Latest Updates
-
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ?
ವಯನಾಡ್‌ನಂತೆ ಹಿಮಾಚಲ ಪ್ರದೇಶದ ಒಂದು ಊರೇ ನಾಶ, ಅಲ್ಲಿ ಉಳಿದಿದ್ದು ಕಾಳಿಯ ದೇವಾಲು, ಮಹಿಳೆಯೊಬ್ಬರ ಮನೆ ಮಾತ್ರ
ಇಷ್ಟು ವರ್ಷಗಳಲ್ಲಿ ಯಾವುದೋ ಒಂದು ಕಡೆ ನೈಸರ್ಗಿಕ ವಿಕೋಪದ ಬಗ್ಗೆ ಕೇಳುತ್ತಿದ್ದೇವೆ, ಆದರೆ ಈ ಬಾರಿ ದೇಶದ ಉತ್ತರ-ದಕ್ಷಿಣ, ಪೂರ್ವ-ಪಶ್ಚಿಮ ಯಾವುದಚೂ ಸುರಕ್ಷಿತವಲ್ಲ ಎಂದನಿಸಲಾರಂಭಿಸಿದೆ, ಪ್ರಕೃತಿ ತುಂಬಾನೇ ಮುನಿಸಿಕೊಂಡಿದ್ದಾಳೆ ಅವಳ ರೌದ್ರಾವತಾರಕ್ಕೆ ಮನುಷ್ಯ ತತ್ತರಿಸುತ್ತಿದ್ದಾನೆ. \
ಹೀಟ್‌ವೇವ್‌ನಿಂದ ಸಂಕಷ್ಟ ಅನುಭವಿಸಿದ ಜನತೆ ಮಳೆಗಾಗಿ ಪ್ರಾರ್ಥಿಸಿದ್ದರು, ಆದರೆ ಈ ಬಾರಿಯ ಮಳೆ ಸಾವಿನ ಮಳೆ, ಊರಿಗೆ ಊರೇ ನಾಶವಾಗುತ್ತಿದೆ. ಉತ್ತರಕನ್ನಡದ ಬರೆಕುಸಿತದಿಂದ ಚೇತರಿಸುವ ಮುನ್ನವೇ ವಯನಾಡ್‌ನಲ್ಲಿ ಮರಣ ಮೃದಂಗ ಭಾರಿಸಿದೆ.

ಇಡೀ ದೇಶದ ಜನತೆ ವಯನಾಡ್‌ನ ಸ್ಥಿತಿ ಕಂಡು ಮರುಗುತ್ತಿದ್ದಾಗ ಹಿಮಾಚಲ ಪ್ರದೇಶದಲ್ಲಿ ಮೇಘ ಸ್ಪೋಟವಾಗಿ ಊರಿಗೇ ಊರೇ ಕೊಚ್ಚಿ ಹೋಗಿದೆ. ಇತರ ಕಡೆಗಳಲ್ಲಿ ಪ್ರವಾಹ, ಬರ ಕುಸಿತದ ಭೀತಿ ಆವರಿಸಿದೆ.
ಹಚ್ಚಹಸಿರಿನ ಪ್ರಕೃತಿಯಿಂದ ಕಂಗೊಳಿಸುತ್ತಿದ್ದ ಪ್ರದೇಶಗಳು ಸಂಪೂರ್ಣ ನಾಶವಾಗಿದೆ
ಹಿಮಾಚಲ ಪ್ರದೇಶದ ಶಿಮ್ಲಾ, ಕುಲು, ಮಂಡಿ ಜಿಲ್ಲೆಗಳಲ್ಲಿ ಪ್ರವಾಹ ಉಂಟಾಗಿದೆ, ಈ ಪ್ರವಾಹದಲ್ಲಿ ಸಿಲುಕಿ ಸಮೇಜ್ ಎಂಬ ಗ್ರಾಮವೇ ಕಣ್ಮರೆಯಾಗಿದೆ. ಅಪಾಯ ಸುಳಿವು ಸಿಕ್ಕು ಜನತೆ ಎಚ್ಚೆತ್ತುಕೊಳ್ಳುವ ಮುನ್ನವೇ ಆ ಗ್ರಾಮದ ಜನತೆಯನ್ನು ಕೊಚ್ಚಿಕೊಂಡು ಹೋಗಿದೆ ಪ್ರವಾಹ.
ಭೂಕುಸಿತ ಪ್ರವಾಹದ ಕಣ್ಮೀರ ಕತೆಗಳು ಮನಕಲುಕುತ್ತಿದೆ. ವಯನಾಡು ಮಾತ್ರವಲ್ಲ, ಹಿಮಾಚಲ ಪ್ರದೇಶದಲ್ಲೂ ಭೀಕರ ಪ್ರವಾಹ ಜನರ ಬದುಕನ್ನೇ ಕಸಿದುಕೊಂಡಿದೆ. ರಾತ್ರಿಯ ಪ್ರವಾಹ ಹಾಗೂ ಭೂಕುಸಿತದಲ್ಲಿ ಸಮೇಜ್ ಗ್ರಾಮ ಸಂಪೂರ್ಣ ಕೊಚ್ಚಿ ಹೋಗಿದೆ. ಆದರೆ ಒಂದು ಕಾಳಿ ಮಾತಾ ಹಾಗೂ ಒಂದು ಮನೆ ಮಾತ್ರ ಉಳಿದುಕೊಂಡಿದೆ.
ಆ ಗ್ರಾಮದಲ್ಲಿ ಈಗ ಉಳಿದಿರುವುದು, ಒಂದು ದೇವಾಲಯ, ಮಹಿಳೆಯ ಮನೆ ಮಾತ್ರ
ಈ ಪ್ರವಾಹದಲ್ಲಿ 50ಕ್ಕೂ ಅಧಿಕ ಸಾವು ಸಂಭವಿಸಿದರೆ 200ಕ್ಕೂ ಅಧಿಕ ಜನ
ನಾಪತ್ತೆಯಾಗಿದ್ದಾರೆ, ಉಳಿದವರಿಗೆ ಗಾಯಗಳಾಗಿವೆ, ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ, ಆದರೆ ಆ ಊರಿನ ಮಹಿಳೆ ಅನಿತಾ ದೇವಿ ಮನೆಯವರು ಸುರಕ್ಷಿತವಾಗಿದ್ದಾರೆ, ಆ ಊರಿನ ಮನೆಗಳೆಲ್ಲಾ ನಾಶವಾಗಿದ್ದರು ಕಾಳಿ ದೇವಾಲಯಕ್ಕೆ ಏನು ಆಗಲಿಲ್ಲ.
My heart goes out to everyone whose lives and livelihoods have been disrupted by the flash floods and landslides in Himachal
— Prajwal Busta (@PrajwalBusta) August 1, 2024
Everyone please Stay safe & help each other in these difficult times.🙏🏻 pic.twitter.com/0Pt68RpKZs
ಈ ಘಟನೆ ಕುರಿತು ಅನಿತಾ ದೇವಿ ಹೀಗೆ ಹೇಳುತ್ತಾರೆ ' ನಾನು ಮತ್ತು ನನ್ನ ಕುಟುಂಬ ಮಲಗಿದ್ವಿ, ಜೋರಾಗಿ ಶಬ್ದ ಬಂತು, ಕೂಡಲೇ ಮನೆಯವರನ್ನೆಲ್ಲಾ ಎಬ್ಬಿಸಿ ಈಜಿಕೊಂಡು ಹೋಗಿ ಸಮೀಪದಲ್ಲಿದ್ದ ಕಾಳಿ ಮಾತೆಯ ದೇವಾಲಯ ಸೇರಿಕೊಂಡ್ವಿ, ಆ ದಿನ ಇಡೀ ರಾತ್ರಿ ಭಾರೀ ಮಳೆ ಸುರಿಯಿತು ಎಂದು ಹೇಳಿದ್ದಾರೆ. ನೋಡಿದರೆ ಇಡೀ ಗ್ರಾಮವೇ ಕೊಚ್ಚಿ ಹೋಗಿದೆ, ಸಮೇಜ್ ಗ್ರಾಮದಲ್ಲಿ ಈ ದೇವಾಲಯ ಮತ್ತು ನನ್ನ ಮನೆ ಮಾತ್ರ ಉಳಿದುಕೊಂಡಿದೆ ಎಂದು ಹೇಳಿದ್ದಾರೆ.
ಅಲ್ಲಿಯ ದೃಶ್ಯಗಳು ಕೂಡ ಭಯಾನಕವಾಗಿದೆ
ಡ್ಯಾಂ ತುಂಬಿಕೊಂಡಾಗ ನೋಡಲು ಖುಷಿಯಾಗುತ್ತದೆ, ಆದರೆ ಹಿಮಾಚಲ ಪ್ರದೇಶದ ಪಂಡೋಹ್ ಡ್ಯಾಂ ನೋಡಿ, ಅ ದೃಶ್ಯವೇ ಎಷ್ಟೊಂದು ಬಯಾನಕವಾಗಿದೆ.
Scary visuals from Pandoh Dam, Himachal Pradesh! Flood gates have been opened.
— Diksha Verma (@dikshaaverma) August 1, 2024
pic.twitter.com/1BBMvy7hpN
ಮನೆ ಕಳೆದಕೊಂಡು ಅತಂತ್ರವಾದ ಜನರ ಬದುಕು
ಈ ಫೋಟೋ ನೋಡುವಾಗ ಮನಸ್ಸಿಗೆ ತುಂಬಾನೇ ನೋವಾಗುತ್ತೆ, ಮನೆ ಕಳೆದುಕೊಂಡು, ತಮ್ಮವರನ್ನೂ ಕಳೆದುಕೊಂಡು ಅತಂತ್ರವಾಗಿರುವ ಬದುಕು, ಮನುಷ್ಯ-ಮನುಷ್ಯನ ಕಷ್ಟಕ್ಕೆ ನೆರವಾಗೋಣ.
Whether its Himachal Pradesh, Uttrakhand, Kerala or many other places, playing wid nature causing hugely to humanity, we fail to learn lessons & face such devastation yr after year, floods, cyclones, droughts #GlobalWarming #ClimateChange, courtesy third party, @shubhamtorres09 pic.twitter.com/ZNAUOVaf0F
— Neel Kamal (@NeelkamalTOI) August 1, 2024
ಕುಲು ಹೈವೇ ನಾಶವಾಗಿದೆ
ಕುಲು ಎಂಥ ಸುಂದರ ತಾಣ ಅಲ್ಲಿಗೆ ಸಾವಿರಾರು ಪ್ರವಾಸಿಗರು ಆಗಮಿಸುತ್ತಾರೆ. ಆದರೆ ಅಲ್ಲಿಯ ಹೈವೇ ಇದೀಗ ನಾಶವಾಗಿದೆ.
ಕಟ್ಟಡ ಉರುಳಿ ಬೀಳುತ್ತಿರುವ ದೃಶ್ಯ ಅಷ್ಟೊಂದು ದೊಡ್ಡ ಕಟ್ಟಡ ಉರುಳಿ ಬೀಳುತ್ತಿರುವ ದೃಶ್ಯ ಎಷ್ಟೊಂದು ಭಯಾನಕವಾಗಿದೆ ನೋಡಿ..... ಪ್ರಕೃತಿ ಮುಂದೆ ಮನುಷ್ಯರಿಗೆ ನಿಲ್ಲಲು ಸಾಧ್ಯವಾಗಲ್ಲ ಅದುವೇ ವಾಸ್ತವ...



Click it and Unblock the Notifications











