Latest Updates
-
ಗಣೇಶೋತ್ಸವದ ಸಂಭ್ರಮದಲ್ಲಿ ದಂಪತಿಗಳ ಜಗಳ ಬೇಡ: ಸಮಯ ಮತ್ತು ಬಜೆಟ್ ನಿರ್ವಹಣೆಗೆ ಇಲ್ಲಿದೆ ಸಿಂಪಲ್ ಪ್ಲಾನ್! -
ಗಣೇಶೋತ್ಸವ 2026: ಮಳೆಯ ನಡುವೆಯೂ ಪರಿಸರ ಸ್ನೇಹಿ ಹಬ್ಬ ಆಚರಣೆಗೆ ಇಲ್ಲಿದೆ ಸರಳ ಟಿಪ್ಸ್! -
ಪ್ಯಾಕ್ ಮಾಡಿದ ಆಹಾರದಲ್ಲಿ ಸಕ್ಕರೆ, ಉಪ್ಪು ಹೆಚ್ಚಿದ್ದರೆ ಕೆಂಪು ಲೇಬಲ್: ಸುಪ್ರೀಂ ಕೋರ್ಟ್ ಪ್ರಶ್ನೆ, ಗ್ರಾಹಕರಿಗೆ ಸಿಗುತ್ತಾ ಪರಿಹಾರ? -
ಝೊಮ್ಯಾಟೋದಲ್ಲಿ 'ಪೇ ಆನ್ ಡೆಲಿವರಿ' ಶುಲ್ಕದ ಶಾಕ್: ನಿಮ್ಮ ಬಿಲ್ ಹೆಚ್ಚಾಗುತ್ತಿದೆಯೇ? ಬಚಾವ್ ಆಗೋದು ಹೇಗೆ? -
ಗಣೇಶೋತ್ಸವದ ಮಳೆ ಮತ್ತು ದರ್ಶನದ ಕ್ಯೂ: ಆಯಾಸವಿಲ್ಲದೆ ಬಪ್ಪನ ದರ್ಶನ ಪಡೆಯಲು ಇಲ್ಲಿದೆ ಬೆಸ್ಟ್ ಟಿಪ್ಸ್! -
ಅಮಾವಾಸ್ಯೆಯ ದಿನ ಜಗಳ ಬೇಡ: ದಂಪತಿಗಳ ನಡುವಿನ ಪ್ರೀತಿ ಹೆಚ್ಚಿಸಲು ಈ ಸಂಭಾಷಣೆ ಸೂತ್ರಗಳು -
ಆರೆಂಜ್ ಅಲರ್ಟ್: ಭಾರಿ ಮಳೆಯಿಂದ ಮನೆ ರಕ್ಷಿಸಲು ಈ 5 ಟಿಪ್ಸ್ ಪಾಲಿಸಿ, ಸುರಕ್ಷಿತವಾಗಿರಿ! -
ಪ್ರೊಟೀನ್ ಪೌಡರ್ನಲ್ಲಿ ಹುಳುಗಳು! ಬಾಲಿವುಡ್ ನಟಿಯ ಆತಂಕ, ಎಫ್ಡಿಎ ತನಿಖೆ ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಟಿಪ್ಸ್ -
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ! -
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ
ಒಂದು ಕ್ಷಣ ಮೈಮರೆತರೆ ಪ್ರಾಣವೇ ಹೋಗುತ್ತೆ: 17ನೇ ವರ್ಷಕ್ಕೆ ಚಿನ್ನ ಗೆದ್ದಾಕೆಯ ದುರಂತ ಅಂತ್ಯ...!
ಜಿಮ್ ಮಾಡುವಾಗ ಎಷ್ಟು ಜಾಗರುಕರಾಗಿದ್ದರು ಸಾಲದು ಎನ್ನುವುದನ್ನು ನಾವು ನೋಡುತ್ತಾ ಬಂದಿದ್ದೇವೆ. ಹಲವು ಪ್ರಕರಣಗಳಲ್ಲಿ ಜಿಮ್ ಮಾಡುವಾಗ ವ್ಯಾಯಾಮ ಮಾಡುವಾಗ ಪ್ರಾಣ ಕಳೆದುಕೊಳ್ಳುವ ಘಟನೆಗಳು ನಡೆಯುತ್ತಲೇ ಇರುತ್ತದೆ. ಅದರಲ್ಲೂ ಭಾರ ಎತ್ತುವ ಸಂದರ್ಭದಲ್ಲಿ ಹಲವು ಭಾರಿ ದೇಹದ ಮೇಲೆ ದೊಡ್ಡ ಪ್ರಮಾಣದ ಹಾನಿಯಾಗುವುದು ವರದಿಯಾಗುತ್ತಲೇ ಇರುತ್ತದೆ.
ಇಲ್ಲಿಯೂ ಕೂಡ ಚಿನ್ನದ ಪದಕ ವಿಜೇತೆ ಪವರ್ ಲಿಫ್ಟರ್ ಒಬ್ಬಾಕೆ ಭಾರ ಎತ್ತುವಾಗ ಒಂದು ಕ್ಷಣ ಮೈಮರೆತು ಯಡವಟ್ಟು ಮಾಡಿಕೊಂಡು ಈಗ ಪ್ರಾಣವನ್ನೇ ಕಳೆದುಕೊಂಡಿದ್ದಾಳೆ. ರಾಜಸ್ಥಾನದ ಬಿಕಾನೇರ್ ಜಿಲ್ಲೆಯಲ್ಲಿ 17 ವರ್ಷದ ಚಿನ್ನದ ಪದಕ ಗೆದ್ದಿದ್ದ ಪವರ್‌ಲಿಫ್ಟರ್ ಯಷ್ಟಿಕಾ ಆಚಾರ್ಯ ತರಬೇತಿ ವೇಳೆ ಕುಸಿದು ಬಿದ್ದು ಮೃತಪಟ್ಟಿದ್ದಾರೆ.

ಆಕೆ ತರಬೇತಿ ನಡೆಸುವಾಗ ಬರೋಬ್ಬರಿ 270 ಕೆ.ಜಿ ತೂಕವನ್ನು ಎತ್ತುವ ಸಂದರ್ಭದಲ್ಲಿ ಈ ಅಚಾತುರ್ಯ ನಡೆದಿದೆ. ಆಕೆಯ ಕುತ್ತಿಗೆಯ ಮೇಲೆ ಇಡೀ ಭಾರ ಬಿದ್ದ ಕಾರಣ ಆಕೆ ಮೃತಪಟ್ಟಿದ್ದಾಳೆ ಎಂದು ತಿಳಿದುಬಂದಿದೆ. ಹಾಗೆ ತರಬೇತಿ ನೀಡುತ್ತಿದ್ದ ಕೋಚ್‌ಗೂ ಕೂಡ ಗಾಯವಾಗಿದೆ.
ಆಗಿದ್ದೇನು?
ತರಬೇತಿಯಾಗಿ ಆಕೆ ತೂಕವನ್ನು ಎತ್ತುವ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಆಕೆ 270 ಕೆ.ಜಿ ತೂಕದ ರಾಡ್ ಎತ್ತುವಾಗ ಆಕೆಗೆ ಕೋಚ್ ಸಹಾಯ ಮಾಡುತ್ತಿರುವುದು ವಿಡಿಯೋದಲ್ಲಿ ನೋಡಬಹುದು. ಆದರೆ ಆಕೆ ಒಮ್ಮೆ ಈ ಭಾರದ ರಾಡ್ ಅನ್ನು ತನ್ನ ತಲೆಯ ಮೇಲೆ ಎತ್ತಿ ಹಿಡಿಯುವ ಸಂದರ್ಭದಲ್ಲಿ ಆಯತಪ್ಪದ್ದಾಳೆ. ಇದರಿಂದ ಭಾರವಾದ ರಾಡ್ ಆಕೆಯ ಕುತ್ತಿಗೆ ಮೇಲೆ ಬಿದ್ದಿದೆ. ಆಕೆ ಕೂಡ ಕುಸಿದುಬಿದ್ದಿದ್ದಾಳೆ. ಕೋಚ್‌ಗೂ ಗಾಯವಾಗಿದೆ.
270 ಕೆ.ಜಿ ಕೂಕದ ರಾಡ್ ಕುತ್ತಿಗೆ ಮೇಲೆ ಬಿದ್ದ ಪರಿಣಾಮ ಆಕೆಯ ಕುತ್ತಿಗೆ ಮುರಿದಿದೆ. ತಕ್ಷಣ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ ಕುತ್ತಿಗೆ ಮುರಿದ ಕಾರಣದಿಂದಾಗಿ ಸ್ಪೈನಲ್ ಕಾರ್ಡ್ ಫೈಲ್ಯೂರ್ ಆಗಿ ಮೃತಪಟ್ಟಿರುವುದಾಗಿ ತಿಳಿದುಬಂದಿದೆ. ಆಕೆ ಆಸ್ಪತ್ರೆ ಬರುವ ಮುನ್ನವೇ ಮೃತಪಟ್ಟಿರುವುದಾಗಿ ವೈದ್ಯರು ಹೇಳಿದ್ದಾರೆ.
ಯಷ್ಟಿಕಾ ಆಚಾರ್ಯ ವೇಯ್ಟ್ ಲಿಫ್ಟಿಂಗ್‌ನಲ್ಲಿ ಸಾಧನೆ ಮಾಡುವ ಕನಸು ಕಂಡಿದ್ದರು. ಹಾಗೆ ಜೂನಿಯರ್ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗೆದ್ದಿದ್ದರು. ಗೋವಾದಲ್ಲಿ ನಡೆದ 33ನೇ ರಾಷ್ಟ್ರೀಯ ಬೆಂಚ್ ಪ್ರೆಸ್ ಚಾಂಪಿಯನ್‌ಶಿಪ್‌ನಲ್ಲಿ ಯಷ್ಟಿಕಾ ಚಿನ್ನ ಮತ್ತು ಕ್ಲಾಸಿಕ್ ವಿಭಾಗದಲ್ಲಿ ಬೆಳ್ಳಿ ಪದಕ ಗೆದ್ದುಕೊಂಡಿದ್ದರು. ಆದ್ರೆ ಈಗ ಅವರ ಕ್ರೀಡಾ ಸಾಧನೆಯ ಕನಸುಗಳು ಕಮರಿವೆ, ಆಕೆ ಪ್ರಾಣವನ್ನೇ ಕಳೆದುಕೊಂಡಿದ್ದಾಳೆ.
ಸಾವಿನಿಂದ ಪಾರಾಗಿದ್ದ ವ್ಯಕ್ತಿ
ಕಳೆದೊಂದು ವಾರದ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತಿಯೋರ್ವ ಜಿಮ್ ಮಾಡುವಾಗ ಆತನ ಕುತ್ತಿಗೆ ಮೇಲೆ ಭಾರ ಬೀಳುವ ವಿಡಿಯೋ ವೈರಲ್ ಆಗಿತ್ತು. ಆತ ಪ್ರಾಣಾಪಾಯದಿಂದ ಪಾರಾಗಿದ್ದ. ಆತ ಮಲಗಿ ಭಾರ ಎತ್ತಲು ಮುಂದಾದಾದ ಅದು ಸಾಧ್ಯವಾಗಲಿಲ್ಲ. ಆತ ವಾಪಾಸು ಇಡಲು ಕಷ್ಟಪಡುವಾಗ ಯುವತಿ ಆಕೆಯ ಸಹಾಯಕ್ಕೆ ಬಂದಿದ್ದಾಳೆ. ಆದ್ರೆ ಆಕೆ ಕೈಯಿಂದ ಈ ಭಾರ ಎತ್ತಲು ಸಾಧ್ಯವಾಗದೇ ಇದ್ದಾಗ ಆತನ ಕುತ್ತಿಗೆಯ ಮೇಲೆ ಬಿದ್ದಿದೆ. ಆದ್ರೆ ಆತ ಪ್ರಾಣಾಪಾಯದಿಂದ ಕೂದಲು ಎಳೆ ಅಂತರದಲ್ಲಿ ಪಾರಾಗಿದ್ದಾನೆ.



Click it and Unblock the Notifications
