Latest Updates
-
ಬೆಂಗಳೂರಿನಲ್ಲಿ 'ಫ್ರೀಡಂ ಫ್ರಮ್ ವೇಸ್ಟ್': ದಂಡದಿಂದ ಪಾರಾಗಲು ಆಗಸ್ಟ್ 15ರೊಳಗೆ ಈ ಕೆಲಸ ಮಾಡಿ! -
8,000mAh ಬ್ಯಾಟರಿಯ ರೆಡ್ಮಿ ನೋಟ್ 17 ಲಾಂಚ್: ಖರೀದಿಸುವ ಮುನ್ನ ನೀವು ತಿಳಿಯಲೇಬೇಕಾದ ಪ್ರಮುಖ ವಿಷಯಗಳಿವು! -
ಬಾಣಂತಿಯರಿಗೆ ಬೆಂಬಲ: ತಾಯಿಯ ಆರೋಗ್ಯಕ್ಕೆ ತಂದೆಯ ಸಣ್ಣ ಸಹಾಯ ಎಷ್ಟು ಮುಖ್ಯ? -
8,000mAh ಬ್ಯಾಟರಿಯ POCO M8 Power ಲಾಂಚ್: ಈ ಫೋನ್ ಖರೀದಿಸುವ ಮುನ್ನ ನೀವು ತಿಳಿಯಲೇಬೇಕಾದ ವಿಷಯಗಳಿವು! -
ರಾಷ್ಟ್ರೀಯ ಮೂಳೆ ಮತ್ತು ಕೀಲು ದಿನ: ಬೆನ್ನು ಮತ್ತು ಮೊಣಕಾಲು ನೋವಿಗೆ ಈ 10 ನಿಮಿಷದ ವ್ಯಾಯಾಮವೇ ಮದ್ದು! -
ಫ್ರೆಂಡ್ಶಿಪ್ ಡೇ ವಿಶ್ ಮಾಡೋಕೆ ಮರೆತಿದ್ದೀರಾ? ನಿಮ್ಮ ಸ್ನೇಹಿತರ ಮನ ಗೆಲ್ಲಲು ಇಲ್ಲಿದೆ ಸಿಂಪಲ್ ಟಿಪ್ಸ್! -
ಅಮೆಜಾನ್-ಫ್ಲಿಪ್ಕಾರ್ಟ್ ಸೇಲ್: 999 ರೂ. ಒಳಗಿನ ಬೆಸ್ಟ್ ಡೀಲ್ಗಳು ಮತ್ತು ಶಾಪಿಂಗ್ ಟಿಪ್ಸ್! -
ಶ್ರಾವಣ ಸೋಮವಾರದ ಉಪವಾಸ: ಆಫೀಸ್ ಕೆಲಸದ ನಡುವೆಯೂ ಆರೋಗ್ಯ ಕಾಪಾಡಿಕೊಳ್ಳಲು ಇಲ್ಲಿವೆ ಸರಳ ಟಿಪ್ಸ್! -
ಟಾಟಾ ಮುಂಬೈ ಮ್ಯಾರಥಾನ್ 2027: ನೋಂದಣಿಗೆ ಸಿದ್ಧರಾಗಿ, ಓಟಗಾರರಿಗೆ ಇಲ್ಲಿದೆ ಮಹತ್ವದ ಸಲಹೆಗಳು! -
ಆರ್ಬಿಐ ಸಭೆಗೂ ಮುನ್ನ ದಂಪತಿಗಳಿಗೆ ಎಚ್ಚರಿಕೆ: ಇಂದೇ ಈ 30 ನಿಮಿಷದ ಫೈನಾನ್ಶಿಯಲ್ ಟೆಸ್ಟ್ ಮಾಡಿ!
ಇನ್ಯಾರವ.. ಇವನ್ಯಾರವ, ಇವನೇ ಕಣವ್ವ ಚಿರತೆ ಹಿಡಿದು ಬೈಕ್‌ನಲ್ಲಿ ಕೊಂಡೊಯ್ಯದ್ದ ಹಾಸನದ ಗಂಡುಗಲಿ
ಇನ್ಯಾರವ.. ಇವನ್ಯಾರವ ಇವನು ಕಣವ್ವ ಚಿರತೆಯ ಹಿಡಿದ ಗಂಡುಗಲಿ ಎಂದು ಹಾಸದ ಯುವಕ ಮುತ್ತುವನ್ನು ನೋಡಿ ಹಾಡಬಹುದು, ಇವರು ಮಾಡಿರುವ ಸಾಹಸ ನಿಜಕ್ಕೂ ನಂಬಲು ಸಾಧ್ಯವಿಲ್ಲ, ಅದರಲ್ಲೂ ಚಿರತೆ ಕಾಲುಗಳನ್ನು ಕಟ್ಟಿ ತನ್ನ ಬೈಕ್‌ನಲ್ಲಿ ತೆಗೆದುಕೊಂಡ ವೀಡಿಯೋವಂತೂ ಸಿಕ್ಕಾಪಟ್ಟೆ ವೈರಲ್ ಆಗಿದೆ. ಈ ವೀಡಿಯೋ ನೋಡಿ ಇದೇನೂ ಹೀಗೂ ಚಿರತೆಯನ್ನು ಸೆರೆಹಿಡಿಯಬಹುದಾ? ಎಂದು ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ.
ಚಿರತೆ ಎಂಬ ಬಲಿಷ್ಠ ಪ್ರಾಣಿ ದಾಳಿ ಮಾಡಿದರೆ ಅದರಿಮದ ಪಾರಾಗುವುದು ಕಷ್ಟ, ಪಾರಾದರೆ ಅದುವೇ ದೊಡ್ಡ ವಿಷಯ, ಆದರೆ ಅದರ ಕಾಲುಗಳನ್ನು ಕಟ್ಟಿ ಅದನ್ನು ತನ್ನ ಬೈಕ್‌ನ ಹಿಂಬದಿಗೆ ಕಟ್ಟಿ ಅರಣ್ಯಾಧಿಕಾರಿಗಳಿಗೆ ಒಪ್ಪಿಸಿ ಬಂದಿದ್ದಾರೆ ಹಾಸನದ ಈ ಯುವಕ. ಇವರ ಸಾಹಸದ ಬಗ್ಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ, ಇವರು ಮಾತ್ರ ಬಹಳ ಪ್ರಾಮಾಣಿಕವಾಗಿ ನಾನು ನನ್ನ ಪ್ರಾಣ ಉಳಿಸುವ ಭಯದಿಂದ ಚಿರತೆಯನ್ನು ಕಟ್ಟಿ ಹಾಕುವ ಸಾಹಸ ಮಾಡಿದೆ ಎಂದು ಹೇಳಿದ್ದಾರೆ.

ಹೌದು ಒಂದು ಮಾತಿದೆ ಬೆಕ್ಕನ್ನು ಒಂದು ಕೋಣೆಯೊಳಗೆ ಹಾಕಿ ಹೊಡೆದರೆ ತನ್ನ ಪ್ರಾಣ ರಕ್ಷಣೆಗೆ ಅದು ತಿರುಗಿ ಬೀಳುತ್ತೆ ಅಂತ, ಹಾಗಾಯ್ತು ಮುತ್ತು ಅವರ ಕತೆ, ಇವರು ಬೆಳಗ್ಗೆ ಯಾರೋ ಚಿರತೆಯಿದೆ ಎಂದು ಹೇಳುವುದು ಕೇಳಿ ಕೆಟ್ಟ ಕುತೂಹಲದಿಂದ ನೋಡೋಕೆ ಹೋಗಿದ್ದಾರೆ, ತಮ್ಮ ಹೊಲದ ಕಡೆಗೆ ಹೋದಾಗ ಮರದ ಮೇಲಿದ್ದ ಚಿರತೆ ಅವರ ಮೇಲೆ ದಾಳಿ ಮಾಡುತ್ತೆ, ಇವರಿಗೆ ಏನು ಮಾಡಬೇಕೆಂದು ಒಂದು ಕ್ಷಣ ತೋಚುವುದಿಲ್ಲ, ಹಾಗಂತ ಧೈರ್ಯಗೆಟ್ಟರೆ ಸಾವು ನಿಶ್ಚಿತ, ಸಾವು ಬದುಕಿನ ಹೋರಾಟದಲ್ಲಿ ಸಾವನ್ನೇ ಗೆಲ್ಲುವ ಮನಸ್ಸು ಮಾಡಿದ್ದಾರೆ. ತಮ್ಮ ಪ್ರಾಣವನ್ನು ರಕ್ಷಣೆ ಮಾಡಲು ಚಿರತೆಯ ಕುತ್ತಿಗೆಗೆ ಕೈ ಹಾಕಿದ್ದಾರೆ, ಅದರ ಕಾಲುಗಳನ್ನು ಗಟ್ಟಿಯಾಗಿ ಹಿಡಿದು ನಂತರ ಅಲ್ಲಿದ್ದ ಹಗ್ಗದಿಂದ ಕಟ್ಟಿ, ತಮ್ಮ ಬೈಕ್‌ನ ಹಿಂಬದಿಗೆ ಕಟ್ಟಿ ಕೊಂಡೊಯ್ಯುದ್ದು ಅರಣ್ಯಾಧಿಕಾರಿಗಳಿಗೆ ಒಪ್ಪಿಸಿದ್ದಾರೆ.
ಚಿರತೆಯನ್ನು ಬೋನ್ ಇಟ್ಟು ಅರವಳಿಕೆ ಚುಚ್ಚುಮದ್ದು ನೀಡಿ ಚಿರತೆಯನ್ನು ಹಿಡಿಯುವುದನ್ನು ನೋಡಿದ್ದೇವೆ, ಆದರೆ ಈ ಪ್ರಕರಣ ಮಾತ್ರ ಸ್ವಲ್ಪ ಭಿನ್ನವಾಗಿದೆ, ವೀಕ್ಷಕರಿಗಂತೂ ಈ ವೀಡಿಯೋ ನೋಡುವುದೇ ಮಜವಾಗಿದೆ. ಹಾಗಾಗಿ ಈ ವೀಡಿಯೋ ತುಂಬಾನೇ ವೈರಲ್ ಆಗಿದೆ. ಆತ ತನ್ನ ಪ್ರಾಣ ಕಾಪಾಡಿದ ಚಿರತೆಯ ಪ್ರಾಣಕ್ಕೂ ಏನೂ ತೊಮದರೆ ಮಾಡಿಲ್ಲ, ಹೀಗಾಗಿ ಈತನ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.



Click it and Unblock the Notifications