Latest Updates
-
ಶ್ರಾವಣ ಸೋಮವಾರದ ಉಪವಾಸ: ಆಫೀಸ್ ಕೆಲಸದ ನಡುವೆಯೂ ಆರೋಗ್ಯ ಕಾಪಾಡಿಕೊಳ್ಳಲು ಇಲ್ಲಿವೆ ಸರಳ ಟಿಪ್ಸ್! -
ಟಾಟಾ ಮುಂಬೈ ಮ್ಯಾರಥಾನ್ 2027: ನೋಂದಣಿಗೆ ಸಿದ್ಧರಾಗಿ, ಓಟಗಾರರಿಗೆ ಇಲ್ಲಿದೆ ಮಹತ್ವದ ಸಲಹೆಗಳು! -
ಆರ್ಬಿಐ ಸಭೆಗೂ ಮುನ್ನ ದಂಪತಿಗಳಿಗೆ ಎಚ್ಚರಿಕೆ: ಇಂದೇ ಈ 30 ನಿಮಿಷದ ಫೈನಾನ್ಶಿಯಲ್ ಟೆಸ್ಟ್ ಮಾಡಿ! -
ಹಾಲುಣಿಸುವ ತಾಯಂದಿರೇ ಗಮನಿಸಿ: ಬೆನ್ನು ಮತ್ತು ಕುತ್ತಿಗೆ ನೋವು ಮರೆಯಾಗಲು ಈ 8 ನಿಮಿಷದ ವ್ಯಾಯಾಮ ಸಾಕು! -
ಐಟಿಆರ್ ಗಡುವು ಮಿಸ್ ಆಯ್ತಾ? ದಂಡ ತಪ್ಪಿಸಲು ಈಗಲೇ ಈ ಕೆಲಸ ಮಾಡಿ, ಆರ್ಥಿಕ ನಷ್ಟದಿಂದ ಪಾರಾಗಿ! -
ಕರ್ನಾಟಕದಲ್ಲಿ ಭಾರಿ ಮಳೆ: ನಿಮ್ಮ ಮನೆ ಮತ್ತು ಕುಟುಂಬವನ್ನು ಸುರಕ್ಷಿತವಾಗಿಡಲು ಇಂದೇ ಈ ಕೆಲಸ ಮಾಡಿ! -
ಪೀನಟ್ ಬಟರ್ನಲ್ಲಿ ವಿಷಕಾರಿ ಶಿಲೀಂಧ್ರ? ನಿಮ್ಮ ಆರೋಗ್ಯ ಕಾಪಾಡಲು ಈ ವಿಷಯಗಳನ್ನು ಮರೆಯದಿರಿ -
ಫ್ರೆಂಡ್ಶಿಪ್ ಡೇ: ಕೊನೆಯ ನಿಮಿಷದಲ್ಲಿ ಸ್ನೇಹಿತರಿಗೆ ನೀಡಲು 499 ರೂ. ಒಳಗಿನ ಬೆಸ್ಟ್ ಗಿಫ್ಟ್ ಐಡಿಯಾಗಳು! -
CWG 2026: ಗಂಟೆಗಟ್ಟಲೆ ಟಿವಿ ಮುಂದೆ ಕುಳಿತು ಪಂದ್ಯ ನೋಡುವಿರಾ? ಈ 8 ನಿಮಿಷದ ವರ್ಕೌಟ್ ಮಿಸ್ ಮಾಡ್ಬೇಡಿ! -
ಶ್ರಾವಣ ಮಾಸದ ಉಪವಾಸ: ದಂಪತಿಗಳೇ, ಹಬ್ಬದ ಆಚರಣೆಯಲ್ಲಿ ಗೊಂದಲ ಬೇಡ, ಈ ಟಿಪ್ಸ್ ಫಾಲೋ ಮಾಡಿ!
ಸುರಿಯುತ್ತಿರುವ ಹಿಮದಲ್ಲಿ ಯೋಗಿಯ ಧ್ಯಾನ: ಈ ವೈರಲ್ ವೀಡಿಯೋ ಹಿಂದಿನ ಸತ್ಯಾಂಶವೇನು?
ಹಿಮ ಪರ್ವತದಲ್ಲಿ ಕುಳಿತು ಧ್ಯಾನ ಮಾಡುತ್ತಿರುವ ಯೋಗಿಯ ವೀಡಿಯೋ ವೈರಲ್ ಆಗಿತ್ತು. ಈ ವೀಡಿಯೋ ನೋಡಿದವರು ಇದೊಂದು ನಿಜ ವೀಡಿಯೋ ಎಂದು ನಂಬಲು ಜನರು ಸಿದ್ಧವಿರಲಿಲ್ಲ.
ಅದೊಂದು ಸೀನ್ ಸೆಟಪ್ ಆಗಿರಬಹುದು ಅಥವಾ AI ಚಿತ್ರಿಸಿದ ಚಿತ್ರವಿರಬಹುದು ಎಂದು ಹೇಳಿದ್ದರು. ಏಕೆಂದರೆ ಆ ವೀಡಿಯೋ ನೋಡಿ ಅದನ್ನು ನಂಬುವುದು ಯಾರಿಗಾದರೂ ಕಷ್ಟವಾಗುವುದು, ನಾವು ಸ್ನೋ ವರ್ಲ್ಡ್‌ಗೆ ಹೋದಾಗ ಅಲ್ಲಿ ಒಂದಿಷ್ಟು ಸಮಯ ಕಳೆದ ಮೇಲೆ ನಮಗೆ ಅಲ್ಲಿ ನಿಲ್ಲುವುದು ಕಷ್ಟವಾಗುವುದು, ಅಂಥದ್ದರಲ್ಲಿ ಹಿಮ ಪವರ್ತದಲ್ಲಿ ಕುಳಿತು ಧ್ಯಾನ ಮಾಡುವುದು ಎಂದರೆ ಅದನ್ನು ನಂಬಲು ಯಾರಿಗಾದರೂ ಕಷ್ಟವಾಗುತ್ತೆ, ಆದರೆ ಇದೀಗ ಈ ವೀಡಿಯೋದ ಹಿಂದಿನ ಸತ್ಯಾಂಶ ಬಯಲಾಗಿದೆ.

ಸಾಮಾಜಿಕ ತಾಣದಲ್ಲಿ ವೈರಲ್ ಆದ ವೀಡಿಯೋ ಫೇಕ್ ಅಲ್ಲ
ಈ ವೀಡಿಯೋ ವೈರಲ್ ಆಗುತ್ತಿದ್ದಂತೆ ವೀಕ್ಷಕರು ಈ ವೀಡಿಯೋದ ಸತ್ಯಾಂಶ ತಿಳಿಯಲು ಬಯಸಿದ್ದರು. ಆದರೆ ಹಿಮಾಚಲ ಪ್ರದೇಶದ ಕುಲ್ಲುವಿನ ಕೌಲುನ್‌ತಕ್ ಪೀಠ ಧಾರ್ಮಿಕ ಸಂಸಥೆ ಈ ವೀಡಿಯೋ ಫೇಕ್ ಅಲ್ಲ ನಿಜ ಎಂಬ ಸತ್ಯಾಂಶ ಬಹಿರಂತ ಪಡಿಸಿದೆ. ಆ ಯೋಗಿಯನ್ನು ಸತ್ಯೇಂದ್ರ ನಾಥ್ ಎಂದು ಗುರುತಿಸಲಾಗಿದೆ.
ಕೌಲಾನ್‌ತಕ್ ಪೀಠ ಸತ್ಯೇಂದ್ರ ನಾಥ್ ತುಂಬಾ ವರ್ಷದಿಂದ ನಮ್ಮ ಸಂಸ್ಥೆಯಲ್ಲಿ ಇದ್ದಾರೆ ಎಂಬುವುದಾಗಿ ಹೇಳಿದೆ. ಈ ವೀಡಿಯೋವನ್ನು ಸತ್ಯೇಂದ್ರನಾಥ್ ಅವರ ಶಿಷ್ಯ ರಾಹುಲ್ ತೆಗೆದಿದ್ದು, ರಾಹುಲ್ ಗುರುವಿನ ಜೊತೆಗೆ ಆ ಸ್ಥಳಕ್ಕೆ ಹೋದಾಗ ತಮ್ಮ ಗುರು ಹಿಮದಲ್ಲಿ ಧ್ಯಾನ ಮಾಡುವುದನ್ನು ನೋಡಿ ತೆಗೆದ ವೀಡಿಯೋ ಆಗಿದೆ.
ಫೆಬ್ರವರಿಯ ಮೊದಲ ವಾರದಲ್ಲಿ ಸತ್ಯೇಂದ್ರನಾಥ್ ಹಾಗೂ ಅವರು ಶಿಷ್ಯರಾದ ರಾಹುಲ್ ಹಾಗೂ ಸವರ್ಣಿನಾಥ್ ಕುಲ್ಲುವಿನ ಸೆರಾಜ್ ಕಣಿವೆಗೆ ಹೋಗಿದ್ದರು, ಇವರ ಈ ಪ್ರಯಾಣದಲ್ಲಿ ಒಂದು ತುಂಬಾನೇ ಹಿಮ ಬೀಳುತ್ತಿರುತ್ತದೆ, ಆವಾಗ ತಮ್ಮ ಗುರುವಿಗೆ ಈ ಬಗ್ಗೆ ಹೇಳಲು ಹೋದಾಗ ಸತ್ಯೇಂದ್ರನಾಥ್ ಹಿಮದಲ್ಲಿಯೇ ಕೂತು ಧ್ಯಾನ ಮಾಡುತ್ತಿರುವುದು ಕಣ್ಣಿಗೆ ಬೀಳುತ್ತದೆ. ಆವಾಗ ಅವರು ತಮ್ಮ ಗುರುಗಳ ವೀಡಿಯೋ ತೆಗೆದಿದ್ದು ಅದು ವೈರಲ್ ಆಗಿದೆ.
ಸವರ್ಣಿನಾಥ್ ಪ್ರಕಾರ ಅವರ ಗುರು ಹಿಮಲ್ಲಿ ಅಗ್ನಿ ಯೋಗ ಮಾಡುತ್ತಿದ್ದರು, ಅವರು ಹಿಮದಲ್ಲಿ ಕುಳಿತು ಈ ಅಗ್ನಿ ಯೋಗ ಮಾಡುವ ಅಭ್ಯಾಸವನ್ನು ಕಳೆದ 22 ವರ್ಷಗಳಿಂದ ರೂಢಿಸಿಕೊಂಡಿದ್ದರು. ಇದೀಗ ಆ ಧಾರ್ಮಿಕ ಪೀಠ ಸತ್ಯೇಂದ್ರ ನಾಥ್ ಅವರು ಮಾಡಿದಂಥ ಅಂಥ ಹಲವು ಸಾಹಸಿ ವೀಡಿಯೋಗಳನ್ನು ಕೂಡ ಬಿಡುಗಡೆ ಮಾಡಿದೆ. ಈ ಧಾರ್ಮಿಕ ಪೀಠದ ಸಾಮಾಜಿಕ ತಾಣ ಹಿಮಾಲಯದ ಸಿದ್ಧ ಯೋಗಿ ಎಂಬ ಕ್ಯಾಪ್ಷನ್ ನೀಡಿ ಈ ವೀಡಿಯೋ ಶೇರ್ ಮಾಡಿದ್ದಾರೆ.
ಹಲವು ಯೋಗಿಗಳ ಸಾಧನೆಯ ವೀಡಿಯೋಗಳಿವೆ
ನೀವು ಈ kaulantakpeethhimalaya ಸಾಮಾಜಿಕ ತಾಣಕ್ಕೆ ಹೋದರೆ ಹಲವು ಯೋಗಿಗಳ ಸಾಧನೆಯ ವೀಡಿಯೋವನ್ನು ಕಾಣಬಹುದು, ಮರದ ಪೊಟರೆಯಲ್ಲಿ ಧ್ಯಾನ ಮಾಡುತ್ತಿರುವುದು, ದಟ್ಟ ಅರಣ್ಯದ ನಡುವೆ ಮರದ ಮೇಲೆ, ಝರಿಯಲ್ಲಿ ಕುಳಿತು ಧ್ಯಾನ ಮಾಡುವುದು ಹೀಗೆ ಹಲವು ವೀಡಿಯೋಗಳನ್ನು ಕಾಣಬಹುದು.
ಈ ರೀತಿ ಸಾಧನೆ ಮಾಡುತ್ತಿರುವ ಹಲವ ಯೋಗಿಗಳಿದ್ದಾರೆ
ಪುರಾಣದಲ್ಲಿ ಒಂಟಿ ಕಾಲಿನಲ್ಲಿ ತಪ್ಪಸ್ಸು ಮಾಡಿದ ಸಾಧುಗಳ ಬಗ್ಗೆ ಕೇಳಿದ್ದೇವೆ, ಆದರೆ ಈ ಆಧುನಿಕ ಯುಗದಲ್ಲಿಯೂ ಅಂಥ ಯೋಗಿಗಳು ಇದ್ದಾರೆ. ಹಿಮಾಲಯ ಬೆಟ್ಟದಲ್ಲಿ ಇಂಥವರನ್ನು ಕಾಣಬಹುದು. ತಮ್ಮ ಇಡೀ ಜೀವನವನ್ನು ಮೋಕ್ಷ ಸಾಧನೆಗೆ ಮೀಸಲಿಟ್ಟ ಇಂಥ ಸಾಧುಗಳನ್ನು ನೋಡುವಾಗ ಆಧ್ಯಾತ್ಮದ ಸೆಳೆದ ಮತ್ತಷ್ಟು ಹೆಚ್ಚಾಗುವುದು ಅಲ್ವಾ?



Click it and Unblock the Notifications