Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಪಾಕ್‌ನಲ್ಲಿದೆ ಮನಮೋಹನ್ ಸಿಂಗ್ ಹೆಸರಿನ ಸರ್ಕಾರಿ ಶಾಲೆ..! ಈ ಕಥೆ ನಿಮಗೆ ಗೊತ್ತಾ?
ಮನಮೋಹನ್ ಸಿಂಗ್ ಈ ದೇಶ ಕಂಡ ಅತ್ಯಂತ ಶ್ರೇಷ್ಠ ಆರ್ಥಿಕ ತಜ್ಞ ಹಾಗೂ ಮಾಜಿ ಪ್ರಧಾನಿ ಎಂಬುದು ಈಗಾಗಲೇ ಸಾಬೀತಾಗಿದೆ. ಅವರ ನೀತಿಗಳು, ಸುಧಾರಣಾ ಯೋಜನೆಗಳು ಇಂದಿಗೂ ಪ್ರಸ್ತುತವಾಗಿವೆ. ಅವರ ಕಾಲದಲ್ಲಿಯೇ ಭಾರತ ಅತೀ ಹೆಚ್ಚಿನ ಆರ್ಥಿಕ ಅಭಿವೃದ್ಧಿ ಹೊಂದಿದ್ದು ಎಂಬುದನ್ನು ದೇಶ ಕಂಡಿದೆ.
ಆದರೆ ಅವರು ಗುರುವಾರ ನಿಧನರಾಗಿದ್ದಾರೆ. 1932 ಸೆಪ್ಟೆಂಬರ್ 26ರಂದು ಅವಿಭಜಿತ ಪಂಜಾಬ್ ಪ್ರಾಂತ್ಯದಲ್ಲಿ ಜನಿಸಿದರು. ದೇಶ ವಿಭಜನೆಯ ಬಳಿಕ ಅವರು ಭಾರತಕ್ಕೆ ಬಂದು ನೆಲೆಸಿದ್ದರು. ಓದಿನಲ್ಲಿ ಮುಂದಿದ್ದ ಅವರು ಮುಂದೊಂದು ದಿನ ಭಾರತದ ಅರ್ಥ ವ್ಯವಸ್ಥೆಯನ್ನು ಸರಿದಾರಿಗೆ ತರುವಂತಹ ಹಲವು ನೀತಿಗಳ ಜಾರಿ ಮಾಡುವವರು ಎಂದು ತಿಳಿದಿರಲಿಲ್ಲ. ಹಾಗೆ ರಾಜ್ಯ ಸಭೆ ಪ್ರವೇಶಿಸಿ ಮಂತ್ರಿಯಾಗಿ ಅಪಾರ ಕೊಡುಗೆ ನೀಡಿದವರಾಗಿದ್ದಾರೆ.

ಆಧುನಿಕ ಭಾರತದ ಕನಸು ಕಂಡವರಲ್ಲಿ ಸಿಂಗ್ ಕೂಡ ಒಬ್ಬರಾಗಿದ್ದರು, ಅವರ ಮುನ್ನೋಟವೇ ಇಂದು ಹಲವು ನೀತಿ ರೂಪಿಸಲು ನೆರವಾಗಿವೆ. ಹಾಗೆ ಭಾರತದ ಆರ್ಥಿಕತೆಗೆ ಅವರು ತೋರಿಸಿರುವ ದಾರಿ ಸರಿಯಾದ ರೂಪದಲ್ಲಿದೆ.
ಪಾಕ್‌ನಲ್ಲಿದೆ ಡಾ.ಮನಮೋಹನ್ ಸಿಂಗ್ ಸರ್ಕಾರಿ ಶಾಲೆ
ಅವಿಭಜಿತ ಪಂಜಾಬ್‌ನಲ್ಲಿ ಸಿಂಗ್ ಜನಿಸಿದ್ದರು. ಅವರ ಜನನ ಸ್ಥಳ ಸದ್ಯ ಈಗ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿದೆ. ದೇಶ ವಿಭಜನೆಯ ಸಮಯದಲ್ಲಿ ಅವರು ಭಾರತಕ್ಕೆ ಬಂದು ನೆಲೆಸಿದ್ದರು. ಗಾಹ್ ಗ್ರಾಮದಲ್ಲಿ ಒಂದು ಶಾಲೆ ಇತ್ತು ಅದೇ ಶಾಲೆಯಲ್ಲಿ ಮನಮೋಹನ್ ಸಿಂಗ್ ಓದಿದ್ದರು. ತಮ್ಮ ಪ್ರಾರ್ಥಮಿಕ ಶಿಕ್ಷಣ ಇದೇ ಶಾಲೆಯಲ್ಲಿ ಅವರು ಮುಗಿಸಿದ್ದರು. ಹಾಗೆ ಈ ಗ್ರಾಮದಲ್ಲಿ ಅವರು ಹುಟ್ಟಿ ಬೆಳೆದಿದ್ದರು. ಆದರೆ ಆ ಗ್ರಾಮದಲ್ಲಿ ಯಾವ ಸೌಕರ್ಯವೂ ಇರದಿದ್ದಾಗ ಅನಿವಾರ್ಯ ಕಾರಣಗಳಿಂದ ಅವರು ಅಮೃತಸರಕ್ಕೆ ವಲಸೆ ಬಂದರು.
ಆದರೆ ಅವರು ರಾಜ್ಯಸಭೆ ಪ್ರವೇಶಿಸಿ ಭಾರತದ ಪ್ರಧಾನಿಯಾದ ಬಳಿಕ ಅವರ ಹುಟ್ಟೂರಿನ ಶಾಲೆಗೆ ಅವರ ಹೆಸರು ಇಡಲಾಗಿತ್ತು. ಇಂದಿನ ಪಾಕ್‌ನಲ್ಲಿರುವ ಗಾಹ್ ಹಳ್ಳಿಯ ಈ ಸರ್ಕಾರಿ ಶಾಲೆಗೆ ಡಾ.ಮನಮೋಹನ್ ಸಿಂಗ್ ಸರ್ಕಾರಿ ಪ್ರಾಥಮಿಕ ಶಾಲೆ ಎಂಬ ನಾಮಕರಣ ಮಾಡಲಾಗಿದೆ. ಭಾರತದ ಪ್ರಧಾನಿ ಅವರ ಹೆಸರಿನಲ್ಲಿ ವಿದೇಶಿ ನೆಲದಲ್ಲಿರುವ ಮೊದಲ ಹಾಗೂ ಏಕೈಕ ಸರ್ಕಾರಿ ಶಾಲೆ ಇದಾಗಿದೆ.
ನನಸಾಗದೆ ಉಳಿದ ಸಿಂಗ್ ಕನಸು.!
ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಕನಸೊಂದು ನನಸಾಗದೆ ಉಳಿದು ಬಿಟ್ಟಿದೆಯಂತೆ. ಈ ಕುರಿತು ಕಾಂಗ್ರೆಸ್ ನಾಯಕ ರಾಜೀವ್ ಶುಕ್ಲಾ ಒಂದು ಸಂದರ್ಶನದಲ್ಲಿ ಈ ಕುರಿತು ಹೇಳಿದ್ದರು. ಮನಮೋಹನ್ ಸಿಂಗ್ ತಮ್ಮ ಬಾಲ್ಯದಲ್ಲಿ ಅಜ್ಜನನ್ನು ಕಳೆದುಕೊಂಡಿದ್ದರು. ಹಾಗೆ ಒಮ್ಮೆ ತಮ್ಮ ಹುಟ್ಟೂರಿಗೆ ಹೋಗಬೇಕು ಎಂಬ ಮಹದಾಸೆ ಹೊಂದಿದ್ದರು. ಸಿಂಗ್ ಪ್ರಧಾನಿಯಾಗಿದ್ದ ವೇಳೆ ಒಮ್ಮೆ ಪಾಕಿಸ್ತಾನಕ್ಕೆ ಭೇಟಿ ನೀಡಿ ತಮ್ಮ ಹುಟ್ಟೂರಿಗೆ ತೆರಳಬೇಕು ಎಂಬ ಆಸೆ ಹೊಂದಿದ್ದರಂತೆ. ಆದ್ರೆ ಈ ಆಸೆ ಕೊನೆಗೂ ಈಡೇರಲಿಲ್ಲ. ಆದ್ರೆ ಹಲವು ಬಾರಿ ಅವರು ಅಮೃತಸರಕ್ಕೆ ಭೇಟಿ ನೀಡದಾಗಲೆಲ್ಲ ತಮ್ಮ ಹುಟ್ಟೂರಿನ ನೆನಪು ಬರುತ್ತಿತ್ತಂತೆ, ಆಗೆಲ್ಲಾ ತಾನು ಓದಿದ್ದ ಶಾಲೆಗೆ ತೆರಳಬೇಕು ಎಂಬ ಇಂಗಿತ ವ್ಯಕ್ತಪಡಿಸುತ್ತಿದ್ದರು ಎಂದು ರಾಜೀವ್ ಶುಕ್ಲ ಒಮ್ಮೆ ಹೇಳಿದ್ದರು.



Click it and Unblock the Notifications