Latest Updates
-
ಹೊಸ ರೀತಿಯ ಟೊಮೆಟೊ ಚಕ್ಕುಲಿ ಸುಲಭವಾಗಿ ಮಾಡಿ: ಇಲ್ಲಿದೆ ಮಾಡುವ ವಿಧಾನ -
ಶನಿ ಸಂಚಾರ 2026: ಮಾರ್ಚ್ನಿಂದ ಈ 5 ರಾಶಿ ಜನರು ಎಚ್ಚರವಹಿಸಿ, ವೈಯಕ್ತಿಕ ಹಾನಿ ಸಂಭವ! -
ಮಸಾಲೆ ಲೆಸ್ ವೈಟ್ ಪಲಾವ್; ವಿಭಿನ್ನ ರುಚಿ ವಿಶೇಷ ಖಾದ್ಯ ಸಿದ್ದಮಾಡಿ ನೋಡಿ! -
ಅಂತಾರಾಷ್ಟ್ರೀಯ ಮಹಿಳಾ ದಿನ: ದಕ್ಷಿಣ ಏಷ್ಯಾದಲ್ಲಿ ಹೆಚ್ಚಾಗುತ್ತಿದೆ ರಕ್ತಹೀನತೆ, ಮಹಿಳೆಯರೇ ಬಲಿಪಶು ಏಕೆ? -
March 08 Horoscope: ಯಾರ ಬಳಿಯಾದರು ಸಾಲ ಪಡೆಯುವ ಆಲೋಚನೆ ಮುಂದೂಡಿ! -
ನೀನೇ ನನ್ನ ಶಕ್ತಿ.. ನಿಮ್ಮ ಪ್ರಿಯತಮೆಗೆ ಕಳಿಸಿ ಈ ರೊಮ್ಯಾಂಟಿಕ್ ಶುಭಾಶಯಗಳು! ಆಕೆಯ ಮುಖದಲ್ಲಿ ನಗು ತರಿಸಿ -
ಕೊನೆಗೂ ಬಂತು ರಾಜಯೋಗ: ಈ ರಾಶಿಗಳಿಗೆ ನಸೀಬಲ್ಲೇ ಇಲ್ಲದ ಸುಖ-ಸಂಪತ್ತು ಪ್ರಾಪ್ತಿ! ಪ್ರೀತಿಯಲ್ಲಿ ದೊಡ್ಡ ಯಶಸ್ಸು -
ಎಂದಾದರೂ ಮೊಸರು ಪರೋಟ ತಿಂದಿದ್ದೀರಾ? ಒಮ್ಮೆ ಇದರ ರುಚಿ ನೋಡಿ.. ಹಿಟ್ಟು ಕಲಸುವಾಗ ಈ ಟ್ರಿಕ್ ಬಳಸಿ -
ಹುಷಾರ್.. ಗಂಡನಿಗೆ ಈ 4 ಮಾತು ಹೇಳ್ತೀರಾ? ಮನೇಲಿ ಬೆಂಕಿ ಉರಿಯುತ್ತೆ.. ಹೀಗೆ ಮಾಡಿದ್ರೆ ಸಂಸಾರದಲ್ಲಿ ಸುಖ ಇರುತ್ತೆ -
ಸಿಸ್ಟರ್.. 30+ ಬಳಿಕ ಈ ಸೂತ್ರಗಳನ್ನು ಬೆಳೆಸಿಕೊಳ್ಳಿ! ಆರೋಗ್ಯ ಸದಾ ಚೆನ್ನಾಗಿ ಇರುತ್ತೆ
ಬೆಂಗಳೂರಿನಲ್ಲಿ ನೀರಿನ ಅಭಾವ: ಇವರು ಬಿಸಿಲಿನಲ್ಲಿ ಕರ್ತವ್ಯದಲ್ಲಿರುವ ಪೊಲೀಸರಿಗೆ ನೀರು ಕೊಟ್ಟು ಪುಣ್ಯಕಟ್ಟಿಕೊಳ್ಳುತ್ತಿದ್ದಾರೆ
ಕರ್ನಾಟಕದಲ್ಲಿ ಮಳೆಯಿಲ್ಲದೆ ಬರಗಾಲ ಉಂಟಾಗಿದೆ. ಅದರಲ್ಲಿಯೂ ಬೆಂಗಳೂರಿನ ಜನತೆಗೆ ನೀರಿನ ಅಭಾವ ತುಸು ಹೆಚ್ಚಾಗಿಯೇ ಕಾಡಿದೆ. ಬೆಂಗಳೂರಿನ ಹಲವು ಭಾಗಗಳಲ್ಲಿ ಜನರು ಕುಡಿಯುವ ನೀರಿಗೂ ಪರದಾಡುತ್ತಿದ್ದರೆ, ಇನ್ನು ಕೆಲವು ಕಡೆ ತಕ್ಕ ಮಟ್ಟಿಗೆ ನೀರು ಸಿಗುತ್ತಿದೆ. ಈಗ ಎಲ್ಲಡೆ ನೀರು ನೀರು ಎಂಬ ಕೂಗು ತುಂಬಾನೇ ಕೇಳಿ ಬರುತ್ತಿದೆ.
ಯಾರಾದರೂ ಮನೆಗೆ ಬಂದಾಗ ಅಥವಾ ದಾರಿಯಲ್ಲಿ ಹೋಗುವರು ಬಂದು ಕುಡಿಯಲು ಸ್ವಲ್ಪ ನೀರು ಕೊಡಿ ಎಂದ ಕೇಳಿದರೆ ನೀರು ಕೊಡುವುದಕ್ಕೆ ಹಿಂದೆ ಮುಂದೆ ನೋಡುವ ಪರಿಸ್ಥಿತಿ ಉಂಟಾಗಿದೆ, ಹನಿ ಹನಿ ನೀರಿನ ಬೆಲೆ ಏನು ಎಂಬುವುದು ಜನರಿಗೆ ಗೊತ್ತಾಗಿದೆ. ಜನರು ನೀರಿಗಾಗಿ ಪರಿತಪಿಸುತ್ತಿದ್ದಾರೆ, ಇನ್ನೆಂದೂ ನೀರನ್ನು ವ್ಯರ್ಥ ಮಾಡಲ್ಲ ಅಂದುಕೊಂಡಿದ್ದಾರೆ,ಅಷ್ಟರ ಮಟ್ಟಿಗೆ ಕಷ್ಟವನ್ನು ಅನುಭವಿಸುತ್ತಿದ್ದಾರೆ.

ಟ್ರಾಫಿಕ್ ಪೊಲೀಸರಿಗೆ ನೀರು ನೀಡುತ್ತಿರುವ ವ್ಯಕ್ತಿ: ಮಾನವೀಯತೆಯ ಮುಖವಿದು
ನೀರಿಗೆ ಇಷ್ಟೆಲ್ಲಾ ಅಭಾವ ಇರುವಾಗ ಇಲ್ಲೊಬ್ಬರು ಬಿಸಿಲಿನಲ್ಲಿ ನಿಂತು ಕೆಲಸ ಮಾಡುತ್ತಿರುವ ಟ್ರಾಫಿಕ್ ಪೊಲೀಸರಿಗೆ ಬಾಟಲಿ ನೀರು ತಂದುಕೊಡುವ ಕೆಲಸ ಮಾಡುತ್ತಿದ್ದಾರೆ. ಈ ಉರಿ ಬಿಸಿಲಿನಲ್ಲಿ ನಿಂತಿರುವಾಗ ಈ ರೀತಿ ಒಬ್ಬ ವ್ಯಕ್ತಿ ಬಂದು ಕುಡಿಯುವ ನೀರಿನ ಬಾಟಲಿ ನೀಡಿದರೆ ಎಷ್ಟು ಖುಷಿಯಾಗಬೇಡ. ಈ ರೀತಿಯ ದೃಶ್ಯ ಕಂಡು ಬಂದಿರುವುದು ಬೆಂಗಳೂರಿನ ಯಲಹಂಕ ಭಾಗದಲ್ಲಿ.
ಈ ವ್ಯಕ್ತಿಯ ಪುಣ್ಯದ ಕೆಲಸವನ್ನು ಬೆಂಗಳೂರಿನ ಟ್ರಾಫಿಕ್ ಪೊಲೀಸರೊಬ್ಬರು ಶೇರ್ ಮಾಡಿದ್ದು ಈ ಪೋಸ್ಟ್ ವೈರಲ್ ಆಗಿದೆ. ಈ ವ್ಯಕ್ತಿ ಸಿಟಿಯೊಳಗಡೆ ಸ್ಕೂಟಿಯಲ್ಲಿ ಹೋಗಿ ಅಲ್ಲಲ್ಲಿ ಕರ್ತವ್ಯದಲ್ಲಿ ಇರುವ ಟ್ರಾಫಿಕ್ ಪೊಲೀಸರಿಗೆ ನೀರನ್ನು ಕೊಡುವ ಕೆಲಸ ಮಾಡುತ್ತಿದ್ದಾರೆ. ಇದನ್ನು ಪ್ರತಿನಿತ್ಯ ಮಾಡುತ್ತಿದ್ದಾರೆ, ಅವರ ಕಾರ್ಯಕ್ಕೆ ದೊಡ್ಡ ಸಲ್ಯೂಟ್ ಎಂಬುವುದಾಗಿ ಹೇಳಿದ್ದಾರೆ.
I don't know the name of this uncle driving an Activa but I know his job. It is his daily duty to give water to the traffic police personnel on duty. I really salute him. 🫡🫡@hebbaltrafficps @DCPTrNorthBCP @blrcitytraffic @jointcptraffic @3rdEyeDude @alokkumar6994 pic.twitter.com/fQssQoQqWc
— Shree ram Bishnoi (@ShreeRA43002214) March 31, 2024
ಅವರು ಯಾರು? ಅವರ ಹೆಸರೇನು ಎಂಬುವುದು ಗೊತ್ತಿಲ್ಲ ಎಂಬುವುದಾಗಿ ಆ ಕಾನ್‌ಸ್ಟೇಬಲ್ ಹೇಳಿದ್ದಾರೆ. ಇವರು ಮಾಡುತ್ತಿರುವುದು ನಿಜಕ್ಕೂ ದೊಡ್ಡ ಕಾರ್ಯ. ಈ ಉರಿ ಬಿಸಿಲಿನಲ್ಲಿ ನಮಗೆ ಮನೆಯಿಂದ ಹೊರಗಿಳಿಯಲು ಕಷ್ಟವಾಗುವುದು, ಆದರೆ ಟ್ರಾಫಿಕ್ ಪೊಲೀಸರು ಎಷ್ಟೇ ಕಷ್ಟ ಬರಲಿ ಎಲ್ಲವನ್ನೂ ಸಹಿಸಿಕೊಂಡು ಕರ್ತವ್ಯ ಮಾಡಬೇಕು, ಅವರು ಕರ್ತವ್ಯದಲ್ಲಿದ್ದಾಗ ವಿಶ್ರಾಂತಿ ಅಂತ ಕೂತರೆ ಕಷ್ಟ, ಹಾಗಾಗಿ ಪ್ರತಿ ಸೆಕೆಂಡ್ ಎಚ್ಚರಿಕೆಯಿಂದ ಕರ್ತವ್ಯ ನಿರ್ವಹಿಸಬೇಕು.
ಇವರ ಕಷ್ಟವನ್ನು ಕಂಡ ಈ ವ್ಯಕ್ತಿಗೆ ಪಾಪ ಅನಿಸಿರಬೇಕು, ಹೀಗಾಗಿ ನೀರು ಹಂಚುತ್ತಿದ್ದಾರೆ ಕಾಣುತ್ತೆ, ಏನೇ ಆಗಲಿ ಅವರು ಈ ರೀತಿ ಮಾಡುತ್ತಿರುವುದು ತುಂಬಾನೇ ಪುಣ್ಯದ ಕೆಲಸ. ಇವರು ಪ್ರತಿನಿತ್ಯ ಸ್ಕೂಟಿಯಲ್ಲಿ ಬಂದು ನೀರು ಕೊಟ್ಟು ಹೋಗುತ್ತಿದ್ದಾರೆ, ಇವರ ಕೆಲಸ ಇದಿಗ ವೈರಲ್ ಆಗಿದ್ದು ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ಹೊರಗಡೆ ಹೋಗುವಾಗ ನೀರು ಕೊಂಡೊಯ್ಯಿರಿ
ಸಾಧ್ಯವಾದರೆ ಎರಡು ಬಾಟಲಿ ಕೊಂಡೊಯ್ಯಿರಿ, ಒಂದು ಬಾಟಲಿ ನಿಮಗೆ ಕುಡಿಯುವುದೋಕೆ ಆದರೆ ಇನ್ನೊಂದು ಬಾಟಲಿ ಯಾರಾದಾರೂ ಬಾಯಾರಿಕೆಯಿಂದ ನೀರು ಕೇಳಿದಾಗ ಇಲ್ಲ ಎನ್ನುವ ಬದಲಿಗೆ ಕೊಡಬಹುದು. ಈ ರೀತಿ ಮುಂದುವರೆದರೆ ನೀರು ಮುಂದಿನ ದಿನಗಳಲ್ಲಿ ದುಬಾರಿ ಅನಿಸಬಹುದು, ಆದ್ದರಿಂದ ನೀರು ವ್ಯರ್ಥವಾಗದಂತೆ ಜಾಗ್ರತೆವಹಿಸಿ.
ಮನೆಯ ಮುಂದುಗಡೆ ದೊಡ್ಡ ಅಗಲ ಪಾತ್ರೆಯಲ್ಲಿ ನೀರು ಇಡಿ
ಮನುಷ್ಯರೇ ನೀರಿಗಾಗಿ ಪರದಾಡುವ ಈ ಹೊತ್ತಿನಲ್ಲಿ ಪ್ರಾಣಿ-ಪಕ್ಷಿಗಳಿಗೆ ಎಷ್ಟು ಕಷ್ಟವಾಗಬೇಡ, ಅವುಗಳಿಗೆ ಸ್ವಲ್ಪ ನೀರನ್ನು ಇಡಿ, ಈ ಬಿಸಿಲಿನಲ್ಲಿ ಅವಳು ನೀರು ಸಿಗದೆ
ಸಾಯುವಂಥ ಪರಿಸ್ಥಿತಿ ಬರಬಾರದು. ಆದ್ದರಿಂದ ಸ್ವಲ್ಪ ನೀರು ಮನೆಯ ಎದುರುಗಡೆ ಇಡಿ.



Click it and Unblock the Notifications











