Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಅಕ್ಷಯ ತೃತೀಯದಂದು ಗೃಹ ಪ್ರವೇಶ, ಆಸ್ತಿ ಖರೀದಿಯಿಂದ ಸಂಪತ್ತು ವೃದ್ಧಿಸುವುದು
ಹಿಂದೂ ಕ್ಯಾಲೆಂಡರ್ ಪ್ರಕಾರ ಅಕ್ಷಯ ತೃತೀಯವನ್ನು ತುಂಬಾ ಶ್ರೇಷ್ಠವಾದ ದಿನವೆಂದು ಪರಿಗಣಿಸಲಾಗಿದೆ. ಈ ದಿನ ಒಳ್ಲೆಯ ಕಾರ್ಯಗಳನ್ನು ಮಾಡಲು ತುಂಬಾನೇ ಶುಭ ಮುಹೂರ್ತಗಳಿರುವುದರಿಂದ ಈ ದಿನಕ್ಕೆ ತುಂಬಾನೇ ಮಹತ್ವ ನೀಡಲಾಗಿದೆ.ಅಕ್ಷಯ ತೃತೀಯ, ಧನ್‌ತೆರೇಸ್ ಈ ದಿನಗಳಲ್ಲಿ ಚಿಕ್ಕ ಹಾಗೂ ಆಸ್ತಿಯನ್ನು ಹೂಡಿಕೆ ಮಾಡಿದರೆ ಸಂಪತ್ತು ವೃದ್ಧಿಸುವುದು ಎಂ ನಂಬಿಕೆ ಜನರಲ್ಲಿದೆ.
ಹಾಗಾಗಿ ಈ ದಿನ ಸಂಪತ್ತಿನ ಹೂಡಿಕೆಯಲ್ಲಿ ಹೆಚ್ಚಿನ ಆಸಕ್ತಿ ತೋರಿಸುತ್ತಾರೆ. ಅಕ್ಷಯ ತೃತೀಯದಲ್ಲಿ ಚಿನ್ನವನ್ನು ಖರೀದಿಸಲು ಅಷ್ಟೇ ಅಲ್ಲ ನೀವು ಮನೆ ಖರೀದಿಸಲು, ಆಸ್ತಿ ಸಂಬಂಧಿಸಿದ ಪತ್ರ ವ್ಯವಹಾರ ಮಾಡಲು, ಮನೆ ಬದಲಾಯಿಸಲು, ಗೃಹ ಪ್ರವೇಶ ಇಂಥ ಕಾರ್ಯಗಳಿಗೆ ತುಂಬಾನೇ ಶುಭವಾಗಿದೆ. ಆದ್ದರಿಂದಲೇ ಹೋಂ ಡೆವಲರ್ಸ್ ಅಥವಾ ಮನೆ ಖರೀದಿಸುವವರು ಈ ಶುಭ ದಿನಕ್ಕಾಗಿ ಕಾಯುತ್ತಾರೆ. ಈ ದನ ಹೋಮ ಮಾಡಿ ಗೃಹ ಪ್ರವೇಶವಾದರೆ ತುಂಬಾನೇ ಒಳ್ಳೆಯದು ಎಂದು ವೈದಿಕ ಶಾಸ್ತ್ರದಲ್ಲಿ ಹೇಳಲಾಗಿದೆ.

ಅಕ್ಷಯ ತೃತೀಯ
ವೈಶಾಖ ಮಾಸದ ಶುಕ್ಲ ಪಕ್ಷದ ಮೂರನೇಯ ಅಕ್ಷಯ ತೃತೀಯದ ಶುಭ ದಿನ. ಈ ವರ್ಷ ಏಪ್ರಿಲ್ 22ರಂದು ಅಕ್ಷಯ ತೃತೀಯ ಆಚರಿಸಲಾಗುವುದು. ಈ ದಿನ ಆಭರಣಗಳ ಖರೀದಿಗೆ, ಮನೆ ಖರೀದಿಗೆ, ಗಾಡಿಗಳ ಖರೀದಿಗೆ ತುಂಬಾನೇ ಒಳ್ಳೆಯ ದಿನ.
ಈ ವರ್ಷ ನೀವು ಗೃಹ ಪ್ರವೇಶ ಮಾಡುವದಾದರೆ ಈ ಶುಭ ಘಳಿಗೆಯಲ್ಲಿ ಮಾಡಿ:
ಏಪ್ರಿಲ್ 22ರಂದು ಬೆಳಗ್ಗೆ 07:27ರಿಂದ 09:24ರವರೆಗೆ
ಮಧ್ಯಾಹ್ನ 01:58ರಿಂದ 03:35ರವರೆಗೆ
ಮಧ್ಯಾಹ್ನ 03:35ರಿಂದ 05:13ರವರಗೆ
ಈ ದಿನ ಪೂಜೆಗೆ ಬೆಳಗ್ಗೆ 07:49ರಿಂದ 12:21 ತುಂಬಾನೇ ಶುಭವಾಗಿದೆ.
ತೃತೀಯ ತಿಥಿ ಬೆಳಗ್ಗೆ 07:49ರಿಂದ ಪ್ರಾರಂಭವಾಗಿ ಏಪ್ರಿಲ್ 23 ಬೆಳಗ್ಗೆ 07:47ಕ್ಕೆ ಮುಕ್ತಾಯವಾಗಲಿದೆ.
ಅಕ್ಷಯ ತೃತೀಯದಂದು ಗೃಹ ಪ್ರವೇಶದ ಮಹತ್ವ
ಅಕ್ಷಯ ತೃತೀಯ ತುಂಬಾ ಶುಭ ದಿನವಾಗಿದ್ದು ಆಸ್ತಿ ಸಂಬಂಧಿಸಿದ ವ್ಯವಹಾರ ನಡೆಸಲು ಅಥವಾ ಹೊಸ ಮನೆಗೆ ಹೋಗಲು ತುಂಬಾ ಶುಭ ದಿನವಾಗಿದೆ. ಅಕ್ಷಯ ಎಂದರೆ ಸಂಸ್ಕೃತ ಅರ್ಥ ಬತ್ತದ ಅಂದರೆ ಎಂದಿಗೂ ಕಡಿಮೆಯಾಗದು. ಈ ಅಕ್ಷಯ ಮುಹೂರ್ತದಲ್ಲಿ ಗೃಹ ಪ್ರವೇಶ ಮಾಡಿಸಿದರೆ ಮನೆಯಲ್ಲಿ ಸಂಪತ್ತು ವೃದ್ಧಿಸುವುದು. ಆದ್ದರಿಂದ ಗೃಹ ಪ್ರವೇಶವನ್ನು ಅಕ್ಷಯ ತೃತೀಯದಂದು ಮಾಡಿದರೆ ತುಂಬಾ ಒಳ್ಳೆಯದು ಎಂದು ಪರಿಗಣಿಸಲಾಗಿದೆ.
ಮನೆ ಬದಲಾಯಿಸಲು ಈ ಮುಹೂರ್ತ ಶುಭವಾಗಿದೆ
ನೀವು ಮನೆ ಬದಲಾಯಿಸಬೇಕೆಂದಿದ್ದರೆ ಅದಕ್ಕೂ ಈ ಮುಹೂರ್ತ ಶುಭವಾಗಿದೆ. ಮನೆಯ ಮುಂಬಾಗಿಲಿನಲ್ಲಿ ಸ್ವಸ್ತಿಕ ಹಾಗೂ ಲಕ್ಷ್ಮಿಯ ಹೆಜ್ಜೆ ಗುರುತು ಮೂಡಿಸಿ ಹಾಲು ಉಕ್ಕಿಸಿ. ಈ ದಿನ ವಾಸ್ತು ಪೂಜೆ, ಗಣೇಶ ಪೂಜೆ, ನವಗ್ರಹ ಶಾಂತಿ ಮಾಡಿಸಲು ಶುಭ ತುಂಬಾನೇ ಶುಭ ದಿನವಾಗಿದೆ. ಈ ದಿನ ನಿಮ್ಮ ಮನೆಯ ಸಮೀಪ ನೆಲ್ಲಿಕಾಯಿ ಅಥವಾ ಮಾವಿನಹಣ್ಣಿನ ಗಿಡ ನೆಟ್ಟರೆ ಒಳ್ಳೆಯದು.
ನೀವಿರುವ ಮನೆಯ ಅಭಿವೃದ್ಧಿಗಾಗಿ ಈ ದಿನ ಏನು ಮಾಡಬೇಕು?
* ಈ ದಿನ ನೀವಿರುವ ಮನೆಯನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ
* ಹಳೆಯ ವಸ್ತುಗಳು, ಮುದಿ ವಸ್ತುಗಳನ್ನು ಮನೆಯಿಂದ ಹೊರಗಡೆ ಹಾಕಿ
* ಮನೆಯ ಮುಂಭಾಗ ಮಾವಿನ ಎಲೆಯಿಂದ ತೋರಣಕಟ್ಟಿ.
* ಶ್ರೀ ವಿಷ್ಣು ಹಾಗೂ ಲಕ್ಷ್ಮಿಯನ್ನು ತುಪ್ಪದ ದೀಪ ಹಚ್ಚಿ ಆರಾಧಿಸಿ.
* ಮನೆಯ ವಾತಾವರಣ ಶಾಂತವಾಗಿರಲಿ, ಯಾವುದೇ ಜಗಳ, ಮನಸ್ತಾಪ ಬೇಡ
* ಈ ದಿನವನ್ನು ಖುಷಿಯಿಂದ ಕಳೆಯಿರಿ.



Click it and Unblock the Notifications

