Latest Updates
-
ಅಮಾವಾಸ್ಯೆಯ ದಿನ ಜಗಳ ಬೇಡ: ದಂಪತಿಗಳ ನಡುವಿನ ಪ್ರೀತಿ ಹೆಚ್ಚಿಸಲು ಈ ಸಂಭಾಷಣೆ ಸೂತ್ರಗಳು -
ಆರೆಂಜ್ ಅಲರ್ಟ್: ಭಾರಿ ಮಳೆಯಿಂದ ಮನೆ ರಕ್ಷಿಸಲು ಈ 5 ಟಿಪ್ಸ್ ಪಾಲಿಸಿ, ಸುರಕ್ಷಿತವಾಗಿರಿ! -
ಪ್ರೊಟೀನ್ ಪೌಡರ್ನಲ್ಲಿ ಹುಳುಗಳು! ಬಾಲಿವುಡ್ ನಟಿಯ ಆತಂಕ, ಎಫ್ಡಿಎ ತನಿಖೆ ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಟಿಪ್ಸ್ -
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ! -
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ -
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು
ರಾಮನ ಗುಡಿಗೆ 7 ಕೆ.ಜಿ ತೂಕದ ಚಿನ್ನದ ರಾಮಾಯಣ ಪುಸ್ತಕ ನೀಡಿದ ಮಾಜಿ IAS ಅಧಿಕಾರಿ..!
ಅಯೋಧ್ಯೆ ರಾಮಮಂದಿರಕ್ಕೆ ದಾಖಲೆ ಪ್ರಮಾಣದ ಭಕ್ತರು ಹರಿದು ಬರುತ್ತಿದ್ದಾರೆ. ಅಯೋಧ್ಯೆ ಈಗ ಭಾರತದ ಪ್ರಮುಖ ಯಾತ್ರಾ ಸ್ಥಳವಾಗಿದೆ. ದೇಶದ ಮೂಲೆ ಮೂಲೆಯಿಂದಲೂ ಅಯೋಧ್ಯೆ ರಾಮನ ದರ್ಶನಕ್ಕೆಂದು ಭಕ್ತರು ಬರುತ್ತಿದ್ದಾರೆ. ಹೀಗಾಗಿ ಅಯೋಧ್ಯೆಯಲ್ಲಿ ಹೊಸತನ ಕಳೆಗಟ್ಟಿದೆ.
ಇನ್ನು ರಾಮನಿಗಾಗಿ ಭಕ್ತರು ಹಲವು ರೀತಿಯ ಉಡುಗೊರೆಗಳ ಹೊತ್ತು ತರುತ್ತಿದ್ದಾರೆ. ದೇವಾಲಯ ಉದ್ಘಾಟನೆಯ ಸಮಯದಲ್ಲಿ ಸಾವಿರಾರು ಭಕ್ತರು ವಿವಿಧ ರೀತಿಯ ಉಡುಗೊರೆಗಳ ಕಾಣಿಕೆಯಾಗಿ ನೀಡಿದ್ದರು. ಇದೀಗ ಈ ಸಂಪ್ರದಾಯ ಮುಂದುವರೆದಿದ್ದು, ಇದೀಗ 7 ಕೆ.ಜಿ ತೂಕದ ಬಂಗಾರದ ರಾಮಾಯಣ ಪುಸ್ತಕ ದೇವಾಲಯ ಸೇರಿದೆ.

ಭಕ್ತರು ಈಗ ರಾಮಮಂದಿರದಲ್ಲಿ ವಿಶಿಷ್ಟವಾದ ಚಿನ್ನದ ರಾಮಾಯಣವನ್ನು ವೀಕ್ಷಿಸಲು ಸಾಧ್ಯವಾಗುತ್ತದೆ. ಈ ರಾಮಾಯಣವನ್ನು ಗರ್ಭಗುಡಿಯಲ್ಲಿ ಯಥಾವತ್ತಾಗಿ ಸ್ಥಾಪಿಸಲಾಗಿದೆ. ಈ ವಿಶೇಷ ರಾಮಾಯಣವನ್ನು ಮಧ್ಯಪ್ರದೇಶ ಕೇಡರ್‌ನ ಮಾಜಿ ಐಎಎಸ್ ಅಧಿಕಾರಿ ಸುಬ್ರಮಣ್ಯಂ ಲಕ್ಷ್ಮೀನಾರಾಯಣನ್ ಮತ್ತು ಅವರ ಪತ್ನಿ ಸರಸ್ವತಿ ಅವರು ರಾಮಮಂದಿರ ಟ್ರಸ್ಟ್‌ಗೆ ಕೊಡುಗೆಯಾಗಿ ನೀಡಿದ್ದಾರೆ.
ಇದನ್ನು ಚೆನ್ನೈನ ಪ್ರಸಿದ್ಧ ವುಮ್ಮಿಡಿ ಬಂಗಾರು ಜ್ಯುವೆಲರ್ಸ್ ತಯಾರಿಸಿದೆ. ಗರ್ಭಗುಡಿಯಲ್ಲಿರುವ ರಾಮ ಲಲ್ಲಾ ವಿಗ್ರಹದಿಂದ ಕೇವಲ 15 ಅಡಿ ದೂರದಲ್ಲಿ ಕಲ್ಲಿನ ಪೀಠದ ಮೇಲೆ ರಾಮಾಯಣವನ್ನು ಇರಿಸಲಾಗಿದೆ. ಅದರ ಮೇಲ್ಭಾಗದಲ್ಲಿ ಬೆಳ್ಳಿಯಿಂದ ಮಾಡಿದ ರಾಮನ ಪಟ್ಟಾಭಿಷೇಕವಿದೆ. ಈ ವೇಳೆ ರಾಮಮಂದಿರ ನಿರ್ಮಾಣದ ಉಸ್ತುವಾರಿ ಗೋಪಾಲ್ ರಾವ್, ಅರ್ಚಕ ಪ್ರೇಮಚಂದ್ ತ್ರಿಪಾಠಿ ಮತ್ತಿತರರು ಉಪಸ್ಥಿತರಿದ್ದರು.
ಚಿನ್ನದ ರಾಮಾಯಣದ ವಿಶೇಷತೆ ಏನು?
ಈ ನಿರ್ದಿಷ್ಟ ಪ್ರತಿಕೃತಿಯ ಪ್ರತಿ ಪುಟವು 14 ರಿಂದ 12 ಇಂಚುಗಳಷ್ಟು ಗಾತ್ರದಲ್ಲಿದೆ ಮತ್ತು ತಾಮ್ರದಿಂದ ಮಾಡಲ್ಪಟ್ಟಿದೆ. 10,902 ಪದ್ಯಗಳ ಈ ಮಹಾಕಾವ್ಯದ ಪ್ರತಿ ಪುಟವು 24 ಕ್ಯಾರೆಟ್ ಚಿನ್ನದಿಂದ ಲೇಪಿತವಾಗಿದೆ. ಚಿನ್ನದ ಪ್ರತಿಕೃತಿಯು ಸರಿಸುಮಾರು 480-500 ಪುಟಗಳನ್ನು ಹೊಂದಿದೆ ಮತ್ತು 151 ಕೆಜಿ ತಾಮ್ರ ಮತ್ತು 3-4 ಕೆಜಿ ಚಿನ್ನದಿಂದ ಮಾಡಲ್ಪಟ್ಟಿದೆ. ಜೊತೆಗೆ ಮುಖ ಪುಟವು ಚಿನ್ನ ಲೇಪನದಿಂದಾಗಿದ್ದು, ಒಟ್ಟು ತೂಕ 7 ಕೆಜಿ ಎನ್ನಲಾಗಿದೆ. ಈ ಪುಸ್ತಕ ತಯಾರಿಕೆಗೆ ಬರೋಬ್ಬರಿ 5 ಕೋಟಿ ರೂಪಾಯಿ ವೆಚ್ಚವಾಗಿದೆ ಅಂತಲೂ ವರದಿಯಾಗಿದೆ.
ಚೈತ್ರ ಶುಕ್ಲ ನವರಾತ್ರಿಯ ಆರಂಭದೊಂದಿಗೆ ಅಯೋಧ್ಯೆಯಲ್ಲಿ ರಾಮನವಮಿ ಅಧಿಕೃತವಾಗಿ ಆರಂಭವಾಗಿದೆ. ಮೊದಲ ದಿನ ಸುಮಾರು ಎರಡು ಲಕ್ಷ ಭಕ್ತರು ಅಯೋಧ್ಯೆ ತಲುಪಿ, ಸರಯೂ ನದಿಯಲ್ಲಿ ಸ್ನಾನ ಮಾಡಿ ಹನುಮಾನ್ ಗರ್ಹಿ ಮತ್ತು ರಾಮ ಮಂದಿರಕ್ಕೆ ಭೇಟಿ ನೀಡಿ ಪ್ರಭು ರಾಮನ ದರ್ಶನ ಪಡೆದಿದ್ದಾರೆ.
ಮುಂಜಾನೆ 4 ಗಂಟೆ ಸುಮಾರಿಗೆ ರಾಮಲಲ್ಲಾ ಜಲಾಭಿಷೇಕ ಹಾಗೂ ಶೃಂಗಾರ ಪೂಜೆ ನೆರವೇರಲಿದೆ. ಪ್ರಾಣ ಪ್ರತಿಷ್ಠೆಯ ನಂತರ ಮೊದಲ ಬಾರಿಗೆ ಅಯೋಧ್ಯೆಯಲ್ಲಿ ರಾಮನವಮಿ ನೆರವೇರುತ್ತಿದ್ದು, ಭಾರೀ ವಿಜೃಂಭಣೆಗೆ ಭಕ್ತರು ಸಾಕ್ಷಿಯಾಗುತ್ತಿದ್ದಾರೆ.
ರಾಮ್ ಲಲ್ಲಾನ ಕಿರೀಟವನ್ನು ಚಿನ್ನದಿಂದ ಮಾಡಲಾಗಿತ್ತು ಮತ್ತು ಸುಮಾರು 1.7 ಕೆಜಿ ತೂಕವಿದೆ. ಹಿಂಭಾಗದ 22-ಕ್ಯಾರೆಟ್ ಚಿನ್ನದ ಪ್ರಭಾವಳಿಯು ಸುಮಾರು ಅರ್ಧ ಕಿಲೋಗ್ರಾಂ ತೂಕವಿದೆ. 262 ಕ್ಯಾರೆಟ್ ಮಾಣಿಕ್ಯ, 135 ಕ್ಯಾರೆಟ್ ಪಚ್ಚೆ ಮತ್ತು 75 ಕ್ಯಾರೆಟ್ ವಜ್ರದ ತೂಕದ ಕಿರೀಟವನ್ನು ರಾಮನಿಗೆ ಹಾಕಲಾಗಿದೆ.
ಇದಕ್ಕೂ ಮೊದಲು ರಾಮನ ಗರ್ಭಗುಡಿ ಗುಡಿಸಲೆಂದು ಬೆಳ್ಳಿ ಪೊರಕೆಯನ್ನು ಭಕ್ತರೊಬ್ಬರು ಉಡುಗೊರೆಯಾಗಿ ನೀಡಿದ್ದರು. ಅಖಿಲ ಭಾರತೀಯ ಮಾಂಗ್ ಸಮಾಜದಿಂದ ಭಗವಾನ್ ರಾಮನ ಭಕ್ತರು ಅಯೋಧ್ಯೆ ರಾಮಮಂದಿರಕ್ಕೆ 1.751 ಕೆಜಿ ತೂಕದ ಅನನ್ಯ ಬೆಳ್ಳಿ ಪೊರಕೆಯನ್ನು ಉಡುಗೊರೆಯಾಗಿ ನೀಡಿದರು. ಅದಕ್ಕಿಂತ ಹೆಚ್ಚಾಗಿ, ಪೊರಕೆಯನ್ನು ಪೂರ್ಣಗೊಳಿಸಲು 11 ದಿನಗಳನ್ನು ತೆಗೆದುಕೊಂಡಿದ್ದು ಮತ್ತು ಅದರ ಮೇಲೆ ಲಕ್ಷ್ಮಿ ದೇವಿಯ ವಿಗ್ರಹ ಸಹ ಕೆತ್ತಲಾಗಿದೆ.



Click it and Unblock the Notifications
