Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಈ 8 ಜನರ ಹತ್ತಿರ ಅಪ್ಪಿ- ತಪ್ಪಿಯೂ ಜಗಳವಾಡಬೇಡಿ: ಮನುಸ್ಮೃತಿ
ಮನುಸ್ಮೃತಿ ಬಗ್ಗೆ ನಿಮಗೆಲ್ಲಾ ಗೊತ್ತಿರಬಹುದು. ಈ ಮನುಷ್ಮೃತಿಯಲ್ಲಿರುವ ಕೆಲವೊಂದು ವಿಚಾರಗಳು ನಮ್ಮ ಜೀವನಕ್ಕೆ ದಾರಿ ದೀಪವಾಗಲಿದ್ಯಂತೆ. ಮನುಸ್ಮೃತಿಯ ಪ್ರಕಾರ ನೀವು ಈ 8 ಜನರ ಜೊತೆಗೆ ಜಗಳವಾಡಿದರೆ ನಿಮ್ಮ ಜೀವನವೇ ನಾಶವಾಗಲಿದೆಯಂತೆ. ಯಾಕಂದ್ರೆ ಈ ಜಗಳವು ನಿಮಗೆ ಆರ್ಥಿಕ ನಷ್ಟವನ್ನು ತಂದೊಡ್ಡುವುದು ಮಾತ್ರವಲ್ಲದೇ ನಿಮಲ್ಲಿ ಮಾನಸಿಕ ಒತ್ತಡವು ಹೆಚ್ಚಾಗವಂತೆ ಮಾಡಲಿದ್ಯಂತೆ. ಅಷ್ಟಕ್ಕು ಆ 8 ಜನ ಯಾರು ಅನ್ನೋದನ್ನು ತಿಳಿಯೋಣ.

ಮನುಸ್ಮೃತಿಯಲ್ಲಿ 12 ಪಾಠಗಳಿದೆ ಹಾಗೂ 2684 ಪದ್ಯಗಳಿದೆ. ಇದೊಂದು ಹಳೆಯದಾದ ಧರ್ಮಗ್ರಂಥವಾಗಿದೆ. ಈ ಪುಸ್ತಕವನ್ನು ಹಳೆಯ ಭಾರತೀಯ ಸಂವಿಧಾನ ಎಂದು ಕರೆಯಲಾಗುತ್ತದೆ. ಇದರಲ್ಲಿರುವ ಕೆಲವೊಂದು ಪಾಠಗಳು ವಿವಾದಕ್ಕೂ ಕಾರಣವಾಗಿದೆ. ಆದರೆ ಮನುಸ್ಮೃತಿಯಿಂದ ಒರ್ವ ಮನುಷ್ಯನು ಕಲಿಯಬೇಕಾಗಿರುವ ವಿಚಾರ ತುಂಬಾನೇ ಇದೆ. ಹಾಗಾದ್ರೆ ಆ 8 ಜನರೊಂದಿಗೆ ಜಗಳವಾಡಬಾರದೆಂದು ಮನುಸ್ಮೃತಿಯಲ್ಲಿ ಉಲ್ಲೇಖವಾಗಿರೋದು ಯಾಕೆ ಅನ್ನೋದನ್ನು ತಿಳಿಯೋಣ.
1. ಬ್ರಾಹ್ಮಣರು ಮತ್ತು ಪುರೋಹಿತರು
ಮನುಸ್ಮೃತಿಯ ಪ್ರಕಾರ ಬ್ರಾಹ್ಮಣರು ಹಾಗೂ ಪುರೋಹಿತರೊಂದಿಗೆ ಜಗಳವಾಡೋದಕ್ಕೆ ಹೋಗಬಾರದು. ಅವರಿಗೆ ಗೌರವ ನೀಡುವುದು ತುಂಬಾನೇ ಮುಖ್ಯ. ಬ್ರಾಹ್ಮಣರು ಹಾಗೂ ಪುರೋಹಿತರು ಪೂಜೆ ಹಾಗೂ ಯಜ್ಞ- ಯಾಗಾದಿಗಳನ್ನು ಮಾಡುವಾಗ ತೊಂದರೆ ಕೊಟ್ಟರೆ ಕೆಡುಕಾಗುತ್ತಂತೆ. ಅಷ್ಟೇ ಅಲ್ಲದೇ, ಇದರಿದ ನಿಮ್ಮ ಗೌರವವು ಕೆಳಗೆ ಬೀಳಲಿದೆ.
2. ಗುರುಗಳ ಜೊತೆಗೆ ಜಗಳವಾಡಬಾರದು
ಹಿಂದಿನ ಕಾಲದಲ್ಲಿ ಮಕ್ಕಳು ಶಿಕ್ಷಣ ಕಲಿಯೋದಕ್ಕೆ ಗುರುಕುಲಕ್ಕೆ ಹೋಗುತ್ತಿದ್ದರು. ಆಚಾರ್ಯರು ಅಲ್ಲಿ ಮಕ್ಕಳಿಗೆ ಪಾಠವನ್ನು ಹೇಳಿಕೊಡುತ್ತಿದ್ದರು. ಆದ್ರೆ ಇಂದಿನ ದಿನಗಳಲ್ಲಿ ಆ ಕರ್ತವ್ಯವನ್ನು ಶಾಲೆಯಲ್ಲಿ ಶಿಕ್ಷಕರು ನಿಭಾಯಿಸುತ್ತಿದ್ದಾರೆ. ಮನುಸ್ಮೃತಿಯ ಪ್ರಕಾರ ಯಾವ ವಿದ್ಯಾರ್ಥಿಯು ಗುರುಗಳಿಗೆ ಎದುರು ಮಾತಾಡುತ್ತಾನೋ ಅವನ ಭವಿಷ್ಯ ಹಾಳಾಗುತ್ತಂತೆ. ಹೀಗಾಗಿ ಗುರುಗಳಿಗೆ ಗೌರವ ತೋರುವುದು ತುಂಬಾನೇ ಮುಖ್ಯ.
3. ಅತಿಥಿಯನ್ನು ಅವಮಾನಿಸಬೇಡಿ
ಹಿಂದೂ ಧರ್ಮದಲ್ಲಿ ಅತಿಥಿ ಸತ್ಕಾರಕ್ಕೆ ತುಂಬಾನೇ ಮಹತ್ವವಾದ ಸ್ಥಾನ ಮಾನ ನೀಡಲಾಗಿದೆ. ಮನೆಗೆ ಬಂದ ಅತಿಥಿಯನ್ನು ಸತ್ಕಾರ ಮಾಡಬೇಕು. ಒಂದು ವೇಳೆ ನಿಮ್ಮ ಮನೆ ಬಾಗಿಲಿಗೆ ಶತ್ರುವೇ ಬಂದಿದ್ದರೂ ಕೂಡ ಆತನಿಗೆ ಚೆನ್ನಾಗಿ ಸತ್ಕಾರ ಮಾಡಿ ಕಳುಹಿಸಬೇಕು. ನೀರು, ಅನ್ನ ಕೊಡದೇ ಮನೆಯಿಂದ ಯಾರನ್ನೂ ಕಳುಹಿಸಬಾರದು. ಅತಿಥಿಗೆ ಅವಮಾನ ಮಾಡಿದರೆ ಎಂದಿಗೂ ಒಳಿತಾಗೋದಿಲ್ಲವೆಂದು ಮನುಸ್ಮೃತಿಯಲ್ಲಿ ಉಲ್ಲೇಖವಾಗಿದೆ.
4. ತಂದೆ - ತಾಯಿಗೆ ಗೌರವ ನೀಡಿ
ನಾವು ನಮ್ಮ ತಂದೆ- ತಾಯಿಯಲ್ಲಿ ದೇವರನ್ನು ಕಾಣಬೇಕು. ನಮ್ಮ ಮೊದಲ ಗುರು ತಾಯಿಯಾದರೆ ಎರಡನೇ ಗುರು ತಂದೆ. ಇಬ್ಬರೂ ಕೂಡ ಮಕ್ಕಳನ್ನು ತುಂಬಾನೇ ಪ್ರೀತಿಯಿಂದ ಬೆಳಸುತ್ತಾರೆ, ಮಕ್ಕಳಿಗಾಗಿ ತಮ್ಮ ಸರ್ವಸ್ವವನ್ನೇ ತ್ಯಾಗ ಮಾಡುತ್ತಾರೆ. ಇಂತಹ ತಂದೆ - ತಾಯಿಯ ಜೊತೆಗೆ ಮಕ್ಕಳು ಎಂದಿಗೂ ಜಗಳಕ್ಕೆ ನಿಲ್ಲಬಾರದು. ಅವರ ವೃದ್ಧಾಪ್ಯದಲ್ಲಿ ಮಕ್ಕಳು ಪ್ರೀತಿಯಿಂದ ನೋಡಿಕೊಳ್ಳಬೇಕು. ಯಾವಾಗ ಮಕ್ಕಳು ಪೋಷಕರಿಗೆ ಗೌರವ ನೀಡುವುದಿಲ್ಲವೋ, ಅವರನ್ನು ಚೆನ್ನಾಗಿ ನೋಡಿಕೊಳ್ಳುವುದಿಲ್ಲವೋ ಅಂತವರಿಗೆ ಒಳ್ಳೆಯದಾಗುವುದಿಲ್ಲವೆಂದು ಮನುಸ್ಮೃತಿಯಲ್ಲಿ ಉಲ್ಲೇಖವಾಗಿದೆ.
5. ಸಂಬಂಧಿಕರ ಜೊತೆಗೆ ಕಚ್ಚಾಡಬಾರದು
ಮನುಸ್ಮೃತಿಯಲ್ಲಿ ಉಲ್ಲೇಖವಾಗಿರುವಂತೆ ವ್ಯಕ್ತಿಯು ಆತನ ಒಡಹುಟ್ಟಿದವರ ಜೊತೆಗೆ ಕಚ್ಚಾಡಬಾರದು. ಯಾಕಂದ್ರೆ ನಮ್ಮ ಒಡಹುಟ್ಟಿದವರು ನಮ್ಮ ಜೀವನದಲ್ಲಿ ಒಂದು ಮಹತ್ವದ ಪಾತ್ರ ವಹಿಸುತ್ತಾರೆ. ಚಿಕ್ಕಂದಿನಿಂದಲೂ ನಮ್ಮ ಪ್ರತಿಯೊಂದು ಏಳು- ಬೀಳಿನಲ್ಲಿ ಜೊತೆಗೆ ನಿಂತವರು. ಹೀಗಾಗಿ ಇವರ ಜೊತೆಗೆ ವಿವಾದಕ್ಕೆ ಅಥವಾ ಜಗಳಕ್ಕೆ ನಿಲ್ಲುವುದು ಸರಿಯಲ್ಲ.
6. ಪತ್ನಿ ಮತ್ತು ಸೊಸೆಯ ಜೊತೆಗೆ ಜಗಳಕ್ಕೆ ನಿಲ್ಲಬೇಡಿ
ಮನುಸ್ಮೃತಿಯ ಪ್ರಕಾರ ಪತ್ನಿಯನ್ನು ಪುರುಷರ ಅರ್ಧಾಂಗಿ ಎಂದು ಕರೆಯಲಾಗುತ್ತದೆ. ಈಕೆಗೆ ಗೌರವ ಕೊಡುವುದು ಪುರುಷನ ಕರ್ತವ್ಯ. ಅದೇ ರೀತಿ ಮನೆಗೆ ಬಂದ ಸೊಸೆಗೂ ಕೂಡ ಗೌರವ ಕೊಡಬೇಕು. ಆಕೆಯನ್ನು ನಿಷ್ಠುರವಾಗಿ ನಡೆದುಕೊಳ್ಳಬಾರದು. ಸೊಸೆಯನ್ನು ಮಗಳಂತೆ ನೋಡಿಕೊಳ್ಳಬೇಕು. ಇಲ್ಲದಿದ್ದರೆ ಆ ಮನೆಯ ಶಾಂತಿಯೇ ಹಾಳಾಗಿಯೇ ಹೋಗಲಿದೆ.
7. ಮನೆ ಕೆಲಸದವರ ಜೊತೆಗೆ ಜಗಳವಾಡಬಾರದು
ಮನೆ ಕೆಲಸದವರನ್ನು ಕೀಳಾಗಿ ನಡೆಸಿಕೊಳ್ಳಬಾರದು. ಅವರಿಗೆ ಅವಮಾನ ಮಾಡುವುದು ಸರಿಯಲ್ಲ. ಅವರನ್ನು ನಮ್ಮ ಮನೆಯ ಸದಸ್ಯರಂತೆ ಕಾಣಬೇಕು. ನಮ್ಮೆಲ್ಲಾ ರಹಸ್ಯಗಳು ನಮ್ಮ ಮನೆಯವರಿಗೆ ಬಿಟ್ಟು ಬೇರೆ ಯಾರಿಗೂ ತಿಳಿದಿರುವುದಿಲ್ಲ. ಆದರೆ ಮನೆ ಕೆಲಸದವರಿಗೆ ಪ್ರತಿಯೊಂದು ವಿಚಾರಗಳು ಗೊತ್ತಿರುತ್ತದೆ. ಒಂದು ವೇಳೆ ಮನೆ ಕೆಲಸದವರ ಜೊತೆಗೆ ಜಗಳಕ್ಕೆ ನಿಂತರೆ ನಿಮ್ಮ ಗೌರವವೇ ಹಾಳಾಗುವುದು ಮಾತ್ರವಲ್ಲದೇ ನಮ್ಮ ರಹಸ್ಯಗಳೆಲ್ಲಾ ಬಯಲಾಗಲಿದೆ.
8. ಅಳಿಯನ ಜೊತೆಗೆ ಜಗಳಕ್ಕೆ ಇಳಿಯದಿರಿ
ಮನೆಯ ಅಳಿಯನು ಮನೆಯ ಮಗನ ಸಮಾನ. ಮನೆಯಲ್ಲಿ ಮಗನಿಗೆ ನೀಡೋ ಸ್ಥಾನಮಾನವನ್ನು ಅಳಿಯನಿಗೂ ನೀಡಲಾಗುತ್ತದೆ. ಒಂದು ವೇಳೆ ಮನೆ ಮಗ ಇಲ್ಲದೇ ಹೋದರೆ ಮನೆಯ ಮಗನು ನಿಂತು ಮನೆಯ ಎಲ್ಲಾ ಜವಾಬ್ದಾರಿಗಳನ್ನು ನಿಭಾಯಿಸುತ್ತಾನೆ. ಹೀಗಾಗಿ ಮನೆಯ ಮಗನನ್ನು ಗೌರವದಿಂದ ನೋಡಿಕೊಳ್ಳುವುದು ಪ್ರತಿಯೊಬ್ಬರ ಕರ್ತವ್ಯ.
ಹೀಗಾಗಿ ಈ ಎಂಟು ಜನರ ಜೊತೆಗೆ ಜಗಳವಾಡೋದಕ್ಕೆ ಹೋಗಬೇಡಿ. ಇದರಿಂದ ನಿಮ್ಮ ಗೌರವ ಹಾಗೂ ಮರ್ಯಾದೆಗೆ ಚ್ಯುತಿ ಬರಬಹುದು.



Click it and Unblock the Notifications
