Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
Ganesh Chaturthi 2025: ಈ 10 ಪಾವನ ಕಾರ್ಯ ಮಾಡಿ.. ಮನೆ ತುಂಬಾ ಖುಷಿ, ಐಶ್ವರ್ಯ ಹರಿದುಬರುತ್ತೆ
ಈ ವರ್ಷದ ಗಣೇಶ ಹಬ್ಬದಲ್ಲಿ ಈ 10 ಕೆಲಸಗಳನ್ನು ಮಾಡಿ. ಮನೆಯಲ್ಲಿ ಸಂತೋಷ ತುಂಬುತ್ತದೆ. ಹೌದು, ಗಣೇಶ ಚತುರ್ಥಿ ಹಬ್ಬವು (Ganesh Chaturthi 2025) ಸಂತೋಷ, ಸಮೃದ್ಧಿ ಮತ್ತು ಸಕಾರಾತ್ಮಕ ಶಕ್ತಿಯನ್ನು ಮನೆಗೆ ತರುತ್ತದೆ. ಈ ಹಬ್ಬವನ್ನು ವಿಶೇಷವಾಗಿಸಲು ಮತ್ತು ಗಣೇಶನ ಆಶೀರ್ವಾದ ಪಡೆಯಲು ಈ 10 ಕೆಲಸಗಳನ್ನು ಮಾಡುವುದು ಶುಭವೆಂದು ಪರಿಗಣಿಸಲಾಗಿದೆ. ಈ ಸರಳ ಸಲಹೆಗಳನ್ನು ಅಳವಡಿಸಿಕೊಳ್ಳುವ ಮೂಲಕ ಗಣಪತಿಯನ್ನು ಒಲಿಸಿಕೊಳ್ಳುವುದಲ್ಲದೆ, ನಿಮ್ಮ ಮನೆಯಲ್ಲಿ ಸಂತೋಷ ಮತ್ತು ಪ್ರೀತಿಯ ವಾತಾವರಣವನ್ನು ಸೃಷ್ಟಿಸಬಹುದು.
1. ಶುಚಿತ್ವ ಮತ್ತು ಅಲಂಕಾರ
ಗಣೇಶ ಹಬ್ಬದ ಮೊದಲು ನಿಮ್ಮ ಮನೆಯನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಿ. ಮನೆಯ ಶುಚಿಯು ನಕಾರಾತ್ಮಕ ಶಕ್ತಿಯನ್ನು ದೂರ ಮಾಡಿ ಗಣಪತಿಯ ಕೃಪೆಗೆ ಪಾತ್ರರಾಗಲು ಸಹಕಾರಿ. ಪೂಜಾ ಸ್ಥಳವನ್ನು ಬಣ್ಣಬಣ್ಣದ ಹೂವುಗಳು ಮತ್ತು ದೀಪಗಳಿಂದ (ವಿದ್ಯುತ್ ದೀಪಗಳು) ಅಲಂಕರಿಸಿ. ಇದು ಮನೆಯ ಸೌಂದರ್ಯವನ್ನು ಹೆಚ್ಚಿಸುವುದರ ಜೊತೆಗೆ ಧನಾತ್ಮಕ ಶಕ್ತಿಯನ್ನು ಹರಡುತ್ತದೆ.
2. ಪರಿಸರ ಸ್ನೇಹಿ ಗಣೇಶ ವಿಗ್ರಹ ಅಥವಾ ಮೂರ್ತಿ
ಈ ಬಾರಿ ಪರಿಸರ ಸ್ನೇಹಿ ಮತ್ತು ಮಣ್ಣಿನ ಗಣಪತಿ ಮೂರ್ತಿಯನ್ನು ಬಳಸಿ. ಇದು ಪರಿಸರವನ್ನು ರಕ್ಷಿಸುವುದಲ್ಲದೆ, ಗಣಪತಿ ಪೂಜೆಯನ್ನು ಇನ್ನಷ್ಟು ಪವಿತ್ರಗೊಳಿಸುತ್ತದೆ. ಮೂರ್ತಿ ವಿಸರ್ಜನೆಯ ನಂತರ ನದಿ, ಕೆರೆ ಅಥವಾ ಕೊಳಗಳು ಕಲುಷಿತಗೊಳ್ಳುವುದಿಲ್ಲ.

3. ವಿಶೇಷ ನೈವೇದ್ಯ ಮತ್ತು ಪ್ರಸಾದ
ಈ ದಿನ ಗಣೇಶನಿಗೆ ಪ್ರಿಯವಾದ ನೈವೇದ್ಯವನ್ನು ಅರ್ಪಿಸಿ. ಮೋದಕ, ಲಡ್ಡುಗಳು ಮತ್ತು ತಾಜಾ ಹಣ್ಣುಗಳು ಪ್ರಸಾದದಲ್ಲಿ ಇರಲಿ. ಇದರಿಂದ ಗಣೇಶನು ಸಂತುಷ್ಟನಾಗಿ ನಿಮಗೆ ಸಮೃದ್ಧಿ ನೀಡುತ್ತಾನೆ. ಮನೆಯಲ್ಲಿ ಸುಖ-ಸಮೃದ್ಧಿ ನೆಲೆಸುತ್ತದೆ. ಇಡೀ ಕುಟುಂಬದೊಂದಿಗೆ ಸೇರಿ ಇದನ್ನು ತಯಾರಿಸುವುದರಿಂದ ಒಗ್ಗಟ್ಟು ಮತ್ತು ಸಂತೋಷದ ವಾತಾವರಣ ನಿರ್ಮಾಣವಾಗುತ್ತದೆ.
4. ಬಪ್ಪನಿಗೆ ಪೂಜೆ ಮತ್ತು ಆರತಿ
ನಿತ್ಯವೂ ಭಕ್ತಿಭಾವದಿಂದ ಪೂಜೆ ಮತ್ತು ಆರತಿಯನ್ನು ಮಾಡಿ. ಗಣಪತಿಯ ಮುಂದೆ ಭಕ್ತಿಪೂರ್ವಕವಾಗಿ ಪ್ರಾರ್ಥಿಸಿ. ಭಜನೆ ಮತ್ತು ಆರತಿಯು ಮನೆಯ ವಾತಾವರಣವನ್ನು ಪವಿತ್ರಗೊಳಿಸಿ ಶಾಂತಿಯನ್ನು ತರುತ್ತದೆ. ಆರತಿಯ ಸಮಯದಲ್ಲಿ ಇಡೀ ಕುಟುಂಬದ ಸದಸ್ಯರು ಸೇರುವುದು ಸಂಬಂಧಗಳನ್ನು ಗಟ್ಟಿಗೊಳಿಸುತ್ತದೆ. ಮತ್ತು ಮನೆಯಲ್ಲಿ ಪ್ರೀತಿಯನ್ನು ಹೆಚ್ಚಿಸುತ್ತದೆ.
5. ದಾನ ಮತ್ತು ಸಹಾಯ
ಗಣೇಶ ಚತುರ್ಥಿಯಂದು ಅಗತ್ಯವಿರುವವರಿಗೆ ಸಹಾಯ ಮಾಡುವುದು ಬಹಳ ಶುಭ ಅಥವಾ ಮಂಗಳಕರ ಎಂದು ಪರಿಗಣಿಸಲಾಗಿದೆ. ಬಡವರು ಅಥವಾ ನಿರ್ಗತಿಕರಿಗೆ ಆಹಾರ, ಬಟ್ಟೆ ಅಥವಾ ಪುಸ್ತಕಗಳನ್ನು ದಾನ ಮಾಡಬಹುದು. ಇದರಿಂದ ಗಣೇಶನ ವಿಶೇಷ ಕೃಪೆಯು ಮನೆಯಲ್ಲಿ ನೆಲೆಸುತ್ತದೆ. ಮತ್ತು ನಿಮಗೆ ಆತ್ಮ ಸಂತೋಷ (ಆಂತರಿಕ ಸಂತೃಪ್ತಿ) ಸಿಗುತ್ತದೆ.
6. ಕುಟುಂಬ ಮತ್ತು ಸ್ನೇಹಿತರೊಂದಿಗೆ ಸಮಯ ಕಳೆಯಿರಿ
ಹಬ್ಬದ ನಿಜವಾದ ಆನಂದ ಕುಟುಂಬ ಮತ್ತು ಸ್ನೇಹಿತರ ಜೊತೆಗಿನ ಕ್ಷಣಗಳಲ್ಲಿದೆ. ಈ ದಿನ ಒಟ್ಟಾಗಿ ಪೂಜೆ, ಪ್ರಸಾದ (ಭೋಗ) ಮತ್ತು ಆಟಗಳಲ್ಲಿ ಪಾಲ್ಗೊಳ್ಳಿ. ಇದು ಕೇವಲ ಸಂತೋಷವನ್ನು ಹೆಚ್ಚಿಸುವುದಲ್ಲದೆ, ಮನೆಯಲ್ಲಿ ಪ್ರೀತಿ ಮತ್ತು ಐಕ್ಯತೆಯ (ಏಕತೆ) ವಾತಾವರಣವನ್ನು ಸೃಷ್ಟಿಸುತ್ತದೆ.
7. ಹೊಸ ಕಲಿಕೆ ಅಥವಾ ಕೆಲಸ ಪ್ರಾರಂಭಿಸಿ
ಗಣೇಶನನ್ನು ಬುದ್ಧಿ ಮತ್ತು ಜ್ಞಾನದ ಅಧಿಪತಿ ಎಂದು ಕರೆಯಲಾಗುತ್ತದೆ. ಈ ದಿನ ಯಾವುದೇ ಹೊಸ ಕೆಲಸ ಅಥವಾ ಪ್ರಾಜೆಕ್ಟ್ (ಯೋಜನೆ) ಪ್ರಾರಂಭಿಸುವುದು ಶುಭ ಎಂದು ಪರಿಗಣಿಸಲಾಗಿದೆ. ಇದರಿಂದ ನಿಮ್ಮ ಪ್ರಯತ್ನಗಳು ಯಶಸ್ವಿಯಾಗುತ್ತವೆ. ಜೊತೆಗೆ ಮನೆಯಲ್ಲಿ ಸಕಾರಾತ್ಮಕ ಶಕ್ತಿ ನೆಲೆಸುತ್ತದೆ.
8. ಭಜನೆ ಮತ್ತು ಸಂಗೀತ ಕಾರ್ಯಕ್ರಮ ಆಯೋಜಿಸಿ
ಗಣೇಶನ ಭಕ್ತಿಗೀತೆಗಳು ಮತ್ತು ಭಜನೆಗಳನ್ನು ಹಾಡಿ ಮನೆಯಲ್ಲಿ ಸಂತೋಷದ ವಾತಾವರಣವನ್ನು ಸೃಷ್ಟಿಸಿ. ಇಡೀ ಕುಟುಂಬದೊಂದಿಗೆ ಭಜನೆಗಳ ಆನಂದವನ್ನು ಸವಿಯಬಹುದು. ಇದರಿಂದ ಗಣೇಶನ ಆಶೀರ್ವಾದ ದೊರೆಯುತ್ತದೆ ಮತ್ತು ಮಕ್ಕಳಿಗೆ ಧರ್ಮದ ಬಗ್ಗೆ ಆಸಕ್ತಿ ಹೆಚ್ಚುತ್ತದೆ.
9. ಗಣಪತಿ ಮಂಟಪದಲ್ಲಿ ದೀಪ ಮತ್ತು ಹೂವಿನ ಅಲಂಕಾರ
ಪೂಜಾ ಸ್ಥಳವನ್ನು (ಪೂಜಾ ಮಂಟಪ) ಬಣ್ಣಬಣ್ಣದ ಹೂವುಗಳು ಮತ್ತು ದೀಪಗಳಿಂದ ಅಲಂಕರಿಸಿ. ಇದರಿಂದ ಪೂಜಾ ಸ್ಥಳವು ಆಕರ್ಷಕವಾಗಿ ಕಾಣುತ್ತದೆ. ಮನೆಯಲ್ಲಿ ಧನಾತ್ಮಕ ಶಕ್ತಿ ಹರಡುತ್ತದೆ. ದೀಪಗಳು ಮತ್ತು ಹೂವುಗಳ ಸುಗಂಧವು ಮನೆಯಲ್ಲಿ ಸಂತೋಷದ ಭಾವನೆಯನ್ನು ತರುತ್ತದೆ.
10. ಧ್ಯಾನ ಮತ್ತು ಮಾನಸಿಕ ಶಾಂತಿ
ಪೂಜೆಯ ನಂತರ ಸ್ವಲ್ಪ ಸಮಯ ಧ್ಯಾನ ಅಥವಾ ಪ್ರಾರ್ಥನೆ ಮಾಡಿ. ಇದು ಮನಸ್ಸನ್ನು ಶಾಂತಗೊಳಿಸುತ್ತದೆ. ಮನೆಯಲ್ಲಿ ಶಾಂತಿ ಸಮಾಧಾನದ ವಾತಾವರಣವನ್ನು ಸೃಷ್ಟಿಸುತ್ತದೆ. ಇದು ನಿಮ್ಮ ಜೀವನದಲ್ಲಿ ಮಾನಸಿಕ ಸಮತೋಲನ ಮತ್ತು ಸಕಾರಾತ್ಮಕತೆಯನ್ನು ತರುತ್ತದೆ.
ಈ ಸರಳ ಕ್ರಮಗಳನ್ನು ಅನುಸರಿಸುವ ಮೂಲಕ, ನೀವು ಗಣೇಶನನ್ನು ಸಂತುಷ್ಟಗೊಳಿಸಬಹುದು. ಇದರಿಂದ ನಿಮ್ಮ ಮನೆಯಲ್ಲಿ ಸಂತೋಷ ಮತ್ತು ಪ್ರೀತಿಯ ವಾತಾವರಣ ಸೃಷ್ಟಿಯಾಗಲಿದೆ.



Click it and Unblock the Notifications
