Latest Updates
-
ಕೋಲ್ಕತ್ತಾದಲ್ಲಿ ಕಳಪೆ ಗಾಳಿ: ವಾಕಿಂಗ್ ಹೋಗುವ ಮುನ್ನ ಈ ಸುರಕ್ಷಿತ ಸಮಯ ಮತ್ತು ಮಾರ್ಗಗಳನ್ನು ತಪ್ಪದೇ ತಿಳಿಯಿರಿ -
ಎಆರ್ ರಹಮಾನ್ ಬೆಂಗಳೂರು ಕಾನ್ಸರ್ಟ್: ಮೆಟ್ರೋ ಟೈಮಿಂಗ್ಸ್ ಮತ್ತು ಸುರಕ್ಷಿತವಾಗಿ ಮನೆ ಸೇರಲು ಇಲ್ಲಿದೆ ಪಕ್ಕಾ ಪ್ಲಾನ್! -
ಮುಂಬೈನಲ್ಲಿ 10% ನೀರು ಕಡಿತ: ನೀರಿನ ಅಭಾವ ಎದುರಿಸಲು ಮತ್ತು ಉಳಿತಾಯ ಮಾಡಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ಹಬ್ಬದ ಸಿಹಿ ಖರೀದಿಸುವ ಮುನ್ನ ಎಚ್ಚರ! FSSAI ದಾಳಿ: ಕಳಪೆ ಖೋವಾ, ಪನ್ನೀರ್ ಪತ್ತೆ ಹೇಗೆ? -
ಭಾರತ vs ಪಾಕಿಸ್ತಾನ ಏಷ್ಯನ್ ಗೇಮ್ಸ್ ಫೈನಲ್: ಹೈ-ವೋಲ್ಟೇಜ್ ಕದನಕ್ಕೆ ಸಜ್ಜಾಗಿ, ಲೈವ್ ವೀಕ್ಷಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ಮುಂಬೈನಲ್ಲಿ ಕಲುಷಿತ ಗಾಳಿ: ವಾಕಿಂಗ್ ಹೋಗುವ ಮುನ್ನ ಈ ಎಚ್ಚರಿಕೆ ವಹಿಸಿ, ಇಲ್ಲದಿದ್ದರೆ ಆರೋಗ್ಯಕ್ಕೆ ಕುತ್ತು! -
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ!
ಸಿಎ ಪರೀಕ್ಷೆ ಪಾಸ್ ಆದ ತರಕಾರಿ ಮಾರುತ್ತಿದ್ದ ತಾಯಿಯ ಮಗ: ತಬ್ಬಿ ಮುದ್ದಾಡಿದ ಅಮ್ಮ
ಮಕ್ಕಳು ಒಳ್ಳೆಯ ಉದ್ಯೋಗ ಪಡೆದುಕೊಳ್ಳಲಿ ಎಂಬುದು ಎಲ್ಲ ತಾಯಂದಿರ ಕನಸಾಗಿರುತ್ತೆ. ಇದಕ್ಕಾಗಿ ತಾಯಿ ಎಲ್ಲ ತ್ಯಾಗಕ್ಕೂ ಸಿದ್ಧವಾಗಿರುತ್ತಾಳೆ. ಆಕೆ ದುಡಿದು ಮಕ್ಕಳ ಸಾಕಿ ಸಲುಹುತ್ತಾಳೆ. ತಾಯಿ ಅಂದರೆ ಪ್ರೀತಿ, ತ್ಯಾಗಕ್ಕೆ ಹೆಸರಾದ ಮಮತಾಮಯಿ. ಹೀಗಿರುವಾಗ ಮಕ್ಕಳು ಆಕೆಯ ಕಣ್ಣ ಎದುರಲ್ಲೇ ಸಾಧನೆಯ ಉತ್ತುಂಗಕ್ಕೆ ಏರಿದರೆ ಆಕೆಗಿಂತ ಹೆಚ್ಚು ಖುಷಿ ಪಡುವ ಮತ್ತೊಬ್ಬರು ಯಾರು ಇರುವುದಿಲ್ಲ.
ಮಕ್ಕಳ ಭವಿಷ್ಯಕ್ಕೆ ತನ್ನ ಸರ್ವಸ್ವವನ್ನು ಆಕೆ ತ್ಯಾಗ ಮಾಡುತ್ತಾಳೆ. ಹಗಲು ರಾತ್ರಿ ಕೆಲಸ ಮಾಡಿ ಮಕ್ಕಳ ಸಾಕುತ್ತಾಳೆ. ಇಲ್ಲಿಯೂ ಸಹ ತಾಯಿ ಒಬ್ಬಾಕೆ ಮಗನನ್ನು ಸಾಕಿ ಸಲುಹಿ ಈಗ ಆತ ಸಿಎ ಪರೀಕ್ಷೆ ಪಾಸ್ ಮಾಡಿದ್ದಾನೆ. ಚಾರ್ಟರ್ಡ್ ಅಕೌಂಟೆಂಟ್ (ಸಿಎ) ಪರೀಕ್ಷೆಯಲ್ಲಿ ಉತ್ತೀರ್ಣನಾಗುವ ಮೂಲಕ ಯಶಸ್ಸನ್ನು ಸಾಧಿಸಿದ ಮಗನನ್ನು ಆಕೆ ಮುದ್ದಾಡಿದ್ದಾಳೆ.

ತರಕಾರಿ ಮಾರಾಟ ಮಾಡಿ ಮಗನ ಸಾಕಿದ್ದ ತಾಯಿಗೆ ಮಗನ ಈ ಸಾಧನೆ ಕಂಡು ಕಣ್ಣಲ್ಲಿ ನೀರು ಬಂದಿದೆ. ಯೋಗೇಶ್ ಅವರ ತಾಯಿ ತೊಂಬರೆ ಮಾವಶಿ ಅವರು ತಮ್ಮ ಮಗನ ಸಾಧನೆಯ ಬಗ್ಗೆ ತಿಳಿದು ಕಣ್ಣೀರು ಸುರಿಸಿದ ಭಾವುಕರಾದರು. ಈ ವಿಡಿಯೋವನ್ನು ಮಹಾರಾಷ್ಟ್ರ ಲೋಕೋಪಯೋಗಿ ಇಲಾಖೆ ಸಚಿವ ರವೀಂದ್ರ ಚವಾಣ್ ಪೋಸ್ಟ್ ಮಾಡಿದ್ದಾರೆ.
ಡೊಂಬಿವಿಲಿ ಪೂರ್ವದ ಗಾಂಧಿನಗರದ ಗಿರ್ನಾರ್ ಮಿಠಾಯಿ ಅಂಗಡಿ ಬಳಿ ತರಕಾರಿ ಮಾರುವ ಯೋಗೇಶ್ ಅವರ ತಾಯಿ, ತಮ್ಮ ಮಗ ಸಿಎ ಆಗಿರುವ ಸುದ್ದಿ ಕೇಳಿ ಆಕೆಯ ಖುಷಿಗೆ ಪಾರವೇ ಇಲ್ಲದಂತೆ ಕುಣಿದಾಡಿದ್ದಾಳೆ. ಆಕೆಯ ಕಣ್ಣಲ್ಲಿ ಸಂತೋಷದ ಕಣ್ಣೀರು ಕಂಡರೆ ಆಕೆ ಪಟ್ಟ ಕಷ್ಟ ಕಣ್ಣೆದುರು ಬರುತ್ತದೆ.
ಕಠಿಣ ಪರಿಸ್ಥಿತಿಗಳ ನಡುವೆಯೂ ಯೋಗೇಶ್ ಅವರು ದೃಢಸಂಕಲ್ಪ ಮತ್ತು ಕಠಿಣ ಪರಿಶ್ರಮದಿಂದ ಈ ಅದ್ಭುತ ಯಶಸ್ಸನ್ನು ಸಾಧಿಸಿದ್ದಾರೆ" ಎಂದು ಚವಾಣ್ ತಮ್ಮ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ. ಪರೀಕ್ಷೆಯಲ್ಲಿ ಉತ್ತೀರ್ಣನಾದ ಮಗನ ತಬ್ಬಿಕೊಂಡು ಆಕೆ ಭಾವುಕರಾಗಿದ್ದಾಳೆ. ಈ ಅದ್ಭುತ ಕ್ಷಣ ಕೆಲವೇ ಮಕ್ಕಳು ಹಾಗೂ ತಾಯಿಯ ಜೀವನದಲ್ಲಿ ಮಾತ್ರ ನೋಡಬಹುದು.
ಸಿ
ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು ಬರೋಬ್ಬರಿ ಲಕ್ಷಕ್ಕೂ ಅಧಿಕ ವೀಕ್ಷಣೆ ಪಡೆದಿದ್ದರೆ ಸಾವರಾರು ಮಂದಿ ಇಷ್ಟಪಟ್ಟಿದ್ದಾರೆ. ಸಿಎ ಪರೀಕ್ಷೆಯು ಮೀಸಲಾತಿ ಇಲ್ಲದಿರುವ ಏಕೈಕ ಪರೀಕ್ಷೆಯಾಗಿದೆ ಮತ್ತು ವಿದ್ಯಾರ್ಥಿಗಳು ಶುದ್ಧ ಅರ್ಹತೆ ಮತ್ತು ಕಠಿಣ ಪರಿಶ್ರಮದ ಆಧಾರದ ಮೇಲೆ ಯಶಸ್ಸನ್ನು ಪಡೆಯುತ್ತಾರೆ. ಅದು ಬಡವರಾಗಿರಲಿ ಅಥವಾ ಶ್ರೀಮಂತರಾಗಿರಲಿ, ಹಿಂದುಳಿದ ವರ್ಗ ಅಥವಾ ಮೇಲ್ವರ್ಗದವರಾಗಿರಲಿ ಕಷ್ಟಪಟ್ಟು ಶ್ರಮವಹಿಸಿ ಓದಿದರೆ ಮಾತ್ರ ಯಶಸ್ಸು ಪಡೆಯಲು ಸಾಧ್ಯವಾಗುತ್ತದೆ.
ರಸ್ತೆ ಬದಿ ತರಕಾರಿ ಮಾರಿ ಮಗನ ಸಾಕಿದ್ದಳು ತಾಯಿ
ಯೋಗೇಶ್ ತಾಯಿ ರಸ್ತೆ ಬದಿ ತರಕಾರಿಯನ್ನು ಮಾರಾಟ ಮಾಡಿ ಆತನ ಸಾಕಿದ್ದಳು. ಆತನ ಪರೀಕ್ಷಾ ಖರ್ಚುಗಳನ್ನು ಸಹ ಆಕೆ ನೋಡಿಕೊಳ್ಳುತ್ತಿದ್ದಳು, ಬಿಡುವಿನ ವೇಳೆ ಯೋಗೇಶ್ ಸಹ ಸಹಾಯ ಮಾಡಿಕೊಂಡಿದ್ದನಂತೆ. ಆದರೆ ಈ ಪರೀಕ್ಷೆಯಲ್ಲಿ ಯಶಸ್ವಿಯಾಗುತ್ತಿದ್ದಂತೆ ತಾಯಿ ಖುಷಿಯಲ್ಲಿ ಭಾವುಕರಾಗಿದ್ದಾಳೆ. ಮಗನ ಈ ಸಾಧನೆ ಕಂಡು ಮನಸಾರೆ ತಬ್ಬಿ ಮುದ್ದಾಡಿದ್ದಾಳೆ.
ಈ ವಿಡಿಯೋ ನೋಡಿದ ಮಂದಿ ಆ ತಾಯಿಯ ಆಶೀರ್ವಾದದಿಂದ ಪುತ್ರ ಯಶಸ್ವಿಯಾಗಿದ್ದಾನೆ. ಆಕೆಯ ಖುಷಿ ನೋಡಿದರೆ ತನ್ನಲ್ಲಿ ಅದೆಷ್ಟು ಆಸೆ ಇಟ್ಟುಕೊಂಡಿದ್ದಳು ಎಂಬುದು ತಿಳಿಯುತ್ತೆ ಎಂದು ಬಳಕೆದಾರರೊಬ್ಬರು ಬರೆದುಕೊಂಡಿದ್ದಾರೆ. ನಿಮ್ಮ ಸಾಧನೆ ಬಣ್ಣಿಸುವವರು ಸಾವಿರಾರು ಮಂದಿ ಸಿಗಬಹುದು ಆದರೆ ಮನಸಾರೆ ಆರಾಧಿಸುವವರು ತಾಯಿ ಮಾತ್ರ ಎಂದು ಮತ್ತೊಬ್ಬರು ವಿಡಿಯೋಗೆ ಬರೆದುಕೊಂಡಿದ್ದಾರೆ.



Click it and Unblock the Notifications
