Latest Updates
-
ಗಣೇಶೋತ್ಸವದ ಸಂಭ್ರಮದಲ್ಲಿ ದಂಪತಿಗಳ ಜಗಳ ಬೇಡ: ಸಮಯ ಮತ್ತು ಬಜೆಟ್ ನಿರ್ವಹಣೆಗೆ ಇಲ್ಲಿದೆ ಸಿಂಪಲ್ ಪ್ಲಾನ್! -
ಗಣೇಶೋತ್ಸವ 2026: ಮಳೆಯ ನಡುವೆಯೂ ಪರಿಸರ ಸ್ನೇಹಿ ಹಬ್ಬ ಆಚರಣೆಗೆ ಇಲ್ಲಿದೆ ಸರಳ ಟಿಪ್ಸ್! -
ಪ್ಯಾಕ್ ಮಾಡಿದ ಆಹಾರದಲ್ಲಿ ಸಕ್ಕರೆ, ಉಪ್ಪು ಹೆಚ್ಚಿದ್ದರೆ ಕೆಂಪು ಲೇಬಲ್: ಸುಪ್ರೀಂ ಕೋರ್ಟ್ ಪ್ರಶ್ನೆ, ಗ್ರಾಹಕರಿಗೆ ಸಿಗುತ್ತಾ ಪರಿಹಾರ? -
ಝೊಮ್ಯಾಟೋದಲ್ಲಿ 'ಪೇ ಆನ್ ಡೆಲಿವರಿ' ಶುಲ್ಕದ ಶಾಕ್: ನಿಮ್ಮ ಬಿಲ್ ಹೆಚ್ಚಾಗುತ್ತಿದೆಯೇ? ಬಚಾವ್ ಆಗೋದು ಹೇಗೆ? -
ಗಣೇಶೋತ್ಸವದ ಮಳೆ ಮತ್ತು ದರ್ಶನದ ಕ್ಯೂ: ಆಯಾಸವಿಲ್ಲದೆ ಬಪ್ಪನ ದರ್ಶನ ಪಡೆಯಲು ಇಲ್ಲಿದೆ ಬೆಸ್ಟ್ ಟಿಪ್ಸ್! -
ಅಮಾವಾಸ್ಯೆಯ ದಿನ ಜಗಳ ಬೇಡ: ದಂಪತಿಗಳ ನಡುವಿನ ಪ್ರೀತಿ ಹೆಚ್ಚಿಸಲು ಈ ಸಂಭಾಷಣೆ ಸೂತ್ರಗಳು -
ಆರೆಂಜ್ ಅಲರ್ಟ್: ಭಾರಿ ಮಳೆಯಿಂದ ಮನೆ ರಕ್ಷಿಸಲು ಈ 5 ಟಿಪ್ಸ್ ಪಾಲಿಸಿ, ಸುರಕ್ಷಿತವಾಗಿರಿ! -
ಪ್ರೊಟೀನ್ ಪೌಡರ್ನಲ್ಲಿ ಹುಳುಗಳು! ಬಾಲಿವುಡ್ ನಟಿಯ ಆತಂಕ, ಎಫ್ಡಿಎ ತನಿಖೆ ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಟಿಪ್ಸ್ -
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ! -
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ
ಕಾಲಿಗೆ ಬಿದ್ದ ಅಭಿಮಾನಿಯ ವೈದ್ಯಕೀಯ ಚಿಕಿತ್ಸೆಗೆ ನೆರವಾದ ಧೋನಿ..! ಇದಲ್ಲವೆ ಹೀರೋಗಿರಿ..!
ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಎಂ.ಎಸ್ ಧೋನಿ ಬಗ್ಗೆ ನೀವೆಲ್ಲಾ ಕೇಳಿರುತ್ತೀರಿ. ಕ್ಯಾಪ್ಟನ್ ಕೂಲ್ ಅಂತಲೇ ಹೆಸರಾಗಿರುವ ಅವರು, ತಮ್ಮ ಆನ್‌ಫೀಲ್ಡ್ ಅಷ್ಟೇ ಅಲ್ಲ ಆಫ್ ಪೀಲ್ಡ್‌ನಲ್ಲೂ ಅಭಿಮಾನಿಗಳ ರಂಜಿಸುವ ದೇವರಂತೆ ಕಂಡುಬರುತ್ತಾರೆ. ಅವರನ್ನು ಒಮ್ಮೆಯಾದರು ಭೇಟಿಯಾಗಬೇಕು ಮಾತನಾಡಿಸಬೇಕು ಎಂಬುದು ಅವರ ಅಭಿಮಾನಿಗಳ ಬಹುದೊಡ್ಡ ಆಸೆಯಾಗಿರುತ್ತೆ.
ಇನ್ನು ಅವರು ಕ್ರೀಸ್‌ನಲ್ಲಿದ್ದರೆ ಧೋನಿ ಎಂಬ ಹೆಸರಿನ ಹರ್ಷೋದ್ಘಾರ ಮುಗಿಲು ಮುಟ್ಟಿರುತ್ತದೆ. ಅದೇ ರೀತಿ ಅವರು ಕ್ರೀಸ್‌ನಲ್ಲಿದ್ದಾಗ ಅವರನ್ನು ಭೇಟಿಯಾಗಲು ಅಭಿಮಾನಿಗಳು ಪಂದ್ಯಕ್ಕೆ ಅಡ್ಡಿಪಡಿಸಿ ಮೈದಾನದೊಳಗೆ ನುಗ್ಗುವುದು ನಡೆಯುತ್ತಿರುತ್ತದೆ. ಈ ರೀತಿ ಹಲವು ಬಾರಿ ನಡೆದಿದೆ.

ಬಳಿಕ ಅಭಿಮಾನಿಯನ್ನು ಸೆಕ್ಯೂರಿಟಿಗಳು ಎಳೆದೊಯ್ಯುವ ಘಟನೆಗಳು ನಡೆಯುತ್ತಲೇ ಇರುತ್ತದೆ. ಇತ್ತೀಚಿಗೆ ಸಹ ಇಂತಹದೊಂದು ಘಟನೆ ನಡೆದಿತ್ತು. ಮೇ 10 ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ಮತ್ತು ಗುಜರಾತ್ ಟೈಟಾನ್ಸ್ ನಡುವಿನ ಐಪಿಎಲ್ 2024 ಪಂದ್ಯದ ವೇಳೆ ಅಭಿಮಾನಿಯೊಬ್ಬ ಓಡಿ ಬಂದು ಧೋನಿ ಕಾಲಿಗೆ ಬಿದ್ದಿದ್ದ.
ಬಳಿಕ ಧೋನಿ ಆತನ ಜೊತೆ ಅಲ್ಲಿಯೇ ಮಾತನಾಡಿ ಕಳುಹಿಸಿದ್ದರು. ಆತ ಬ್ಯಾರಿಕೇಡ್ ಹಾರಿ ಧೋನಿ ಇದ್ದ ಕಡೆ ಓಡಿ ಬಂದವನೇ ಕಾಲಿಗೆ ಬಿದ್ದಿದ್ದ. ಆದರೆ ಈಗ ಆತನ ವಿಡಿಯೋವೊಂದು ವೈರಲ್ ಆಗಿದ್ದು, ಧೋನಿ ಕಾಲಿಗೆ ಬಿದ್ದಾಗ ಅವರಿಬ್ಬರ ನಡುವೆ ನಡೆದ ಸಂಭಾಷಣೆ ಏನು ಎಂಬುದನ್ನು ಆತ ಹಂಚಿಕೊಂಡಿದ್ದಾನೆ.
ವೈರಲ್ ವೀಡಿಯೊವೊಂದರಲ್ಲಿ, ಅಭಿಮಾನಿ ಧೋನಿಯನ್ನು ಭೇಟಿಯಾದ ನಂತರ ತಮ್ಮ ಭಾವನಾತ್ಮಕ ಅನುಭವವನ್ನು ಹಂಚಿಕೊಂಡಿದ್ದಾರೆ. ಇದೇ ವೇಳೆ ಧೋನಿ ಆತನ ವೈದ್ಯಕೀಯ ಚಿಕಿತ್ಸೆಯ ಭರವಸೆ ನೀಡಿದ್ದಾರೆ ಎಂದು ಹೇಳಿದ್ದಾನೆ. ಅವರಿಬ್ಬರ ನಡುವೆ ಏನೆಲ್ಲಾ ಮಾತುಕತೆ ನಡೆದಿತ್ತು ಎಂಬುದನ್ನು ಸಹ ಆತ ವಿವರಿಸಿದ್ದಾನೆ.
ಧೋನಿ ಅವರ ಕಂಡಾಗ ನನಗೆ ಖುಷಿ ತಡೆಯಲಾಗಲಿಲ್ಲ. ನನ್ನ ಕಣ್ಣಲ್ಲಿ ನೀರು ಬಂದಿತ್ತು. ಅವರ ಪಾದ ಮುಟ್ಟಿದೆ ಅವರು ನನ್ನ ಎಬ್ಬಿಸಿ ಕೇಳಿದರು. ಏಕೆ ಇಷ್ಟು ವೇಗವಾಗಿ ಉಸಿರಾಡುತ್ತಿದ್ದೀಯಾ ಅಂದ್ರು. ನಾನು ನನ್ನ ವೈದ್ಯಕೀಯ ಸಮಸ್ಯೆ ಕುರಿತು ಅವರ ಬಳಿಕ ಹೇಳಿದೆ. ತಕ್ಷಣ ಅವರು ಚಿಂತಿಸಬೇಡ ನಾನು ನಿನ್ನ ಚಿಕಿತ್ಸೆಗೆ ನೆರವಾಗುತ್ತೇನೆ. ನಿನಗೆ ಏನೂ ಆಗುವುದಿಲ್ಲ, ಚಿಂತಿಸಬೇಡ. ನಿನಗೆ ಏನೂ ಆಗಲು ನಾನು ಬಿಡುವುದಿಲ್ಲ ಅಂದರು ಎಂಬುದಾಗಿ ಆತ ಹೇಳಿಕೊಂಡಿದ್ದಾನೆ.
ಆತನಿಗೆ ಹಲವು ಕಾಲದಿಂದ ಉಸಿರಾಟದ ಸಮಸ್ಯೆ ಇದೆಯಂತೆ. ಜೊತೆಗೆ ಸ್ವಲ್ಪ ದೂರ ನಡೆದರೂ ವೇಗವಾಗಿ ಉಸಿರಾಡಬೇಕಾಗುತ್ತದೆ. ಹೀಗಿರುವಾಗ ಆತ ಬ್ಯಾರಿಕೇಡ್ ಹಾರಿ ದೂರದಿಂದ ಓಡಿ ಬಂದು ಧೋನಿ ಕಾಲಿಗೆ ಬಿದ್ದಿದ್ದ. ಆದ್ರೆ ಧೋನಿ ಆತನ ಚಿಕಿತ್ಸೆಯ ಭರವಸೆ ನೀಡಿರುವುದು ಮೆಚ್ಚುಗೆಗೆ ಪಾತ್ರವಾಗಿದೆ.
ಭಾರತ ಕ್ರಿಕೆಟ್ ಕಂಡ ಸರ್ವಶ್ರೇಷ್ಠ ನಾಯಕರಲ್ಲಿ ಎಂ.ಎಸ್ ಧೋನಿ ಸಹ ಒಬ್ಬರು. ಅವರು ಭಾರತಕ್ಕೆ ಎರಡೆರಡು ವಿಶ್ವಕಪ್ ಜಯಿಸಿಕೊಟ್ಟ ನಾಯಕ. ಆನ್‌ಫೀಲ್ಡ್‌ನಲ್ಲಿ ಬೌಂಡರಿ ಸಿಡಿಸುವ ಅವರು, ಆಫ್‌ಫೀಲ್ಡ್‌ನಲ್ಲೂ ಹಲವು ಸಮಾಜಮುಖಿ ಕಾರ್ಯಗಳಿಂದಲ ಹೆಸರಾಗಿದ್ದಾರೆ.
ಇತ್ತೀಚಿಗೆ ಅವರು ತಮ್ಮ ಸ್ವಂತ ಸಿನಿಮಾ ನಿರ್ಮಾಣ ಸಂಸ್ಥೆಯನ್ನೂ ಸಹ ಆರಂಭಿಸಿ ಮೊದಲ ಚಿತ್ರವನ್ನು ತೆರೆ ಮೇಲೆ ತಂದಿದ್ದರು. ಜೊತೆಗೆ ಒಂದಿಷ್ಟು ದೇಣಿಗೆ, ಅಭಿಮಾನಿಗಳಿಗೆ ನೆರವಾಗುವುದು ನಡೆದುಕೊಂಡು ಬರುತ್ತಲೇ ಇದೆ. ಅವರ ಈ ಕಾರ್ಯ ಸಾಮಾಜಿಕ ಜಾಲತಾಣದಲ್ಲಿ ಭಾರೀ ಮೆಚ್ಚುಗೆ ಗಳಿಸಿದೆ. ಹಲವರು ಅವರ ಕಾರ್ಯವನ್ನು ಮೆಚ್ಚಿ ಸೆಲ್ಯೂಟ್ ಎಂದಿದ್ದಾರೆ.



Click it and Unblock the Notifications
