Latest Updates
-
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್! -
ನವರಾತ್ರಿ ಸಂಭ್ರಮ: ಅತ್ತೆ-ಮಾವಂದಿರ ಮನೆಗೆ ಹೋಗುವಾಗ ನವದಂಪತಿಗಳು ಮರೆಯದೆ ಪಾಲಿಸಬೇಕಾದ ಶಿಷ್ಟಾಚಾರಗಳಿವು! -
ದೆಹಲಿ ಮಳೆ ಅಲರ್ಟ್: ಮನೆಯಲ್ಲಿ ನೀರು ಸೋರಿಕೆ ತಡೆಯಲು 20 ನಿಮಿಷದ ಈ ಕೆಲಸ ಮಾಡಿ! -
ಮುಂಬೈನಲ್ಲಿ ಬಿಸಿಲಿನ ಅಬ್ಬರ: ಯೆಲ್ಲೋ ಅಲರ್ಟ್ ಘೋಷಣೆ, ಆರೋಗ್ಯ ಕಾಪಾಡಿಕೊಳ್ಳಲು ಈ ಕ್ರಮಗಳನ್ನು ತಪ್ಪದೇ ಪಾಲಿಸಿ -
ವಡೋದರಾದಲ್ಲಿ ವಾಯುಪಡೆ ಮುಖ್ಯಸ್ಥರ ಗರ್ಬಾ ನೃತ್ಯ: ವೈರಲ್ ವಿಡಿಯೋದಲ್ಲಿ ಸಿಂಗ್ ಅವರ ಸರಳತೆ ನೋಡಿ! -
ಚೆನ್ನೈ ಮಳೆ ಅಲರ್ಟ್: ಹೊರಗೆ ಹೋಗುವ ಬದಲು ಮನೆಯಲ್ಲೇ ಫಿಟ್ ಆಗಿರಲು ಈ 12 ನಿಮಿಷದ ವರ್ಕೌಟ್ ಟ್ರೈ ಮಾಡಿ
ಅ.24ರಿಂದ ನವೆಂಬರ್ 3ರವರೆಗೆ 24 ಗಂಟೆಯೂ ಇರಲಿದೆ ಹಾಸನಾಂಬೆಯ ದರ್ಶನ: ಪ್ರತಿವರ್ಷ ಈ ದೇವಾಲಯದಲ್ಲಿ ನಡೆಯುತ್ತೆ ಈ 2 ಪವಾಡ
ಹಾಸನದ ಹಾಸನಾಂಬೆ ದೇವಿಯ ದರ್ಶನಕ್ಕೆ ಕ್ಷಣಗಣನೆ ಪ್ರಾರಂಭವಾಗಿದೆ. ಅಕ್ಟೋಬರ್ 24ಕ್ಕೆ ದೇವಾಲಯದ ಬಾಗಿಲು ತೆರೆಯಲಾಗುವುದು ನವೆಂಬರ್ 4ರವೆರೆಗ ದೇವಿಯ ದರ್ಶನ ಪ0ಡೆಯಲು ಅವಕಾಶವಿದೆ. ವರ್ಷದಲ್ಲಿ ಒಂದು ಬಾರಿ ಮಾತ್ರ ದೇವಾಲಯದ ಬಾಗಿಲು ತೆರೆಯಲಾಗುವುದು, ಆವಾಗ ದೇವಿಯ ದರ್ಶನವನ್ನು ಭಕ್ತರು ಕಣ್ತುಂಬಿಕೊಳ್ಳಬಹುದು. ದೇವಿಯ ದರ್ಶನ ಪಡೆಯಲು ಬರುತ್ತಿರುವ ಭಕ್ತರ ಸಂಖ್ಯೆ ಹೆಚ್ಚುತ್ತಲೇ ಇದೆ.

9 ದಿನಗಳು ಹಾಸನಾಂಬೆ ದೇವಿ ಕ್ಷೇತ್ರದಲ್ಲಿ ತುಂಬಿ ತುಳುಕಲಿದ್ದಾರೆ ಭಕ್ತರು
ಅಶ್ವೀಜ ಮಾಸದ ಮೊದಲ ದಿನ ಎಲ್ಲಾ ಧಾರ್ಮಿಕ ಶಾಸ್ತ್ರಗಳನ್ನು ಪಾಲಿಸಿ ದೇವಾಲಯದ ಬಾಗಿಲು ತೆರೆಯಲಾಗುವುದು, ಹೀಗಾಗಲೇ ದೇವಾಲಯವು ಹೂವಿನಿಂದ ಅಲಂಕೃತಗೊಂಡು ಕಂಗೊಳಿಸುತ್ತಿದೆ. ಈ ವರ್ಷ 24 ಗಂಟೆಯೂ ಭಕ್ತರಿಗೆ ದೇವಿಯ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ ಅಲ್ಲದೆ ಈ ವರ್ಷ ಮಳೆಯ ಆರ್ಭಟ ಅಧಿಕವಿರುವುದರಿಂದ ಭಕ್ತರು ಮಳೆಯಿಂದ ರಕ್ಷಣೆ ಪಡೆಯಲು ಜರ್ಮನ್ ಟೆಂಟ್ ಕೂಡ ನಿರ್ಮಾಣವಾಗಿರುವುದರಿಂದ ಭಕ್ತರು ಮಳೆಯ ಆತಂಕವಿಲ್ಲದೆ ಹಾಸನಾಂಬೆ ದೇವಿಯ ದರ್ಶನ ಪಡೆಯಬಹುದು.
ವರ್ಷಕ್ಕೊಮ್ಮೆ ಮಾತ್ರ ಈ ದೇವಾಲಯದ ಬಾಗಿಲು ತೆರೆಯಲಾಗುವುದು
ವರ್ಷದ ಇನ್ಯಾವುದೇ ಸಂದರ್ಭದಲ್ಲಿ ಈ ದೇವಾಲಯದ ಬಾಗಿಲು ತೆರೆಯುವುದಿಲ್ಲ, ವರ್ಷಕ್ಕೊಮ್ಮೆ ಒಂಭತ್ತು ದಿನಗಳು ದೇವಿಯ ದರ್ಶನ ಪಡೆಯುಬಹುದು. ಈ ದಿನ ಹಾಸನಾಂಬೆಯ ಬಾಗಿಲು ತೆರೆಯದಾಗ ದೇವಿಗೆ ವಿಶೇಷ ಅಲಂಕಾರವಿರಲ್ಲ. ಎರಡನೇ ದಿನ ಜಿಲ್ಲಾ ಖಜಾನೆಯಲ್ಲಿ ಇಟ್ಟ ವಸ್ತ್ರ- ಆಭರಣಗಳನ್ನು ತಂದು ಶಾಸ್ತ್ರ ಪ್ರಕಾರ ಪೂಜೆ ಸಲ್ಲಿಸಿ ನಂತರ ದೇವಿಗೆ ನೈವೇದ್ಯ ಅರ್ಪಿಸಲಾಗುವುದು. ಅಲಂಕೃತಗೊಂಡ ದೇವಿಯನ್ನು ಕಣ್ತುಂಬಿಕೊಂಡರೆ ಸಾಕು ಅದುವೇ ನಮ್ಮ ಬದುಕಿನ ಮಹಾಭಾಗ್ಯ ಎಂಬುವುದು ಇಲ್ಲಿಗೆ ಬರುವ ಪ್ರತಿಯೊಬ್ಬ ಭಕ್ತರ ಅನಿಸಿಕೆಯಾಗಿದೆ.
ಈ ದೇವಾಲಯದ ಪವಾಡವನ್ನು ವೈಜ್ಞಾನಿಕ ವಿವರಿಸಲು ಯಾರಿಗೂ ಸಾಧ್ಯವಾಗಿಲ್ಲ, ಅದುವೇ ಇಲ್ಲಿಯ ದೇವಿಯ ಶಕ್ತಿ
ಏನೇ ಪವಾಡವಾದರೂ ಅದಕ್ಕೆ ಒಂದು ಕಾರಣ ಹೇಳಿ ಧಾರ್ಮಿಕ ನಂಬಿಕೆಗಳಿಗೆ ನೋವು ಕೊಡುವವರೂ ಇರ್ತಾರೆ, ಅಯ್ಯಪ್ಪಸ್ವಾಮಿಯ ಮಕರವಿಳಕ್ಕು ಅದು ನಕ್ಷತ್ರವಲ್ಲ ಬದಲಿಗೆ ಗುಡ್ಡದಲ್ಲಿ ಬುಡಕಟ್ಟು ಜನಾಂಗದವರು ಬೆಂಕಿ ಹಾಕುವುದು ಎಂದು ಕೆಲವರು ಬಲವಾಗಿ ವಾದಿಸುತ್ತಾರೆ, ಆದರೆ ಅಯ್ಯಪ್ಪ ಭಕ್ತರು ಮಾತ್ರ ಆ ಮಕರವಿಳಕ್ಕು ನಮ್ಮ ಅಯ್ಯಪ್ಪಸ್ವಾಮಿಯೇ ಎಂಬುವುದನ್ನು ಬಲವಾಗಿ ನಂಬುತ್ತಾರೆ.
ಹಾಸನಾಂಬೆಯ ಪವಾಡವೆಂದರೆ ಇಲ್ಲಿ ಬಾಗಿಲು ಮುಚ್ಚಿವಾಗ ಇಲ್ಲಿರುವ ದೀಪಕ್ಕೆ ಎಣ್ಣೆ , ಬತ್ತಿ ಹಾಕಿ ದೀಪ ಬೆಳಗುತ್ತಾರೆ, ಆ ದೀಪ ಒಂದು ವರ್ಷದ ಬಳಿಕ ತೆಗೆದು ನೋಡಿದರೂ ಹಾಗೆಯೇ ಉರಿಯುತ್ತಿರುತ್ತದೆ, ಹೀಗಾಗಿ ಹಾಸನಾಂಬೆಯ ಪವಾಡ ಶಕ್ತಿ ಬಗ್ಗೆ ಜನರಿಗೆ ಅಷ್ಟೊಂದು ನಂಬಿಕೆ.
ಅದು ಮಾತ್ರವಲ್ಲ ಇಲ್ಲಿರುವ ಕಲ್ಲು ಕೂಡ ಚಲಿಸುತ್ತದೆ
ಹಾಸಾನಾಂಬೆಯ ಮಹಾಭಕ್ತಿಯೆನ್ನು ಆಕೆಯ ಅತ್ತೆ ಸೊಸೆಗೆ ಹರಿತವಾದ ವಸ್ತುವಿನಿಂದ ಗಾಯಗೊಳಿಸುತ್ತಾಳೆ, ಇದರಿಂದ ರಕ್ತ ಸುರಿಯುತ್ತಾ ಆ ಭಕ್ತೆ ಹಾಸಾಂಬೆ ಬಳಿ ಬರುತ್ತಾಳೆ, ಹಾಸಾನಾಂಬೆ ಅವಳನ್ನು ಕಲ್ಲಾಗಿ ಪರಿವರ್ತಿಸಿ ತನ್ನ ಭಕ್ತೆಯನ್ನು ತನ್ನ ಬಳಿ ಇರಿಸಿಕೊಳ್ಳುತ್ತಾಳೆ. ಈ ಕಲ್ಲು ಪ್ರತಿ ವರ್ಷ ಒಂದು ಇಂಚಿಗಿಂತ ಕಡಿಮೆ ಅಳತೆಯಲ್ಲಿ ಮುಂದದೆಕ್ಕೆ ಚಲಿಸುತ್ತದೆ, ಯಾವಾಗ ಈ ಕಲ್ಲು ದೇವಿಯ ಪಾದಗಳನ್ನು ಮುಟ್ಟುವುದೋ ಆವಾಗ ಈಗ ನಡೆಯುತ್ತಿರುವ ಕಲಿಯುಗ ಅಂತ್ಯಗೊಳ್ಳಲಿದೆ ಎಂದು ಹೇಳಲಾಗುವುದು. ಇದು ಈ ದೇವಾಲಯದ ಪ್ರಮುಖ ಪವಾಡವಾಗಿದೆ.
ಈ ದಿನ ಬಾಳೆಗಿಡ ಕಡಿದು ದೃಷ್ಟಿ ನಿವಾಳಿಸಿದ ಬಳಿಕವಷ್ಟೇ ಬಾಗಿಲು ತೆಗೆಯಲಾಗುವುದು
ಹಾಸನಾಂಬೆ ಎಂಬ ದೇವಿ ಶಕ್ತಿಯ ಈ ಕ್ಷೇತ್ರದ ಬಾಗಿಲು ವರ್ಷದವರೆಗೆ ಮುಚ್ಚಿರುತ್ತದೆ, ಇದರ ಬಾಗಿಲು ಹಾಗೇ ತೆಗೆಯುವಂತಿಲ್ಲ, ಏಕೆಂದರೆ ದೇವಿಯ ಪ್ರಖರ ದೃಷ್ಟಿ ತಡೆಯುವಂಥ ಶಕ್ತಿ ಮನುಷ್ಯರಿಗಿಲ್ಲ, ಹೀಗಾಗಿ ಮೊದಲಿಗೆ ಬಾಳೆಗಿಡ ಕಡಿದು ದೃಷ್ಟಿ ತೆಗೆದ ಬಳಿಕವಷ್ಟೇ ದೇವಾಲಯದ ಬಾಗಿಲು ತೆರೆಯಲಾಗುವುದು.
ಏಕೆ ಹಾಸನಾಂಬೆಗೆ ವರ್ಷಕ್ಕೊಮ್ಮೆ ಮಾತ್ರ ಪೂಜೆ ಸಲ್ಲಿಸಲಾಗುವುದು
ಹಾಸನಾಂಬೆ ದೇವಿಯನ್ನು ವರ್ಷಕ್ಕೊಮ್ಮೆ ಮಾತ್ರ ಏಕೆ ಪೂಜಿಸುತ್ತಾರೆ ಎಂಬುವುದರ ಹಿಂದೆ ಸಪ್ತ ಮಾತೃಶ್ರೀಯರ ಕತೆಯಿದೆ. ಬ್ರಾಹ್ಮಿ, ಮಹೆಶ್ವರಿ, ಕೌಮಾರಿ, ವೈಷ್ಣವಿ, ವರಾಹಿ, ಇಂದ್ರಾಣಿ ಮತ್ತು ಚಾಮುಂಡಿ ವಿಹರಿಸುತ್ತಾ ದಕ್ಷಿಣ ಭಾರತಕ್ಕೆ ಬರುತ್ತಾರೆ, ಇಲ್ಲಿಯ ಪ್ರಕೃತಿ ಸೌಂದರ್ಯ ನೋಡಿ ಇಲ್ಲಿಯೇ ನೆಲೆಸಲು ಬಯಸುತ್ತಾರೆ. ಇವರ ಜೊತೆ ಇವರ ಸಹೋದರ ಸಿದ್ದೇಶ್ವರ ಕೂಡ ಇರುತ್ತಾನೆ, ಅವನು ಭಕ್ತರು ನೀಡಿದ ಎಲ್ಲಾ ಪ್ರಸಾದ ಸ್ವೀಕರಿಸುತ್ತಿದ್ದ, ಇದರಿಂದ ಕೋಪಗೊಂಡ ಮಾತೃಕೆಯರ ವರ್ಷಕ್ಕೊಮ್ಮೆ ಮಾತ್ರ ದರ್ಶನ ನೀಡುತ್ತೇವೆ ಎಂದು ಹೇಳಿರುವುದಾಗಿ ಪೌರಾಣಿಕ ಕತೆಯಿದೆ.



Click it and Unblock the Notifications
