Latest Updates
-
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್!
ದುಬಾರಿ ಐಪಿಎಲ್ ಆಟಗಾರ ಸ್ಟಾರ್ಕ್ ಬಗ್ಗೆ ನಿಮಗೆಷ್ಟು ಗೊತ್ತು? ಆತನ ಪತ್ನಿ ಯಾರು ಗೊತ್ತಾ?
ಇಡಿ ಕ್ರಿಕೆಟ್ ಇತಿಹಾಸದಲ್ಲಿ ಐಪಿಎಲ್ ಸಿಕ್ಕಾಪಟ್ಟೆ ಫೇಮಸ್ ಆಗಿರುವ ಮಾದರಿಯಾಗಿದೆ. ಭಾರತ ಮಾತ್ರವಲ್ಲ ಬೇರೆ ಬೇರೆ ದೇಶದಲ್ಲೂ ಐಪಿಎಲ್ ಕಿಚ್ಚು ಜೋರಾಗಿದೆ. ವಿಶ್ವದ ಶ್ರೀಮಂತ ಕ್ರಿಕೆಟ್ ಮಂಡಳಿ ಬಿಸಿಸಿಐಗೂ ಇದೊಂದು ಹಿರಿಮೆಯಾಗಿದೆ. ಮುಂಬರುವ ಐಪಿಎಲ್ ಸೀಸನ್ ಹಿಂದೆಂದಿಗಿಂತಲೂ ಕುತೂಹಲಕ್ಕೆ ಕಾರಣವಾಗಿದೆ.
ಈ ಕುತೂಹಲಕ್ಕೆ ಕಾರಣವಾಗಿರೋದು ವಿದೇಶಿ ಆಟಗಾರರು ಕೋಟಿ ಕೋಟಿ ಬೆಲೆಗೆ ಹರಾಜಾಗಿದ್ದು, ಆಸ್ಟ್ರೇಲಿಯಾ ಆಟಗಾರರು ಭಾರತದಲ್ಲಿ ಕೋಟಿ ಲೆಕ್ಕದಲ್ಲಿ ಮಾರಾಟ ಆಗಿದ್ದಾರೆ.ಅದ್ರಲ್ಲೂ ವೇಗಿ ಮೆಚೆಲ್ ಸ್ಟಾರ್ಕ್ ಇಡೀ ಐಪಿಎಲ್ ಇತಿಹಾಸದಲ್ಲೇ ದುಬಾರಿ ಆಟಗಾರ ಎಂಬ ದಾಖಲೆ ಬರೆದಿದ್ದಾರೆ.

ಇದಕ್ಕೂ ಮೊದಲು ಆಸಿಸ್ ತಂಡ ನಾಯಕ ಪ್ಯಾಟ್ ಕಮಿನ್ಸ್ ಬರೋಬ್ಬರಿ 20.50 ಕೋಟಿ ರೂಪಾಯಿಗೆ ಹೈದರಾಬಾದ್ ತಂಡ ಖರೀದಿಸಿತು. ಇದು ದಾಖಲೆ ಮೊತ್ತ ಅಂತಲೆ ಹೇಳಲಾಗಿತ್ತು. ಆದರೆ ಬಳಿಕ ಮತ್ತೋರ್ವ ಆಸಿಸ್ ಆಟಗಾರ ಸ್ಟಾರ್ಕ್ ಬರೋಬ್ಬರಿ 24.75 ಕೋಟಿ ರೂಪಾಯಿ ನೀಡಿ ಕೊಲ್ಕತ್ತಾ ನೈಟ್ ರೈಡರ್ಸ್ ಖರೀದಿಸಿದೆ. ಇದು ಐಪಿಎಲ್ ಇತಿಹಾಸದಲ್ಲೇ ಹೊಸ ದಾಖಲೆಯಾಗಿದೆ.
ಮಿಚೆಲ್ ಸ್ಟಾರ್ಕ್ ಬಗ್ಗೆ ನಿಮಗೆಷ್ಟು ಗೊತ್ತು?
ಆಸಿಸ್ ತಂಡ ವೇಗದ ಬೌಲರ್ ಸ್ಟಾರ್ಕ್ ಐಪಿಎಲ್‌ನಲ್ಲಿ ಬೆಂಗಳೂರು ತಂಡದ ಪರವಾಗಿಯೂ ಆಡಿದ್ದಾರೆ. ಆದರೆ ಅಷ್ಟೇನು ಹೇಳದ ಪ್ರದರ್ಶನ ನೀಡದೆ ಇದ್ದಿದ್ದರಿಂದ ತಂಡ ಅವರನ್ನು ಕೈಬಿಟ್ಟಿತ್ತು. ಆದರೆ ಈ ಬಾರಿ ನಡೆದಿದ್ದ ವಿಶ್ವಕಪ್ ಪಂದ್ಯಗಳಲ್ಲಿ ಆಸಿಸ್ ಪರ ಅತ್ಯುತ್ತಮ ಪ್ರದರ್ಶನ ನೀಡಿದ್ದರು.
ಕ್ರಿಕೆಟರ್ ಅನ್ನೇ ಪ್ರೀತಿಸಿದ್ದ ಸ್ಟಾರ್ಕ್..!
ಮಿಚೆಲ್ ಸ್ಟಾರ್ಕ್ ಆಸ್ಟ್ರೇಲಿಯಾದ ಮಹಿಳಾ ಕ್ರಿಕೆಟರ್ ಅಲಿಸ್ಸಾ ಹೀಲಿ ಅವರನ್ನೇ ಪ್ರೀತಿಸಿ ಮದುವೆಯಾಗಿದ್ದಾರೆ. ಅಲಿಸ್ಸಾ ಹೀಲಿ ಮತ್ತು ಮಿಚೆಲ್ ಸ್ಟಾರ್ಕ್ ಅವರ ಕ್ರಿಕೆಟ್ ಪ್ರೇಮಕಥೆ 9ನೇ ವಯಸ್ಸಿನಲ್ಲಿ ಸಿಡ್ನಿಯ ನಾರ್ದರ್ನ್ ಡಿಸ್ಟ್ರಿಕ್ಟ್ ಕ್ರಿಕೆಟ್ ಅಸೋಸಿಯೇಷನ್ ತಂಡಕ್ಕಾಗಿ ಟ್ರಯಲ್ಸ್ ಸಮಯದಲ್ಲಿ ಭೇಟಿಯಾದಾಗ ಪ್ರಾರಂಭವಾಯಗಿತ್ತು. ವಿಶೇಷ ಅಂದ್ರೆ ವಿಕೆಟ್ ಕೀಪಿಂಗ್ ವಿಚಾರದಲ್ಲಿ ಇಬ್ಬರಿಗೂ ಪರಿಚಯವಾಗಿ ಬಳಿಕ ಸ್ನೇಹವಾಗಿತ್ತು.
ಅಲಿಸ್ಸಾ ಹೀಲಿ, ಮಾರ್ಚ್ 24, 1990 ರಂದು ಕ್ವೀನ್ಸ್‌ಲ್ಯಾಂಡ್‌ನಲ್ಲಿ ಜನಿಸಿದರು, ಅವರು ಕ್ರಿಕೆಟ್ ಕುಟುಂಬದಿಂದಲೇ ಬಂದವರು. ಆಕೆಯ ತಂದೆ, ಗ್ರೆಗ್ ಹೀಲಿ, ಕ್ವೀನ್ಸ್‌ಲ್ಯಾಂಡ್ ತಂಡದಲ್ಲಿ ಆಡಿದ್ದರೆ, ಆಕೆಯ ಚಿಕ್ಕಪ್ಪ ಇಯಾನ್ ಹೀಲಿ ಆಸ್ಟ್ರೇಲಿಯಾ ತಂಡದ ಮಾಜಿ ವಿಕೆಟ್-ಕೀಪರ್ ಆಗಿದ್ದಾರೆ.
2015ರಲ್ಲಿ ಅಧಿಕೃತವಾಗಿ ಇಬ್ಬರು ನಿಶ್ಚಿತಾರ್ಥ ಮಾಡಿಕೊಂಡರು, ಮೈದಾನದ ಒಳಗೆ ಮತ್ತು ಹೊರಗೆ ತಮ್ಮ ಬಂಧವನ್ನು ಗಟ್ಟಿಗೊಳಿಸಿದ್ದರು. 2016ರಲ್ಲಿ ಅಲಿಸ್ಸಾ ಹೀಲಿ ಮತ್ತು ಮಿಚೆಲ್ ಸ್ಟಾರ್ಕ್ ವಿವಾಹವೂ ಕ್ರಿಕೆಟ್ ದಿಗ್ಗಜರ ಸಮಾಗಮಕ್ಕೂ ವೇದಿಕೆಯಾಗಿತ್ತು.
33 ವರ್ಷದ ಸ್ಟಾರ್ಕ್ ಫಿಟ್‌ನೆಸ್ ಗುಟ್ಟೇನು?
33 ವರ್ಷ ಪ್ರಾಯದ ಮಿಚೆಲ್ ಸ್ಟಾರ್ಕ್ ಈಗಲೂ ಸಿಡಿಗುಂಡಿನ ವೇಗದಲ್ಲಿ ಬೌಲಿಂಗ್ ಮಾಡುತ್ತಾರೆ. ಹೀಗಾಗಿಯೇ ಕೊಲ್ಕತ್ತಾ ಇಷ್ಟು ದುಬಾರಿ ಮೊತ್ತಕ್ಕೆ ಅವರನ್ನು ಖರೀದಿಸಿದೆ. ಆಸಿಸ್ ತಂಡದಲ್ಲಿ 10ಕ್ಕೂ ಹೆಚ್ಚು ವರ್ಷ ಬೌಲಿಂಗ್ ದಾಳಿ ನಡೆಸಿದ್ದರೂ ಈಗಲೂ ಫಿಟ್ ಆಗಿದ್ದಾರೆ. ಅವರು ನಿತ್ಯ ಜಿಮ್‌ನಲ್ಲಿ ಕಸರತ್ತು ಮಾಡುವುದು ಮಾತ್ರವಲ್ಲ ಕಠಿಣ ಆಹಾರ ಕ್ರಮಗಳನ್ನು ಅಳವಡಿಸಿಕೊಂಡಿದ್ದಾರಂತೆ. ಆರೋಗ್ಯಯುವವಾಗಿರಲು ಹೆಚ್ಚು ಹೆಚ್ಚು ವ್ಯಾಯಾಮದ ಕಡೆ ಮತ್ತು ನಿರಂತರ ಅಭ್ಯಾಸದ ಕಡೆ ಗಮನ ಹರಿಸುತ್ತಾರಂತೆ.
ಸ್ಟಾರ್ಕ್ ವೇಗದ ಗುಟ್ಟು ಐಸ್ ಸ್ನಾನವಂತೆ
ಆಸ್ಟ್ರೇಲಿಯನ್ ವೆಬ್‌ಸೈಟ್‌ನ ಪ್ರಕಾರ ಮಿಚೆಲ್ ಸ್ಟಾರ್ಕ್ ಐಸೋಮೆಟ್ರಿಕ್ ಲೆಗ್ ಪ್ರೆಸ್ ಮತ್ತು ಐಸೋಮೆಟ್ರಿಕ್ ಲೆಗ್ ಎಕ್ಸ್‌ಟೆನ್ಶನ್‌ನಂತಹ ವ್ಯಾಯಾಮಗಳನ್ನು ಮಾಡುತ್ತಾರಂತೆ. ಈ ವ್ಯಾಯಾಮಗಳು ಸ್ನಾಯುಗಳ ಶಕ್ತಿ ಹೆಚ್ಚಿಸಲಿದೆಯಂತೆ. ಹೀಗಾಗಿಯೇ ಅವರು 150KM/h ವೇಗದಲ್ಲಿ ಬೌಲಿಂಗ್ ಮಾಡಲು ಸಾಧ್ಯವಾಗುತ್ತದೆ. ಒಟ್ಟಾರೆ ದೇಹದ ವ್ಯಾಯಾಮಕ್ಕಾಗಿ ಸ್ಟಾರ್ಕ್ ಬಾರ್ಬೆಲ್ ಕ್ಲೀನ್, ಕೆಟಲ್ಬೆಲ್ ಸ್ವಿಂಗ್, ಟ್ರ್ಯಾಪ್ ಬಾರ್ ಡೆಡ್ಲಿಫ್ಟ್, ಕೆಟಲ್ಬೆಲ್ ಗೋಬ್ಲೆಟ್ ಸ್ಕ್ವಾಟ್ ಮುಂತಾದ ವ್ಯಾಯಾಮಗಳನ್ನು ಚಾಚು ತಪ್ಪದೆ ಮಾಡುತ್ತಾರಂತೆ. ಇದಲ್ಲದೆ ಪ್ರತಿದಿನ ಅಭ್ಯಾಸದ ಬಳಿಕ ಅವರು ಐಸ್ ಸ್ನಾನ ಮಾಡುತ್ತಾರಂತೆ. ಜೊತೆಗೆ ರಾತ್ರಿ ಊಟದ ಬಳಿಕ ಯಾವ ಕೆಲಸವೂ ಮಾಡದೆ ಸಂಪೂರ್ಣ ನಿದ್ರೆ ಮಾಡುತ್ತಾರಂತೆ.



Click it and Unblock the Notifications
