Latest Updates
-
ದೆಹಲಿ ಮಂದೆದ್ದಿದೆ: ವರ್ಷದಲ್ಲೇ ಮೊದಲ ಬಾರಿಗೆ ಸಿಕ್ಕಿದೆ ಇಂತಹ ಅದ್ಭುತ ಅವಕಾಶ! -
ದೆಹಲಿ-ಎನ್ಸಿಆರ್ನಲ್ಲಿ ಯೆಲ್ಲೋ ಅಲರ್ಟ್: ಮಳೆಯ ಅಬ್ಬರದ ನಡುವೆಯೂ ದಂಪತಿಗಳು ತಮ್ಮ ಬಾಂಧವ್ಯವನ್ನು ಗಟ್ಟಿಗೊಳಿಸುವುದು ಹೇಗೆ? -
ದೆಹಲಿ-ಎನ್ಸಿಆರ್ ನಿವಾಸಿಗಳೇ ಎಚ್ಚರ: ಬಿರುಗಾಳಿ ಅಬ್ಬರಕ್ಕೆ ನಿಮ್ಮ ಮನೆ ಸಿದ್ಧವಾಗಿದೆಯೇ? -
ಮುಂಬೈ-ಥಾಣೆಯಲ್ಲಿ 39 ಡಿಗ್ರಿ ಬಿಸಿಲ ಅಬ್ಬರ: ಯೆಲ್ಲೋ ಅಲರ್ಟ್ ನಡುವೆ ನಿಮ್ಮ ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆ? -
ಮೆಟ್ ಗಾಲಾ 2026: ಇಶಾ ಅಂಬಾನಿ-ಕರಣ್ ಜೋಹರ್ ಲುಕ್ ನೋಡಿ ಫಿದಾ ಆದ ಫ್ಯಾಷನ್ ಪ್ರಿಯರು! -
ಹವಾಮಾನ ಇಲಾಖೆ ಎಚ್ಚರಿಕೆ: ಇಂದಿನ ಮಳೆ-ಸಿಡಿಲಿನ ಆರ್ಭಟಕ್ಕೆ ನಿಮ್ಮ ದಿನಚರಿ ಬದಲಾಯಿಸಿಕೊಳ್ಳಿ! -
ನೀಟ್ 2026 ಪರೀಕ್ಷೆ ಮುಗಿದಿದೆ: ಪೋಷಕರ ಜೊತೆ ಮನಬಿಚ್ಚಿ ಮಾತನಾಡಿ ಒತ್ತಡವನ್ನು ದೂರ ಮಾಡುವುದು ಹೇಗೆ? -
IMD ರೆಡ್ ಅಲರ್ಟ್: ಬಿರುಗಾಳಿ ಅಬ್ಬರಕ್ಕೆ ನಿಮ್ಮ ಬಾಲ್ಕನಿ ಮತ್ತು ಗಿಡಗಳು ಬಲಿಯಾಗದಿರಲಿ, ಈ ಕೆಲಸ ತಕ್ಷಣ ಮಾಡಿ! -
ಹೀಟ್ವೇವ್ ಎಫೆಕ್ಟ್: ಸುಡುವ ಬಿಸಿಲಿಗೆ ತಂಪಾಗಲು ಮಜ್ಜಿಗೆ, ಎಳನೀರು ಸಾಕಾ? ಇಲ್ಲಿದೆ ಆರೋಗ್ಯದ ಗುಟ್ಟು -
ಮೆಟ್ ಗಾಲಾ 2026: ರೆಡ್ ಕಾರ್ಪೆಟ್ ಮೇಲೆ ಭಾರತೀಯ ತಾರೆಯರ ಅಬ್ಬರ, ಲೈವ್ ನೋಡುವುದು ಹೇಗೆ?
ಇನ್ನು 5-6 ವರ್ಷಗಳಲ್ಲಿ ಲಕ್ಷುರಿಯೆಂದರೆ ಮನೆ, ಕಾರುಗಳಲ್ಲ, ಚಿನ್ನವಲ್ಲ ಆದರೆ ಈ 3 ಆಗಿರುತ್ತೆ!
ಈಗ ಲಕ್ಷುರಿ ಎಂದರೆ ಏನು? ಮನೆ, ಲಕ್ಷುರಿ, ಕಾರು, ಬೈಕ್.... ಇವುಗಳನ್ನು ಗಳಿಸಲೆಂದೇ ಎಲ್ಲರೂ ಓಡುತ್ತಿದ್ದೇವೆ ಅಲ್ವಾ? ಒಂದಳ್ಳೆಯ ಮನೆ ಕಟ್ಟಬೇಕೆಂದು ಪ್ರತಿಯೊಂದು ಮಧ್ಯಮವರ್ಗದವರ ಕನಸಾಗಿರುತ್ತದೆ, ಅದಾದ ಬಳಿಕ ಕಾರು ಬೇಕು, ಬೈಕು ಬೇಕು, ಒಂದು ಕಾರು ಖರೀದಿ ಮಾಡಿದರೆ ಅದರಲ್ಲಿ ನಾವು ತೃಪ್ತರಾಗಲ್ಲ, ಇನ್ನು ಲಕ್ಷುರಿ ಕಾರು ಬೇಕೆಂದು ಬಯಸುತ್ತೇವೆ ಹೀಗೆ ನಮ್ಮ ಓಟ ಓಡುತ್ತಲೇ ಇದೆ, ಆದರೆ ಇನ್ನು ಕೆಲವೇ ವರ್ಷಗಳಲ್ಲಿ ಇದು ಬದಲಾಗಲಿದೆ, ಇವು ಯಾವುದು ನಮಗೆ ಲಕ್ಷುರಿ ಅಂತ ಅನಿಸುವುದೇ ಇಲ್ಲಿ ಈ ಎಲ್ಲದಕ್ಕಿಂತ ಲಕ್ಷುರಿ, ದುಬಾರಿಯಾಗುತ್ತೆ ಈ ಸಂಗತಿಗಳು

ಒಂದು ಸ್ಟೇಬಲ್ ಜಾಬ್ ( ಸ್ಥಿರವಾದ ಕೆಲಸ)
ಈ ಸಮಾಜ ತುಂಬಾನೇ ಬೆಳವಣಿಗೆಯಾಗುತ್ತಿದೆ, ಒಂದು ಸ್ಥಿರವಾದ ಕೆಲಸ ಎಂಬುವುದು ಬಹುತೇಕರ ಕನಸಾಗಿದೆ, ಏಕೆಂದರೆ ಸ್ಥಿರವಾದ ಕೆಲ ಆರ್ಥಿಕ ಭದ್ರತೆಯನ್ನು ನೀಡುತ್ತದೆ. ಇಎಮ್‌ಐ, ಮಕ್ಕಳ ಟ್ಯೂಷನ್, ಮನೆ ಬಾಡಿಗೆ ಇವೆಲ್ಲಾ ಭರಿಸಬೇಕೆಂದರೆ ನಮಗೊಂದು ಸ್ಥಿರವಾದ ಕೆಲಸ ಬೇಕಾಗುತ್ತದೆ. ಅಲ್ಲದೆ ಸ್ಥಿರವಾದ ಕೆಲಸದಲ್ಲಿ ನಾವು ಭವಿಷ್ಯದ ಬಗ್ಗೆ ಪ್ಲ್ಯಾನ್ ಮಾಡಬಹುದು. ಆದರೆ ಸ್ಥಿರವಾದ ಕೆಲಸವೆಂದರೆ ಆರಕ್ಕೆ ಏರಲ್ಲ, ಮೂರಕ್ಕೆ ಇಳಿಯಲ್ಲ ಎಂಬಂಥ ಪರಿಸ್ಥಿತಿ, ಸಿಗುವ ಅಲ್ಪ ಸಂಬಳಕ್ಕೆ ತಿಂಗಳಪೂರ್ತಿ ದುಡಿಯುವುದಕ್ಕಿಂತ ಬೇಗನೆ ದುಡ್ಡು ಮಾಡಬೇಕು ಎಂದು ಬ್ಯುಸ್‌ನೆಸ್ ಕಡೆ ಆಸಕ್ತರಾಗುತ್ತಿದ್ದಾರೆ, ಆದರೆ ಬ್ಯುಸ್‌ನೆಸ್ ಎಲ್ಲರಿಗೆ ಕೈ ಹಿಡಿಯಲ್ಲ, ಆದರೆ ಸ್ಥಿರವಾದ ಕೆಲಸಕ್ಕಿಂತ ಒಳ್ಳೆಯ ಹಣ ಮಾಡಲು ಆಗಾಗ ಕೆಲಸ ಬದಲಾಯಿಸುವುದು ಮುಂದಿನ ಪೀಳಿಗೆಯವರಲ್ಲಿ ತುಂಬಾನೇ ಕಾಣಬಹುದು.
ಆರೋಗ್ಯಕರ ಆಹಾರ
ಈಗಲೇ ಸಾವಯವ ಆಹಾರದ ಹೆಸರಿನಲ್ಲಿ ತುಂಬಾ ಜನ ದುಡ್ಡು ಮಾಡ್ತಾ ಇದ್ದಾರೆ. ಆರೋಗ್ಯಕರವಾದ ಆಹಾರ ಎಂಬುವುದು ಮುಂದಿನ ವರ್ಷಗಳಲ್ಲಿ ದುಬಾರಿಯಾಗಲಿದೆ. ಕೊರೊನಾ ಬಂದ ಮೇಲೆ ಜನರ ಜೀವನಶೈಲಿ ತುಂಬಾನೇ ಬದಲಾಗಿದೆ, ಆರೋಗ್ಯಕರ ಆಹಾರದ ಕಡೆಗೆ ಹೆಚ್ಚಿನ ಗಮನ ನೀಡುತ್ತಿದ್ದಾರೆ, ಇನ್ನು ಕೆಲವೇ ವರ್ಷಗಳಲ್ಲಿ ಜನರ ಆಲೋಚನೆ ಇನ್ನಷ್ಟು ಬದಲಾಗಲಿದೆ, ಜನರು ಆರೋಗ್ಯಕರ ಆಹಾರದ ಕಡೆಗೆ ಹೆಚ್ಚಿನ ಗಮನಹರಿಸುತ್ತಾರೆ. ಅಲ್ಲದೆ ಆರೋಗ್ಯಕರ ಆಹಾರ ತುಂಬಾನೇ ದುಬಾರಿಯಾಗಲಿದೆ ಕೂಡ.
ಆರೋಗ್ಯ
ಇದಂತೂ ತುಂಬಾನೇ ದುಬಾರಿಯಾಗಲಿದೆ. ಈಗಲೇ ಒಂದು ಚಿಕ್ಕ ಜ್ವರ ಬಂದು ಆಸ್ಪತ್ರೆಗೆ ಹೋದರೆ ಸಾಕು ಸಾವಿರಗಟ್ಟಲೆ ದುಡ್ಡು ಖರ್ಚಾಗುವುದು. ಜೀವನಶೈಲಿ ಬದಲಾಗುತ್ತಿದ್ದಂತೆ ಆರೋಗ್ಯ ಸಮಸ್ಯೆ ಹೆಚ್ಚಾಗುತ್ತಿದೆ, ಹೀಗಾಗಿ ಜನ ಸಂಪತ್ತು ಬಿಟ್ಟು ಈ ಆರೋಗ್ಯ ಸಂರಕ್ಷಣೆಯ ಕಡೆಗೆ ಹೆಚ್ಚಿನ ಗಮನ ನೀಡುತ್ತಾರೆ.ಹಣಕ್ಕಿಂತ ಆರೋಗ್ಯ ಮುಖ್ಯ ಎಂಬುವುದನ್ನು ಜನ ಹೀಗಾಗಲೇ ಅರಿತುಕೊಂಡಿದ್ದಾರೆ, ಇನ್ನು ಮುಂದೆ ಉತ್ತಮ ಆರೋಗ್ಯವಿರುವವನೇ ನಿಜವಾದ ಶ್ರೀಮಂತ.
ಹೌದು ಈ ಮೂರು ಮುಖ್ಯ ಎಂಬುವುದು ನಮಗೆಲ್ಲಾ ಗೊತ್ತಿದೆ, ಆದರೆ ಯಾರಿಗೂ ಇದರತ್ತ ಗಮನಹರಿಸಲು ಸಮಯವಿಲ್ಲ. ನೀವು ಹಣ ಮಾಡಬೇಕು, ಮನೆ ಕಟ್ಟಬೇಕು, ಕಾರು ಖರೀದಿಸಬೇಕೆಂಬ ಗುರಿಯಿಂದ ಓಡುತ್ತಿರುವುದು ಸರಿ, ಆದರೆ ಅದರ ಜೊತೆಗೆ ಇಂದಿನಿಂದಲೇ ಈ ಮೂರು ವಿಷಯಗಳ ಕಡೆ ಗಮನಹರಿಸಬೇಕಾಗಿದೆ. ಆರ್ಥಿಕ ಭದ್ರತೆ ತುಂಬಾನೇ ಮುಖ್ಯವಾಗುತ್ತೆ ಜೊತೆಗೆ ಆರೋಗ್ಯಕರ ಆಹಾರಶೈಲಿ ಮತ್ತು ಆರೋಗ್ಯ ಈ ಮೂರು ನಿಮ್ಮ ಬಳಿಯಿದ್ದರೆ ನೀವೇ ಅದೃಷ್ಟವಂತರು.
ಈ ಮೂರು ಈಗ ನಿರ್ಲಕ್ಷ್ಯದಿಂದ ಕಳೆದುಕೊಳ್ಳುತ್ತಿದ್ದೇವೆ, ಆದರೆ ಪ್ರಯತ್ನ ಪಟ್ಟರೆ ಪಡೆದುಕೊಳ್ಳುವಂಥದ್ದೇ, ಇಂದಿನಿಂದಲೇ ಈ ನಿಟ್ಟಿನಲ್ಲಿ ಪ್ರಯತ್ನಿಸಿ ಆಲ್ ದಿ ಬೆಸ್ಟ್ ಭವಿಷ್ಯದ ಶ್ರೀಮಂತ ವ್ಯಕ್ತಿಗೆ....



Click it and Unblock the Notifications