Latest Updates
-
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್!
ಕಾರವಾರ ಜನತೆಗೆ ಪ್ರಾಣಭಯದ ಆತಂಕ ಮೂಡಿಸಿದ ರಣಹದ್ದು: ಅಷ್ಟಕ್ಕೂ ಆಗಿದ್ದೇನು?
ಅದೊಂದು ಹದ್ದು ಹಾರಿ ಬಂದು ಮನೆಗೆ ಮೇಲೆ ಕೂತಾಗ ಆ ಮನೆಯವರು ಗಮನಿಸುತ್ತಾರೆ, ಅದರ ಕಾಲಲ್ಲಿ ಟ್ಯಾಗ್, ಬೆನ್ನಲ್ಲಿ ಟ್ರಾನ್ಸ್ ಮೀಟರ್, ಮನೆ ಮಂದಿಗೆಲ್ಲಾ ಟೆನ್ಷನ್ ಶುರುವಾಯ್ತು, ಇದೇನಾದರೂ ಗೂಢಾಚಾರಿಕೆಯ ಹದ್ದಾಗಿರಬಹುದೇ?
ಇದೆಲ್ಲಾದರೂ ಬಾಂಬ್ ಮುಂತಾದ ಅಪಾಯಕಾರಿ ಸ್ಪೋಟಕ ಹೊತ್ತು ತಂದರೆ, ಅಯ್ಯೋ ಇದನ್ನು ಯಾರು ಹಾರಿಸಿ ಬಿಟ್ಟಿದ್ದಾರೆ ಎಂದು ಆತಂಕ ಪಡೆಯುವಷ್ಟರಲ್ಲಿ ಆ ಹದ್ದು ಅಲ್ಲಿಂದ ಹಾರಿ ಮತ್ತೊಂದು ಮನೆ ಮೇಲೆ ಕೂರುತ್ತೆ, ಆ ಮನೆಯವರಿಗೂ ಟೆನ್ಷನ್ ಶುರುವಾಯ್ತು, ಕ್ಷಣಾರ್ಧದಲ್ಲಿ ಆ ಸುದ್ದಿ ಆ ಊರಿಗೆಲ್ಲಾ ಹಬ್ಬಿತು, ಊರಿನಲ್ಲಿ ಹದ್ದು ಹಾರಾಡುತ್ತಿದ್ದರೆ ಎಲ್ಲರ ಮುಖದಲ್ಲಿಯೂ ಟೆನ್ಷನ್, ಈ ಗೂಢಾಚಾರಿಕೆಯ ಹದ್ದು ಇಲ್ಲಿಗ್ಯಾಕೆ ಬಂತು, ಅಯ್ಯೋ ನಮ್ಮ ಮನೆ ಮೇಲೆ ಬಿದ್ದರೆ ಗತಿಯೇನು ಎಂಬ ಆತಂಕ ಮನೆ ಮಾಡಿತು, ಇಂಥದ್ದೊಂದು ವಿಲಕ್ಷಣ ಘಟನೆಗೆ ಸಾಕ್ಷಿಯಾಗಿದ್ದು ಕಾರವಾರ.

ಟ್ರಾನ್ಸ್‌ಮೀಟರ್, ಟ್ಯಾಗ್ ಅಳವಡಿಸಿರುವ ಹದ್ದು
ಕಾರವಾರದ ಜನರಿಗೆ ಹದ್ದು ಹೊಸತಲ್ಲ, ಆದರೆ ಟ್ರಾನ್ಸ್‌ಮೀಟರ್, ಟ್ಯಾಗ್ ಅಳವಡಿಸಿರುವ ನೋಡಿದರೆ ಗೂಢಚಾರಿಕೆಯ ಹದ್ದಿನಂತೆ ಅನಿಸುವ ಇಂಥ ಹದ್ದು ಅವರು ಈ ಹಿಂದೆ ಎಲ್ಲಿಯೂ ನೋಡಿರಲಿಲ್ಲ, ಅಲ್ಲದೆ ಬಾಂಬ್ ಸ್ಪೋಟ ಮುಂತಾದ ವಿಷಯಗಳು ಕೇಳಿ ಬರುತ್ತಿರುತ್ತದೆ, ಯಾವುದೋ ದುಷ್ಕರ್ಮಿಗಳ ಕಣ್ಣು ನಮ್ಮ ಕಾರಾವಾರದ ಮೇಲೆ ಬಿತ್ತಾ? ಇಲ್ಲಿಗೆ ಇದು ವಿನಾಶ ಉಂಟು ಮಾಡಲು ಬಂತೇ ಎಂದು ಅಲ್ಲಿದ್ದವರಿಗೆ ಆತಂಕ. ಹದ್ದು ಎಲ್ಲಾದರೂ ಟೈಂ ಬಾಂಬ್ ರೀತಿ ಏನಾದರು ತಂದು ಹಾಕಿದರೆ?
ಪೊಲೀಸರೂ ಬಂದರು
ವಿಷಯವನ್ನು ಪೊಲೀಸರಿಗೂ ತಿಳಿಸಲಾಯ್ತು, ಇದನ್ನು ನಮ್ಮ ಶತ್ರು ದೇಶದವರೇ ಬಿಟ್ಟಿರಬಹುದು ಎಂದು ಜನರು ಮಾತನಾಡಿಸಲಾರಂಭಿಸಿದರು. ಪೊಲೀಸರು ಜೊತೆಗೆ ಅರಣ್ಯ ಇಲಾಖೆಯೂ ಕೈ ಜೋಡಿಸಿತು, ಆವಾಗ ತಿಳಿದು ಬಂದಿದ್ದು ಈ ಹದ್ದನ್ನು ಶತ್ರು ದೇಶದವರು ಬಿಟ್ಟಿದ್ದಲ್ಲ, ಬಾಂಬೆಯ ರಿಸರ್ಚ್ ಸೆಂಟರ್ ಈ ರಣಹದ್ದಿಗೆ ಜಿಪಿಎಸ್ ಕಟ್ಟಿ ಹಾರಲು ಬಿಟ್ಟಿತ್ತು, ಹದ್ದುಗಳ ಬಗ್ಗೆ ಹೆಚ್ಚಿನ ಅಧ್ಯಯನ ನಡೆಸುವ ಉದ್ದೇಶದಿಂದ ಈ ರೀತಿ ಮಾಡಲಾಗಿತ್ತು, ಈ ವಿಷಯ ತಿಳಿಯುತ್ತಿದ್ದಂತೆ ಜನ ನಿಟ್ಟುಸಿರು ಬಿಟ್ಟರು.
ಈಗ ಯಾವ ಚಿಕ್ಕ ವಿಷಯವನ್ನು ನಿರ್ಲಕ್ಷ್ಯ ಮಾಡುವಂತಿಲ್ಲ ಅಲ್ವೇ?
ಗ್ರಾಹಕನ ಸೋಗಿನಲ್ಲಿ ಬಂದು ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಪೋಟಿಸಿರುವ ಘಟನೆ ನಡೆದು ತುಂಬಾ ದಿನಗಳಾಗಿಲ್ಲ, ಅಂಥದ್ದರಲ್ಲಿ ಹದ್ದು ಜಿಪಿಎಸ್ ಕಟ್ಟಿ ಬಂದು ಒಂದೇ ಪ್ರದೇಶದಲ್ಲಿ ಹಾರಾಡುತ್ತಿದ್ದರೆ ಆತಂಕ ಪಡದೆ ಇರಲು ಸಾಧ್ಯನಾ? ಸಂಶಾಯಸ್ಪದವಾಗಿ ಏನೇ ಕಂಡು ಬಂದರೂ ತಕ್ಷಣ ಪೊಲೀಸ್ ಇಲಾಖೆಗೆ ತಲುಪಿಸುವುದು ನಮ್ಮ ಕರ್ತವ್ಯ.
ಎರಡು ವರ್ಷದ ಹಿಂದೆ ಕೊಡಗಿನಲ್ಲಿಯೂ ಜನ ಭಯ ಬಿದ್ದು ನಂತರ ನಿರಾಳವಾದ ಕತೆಯಿದೆ
ಬೆಳಗ್ಗೆ ಒಂದು ಲಾರಿ ಹೋಗುತ್ತೆ, ಅದು ಹೋದ ದಾರಿಯಲ್ಲಿ ಏನೋ ಕೆಂಪು ದ್ರವ ಸ್ವಲ್ಪ ಬೀಳುತ್ತಾ ಹೋಗುತ್ತದೆ, ಸ್ವಲ್ಪ ಹೊತ್ತಿನಲ್ಲಿ ಜನರಿಗೆ ಕೆಮ್ಮು, ಮೆಣಸಿನ ಪುಡಿ ಒಲೆಗೆ ಹಾಕಿದಾಗ ಬರುವಂಥ ಘಾಟು, ಎಲ್ಲರೂ ಕೆಮ್ಮಲಾರಂಭಿಸುತ್ತಾರೆ, ಆ ದಾರಿಯಲ್ಲಿ ಹೋದ ಬಸ್‌ನಲ್ಲಿದ್ದ ಪ್ರಯಾಣಿಕರು, ಇತರ ಗಾಡಿಗಳಲ್ಲಿ ಇದ್ದ ಪ್ರಯಾಣಿಕರು, ರಸ್ತೆ ಬದಿಯಲ್ಲಿ ನಿಂತಿದ್ದವರು ಎಲ್ಲರೂ ಕೆಮ್ಮಲಾರಂಭಿಸುತ್ತಾರೆ. ಜನರಿಗೆ ಅದೇನಾದರೂ ವಿಷಕಾರಿ ಅನಿಲವಾಗಿರಬಹುದೇ ಎಂಬ ಆತಂಕ, ಕೂಡಲೇ ಪೊಲೀಸರಿಗೆ ವಿಷಯ ತಿಳಿಸಲಾಗಿ ಆ ಗಾಡಿಯನ್ನು ಕುಟ್ಟ ಬಳಿ ನಿಲ್ಲಿಸಿ ಪರಿಶೀಲಿಸಿದಾಗ ಅದು ಕೆಂಪು ಮೆಣಸಿನ ಪೇಸ್ಟ್ ತುಂಬಾ ಹೋಗುತ್ತಿದ್ದ ಲಾರಿ ಆಗುತ್ತು, ಮೆಣಸಿನ ದ್ರವ ರಸ್ತೆ ಮೇಲೆ ಬಿದ್ದು ಜನರು ಕೆಮ್ಮಿ-ಕೆಮ್ಮು ಸುಸ್ತಾಗುವಂಥ ಘಾಟು ಉಂಟು ಮಾಡಿತ್ತು, ಜನ ಕಷ್ಟಪಟ್ಟರೂ ಅಬ್ಬಾ ನಾವು ಉಸಿರಾಡಿದ್ದು ವಿಷ ಅನಿಲ ಅಲ್ಲಲ್ಲ ಎಂದು ಸಮಧಾನ ಪಟ್ಟರು.



Click it and Unblock the Notifications
