Latest Updates
-
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು? -
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ! -
ಮ್ಯಾಟ್ರಿಮೋನಿ ಆಪ್ಗಳಲ್ಲಿ ಆಧಾರ್ ಪರಿಶೀಲನೆ: ನಕಲಿ ಪ್ರೊಫೈಲ್ಗಳಿಗೆ ಇನ್ನು ಬ್ರೇಕ್? -
ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆ ಮತ್ತು ಬಾಲ್ಕನಿ ಸುರಕ್ಷಿತವಾಗಿಡಲು ತಕ್ಷಣವೇ ಈ ಕೆಲಸ ಮಾಡಿ -
ಹಬ್ಬದ ಸೀಸನ್: ನಿಮ್ಮ ಅಡುಗೆಮನೆಯಲ್ಲಿ ವಿಷವಿದೆಯೇ? ಮಹಾರಾಷ್ಟ್ರ ಎಫ್ಡಿಎ ದಾಳಿಯ ನಂತರ ಎಚ್ಚರ! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ಆಫರ್ ಮಳೆಯಲ್ಲಿ ಸಿಲುಕುವ ಮುನ್ನ ಈ 5 ಟಿಪ್ಸ್ ಮಿಸ್ ಮಾಡ್ಬೇಡಿ!
ಈ ವಾರ ಗುರು ಪೂರ್ಣಿಮಾ ಸೇರಿ 4 ಪ್ರಮುಖ ವ್ರತಗಳಿವೆ, ಧಾರ್ಮಿಕ ದೃಷ್ಟಿಯಿಂದ ತುಂಬಾನೇ ಮಹತ್ವದ್ದಾಗಿವೆ
ಈ ವಾರ ಯಾವೆಲ್ಲಾ ಪ್ರಮುಖ ವ್ರತಗಳಿವೆ, ಈ ವ್ರತಗಳ ವೈಶಿಷ್ಠ್ಯತೆಯೇನು ಎಂದು ನೋಡೋಣ ಬನ್ನಿ:
ಜುಲೈ 2: ಕೋಕಿಲ ವ್ರತ
ಕೋಕಿಲ ವ್ರತವನ್ನು ಆಷಾಢಮಾಸದ ಶುಕ್ಲ ಪಕ್ಷದ ಹುಣ್ಣಿಮೆಯಂದು ಆಚರಿಸುತ್ತೇವೆ. ಈ ದಿನ ಉಪವಾಸವಿದ್ದು ಆದಿಶಕ್ತಿಯ ಆರಾಧನೆ ಮಾಡಲಾಗುವುದು. ಈ ವ್ರತವನ್ನು ಅವಾಹಿತ ಮಹಿಳೆಯರು ಮಾಡಿದರೆ ಮದುವೆಗೆ ಇರುವ ಅಡೆತಡೆ ದೂರಾಗುವುದು. ವಿವಾಹಿತರು ಪಾಲಿಸುವುದರಿಂದ ವೈವಾಹಿಕ ಜೀವನದಲ್ಲಿರುವ ಸಮಸ್ಯೆ ದೂರಾಗುವುದು.

ಜುಲೈ 3: ಗುರು ಪೂರ್ಣಿಮಾ, ವ್ಯಾಸ ಪೂಜೆ, ಆಷಾಢ ಪೂರ್ಣಿಮಾ ವ್ರತ
ವ್ಯಾಸರ ನೆನಪಿಗಾಗಿ ಈ ದಿವವನ್ನು ಆಚರಿಸಲಾಗುತ್ತದೆ. ನಾಲ್ಕು ವೇದಗಳನ್ನು, 18 ಪುರಾಣಗಳನ್ನು ಮಹಾಭಾರತ ಮತ್ತು ಶ್ರೀಮದ್ಭಾಗವತವನ್ನು ರಚಿಸಿದವರು ವೇದವ್ಯಾಸರು. ಬೌದ್ಧರಿಗೂ ಗುರು ಪೂರ್ಣಿಮೆ ಮಹತ್ವದ ದಿನವಾಗಿದೆ. ಸಾಂಪ್ರದಾಯಿಕವಾಗಿ ಬೌದ್ಧರು ಬುದ್ಧನಿಗೆ ಗೌರವ ಅರ್ಪಿಸುವ ದಿನವನ್ನಾಗಿ ಗುರುಪೂರ್ಣಿಮೆಯನ್ನು ಆಚರಿಸುತ್ತಾರೆ. ಸಾರನಾಥದಲ್ಲಿ ಬುದ್ಧನು ಪ್ರಥಮ ಉಪದೇಶವನ್ನು ಮಾಡಿದರೆಂದು ಪ್ರತೀತಿ ಇದೆ. ಈ ದಿನ ಗುರುವಿನ ಪಾದ ಮುಟ್ಟಿ ಆಶೀರ್ವಾದ ಪಡೆದರೆ ಒಳ್ಳೆಯದು. ನಮ್ಮ ಬದುಕಿನಲ್ಲಿ ಸನ್ಮಾರ್ಗದಲ್ಲಿ ನಡೆಯಲು ಗುರುವಿನ ಸ್ಥಾನ ತುಂಬಾನೇ ಮುಖ್ಯ.
ಜುಲೈ 4: ಉತ್ತರ ಭಾರತದ ಕಡೆ ಶ್ರಾವಣ ಪ್ರಾರಂಭ : ಉತ್ತರ ಭಾರತದ ಪಂಚಾಂಗದ ಪ್ರಕಾರ ಜುಲೈ ಹಾಗೂ ಆಗಸ್ಟ್ ತಿಂಗಳು ಶ್ರಾವಣ ಮಾಸವಾಗಿದೆ.
ಜುಲೈ 6: ಗಜಾನನ ಸಂಕಷ್ಠಿ ಚತುರ್ದಶಿ: ಈ ದಿನ ವಿಘ್ನ ನಿವಾರಕನಾದ ವಿನಾಯಕನ ಪೂಜೆ ಮಾಡಲಾಗುವುದು. ಉಪವಾಸವಿದ್ದು ಗಣೇಶನ ಆರಾಧನೆ ಮಾಡುವುದರಿಂದ ಜೀವನದಲ್ಲಿ ಎಲ್ಲಾ ಒಳಿತಾಗಲಿದೆ. ಈ ದಿನ ಗಣೇಶನಿಗೆ ಗರಿಕೆಯನ್ನು ಅರ್ಪಿಸಿ ಆರಾಧನೆ ಮಾಡಿ.
ಜುಲೈ 7: ಆಷಾಢ ಶುಕ್ರವಾರ: ಆಷಾಢ ಮಾಸದ ಶುಕ್ರವಾರ ಲಕ್ಷ್ಮಿಯನ್ನು ಪೂಜಿಸುತ್ತಾರೆ. ಈ ದಿನ ಲಕ್ಷ್ಮಿ ಪೂಜೆ ಮಾಡುವುದರಿಂದ ಸಂಪತ್ತು ವೃದ್ಧಿಸಲಿದೆ. ತುಂಬಾ ಜನರು ಶ್ರಾವಣ ಶುಕ್ರವಾರದಂದು ಲಕ್ಷ್ಮಿ ವ್ರತ ಪ್ರಾರಂಭಿಸಿ ವರಲಕ್ಷ್ಮಿ ಪೂಜೆಯಂದು ಮುಕ್ತಾಯ ಮಾಡುತ್ತಾರೆ.



Click it and Unblock the Notifications
