Latest Updates
-
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ
ಬೆಂಗಳೂರು-ಊಟಿಯಲ್ಲಿ ಮಳೆಯಾಗೋಕೆ 'ಪಾಲಕ್ಕಾಡ್ ಗ್ಯಾಪ್' ಕಾರಣ..! ಏನಿದು ಪಾಲಕ್ಕಾಡ್ ಗ್ಯಾಪ್?
ನಾವು ಮಳೆ ಹೇಗೆ ಬರುತ್ತದೆ ಎಂಬುದನ್ನು ತಿಳಿದುಕೊಂಡಿದ್ದೇವೆ. ಮೋಡಗಳ ರಚನೆ, ರಾಸಾಯನಿಕ ಕ್ರಿಯೆ ಇವೆಲ್ಲವು ತಿಳಿಸಿದೆ. ಆದರೆ ಮಾನ್ಸೂನ್ ಮಾರುತಗಳು ಬರುವ ಸಮಯ ಅವು ಮೊದಲಿಗೆ ಕೇರಳ ದಾಟುವುದು ಪಶ್ಚಿಮ ಘಟ್ಟಗಳಲ್ಲಿ ಮಳೆ ಆರಂಭಿಸಿ ಬಳಿಕ ಇಡೀ ದೇಶದಲ್ಲಿ ಮಳೆಗಾಲ ಆರಂಭವಾಗುವುದು ಇದೆಲ್ಲಾ ಸಾಮಾನ್ಯವಾಗಿ ಗೊತ್ತಿರುವ ವಿಚಾರವೆ.
ಆದ್ರೆ ಮಳೆ ಬೀಳಲು ಪಶ್ಚಿಮ ಘಟ್ಟಗಳು ಎಷ್ಟು ಮುಖ್ಯ ಅನ್ನೋದು ನಿಮಗೆ ಗೊತ್ತಿದ್ಯಾ? ಇನ್ನು ದಕ್ಷಿಣ ಭಾರತದಲ್ಲಿ ಬೆಂಗಳೂರು ಮತ್ತೂ ಊಟಿಯಲ್ಲಿ ಮಳೆಯಾಗುವ ಕಾರಣವೇನು ಎಂಬ ಅಚ್ಚರಿಯ ವಿಚಾರವನ್ನು ನಾವಿಂದು ತಿಳಿಯೋಣ.

ಈ ವಿಚಾರಗಳನ್ನು ತಿಳಿಯುವ ಮೊದಲು ನಾವು ನೈರುತ್ಯ ಹಿಂದೂ ಮಹಾಸಾಗರದಿಂದ ಬರುವ ಈ ಮಾನ್ಸೂನ್ ಬಗ್ಗೆ ತಿಳಿಯೋಣ. ಮಾನ್ಸೂನ್ ಜೂನ್ ಆರಂಭದಲ್ಲಿ ನೈರುತ್ಯ ಹಿಂದೂ ಮಹಾಸಾಗರದ ಮೇಲೆ ಉಂಟಾಗುವ ಒತ್ತಡದ ಕಾರಣದಿಂದಾಗಿ ಮಾರುತಗಳು ಕೇರಳ ತೀರದತ್ತ ಸಾಗುತ್ತವೆ. ಬಳಿಕ ಮಳೆಗಾಲ ಆರಂಭವಾಗುತ್ತದೆ. ಇದು ನಮಗೆ ಗೊತ್ತಿರುವ ಸಾಮಾನ್ಯ ಪ್ರಕ್ರಿಯೆಯಾಗಿದೆ.
ಆದರೆ ಇದರ ಒಳಗೊಂದು ವಿಶೇಷ ಪ್ರಕ್ರಿಯೆ ನಡೆಯುತ್ತದೆ. ಅದೇನು ಅಂದ್ರೆ ನಮ್ಮ ಬೆಂಗಳೂರು ಹಾಗೂ ಊಟಿಗೆ ಮಳೆಯಾಗಲು ಒಂದು ಪರ್ವತ ಕಾರಣವಾಗಿದೆ. ಹೌದು ನೀವು ಈ ವಿಚಾರ ತಿಳಿದರೆ ಅಚ್ಚರಿ ಪಡುತ್ತೀರಿ. ಮಾನ್ಸೂನ್ ದಿನಗಳಲ್ಲಿ ಬೆಂಗಳೂರು ಹಾಗೂ ಊಟಿಯಲ್ಲಿ ಸಿಕ್ಕಾಪಟ್ಟೆ ಮಳೆಯಾಗುತ್ತದೆ. ಬೇರೆ ಯಾವ ಪ್ರದೇಶದಲ್ಲಿ ಮಳೆಯಾಗದಿದ್ದರೂ ಈ ಎರಡು ಪ್ರದೇಶದಲ್ಲಿ ಮಳೆ ಖಚಿತವಾಗಿ ಬೀಳುತ್ತದೆ.
ಹಾಗಾದರೆ ಬೆಂಗಳೂರು ಮತ್ತು ಊಟಿಯಲ್ಲಿ ನಿರಂತರ ಮಳೆ ಸುರಿಯಲು ಕಾರಣವೇನು? ಇದರ ಹಿಂದೆ ಇರುವ ಆ ಪರ್ವತದ ಕಥೆ ಏನು ಎಂಬುದನ್ನು ನೋಡೋಣ.
ನಾವು ಮೊದಲೇ ಹೇಳಿದಂತೆ ಮಾನ್ಸೂನ್ ಮಾರುತಗಳು ಮಹಾರಾಷ್ಟ್ರ ಗೋವಾ ಗಡಿಯ ಪಶ್ಚಿಮ ಘಟ್ಟದಿಂದ ಹಿಡಿದು ಕೇರಳದ ಅಂತ್ಯದವರೆಗೂ ಹರಡಿರುವ ಈ ಘಟ್ಟಸಾಲಿನಲ್ಲಿ ಮೊದಲು ಮಳೆ ಸುರಿಸುತ್ತವೆ. ಏಕೆಂದರೆ ಈ ಘಟ್ಟದ ಸಾಲು ಎತ್ತರವಾಗಿದ್ದು, ಮೋಡಗಳನ್ನು ಅಲ್ಲಿಯೇ ತಡೆದು ಮಳೆ ಸುರಿಸುತ್ತವೆ.
ಆದರೆ ಕೇರಳ ಹಾಗೂ ತಮಿಳುನಾಡಿನ ನಡುವೆ ಇರುವ ಒಂದು ದೊಡ್ಡ ಕಂದಕವು ಈ ಮಾನ್ಸೂನ್ ಮಾರುತಗಳು ಒಳನುಸುಳಲು ಸಹಾಯ ಮಾಡುತ್ತದೆ. ಹೀಗಾಗಿ ಮೊದಲು ಊಟಿಯಲ್ಲಿ ಮತ್ತು ಬೆಂಗಳೂರಿನಲ್ಲಿ ಭರ್ಜರಿ ಮಳೆಯಾಗುತ್ತದೆ. ಪ್ರಕ್ರಿಯೆಯನ್ನು ಇನ್ನೂ ಸರಳವಾಗಿ ಅರ್ಥೈಸಿಕೊಳ್ಳೋಣ.
ಪಶ್ಚಿಮ ಘಟ್ಟಗಳ ಮಧ್ಯೆ, ನೀಲಗಿರಿ ಮತ್ತು ಅನೈಮಲೈ ಬೆಟ್ಟಗಳ ನಡುವೆ ನೆಲೆಸಿರುವ ಪ್ರದೇಶ - ತಮಿಳುನಾಡಿನ ಕೊಯಮತ್ತೂರಿನಿಂದ ಕೇರಳದ ಪಾಲಕ್ಕಾಡ್‌ವರೆಗೆ 'ಪಾಲಕ್ಕಾಡ್ ಗ್ಯಾಪ್' ಎಂದು ಕರೆಯಲ್ಪಡುತ್ತದೆ, ಇದು 4,600 ಕಿಲೋಮೀಟರ್‌ಗಳಷ್ಟು ವ್ಯಾಪಿಸಿದೆ. ಇದು ಭೂಮಿಯ ಆರಂಭಿಕ ಹಂತದಲ್ಲಿ ಖಂಡಗಳ ಚಲನೆಯಿಂದ ಉಂಟಾದ ಜ್ವಾಲಾಮುಖಿ ಸ್ಫೋಟದಲ್ಲಿ ರೂಪುಗೊಂಡಿರುವ ಕಂದಕ ಎನ್ನಲಾಗಿದೆ.
ಪಾಲಕ್ಕಾಡ್ ಗ್ಯಾಪ್ ಪ್ರದೇಶದ ಹವಾಮಾನ ಮಾದರಿಗಳನ್ನು ರೂಪಿಸುವಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತದೆ. ಹಗಲಿನ ವೇಳೆಯಲ್ಲಿ, ಮೈಸೂರು ಪ್ರಸ್ಥಭೂಮಿಯಲ್ಲಿ ಸರಾಸರಿ 900 ಮೀಟರ್ ಎತ್ತರದಲ್ಲಿ ನೆಲೆಗೊಂಡಿರುವ ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶವನ್ನು ಸೂರ್ಯನ ಶಾಖದಿಂದ ಬಿಸಿಯ ತಾಪಮಾನ ಇರುತ್ತದೆ. ಇದರಿಂದಾಗಿ ಕಡಿಮೆ ಒತ್ತಡದ ವಲಯವು ಉಂಟಾಗುತ್ತದೆ. ಈ ಸಮಯದಲ್ಲಿ, ಅರಬ್ಬೀ ಸಮುದ್ರದಿಂದ ತೇವಾಂಶ-ಹೊತ್ತ ಗಾಳಿಯು ಪಾಲಕ್ಕಾಡ್ ಗ್ಯಾಪ್ ನಡುವೆ ಹಾದು ಒಳಬರುತ್ತದೆ. ಈ ಮೋಡವು ಊಟಿ-ಬೆಂಗಳೂರು ಕಡೆ ಸಾಗುತ್ತವೆ. ಹೀಗಾಗಿ ಬೆಂಗಳೂರಲ್ಲಿ ಮಳೆಯಾಗುತ್ತದೆ.
ಸಮುದ್ರದ ಮೇಲ್ಮೈಯಿಂದ ಹೊರಟ ಈ ಗಾಳಿಯು ಬೆಂಗಳೂರನ್ನು ತಲುಪಲು 400 ಕಿಲೋಮೀಟರ್ ಪ್ರಯಾಣವನ್ನು ಪ್ರಾರಂಭಿಸುತ್ತದೆ, ಹೀಗಾಗಿ ನೀವು ಬೆಂಗಳೂರಿನಲ್ಲಿ ನೀವು ಸಂಜೆಯ ವೇಳೆ ಹೆಚ್ಚು ಮೋಡ ಕವಿದ ವಾತಾವರಣ ಹಾಗೂ ಮಳೆಯನ್ನು ಕಾಣಬಹುದು. ಅಂತಿಮವಾಗಿ ಈ ಪಾಲಕ್ಕಾಡ್ ಗ್ಯಾಪ್ ಊಟಿ ಮತ್ತು ಬೆಂಗಳೂರಿನಲ್ಲಿ ಸುರಿಯುವ ಮಳೆಗೆ ಕಾರಣವಾಗಿದೆ. ಒಂದು ವೇಳೆ ಈ ಗ್ಯಾಪ್ ಇಲ್ಲದೆ ಇದ್ದಿದ್ದರೆ ಸಾಮಾನ್ಯವಾಗಿ ಮಾನ್ಸೂನ್ ಮಾರುತಗಳು ಮುಂದೆ ಸಾಗುತ್ತಿದ್ದವು ಇಲ್ಲವೆ ಕೇರಳ ಗಡಿಯಲ್ಲಿ ಮಳೆ ಸುರಿಸುತ್ತಿದ್ದವು. ಇಲ್ಲದೆ ಪಶ್ಚಿಮ ಘಟ್ಟ ಸಾಲಿನಲ್ಲಿ ಇನ್ನೂ ಹೆಚ್ಚು ಮಳೆಯಾಗುತ್ತಿತ್ತು. ನೀವು ಬೆಂಗಳೂರಲ್ಲಿ ಮಾನ್ಸೂನ್ ಮಳೆ ನೋಡಿದರೆ ಈ ಪಾಲಕ್ಕಾಡ್ ಗ್ಯಾಪ್‌ಗೆ ಧನ್ಯವಾದ ಹೇಳಲೇಬೇಕು.



Click it and Unblock the Notifications
