Latest Updates
-
ಎಲ್ಜಿಪಿ ಬಳಸದೆ ನೀರಿನಿಂದ ಅಡುಗೆ ಮಾಡಿ: ರವಿಶಂಕರ್ ಗುರೂಜಿ ವಿಡಿಯೋ ವೈರಲ್ -
ಬೇಸಿಗೆಯ ಉರಿಗೆ ಪೈನಾಪಲ್ ರಸಂ ಮಾಡಿ: ಎಷ್ಟು ಸುಲಭ ಮಾಡೋದು ಗೊತ್ತಾ? -
ಅಕ್ಕಿ ಬೇಡ, ನೆನೆಸೋ ಸಮಯವೂ ಬೇಡ.. ತಕ್ಷಣ ಮಾಡಿ ಈ ದೋಸೆ! ಈ ಟ್ರಿಕ್ ಗೊತ್ತಿದ್ರೆ ಯಾರೂ ಮಾಡಬಹುದು -
ಸುಡು ಬಿಸಿಲಲ್ಲೂ ನಿಮ್ಮ ಮುಖ ಹಾಲಿನಂತೆ ಬೆಳ್ಳಗಾಗುತ್ತೆ! ಕೇವಲ 2 ನಿಮಿಷ ಈ ಮಸಾಜ್ ಸಾಕು.. ಮುಖ ಹೊಳೆಯುತ್ತೆ! -
ಮಾರ್ಚ್ 15ಕ್ಕೆ ರೇವತಿ ನಕ್ಷತ್ರಕ್ಕೆ ಶುಕ್ರ ಸಂಚಾರ: ಈ 4 ರಾಶಿಯವರಿಗೆ ಹೆಚ್ಚಲಿದೆ ಸಂಕಷ್ಟ! -
ಜಿಡ್ಡು ಬೊಜ್ಜು ಬೆಣ್ಣೆಯಂತೆ ಕರಗುತ್ತೆ! ದಿನಾ ಈ ಮ್ಯಾಜಿಕಲ್ ಸೂಪ್ ಕುಡಿಯಿರಿ.. 15 ದಿನಗಳಲ್ಲಿ ಕೊಬ್ಬು ಮಾಯ -
ಮೆಂತ್ಯ ಸೊಪ್ಪಿನ ಮೊಟ್ಟೆ ಪಲ್ಯ: ಊಟ, ತಿಂಡಿಯೊಂದಿಗೆ ಇದು ಬೆಸ್ಟ್! -
ಕಾಲಾಷ್ಟಮಿ 2026: ನಾಳೆ ಕಾಲಾಷ್ಟಮಿ ಆಚರಣೆ, ಶಿವನ ಉಗ್ರವತಾರ ಕಾಲಭೈರವನ ಪೂಜಿಸುವುದು ಏಕೆ? -
ಅಜ್ಜಿಯ ಕಾಲದ ಅಮೃತ! ಬೇಸಿಗೆಯಲ್ಲಿ ದೇಹ ತಂಪಾಗಿರಬೇಕಾ? ಒಂದು ಗ್ಲಾಸ್ ಸಾಕು.. ಟ್ರೈ ಮಾಡಿ ನೋಡಿ -
ಗುರು ನೇರ ಸಂಚಾರ: ಮಾರ್ಚ್ 11 ರಿಂದ ಗಜಕೇಸರಿ ಯೋಗ.. ಈ ರಾಶಿಯವರ ಸಕಲ ಕಷ್ಟಗಳಿಗೂ ಮುಕ್ತಿ ಸಿಗುವ ಕಾಲ
ಕುಲು ಮನಾಲಿಯಲ್ಲಿ ಕೊಚ್ಚಿ ಹೋದಕಾರುಗಳು, ಲಾರಿ: ಭಯಾನಕ ವೀಡಿಯೋಗಳು ವೈರಲ್
ಈ ವರ್ಷ ಮಳೆ ಕೆಲವು ದೊಡ್ಡ ಅವಾಂತರಗಳನ್ನೇ ಸೃಷ್ಟಿಸಿದೆ, ಉತ್ತರ ಭಾರತದ ಕಡೆ ಪ್ರವಾಹವನ್ನೇ ಸೃಷ್ಟಿಸಿದೆ, ಪ್ರವಾಹದಲ್ಲಿ ಸಿಕ್ಕಿ ಮನೆ, ವಾಹನಗಳು ಆಟಿಕೆಗಳಂತೆ ಕೊಚ್ಚಿ ಹೋಗಿತ್ತಿರುವ ವೀಡಿಯೋಗಳು ಸಾಮಾಜಿಕ ತಾಣದಲ್ಲಿ ವೈರಲ್ ಆಗುತ್ತಿದೆ. ಮನಾಲಿ ಪ್ರವಾಹದಲ್ಲಿ ಕಾರ್ ಪಾರ್ಕಿಂಗ್‌ನಲ್ಲಿ ನಿಲ್ಲಿಸಿದ್ದ ಕಾರುಗಳು ಕೊಚ್ಚಿಕೊಂಡು ಹೋದ ವೀಡಿಯೋಗಳು ತುಂಬಾನೇ ವೈರಲ್ ಆಗಿದೆ.

ಬಿಯಾಸ್ ನದಿ ಉಕ್ಕಿ ಹರಿಯುತ್ತಿದ್ದು ಅವಳು ಹರಿಯುವ ರಭಸಕ್ಕೆ ಕಾರುಗಳನ್ನು ತನ್ನೊಂದಿಗೆ ಕೊಚ್ಚಿಕೊಂಡು ಹೋಗಿರುವ ವೀಡಿಯೋ ವೈರಲ್ ಆಗಿದೆ.
ಮನಾಲಿಯ ದೃಶ್ಯವದು. ಕಾರುಗಳನ್ನು ಪಾರ್ಕ್ ಮಾಡಲಾಗಿತ್ತು, ಬಿಯಾಸ್ ರಭಸದಿಂದ ಹರಿದು ಬರ್ತಾ ಇರುತ್ತಾಳೆ, ಆ ರಂಭಸಕ್ಕೆ ಅಲ್ಲಿ ನಿಲ್ಲಿಸಿದ್ದ ಹುಂಡೈ ಕಾರ್ ಕೊಚ್ಚಿಕೊಂಡು ಹೋಗಿದೆ ಅದರ ಜೊತೆ ಸೆಡಾನ್ ಕಾರು ಕೂಡ ಕೊಚ್ಚಿಕೊಂಡು ಹೋಗಿದೆ. ಮನಾಲಿಯ ಕುಲ್ಲಿ ಜಿಲ್ಲೆಯಲ್ಲಿ ಈ ರೀತಿ ಸಂಭವಿಸಿದೆ.
The roaring Beas River at Mandi #HimachalPradesh #ब्यास_नदी #BeasRiver #HimachalWeather pic.twitter.com/mbuYl1tddM
— Amitabh Chaudhary (@MithilaWaala) July 10, 2023
ಕೊಚ್ಚಿ ಹೋದ ಲಾರಿ
ಮತ್ತೊಂದು ವೀಡಿಯೋದಲ್ಲಿ ಲಾರಿಯೊಂದು ತೇಲಿಕೊಂಡು ಹೋಗುತ್ತಿದೆ. ಅಷ್ಟು ದೊಡ್ಡ ಲಾರಿ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದೆ ಎಂದ ಮೇಲೆ ಬಿಯಾಸ್ ನದಿಯ ತೀವ್ರತೆ ಎಷ್ಟಿರಬಹುದು ಅಲ್ವಾ?
#WATCH || A truck gets swept away by the fiercely-rushing Beas River in Kullu, Himachal Pradesh.#Monsoon2023 #BeasRiver #Kullu #HimachalPradesh #Allahuakbar pic.twitter.com/XJEaZQJmQj
— Imran Katoch🧢 (@ImranKatoch955) July 10, 2023
ಮತ್ತೊಂದು ವೀಡಿಯೋದಲ್ಲಿ ರಸ್ತೆಯೇ ಕೊಚ್ಚಿಕೊಂಡು ಹೋಗಿದೆ
Kullu to manali road broken...
— Khushamad Ahmad (@a_khushamad) July 9, 2023
Flood in beas river..#manali #flood #disaster #viral #Tweet #Kullu #OAT #HimachalPradesh #Chandigarh @aajtak @himachalkesari @ABPNews #ndtv #HimachalWeather #बाढ़ #BeasRiver #after28years pic.twitter.com/en0ro4UJ3f
ಬಿಯಾಸ್ ರೌದ್ರಾವತಾರಕ್ಕೆ ಅಲ್ಲಿಯ ಜನರ ಬದುಕು ನರಕವಾಗಿದೆ, ಪ್ರಕೃತಿಯ ರೌದ್ರ ನರ್ತನದ ಮುಂದೆ ಮಾನವ ಅಸಾಯಕನಾಗಿ ನಿಂತಿದ್ದಾರೆ. ಕುಲು ಮನಾಲಿಯ ಪ್ರವಾಹದ ದೃಶ್ಯಗಳು ಸಾಮಾಜಿಕ ತಾಣದಲ್ಲಿ ವೈರಲ್ ಆಗುತ್ತಿದೆ.
Himachal Pradesh has been witnessing heavy rainfall over the last few days causing flooding in the Beas river. The gushing water is sweeping away bridges and homes, and is causing wide-spread devastation. More than a dozen people have died in north India due to the rain. pic.twitter.com/lseGgf9JXJ
— BBC News India (@BBCIndia) July 10, 2023
ಪ್ರಕೃತಿ ಮುಂದೆ ಮಾನವ ಏನೇನೂ ಅಲ್ಲ
ಪ್ರತಿಬಾರಿ ಪ್ರಕೃತಿ ವಿಕೋಪ ಆದಾಗ ಮಾನವ ಎಷ್ಟೇ ಮುಂದುವರೆದರೂ ಪ್ರಕೃತಿ ಮುಂದೆ ಏನೇನೂ ಅಲ್ಲ ಎಂಬುವುದು ಸಾಬೀತು ಆಗುತ್ತಲೇ ಇದೆ. ಅವನು ಕಟ್ಟಿ ಬೆಳೆಸಿದ ಸಾಮ್ರಾಜ್ಯ ಕ್ಷಣಾರ್ಧದಲ್ಲಿ ಕುಸಿದು ಬೀಳುತ್ತದೆ. ಪ್ರಕೃತಿ ಉಗ್ರರೂಪ ತಾಳಿದಾಗ ಹತಾಶನಾಗಿ ನಿಲ್ಲದೆ ಬೇರೆ ಮಾರ್ಗ ಮಾನವನ ಮುಂದೆ ಇರಲ್ಲ. ಇದೀಗ ಕುಲು ಮನಾಲಿ ಎಂದ ತಾನ ಕೂಡ ಪ್ರಕೃತಿ ಕೋಪಕ್ಕೆ ತುತ್ತಾಗಿ ತನ್ನ ಮೂಲ ಸೌಂದರ್ಯ ಕಳೆದುಕೊಂಡಿದೆ. ಅಲ್ಲಿಯ ಜನರು ಪ್ರವಾಹದಿಂದಾಗಿ ಪರಿದಾಡುವಂತಾಗಿದೆ.
ಈ ರೀತಿ ಪ್ರವಾಹವಾದಾಗ ಕೆಲವೊಮ್ಮೆ ಮಾನವರು ತಮ್ಮ ಕೈಯಾರೆ ಅಪಾಯದ ಸಾಧ್ಯತೆ ಹೆಚ್ಚಿಸುತ್ತಾರೆ. ಪ್ರವಾಹದ ಸಮಯದಲ್ಲಿ ಜನರ ನಿರ್ಲಕ್ಷ್ಯ ಕೂಡ ಅಪಾಯಕ್ಕೆ ಕಾರಣವಾಗುತ್ತಿದೆ
ರಸ್ತೆ ಮುರಿದು ಬೀಳುವ ಹಂತದಲ್ಲಿರುತ್ತದೆ ಅಥವಾ ಬ್ರಿಡ್ಜ್ ಮೇಲೆ ನೀರು ತುಂಬಿ ಹರಿಯುತ್ತಿರುತ್ತದೆ ಅದರ ಮೇಲೆ ಗಾಡಿ ಚಲಾಯಿಸಿ ತಾವು ಅಪಾಯಕ್ಕೆ ಸಿಲುಕುವುದು ಮಾತ್ರವಲ್ಲ ಅವರನ್ನು ರಕ್ಷಣೆ ಮಾಡಲು ಬರುವವರನ್ನು ಅಪಾಯಕ್ಕೆ ಸಿಲುಕಿಸುತ್ತಿದ್ದಾರೆ. ಮಳೆಗಾಲದಲ್ಲಿ ಪ್ರತಿಯೊಬ್ಬರು ಈ ಕುರಿತು ಎಚ್ಚರಿಕೆವಹಿಸಬೇಕು.
ನೀರು ಉಕ್ಕಿ ಹರಿಯುವಾಗ ಸೆಲ್ಫಿ ವೀಡಿಯೋದ ಹುಚ್ಚು ಬೇಡ
ನೀರು ತುಂಬಿ ಹರಿಯುತ್ತಿದ್ದಾಗ ನದಿ ಬಳಿ, ಜಲಪಾತದ ಸಮೀಪ ಹೋಗಿ ಸೆಲ್ಫಿ ವೀಡಿಯೋ ಮಾಡುವವರಿಗೇನೂ ಕಡಿಮೆಯಿಲ್ಲ, ಅಲ್ಲಿಗೆ ಹೋಗಬಾರದು ಎಂಬ ಸೂಚನೆ ಇದ್ದರೂ ಕೆಲವರು ಅಪಾಯವನ್ನು ತಂದುಕೊಳ್ಳುತ್ತಿದ್ದಾರೆ. ಆದ್ದರಿಂದ ಪ್ರವಾಹ ಸೂಚನೆ ಜನರು ಮುಂಚೆಯೇ ಜಾಗ್ರತೆವಹಿಸಿದರೆ ತಮ್ಮ ಪ್ರಾಣ ಕಾಪಾಡಿಕೊಳ್ಳಬಹುದು.



Click it and Unblock the Notifications











