Latest Updates
-
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್! -
ನವರಾತ್ರಿ ಸಂಭ್ರಮ: ಅತ್ತೆ-ಮಾವಂದಿರ ಮನೆಗೆ ಹೋಗುವಾಗ ನವದಂಪತಿಗಳು ಮರೆಯದೆ ಪಾಲಿಸಬೇಕಾದ ಶಿಷ್ಟಾಚಾರಗಳಿವು! -
ದೆಹಲಿ ಮಳೆ ಅಲರ್ಟ್: ಮನೆಯಲ್ಲಿ ನೀರು ಸೋರಿಕೆ ತಡೆಯಲು 20 ನಿಮಿಷದ ಈ ಕೆಲಸ ಮಾಡಿ! -
ಮುಂಬೈನಲ್ಲಿ ಬಿಸಿಲಿನ ಅಬ್ಬರ: ಯೆಲ್ಲೋ ಅಲರ್ಟ್ ಘೋಷಣೆ, ಆರೋಗ್ಯ ಕಾಪಾಡಿಕೊಳ್ಳಲು ಈ ಕ್ರಮಗಳನ್ನು ತಪ್ಪದೇ ಪಾಲಿಸಿ -
ವಡೋದರಾದಲ್ಲಿ ವಾಯುಪಡೆ ಮುಖ್ಯಸ್ಥರ ಗರ್ಬಾ ನೃತ್ಯ: ವೈರಲ್ ವಿಡಿಯೋದಲ್ಲಿ ಸಿಂಗ್ ಅವರ ಸರಳತೆ ನೋಡಿ! -
ಚೆನ್ನೈ ಮಳೆ ಅಲರ್ಟ್: ಹೊರಗೆ ಹೋಗುವ ಬದಲು ಮನೆಯಲ್ಲೇ ಫಿಟ್ ಆಗಿರಲು ಈ 12 ನಿಮಿಷದ ವರ್ಕೌಟ್ ಟ್ರೈ ಮಾಡಿ
ಕೊನೆಗೂ ಬೆಂಗಳೂರಿಗೆ ಮಳೆ ಭಾಗ್ಯ..! ಹವಾಮಾನ ಇಲಾಖೆ ಸೂಚಿಸಿದ ದಿನಾಂಕವಿದು..!
ರಾಜ್ಯದಲ್ಲಿ ಎಲ್ಲಿ ಹೋದರು ಮಳೆಯದ್ದೆ ಮಾತು, ಯಾವಾಗ ಮಳೆ ಬರುತ್ತೆ ಅಂತ ಆಕಾಶ ನೋಡಿಕೊಂಡು ಕೂರಬೇಕಾಗಿದೆ. ಇನ್ನು ರಾಜ್ಯದ ಕೆಲವು ಭಾಗದಲ್ಲಿ ಸಣ್ಣದಾಗಿ ಮಳೆಯೂ ಆಗುತ್ತಿದೆ. ಆದ್ರೆ ನೀರಿನ ಸಮಸ್ಯೆಗೆ ತುತ್ತಾಗಿರುವ ಮಹಾನಗರಿ ಬೆಂಗಳೂರಿನ ಕಥೆ ಏನು? ರಾಜಧಾನಿ ಬೆಂಗಳೂರು ಸದ್ಯ ಇಡೀ ದೇಶದ ಗಮನ ಸೆಳೆಯುತ್ತಿದೆ. ನೀರಿನ ಸಮಸ್ಯೆ ಎದುರಿಸುತ್ತಿದ್ದು, ಸಿಲಿಕಾನ್ ಸಿಟಿ ಈಗ ಬರದಿಂದ ಬೆಂಡಾಗುತ್ತಿದೆ.
ಬೆಂಗಳೂರಿನಲ್ಲಿ ಬೇಸಿಗೆಯ ಬಿಸಿ ಹೆಚ್ಚಾಗುತ್ತಿದೆ. ಮನೆಯಿಂದ ಜನ ಹೊರಬಾರದ ಸ್ಥಿತಿಗೆ ತಲುಪಿದ್ದಾರೆ. ಮಧ್ಯಾಹ್ನದ ವೇಳೆ ರಸ್ತೆಯಲ್ಲಿ ಬಿಸಿ ಹೆಚ್ಚಾದ ಕಾರಣ ವಾಹನ ದಟ್ಟಣೆ ಕೊಂಚ ಮಟ್ಟಿಗೆ ಕಡಿಮೆಯಾಗಿದೆ. ಆದರೆ ನೀರಿನ ಸಮಸ್ಯೆ ದಿನೇ ದಿನೇ ಹೆಚ್ಚಾಗುತ್ತಲೇ ಇದೆ. ಈ ನಡುವೆ ಬೆಂಗಳೂರಲ್ಲಿ ಮಳೆ ಯಾವಾಗ ಬರಲಿದ ಎಂಬ ಪ್ರಶ್ನೆ ನಗರವಾಸಿಗಳ ಮುಂದಿದೆ.

ಆದರೆ ಈ ಪ್ರಶ್ನೆಗೆ ಹವಾಮಾನ ಇಲಾಖೆ ಶುಭ ಸುದ್ದಿಯೊಂದನ್ನು ನೀಡಿದೆ. ಸದ್ಯದಲ್ಲೇ ಬೆಂಗಳೂರಿನಲ್ಲೂ ಮಳೆಯಾಗುವ ಸಂಭವಿದೆ ಎಂದು ಇಲಾಖೆ ಮಾಹಿತಿ ಹಂಚಿಕೊಂಡಿದೆ.
ಆಂಧ್ರ ಪ್ರದೇಶ ಹಾಗೂ ತೆಲಂಗಾಣದಲ್ಲಿ ಮೋಡ ಕವಿದ ವಾತಾವರಣ ಕಂಡುಬರುತ್ತಿದೆ. ಕೆಲವು ಭಾಗದಲ್ಲಿ ತುಂತುರು ಮಳೆಯ ನಿರೀಕ್ಷೆಯನ್ನೂ ಮಾಡಲಾಗಿದೆ. ಈ ಹಿನ್ನೆಲೆ ಉತ್ತರ ಒಳನಾಡಿನಲ್ಲೂ ಮಳೆಯಾಗುತ್ತಿದೆ. ಉಳಿದಂತೆ ರಾಜ್ಯದ ಬೆಂಗಳೂರಿನಲ್ಲಿ ನಾಳೆಯಿಂದ ಮೋಡ ಕವಿಯುವ ಸಂಭವವಿದೆ ಎಂದು ತಿಳಿದುಬಂದಿದೆ.
ಬೆಂಗಳೂರಲ್ಲಿ ಯಾವಾಗ ಮಳೆ ಬರಲಿದೆ?
ಚಾಮರಾಜನಗರ, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಹಾಸನ, ಕೊಡಗು, ಮಂಡ್ಯ, ಮೈಸೂರು, ತುಮಕೂರು ಮತ್ತು ಬೆಂಗಳೂರು ಸೇರಿದಂತೆ ಜಿಲ್ಲೆಗಳಲ್ಲಿ ಬುಧವಾರದಿಂದ ಭಾನುವಾರದವರೆಗೆ (ಮಾರ್ಚ್ 20-23) ಲಘು ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಮುನ್ಸೂಚನೆ ನೀಡಿದೆ.
ಹವಾಮಾನ ಇಲಾಖೆಯು ಉತ್ತರ ಒಳ ಕರ್ನಾಟಕದ ಪ್ರತ್ಯೇಕ ಪ್ರದೇಶಗಳಲ್ಲಿ ಲಘು ಮಳೆಯಾಗುವ ಮುನ್ಸೂಚನೆಯನ್ನು ನೀಡಿದೆ, ಕರಾವಳಿ ಕರ್ನಾಟಕ ಮತ್ತು ದಕ್ಷಿಣ ಒಳನಾಡಿನಲ್ಲಿ ಒಣ ಹವೆ ನಿರೀಕ್ಷಿಸಲಾಗಿದೆ. ಹೆಚ್ಚುವರಿಯಾಗಿ, ಬಾಗಲಕೋಟೆ, ಕೊಪ್ಪಳ, ಬೆಂಗಳೂರು ಗ್ರಾಮಾಂತರ, ಕೋಲಾರ ಮತ್ತು ಮೈಸೂರು ಜಿಲ್ಲೆಗಳು ಸೇರಿದಂತೆ ಕೆಲವು ಭಾಗಗಳಲ್ಲಿ ಗರಿಷ್ಠ ತಾಪಮಾನವು ಸಾಮಾನ್ಯಕ್ಕಿಂತ 2-3 ಡಿಗ್ರಿ ಸೆಲ್ಸಿಯಸ್ ಹೆಚ್ಚಾಗುವ ಸಾಧ್ಯತೆ ಇದೆ ಎಂದಿದೆ.
ರಾಜ್ಯದಲ್ಲಿ ಸಾಮಾನ್ಯವಾಗಿ ಮಾರ್ಚ್ ಮತ್ತು ಮೇ ನಡುವೆ ಮುಂಗಾರು ಪೂರ್ವ ಮಳೆಯನ್ನು ಪಡೆಯುತ್ತದೆ. ಆದರೆ ಕಳೆದ ವರ್ಷ ಮುಂಗಾರು ಮಳೆಯಾಗದ ಕಾರಣ ರಾಜ್ಯದ ಪ್ರಮುಖ ಜಲಾಶಯಗಳು ಭರ್ತಿಯೇ ಆಗಿರಲಿಲ್ಲ. ಇದರಿಂದ ಹಲವು ಜಿಲ್ಲೆಯಲ್ಲಿ ನೀರಿನ ಸಮಸ್ಯೆಗೆ ಕಾರಣವಾಗಿತ್ತು. ಆದರೆ ಈ ವರ್ಷ ಆರಂಭದಿಂದಲೇ ಉತ್ತಮ ಮಳೆಯಾಗಲಿದೆ ಎಂಬ ವರದಿಯನ್ನು ಹವಾಮಾನ ಇಲಾಖೆ ನೀಡಿರುವುದು ಸಮಾಧಾನ ತಂದಿದೆ.
ಆದ್ರೆ ನಾವು ಮಳೆ ನಕ್ಷತ್ರಗಳ ಕುರಿತು ನೋಡುವುದಾದರೆ ಮೊದಲ ಮಳೆ 13-04-2024ರಿಂದ ಆರಂಭವಾಗಲಿದೆ. ಇದು ಮುಂಗಾರು ಮಳೆಯ ಆರಂಭಿಕ ದಿನಾಂಕವಾಗಿದೆ. ಆದರೆ ಇದಕ್ಕೂ ಮುನ್ನವೇ ರಾಜ್ಯದಲ್ಲಿ ಮಳೆಯಾಗುವುದು ಖಚಿತ. ಆದರೆ ಮುಂಗಾರು ಪೂರ್ವದ ತಿಂಗಳಾದ ಮಾರ್ಚ್‌ನಲ್ಲಿ ಅಷ್ಟೇನು ಮಳೆ ಬೀಳುವ ಸಾಧ್ಯತೆ ಕಂಡುಬರುತ್ತಿಲ್ಲ. ರಾಜ್ಯದ ಬಹುತೇಕ ಕಡೆ ಒಣ ಹವೆ ಮುಂದುವರೆದಿದೆ. ಅಲ್ಲದೆ ರಾಜ್ಯವು ಮಾರ್ಚ್ 1 ಮತ್ತು 17 ರ ನಡುವೆ ಗಮನಾರ್ಹ ಮಳೆಯ ಕೊರತೆಯನ್ನು ದಾಖಲಿಸಿದೆ.
ಸದ್ಯ ಬೆಂಗಳೂರಿನಲ್ಲಿ ಮುಂದಿನ ವಾರದೊಳಗೆ ಲಘು ಮಳೆಯಾಗುವುದಾಗಿ ಹವಾಮಾನ ಇಲಾಖೆ ತಿಳಿಸಿರುವುದು, ಸಿಲಿಕಾನ್ ಸಿಟಿ ಜನರು ನಿಟ್ಟುಸಿರು ಬಿಡುವಂತೆ ಮಾಡಿದೆ. ಸದ್ಯ ಈ ವಾರದಲ್ಲಿ ಒಂದು ಸಾಧಾರಣ ಮಳೆಯಾದರು ಬಿದ್ದರೆ ನೀರಿನ ಸಮಸ್ಯೆ ಕಡಿಮೆಯಾಗುವ ನಿರೀಕ್ಷೆ ಇಲ್ಲದಿದ್ದರೂ ಒಂದಿಷ್ಟು ತಾಪಮಾನ ಇಳಿಕೆಯಾಗುವ ಜೊತೆಗೆ ಮುಂದಿನ ಮಳೆಗೆ ತಳಹದಿಯಾಗಲಿದೆ ಎಂಬ ನಿರೀಕ್ಷೆ ಹೆಚ್ಚಾಗಿದೆ.



Click it and Unblock the Notifications
