Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಗುಜರಾತ್ ಗಣಿಯಲ್ಲಿ ಬೃಹತ್ ಗಾತ್ರದ ಹಾವಿನ ಅಸ್ಥಿಪಂಜರ ಪತ್ತೆ..!
ವಿಶ್ವದ ಬೃಹತ್ ಗಾತ್ರದ ಹಾವುಗಳು ಅಮೇಜಾನ್ ಕಾಡಿನಲ್ಲಿವೆ ಅದರಲ್ಲೂ ಆಫ್ರಿಕನ್ ಖಂಡದಲ್ಲಿವೆ ಎಂದು ನಂಬಲಾಗಿದೆ. ಇತ್ತಿಚಿಗೆ ವಿಶ್ವದ ದೊಡ್ಡ ಹಾವು ಅನಾಕೊಂಡ ಪತ್ತೆಯಾಗಿತ್ತು, ಆದರೆ ಭಾರತದಲ್ಲೇ ಈಗ ಅತೀ ದೊಡ್ಡ ಹಾವಿನ ಅಸ್ಥಿಪಂಜರ ಪತ್ತೆಯಾಗಿದ್ದು, ಗಮನ ಸೆಳೆದಿದೆ.
ಹಿಂದಿನಿಂದಲೂ ಅಸಾಧಾರಣ ಪ್ರಾಣಿಗಳ ಪಳೆಯುಳಿಕೆಗಳು ಪತ್ತೆಯಾಗುವುದು ನಡೆಯುತ್ತಲೇ ಇದೆ. ಹಿಂದೆಲ್ಲಾ ಡೈನೋಸರ್ ಪಳೆಯುಳಿಕೆಗಳು ಪತ್ತೆಯಾಗುವುದು ಸಹ ನಾವು ಕೇಳಿದ್ದೆವು. ಈಗ ಭಾರತದಲ್ಲಿಯೇ ದೊಡ್ಡ ಹಾವಿನ ಪಳೆಯುಳಿಕೆ ಪತ್ತೆಯಾಗಿರುವುದು ಅಚ್ಚರಿ ಮೂಡಿಸಿದೆ. ಇದೀಗ ಗುಜರಾತ್‌ನ ಕಚ್‌ನಲ್ಲಿರುವ ಪನಂಧ್ರೋ ಲಿಗ್ನೈಟ್ ಗಣಿಯಲ್ಲಿ ಬೃಹತ್ ಗಾತ್ರದ ಹಾವಿನ ಪಳೆಯುಳಿಕೆ ಪತ್ತೆಯಾಗಿದೆ.

ಸುಮಾರು 10ರಿಂದ 15 ಅಡಿ ಉದ್ದದ ಹಾವಿನ ಅಸ್ಥಿ ಪಂಜರ ಇದಾಗಿದ್ದು, ಈವರೆಗೆ ಪತ್ತೆಯಾಗಿರುವ ಅತ್ಯಂತ ಉದ್ದದ ಹಾವಿನ ಅಸ್ಥಿಪಂಜರ ಇದಾಗಿದೆ ಎನ್ನಲಾಗಿದೆ. ಜೊತೆಗೆ ಇದು ಸುಮಾರು 47 ಮಿಲಿಯನ್ ವರ್ಷಗಳಷ್ಟು ಹಿಂದಿನದು ಇರಬಹುದು ಎಂದು ಶಂಕಿಸಲಾಗಿದೆ.
ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ರೂರ್ಕಿಯ ಸಂಶೋಧಕರು ನಡೆಸಿದ ಸಂಶೋಧನೆಗಳನ್ನು ಸೈಂಟಿಫಿಕ್ ರಿಪೋರ್ಟ್ಸ್ ಜರ್ನಲ್‌ನಲ್ಲಿ ಪ್ರಕಟಿಸಲಾಗಿದೆ. ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ರೂರ್ಕಿಯಲ್ಲಿ (IITR) ಪೋಸ್ಟ್‌ಡಾಕ್ಟರಲ್ ಫೆಲೋ ಆಗಿರುವ ದೇಬಜಿತ್ ದತ್ತಾ ಮತ್ತು ಅಧ್ಯಯನದ ಸಹ-ಲೇಖಕರಾದ ದೇಬಜಿತ್ ದತ್ತಾ ಅವರು ಪ್ರಾಚೀನ ಗ್ರಂಥಗಳಲ್ಲಿ ಇದೇ ರೀತಿ ವಿವರಿಸಲಾದ ಸರ್ಪವನ್ನು ಅನಾದಿ ಕಾಲದಿಂದಲೂ ವಾಸುಕಿ ಎಂಬ ಹೆಸರಿನಿಂದ ಪೂಜಿಸಲಾಗಿರುವುದರಿಂದ ಜಾತಿಯ ಹೆಸರನ್ನು ಬಹಳ ಸಾಂಕೇತಿಕ ಎಂದು ಕರೆಯಲಾಗುತ್ತದೆ.
ಐಐಟಿ ರೂರ್ಕಿಯ ಪ್ರೊಫೆಸರ್ ಸುನಿಲ್ ಬಾಜ್‌ಪೇಯ್ ಮತ್ತು ದೇಬಜಿತ್ ದತ್ತಾ ಅವರು ಕಚ್‌ನಲ್ಲಿರುವ ಪನಾಂಧ್ರೋ ಲಿಗ್ನೈಟ್ ಮೈನ್‌ನಲ್ಲಿ ಮಹತ್ವದ ಆವಿಷ್ಕಾರವನ್ನು ಮಾಡಿದ್ದಾರೆ. ಅವರು ಹಾವಿಗೆ ಸೇರಿದ "ಭಾಗಶಃ, ಉತ್ತಮವಾಗಿ ಸಂರಕ್ಷಿಸಲ್ಪಟ್ಟ" ಬೆನ್ನುಮೂಳೆಯ 27 ತುಣುಕುಗಳಿವೆ.
ವಾಸುಕಿ ಇಂಡಿಕಸ್ ಗಾತ್ರದಲ್ಲಿ ಟೈಟಾನೊಬೊವಾ ಹೋಲುತ್ತದೆ ಎಂದು ಸಂಶೋಧಕರು ಹೇಳುತ್ತಾರೆ. ಸರೀಸೃಪಗಳ ಅಸ್ತಿತ್ವದ ಸಮಯದಲ್ಲಿ ಇವು ಭೂಮಿಯ ಮೇಲೆ ಆಳ್ವಿಕೆ ನಡೆಸಿದ್ದರಬಹುದು. ತಮ್ಮ ಬೃಹತ್ ಗಾತ್ರ ಹಾಗೂ ಶಕ್ತಿಶಾಲಿ ದೇಹದ ಮೂಲಕ ಬದುಕಿದ್ದವು. ಸರಳವಾಗಿ ನಾವು ಊಹೆ ಮಾಡಬೇಕೆಂದರೆ ಸಮುದ್ರ ಮಂಥನದ ಸಮಯದಲ್ಲಿ ಮಂದಾರ ಪರ್ವತವನ್ನು ಮಂಥನ ಮಾಡುವಾಗ ಬಳಸಿದ್ದ ಹಾವಿನ ಗಾತ್ರ ಹೋಲುತ್ತದೆ ಎಂದು ನಾವು ಅಂದಾಜಿಸಬಹುದು.
ಈ ದೈತ್ಯಾಕಾರದ ಹಾವು 65 ದಶಲಕ್ಷ ವರ್ಷಗಳ ಹಿಂದೆ ಡೈನೋಸಾರ್‌ಗಳ ಅಳಿವಿನಿಂದ ಸುಮಾರು 23 ದಶಲಕ್ಷ ವರ್ಷಗಳ ಹಿಂದೆ ಮೆಗಾಲೊಡಾನ್‌ನ ಅವಧಿಯಲ್ಲಿ ಬದುಕಿದ್ದ ಅತೀದೊಡ್ಡ ಪರಭಕ್ಷಕಗಳಲ್ಲಿ ಒಂದಾಗಿದೆ ಎಂದು ನಂಬಲಾಗಿದೆ.
ಪುರಾಣದಲ್ಲಿ ಸಮುದ್ರ ಮಂಥನ ಬಹಳ ಮುಖ್ಯ ಎಂದು ಕರೆಯಲಾಗುತ್ತದೆ. ಸುರ ಮತ್ತು ಅಸುರರ ನಡುವೆ ನಡೆದ ಸಮುದ್ರ ಮಂಥನ ವೇಳೆ ಅನೇಕ ದೇವಾನು ದೇವತೆಗಳು ಉಗಮವಾದರು. ಅಲ್ಲದೆ ಇದೇ ವೇಳೆ ವಿಷ ಸಹ ಮತ್ತು ಅಮೃತ ಹುಟ್ಟಿಕೊಂಡು ಶಿವ ವಿಷಕಂಠನಾದ ರಾಕ್ಷಸರನ್ನು ಒದೆ ಮಾಡಲು ವಿಷ್ಣು ಅವತಾರ ವೆತ್ತಿದ ಎಂಬ ಕಥೆಯನ್ನು ನಾವು ಕೇಳಿದ್ದೇವೆ.
ಆದರೆ ಈಗ ಪತ್ತೆಯಾಗಿರುವ ಹಾವಿನ ಪಳೆಯುಳಿಕೆ ಈ ಘಟನೆಯನ ನೆನಪು ಮತ್ತೆ ಮರುಕಳಿಸುತ್ತಿದೆ ಎನ್ನಲಾಗಿದೆ. ಈ ಅಸ್ಥಿಪಂಜರವನ್ನು ರಕ್ಷಿಸಲಾಗಿದ್ದು ಈ ಕುರಿತ ಇನ್ನಷ್ಟು ಮಾಹಿತಿಗಳು ಹೊರಬರಬೇಕಿದೆ. ಆದರೆ ಈವರೆಗೆ ಪತ್ತೆಯಾಗಿರುವ ಹಾವಿನ ಪಳೆಯುಳಿಕೆಗಳಲ್ಲಿ ಇದು ಅತ್ಯಂತ ದೊಡ್ಡದಾಗಿದೆ. ಹಾಗಾದ್ರೆ ಇಷ್ಟುದೊಡ್ಡ ಹಾವುಗಳು ಭಾರತದ ನೆಲದಲ್ಲಿ ಜೀವಿಸಿದ್ದವು ಎನ್ನುವುದಕ್ಕೆ ಪುರಾವೆ ಸಿಕ್ಕಿದೆ. ಆದರೆ ಇಷ್ಟು ಗಾತ್ರದ ಹಾವುಗಳು ಭೂಮಿಯಿಂದ ಕಣ್ಮರೆಯಾಗಲು ನಿಖರವಾದ ಕಾರಣ ಏನು ಎಂಬುದು ಸಹ ಪತ್ತೆಯಾಗಬೇಕಿದೆ.



Click it and Unblock the Notifications



