವೆ. ಅಲ್ಲದೆ ದೇಶದ ಒಟ್ಟಾರೆ ಅಭಿವೃದ್ಧಿ ಹಾಗೂ ಜಿಡಿಪಿಯೂ ಸೇರಿದಂತೆ ಹಲವು ವಲಯಗಳಿಗೆ ಇದು ಮತ್ತೆ ಬೂಸ್ಟ್ ನೀಡಲಿದೆ ಎಂದು ವಿಶ್ಲೇಷಿಸಲಾಗಿದೆ.

ಈ ಒಪ್ಪಂದವು ಜಾಗತಿಕ ಜಿಡಿಪಿಯ ಶೇಕಡಾ 25 ರಷ್ಟು ಮತ್ತು ಜಾಗತಿಕ ವ್ಯಾಪಾರದ ಸುಮಾರು ಮೂರನೇ ಒಂದು ಭಾಗವನ್ನು ಪ್ರತಿನಿಧಿಸುತ್ತದೆ ಎಂದು ಹೇಳಲಾಗಿದೆ. ಸುಮಾರು ಎರಡು ದಶಕಗಳ ನಂತರ ಭಾರತ-ಇಯು ಮುಕ್ತ ವ್ಯಾಪಾರ ಒಪ್ಪಂದ ಮುಕ್ತಾಯಗೊಳಿಸಲಾಗಿದೆ. 2007 ರಲ್ಲಿ ಈ ಒಪ್ಪಂದ ಸಂಬಂಧವಾಗಿ ಮಾತುಕತೆ ಆರಂಭಗೊಂಡಿತ್ತು. ಆದ್ರೆ ಒಕ್ಕೂಟ ಹಾಗೆ ಭಾರತದ ನಡುವೆ ಮಾತುಕತೆಗಳು ಫಲಿತಾಂಶ ನೀಡಲಿರಲಿಲ್ಲ. ಜೂನ್ 2022ರಿಂದ ಮತ್ತೆ ಮಾತುಕತೆ ಆರಂಭಗೊಂಡಿತ್ತು. ಅಂತಿಮವಾಗಿ ಈಗ ಸಹಿ ಹಾಕಲಾಗಿದೆ.
ಇದು ಭಾರತದ ಹಲವು ನಗರಗಳ ಆರ್ಥಿಕ ಅಭಿವೃದ್ಧಿಗೆ ಕೊಡುಗೆ ನೀಡಲಿದೆ. ಮುಂದಿನ ಐದು ವರ್ಷಗಳಲ್ಲಿ ಈ ಪ್ರದೇಶಕ್ಕೆ ಭಾರತದ ರಫ್ತುಗಳಲ್ಲಿ ಶೇಕಡಾ 50ಕ್ಕಿಂತ ಹೆಚ್ಚಳವನ್ನು ನಿರೀಕ್ಷಿಸಲಾಗಿದೆ. ಇದು ಪ್ರಮುಖ ನಗರಗಳ ಬೆಳವಣಿಗೆಗೆ ಕೊಡುಗೆ ನೀಡಲಿದೆ. ಇದರಲ್ಲಿ ವೈದ್ಯಕೀಯ ಹಾಗೂ ತಂತ್ರಜ್ಞಾನ ವಲಯದ ಕೊಡುಗೆ ಕೂಡ ಹೆಚ್ಚಾಗುತ್ತಿದೆ.
ವೈದ್ಯಕೀಯ ಹಾಗೂ ತಂತ್ರಜ್ಞಾನ ಕ್ಷೇತ್ರದಲ್ಲಿ ವೇವಗಾಗಿ ಬೆಳೆಯುತ್ತಿರುವ ನಗರಗಳಲ್ಲಿ ಬೆಂಗಳೂರು ಮುಂಚೂಣಿಯಲ್ಲಿದೆ. ಹೀಗಾಗಿ ಈ ಒಪ್ಪಂದವು ಬೆಂಗಳೂರಿನಲ್ಲಿ ನೆಲೆಸಿರುವ ಹಲವು ಸಂಸ್ಥೆಗಳು ಸೇರಿದಂತೆ ವ್ಯಾಪಾರ, ವ್ಯವಹಾರ ಸಂಬಂಧಿಸಿದಂತೆ ಉತ್ತಮ ಕೊಡುಗೆ ನೀಡಲಿದೆ. ಐಟಿ ಹಬ್ ಮಾತ್ರವಲ್ಲದೆ ಬೆಂಗಳೂರು ಮೆಡಿಕಲ್ ಯಂತ್ರಗಳು ಹಾಗೆ ಔಷಧಿ ತಯಾರಿಕಾ ಕೇಂದ್ರವಾಗಿಯೂ ಮಾರ್ಪಟ್ಟಿದೆ.
ಔಷಧ ಕೇಂದ್ರವಾದ ಭಾರತ
ವಿಶ್ವದ ಗಂಭೀರ ಸ್ವರೂಪದ ಕಾಯಿಲೆಗಳಿಗೂ ಔಷಧಿ ತಯಾರಿಸುವ ಕಂಪನಿಗಳು ಈಗ ತಮ್ಮ ಮುಖ್ಯ ಕಚೇರಿಯನ್ನು ಭಾರತದಲ್ಲಿ ಹೊಂದಿವೆ. ಅದರಲ್ಲೂ ದಕ್ಷಿಣ ಭಾರತದಲ್ಲಿ ಅತೀ ಹೆಚ್ಚು ಕೇಂದ್ರಗಳಿವೆ. ವಿಶ್ವದ ಅಗ್ರ 50 ಜೀವ ವಿಜ್ಞಾನ ಕಂಪನಿಗಳಲ್ಲಿ 23 ದೇಶದಲ್ಲಿ ಕಾರ್ಯಾಚರಣೆ ಮಾಡುತ್ತಿವೆ. ಅದ್ರಲ್ಲೂ ಹೆಚ್ಚಿನವು ಕೋವಿಡ್ ನಂತರ ಭಾರತದಲ್ಲಿ ತಯಾರಿಕೆ ಹಾಗೂ ಸಂಶೋದನೆ ಹೆಚ್ಚಿಸಿವೆ.
ಭಾರತವು ಆರೋಗ್ಯ ರಕ್ಷಣೆ ಮತ್ತು ಜೀವ ವಿಜ್ಞಾನಗಳಿಗೆ ಕಾರ್ಯತಂತ್ರದ ಕೇಂದ್ರವಾಗಿ ಸ್ಥಿರವಾಗಿ ಮುಂದುವರೆದಿದೆ. 2000 ಮತ್ತು 2010 ರ ನಡುವೆ, TEVA, ನೊವಾರ್ಟಿಸ್, ಅಸ್ಟ್ರಾಜೆನೆಕಾ, ಮೈಲಾನ್, ಮತ್ತು ಜಾನ್ಸನ್ & ಜಾನ್ಸನ್‌ನಂತಹ ಸಂಸ್ಥೆಗಳು ಸಂಶೋಧನೆ, ಅಭಿವೃದ್ಧಿಯಲ್ಲಿ ತೊಡಗಿವೆ. ಹಾಗೆ ಥರ್ಮೋ ಫಿಶರ್, ಮೆರ್ಕ್, ಎಲಿ ಲಿಲ್ಲಿ, ಸನೋಫಿ ಮತ್ತು ಬೋಸ್ಟನ್ ಸೈಂಟಿಫಿಕ್ ಸೇರಿದಂತೆ ಜಾಗತಿಕ ಮಟ್ಟದ ಕಂಪನಿಗಳು ಕೂಡ ಭಾರತದಲ್ಲಿ ಕಾರ್ಯಾಚರಣೆ ಮಾಡುತ್ತಿವೆ.
ಹಾಗೆ ಇತ್ತೀಚಿನ ವರ್ಷದಲ್ಲಿ ಅಬಾಟ್, ವಿಯಾಟ್ರಿಸ್, ಸೀಮೆನ್ಸ್ ಹೆಲ್ತ್‌ನೀರ್ಸ್ ಮತ್ತು HCA ಹೆಲ್ತ್‌ಕೇರ್ ಡಿಜಿಟಲ್ ರೂಪಾಂತರದ ಕೇಂದ್ರಗಳು ಸಹ ಸ್ಥಾಪಿಸಲ್ಪಟ್ಟಿವೆ. ಹೀಗೆ ಭಾರತದಲ್ಲೇ ನಡೆಯುವ ಕ್ಲಿನಿಕಲ್ ಟೆಸ್ಟ್‌ಗಳು ಹಾಗೆ ಇಲ್ಲಿಂದಲೇ ವಿಶ್ವದ ಹಲವು ಭಾಗಕ್ಕೆ ಈಗ ಔಷಧಗಳು ರಫ್ತಾಗುತ್ತಿವೆ.



Click it and Unblock the Notifications


