Latest Updates
-
ಬಿರುಗಾಳಿ ಅಬ್ಬರಕ್ಕೆ ಬಾಲ್ಕನಿ ಗಾರ್ಡನ್ ಹಾಳಾಗುತ್ತಾ? ನಿಮ್ಮ ಮನೆ ಮತ್ತು ಗಿಡಗಳನ್ನು ರಕ್ಷಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಬಿಸಿಲಿನ ಬೇಗೆಗೆ ಸುಸ್ತಾಗಿದ್ದೀರಾ? ದೆಹಲಿ ಸರ್ಕಾರದ ಈ 'ರಿಲೀಫ್ ವ್ಯಾನ್' ನಿಮ್ಮ ಜೀವ ರಕ್ಷಕವಾಗಬಹುದು! -
ಮೆಟ್ ಗಾಲಾ 2026: ದುಬಾರಿ ಫ್ಯಾಷನ್ ಅನ್ನು ನಮ್ಮೂರಿನ ಕ್ರಿಯೇಟರ್ಗಳು ದೇಸಿ ಶೈಲಿಯಲ್ಲಿ ಮರುಸೃಷ್ಟಿಸಿದ್ದು ಹೇಗೆ? ಅಚ್ಚರಿ ಪಡಬೇಡಿ! -
ಹೊರಗೆ ಬಿರುಗಾಳಿ, ಮನೆಯಲ್ಲಿ ಫಿಟ್ನೆಸ್: ಇಂದಿನ ಹವಾಮಾನಕ್ಕೆ ಈ ವರ್ಕೌಟ್ ಬೆಸ್ಟ್! -
ಮದುವೆ ಮನೆಯಲ್ಲಿ ನೋಟಿನ ಹಾರ: ಸಂಭ್ರಮದ ನಡುವೆ ಅನಿರೀಕ್ಷಿತವಾಗಿ ನುಗ್ಗಿ ಬಂತು ರಣರಂಗ! -
ಮಕ್ಕಳಲ್ಲಿ ಹೆಚ್ಚುತ್ತಿದೆ ಮಧುಮೇಹದ ಭೀತಿ: ಇಂದೇ ಬದಲಾಯಿಸಿ ನಿಮ್ಮ ಅಡುಗೆಮನೆಯ ಈ ಅಭ್ಯಾಸಗಳನ್ನು! -
ಮೆಟ್ ಗಾಲಾ 2026: ಜಾಗತಿಕ ವೇದಿಕೆಯಲ್ಲಿ ಅಬ್ಬರಿಸಿದ ಭಾರತೀಯ ಸಂಸ್ಕೃತಿ, ಫ್ಯಾನ್ಸ್ ಫಿದಾ! -
ಬೇಸಿಗೆಯ ಬಿಸಿಲಿಗೆ ಸುಸ್ತಾದ್ರಾ? ಕೇವಲ 1000 ರೂಪಾಯಿಯಲ್ಲಿ ನಿಮ್ಮ ಮನೆಯನ್ನು ತಂಪಾಗಿಸಿ! -
ದೆಹಲಿ ಮಂದೆದ್ದಿದೆ: ವರ್ಷದಲ್ಲೇ ಮೊದಲ ಬಾರಿಗೆ ಸಿಕ್ಕಿದೆ ಇಂತಹ ಅದ್ಭುತ ಅವಕಾಶ! -
ದೆಹಲಿ-ಎನ್ಸಿಆರ್ನಲ್ಲಿ ಯೆಲ್ಲೋ ಅಲರ್ಟ್: ಮಳೆಯ ಅಬ್ಬರದ ನಡುವೆಯೂ ದಂಪತಿಗಳು ತಮ್ಮ ಬಾಂಧವ್ಯವನ್ನು ಗಟ್ಟಿಗೊಳಿಸುವುದು ಹೇಗೆ?
ಅಪಾಯಕಾರಿ ಗಂಗಾವಳಿಯಲ್ಲಿ ಅರ್ಜುನ್ ಪತ್ತೆಗೆ ಬಂದಿರುವ ಈಸ್ವರ್ ಮಲ್ಪೆ ಕುರಿತ ಹೆಮ್ಮೆಯ ಸಂಗತಿಗಳು
ಈಶ್ವರ್ ಮಲ್ಪೆ ಜನರ ಪಾಲಿನ ಆಪತ್ಪಾಂಧವ, ಇಂದು ಅರ್ಜುನ್ ಹುಡುಕಾಟಕ್ಕೆ ಈಶ್ವರ್ ಮಲ್ಪೆ ಸ್ವಇಚ್ಛೆಯಿಂದ ಮುಂದೆ ಬಂದಾಗ ಈಶ್ವರ್ ಮಲ್ಪೆ ಬಗ್ಗೆ ಗೊತ್ತಿರುವವರೆಗೆ ಅರ್ಜುನ್ ಹುಡುಕಾಟ ಖಂಡಿತ ಕೊನೆಯಾಗಲಿದೆ ಎಂಬ ನಿರೀಕ್ಷೆ ಮಾಡಿತು. ಈಶ್ವರ್ ಮಲ್ಪೆ ಸಮುದ್ರದಲ್ಲಿ ಯಾವುದೋ ಒಂದು ಕಾರಣಕ್ಕೆ ಇಳಿದರು ಎಂದಾದರೆ ಆ ಉದ್ದೇಶ ಈಡೇರಿದಂತೆ.

ಕರ್ನಾಟಕದಲ್ಲಿರುವ ಪ್ರಸಿದ್ಧ ಮುಳುಗು ತಜ್ಞ
ಕರ್ನಾಟಕದಲ್ಲಿ ಏನಾದರೂ ಅವಘಡ ಸಂಬಂಧಿಸಿದಾಗ ರಿಸ್ಕ್ ಎಂದ ಕಡೆ ಕೂಡ ತನ್ನ ಪ್ರಾಣ ಲೆಕ್ಕಿಸದೆ ಎಷ್ಟೋ ಶವಗಳನ್ನು ಮೇಲೆತ್ತಿದ್ದಾರೆ, ಉಡುಪಿ, ಮಂಗಳೂರು ಬೀಚ್ಗಳಲ್ಲಿ ಮುಳುಗಿ ಸಾಯುತ್ತಿರುವ ವ್ಯಕ್ತಿಗಳ ಪ್ರಾಣ ರಕ್ಷಣೆ ಮಾಡಿದ್ದಾರೆ, ನೀರಿನಾಳದಲ್ಲಿ ಸೇರಿದ ಮೊಬೈಲ್, ಚಿನ್ನ ಮುಂತಾದ ದುಬಾರಿ ವಸ್ತುಗಳನ್ನು ನೀರಿನಿಂದ ಮೇಲೆತ್ತಿ ಜನರಿಗೆ ತಂದು ಕೊಟ್ಟಿದ್ದಾರೆ.
ಇವರು ಮೇಲೆಕ್ಕೆತ್ತಿದ ಶವಗಳೆಷ್ಟೋ... ಅದರೆ ಒಂದು ಘಟನೆ ಮಾತ್ರ ಎಲ್ಲರ ನೆನಪಿನಾಳದಲ್ಲಿದೆ, ಕೊಲ್ಲೂರಿನ ಅರಿಶಿಣಗುಂಡಿಯಲ್ಲಿ ನೀರುಪಾಲಾದ ಭದ್ರಾವತಿಯ ಶರತ್ ಮೃತದೇಹವನ್ನು ಅಷ್ಟೊಂದು ರಿಸ್ಕ್ ತೆಗೆದುಕೊಂಡು ಮೇಲಕ್ಕೆ ತಂದವರು ಈಶ್ವರ್ ಮಲ್ಪೆ.
ತಮ್ಮ ಜೀವವನ್ನು ಪಣಕ್ಕಿಟ್ಟು ಕಾರ್ಯಾಚರಣೆ ಮಾಡುತ್ತಾರೆ
ನೀರಿನಾಳದಲ್ಲಿ ಇಳಿದು ಶವವನ್ನು ಮೇಲಕ್ಕೆತ್ತುವುದು ಅಥವಾ ಕಳೆದು ಹೋದ ವಸ್ತುಗಳನ್ನು ಹುಡುಕಿಕೊಡುವುದು ಎಂದರೆ ಸಾಮಾನ್ಯ ವಿಷಯ ಅಲ್ವೇ ಅಲ್ಲ. ಎಂಥ ಆಳದ ಬಾವಿಯಾಗಿರಲಿ, ರಭಸದಿಂದ ಹರಿಯುತ್ತಿರುವ ನದಿಯಾಗಿರಲಿ, ಸಮುದ್ರದ ಅಲೆಗಳ ಅಬ್ಬರ ಅಧಿಕವಾಗಿರುವ ಸಮಯದಲ್ಲಿ ಆಗಲಿ ಎಲ್ಲರೂ ಬೇಡ ಎಂದು ಹೇಳಿದರೂ ತನ್ನ ಪ್ರಾಣವನ್ನು ಪಣಕ್ಕಿಟ್ಟು ಕಾರ್ಯಾಚರಣೆಗೆ ಇಳಿದಿದ್ದಾರೆ.
ಸೇನಾಪಡೆ, ಎನ್‌ಡಿಆರ್‌ಎಫ್ ತಂಡ ಕಾರ್ಯಾಚರಣೆ ಮಾಡಿದರೂ ಪತ್ತೆಯಾಗಿರಲಿಲ್ಲ ಅರ್ಜುನ್
ಲಾರಿ ಇದೆ ಎಂದು ಹೇಳಲಾದ ಸ್ಥಳದಲ್ಲಿ ಸೇನೆ ಕಾರ್ಯಾಚರಣೆ ನಡೆಸಿದರೂ ಅರ್ಜುನ್ ಪತ್ತೆಯಾಗಿಲ್ಲ, ಈಗ ಈಶ್ವರ್ ಮಲ್ಪೆ ತಂಡ ಕಾರ್ಯಾಚರಣೆಗೆ ಇಳಿದಿದ್ದಾರೆ, ಈ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ, ಅಲ್ಲಿ ಗಂಗಾವಳಿ ನೀರು ತುಂಬಿ ಹರಿಯುತ್ತಿದೆ, ಆ ನೀರಿನಲ್ಲಿ ಇಳಿಯುವುದು ಆತ್ಮಹತ್ಯೆ ಮಾಡುವುದಕ್ಕೆ ಸಮ, ಹಾಗಾಗಿ ರಿಸ್ಕ್ ತೆಗೆದುಕೊಳ್ಳಲು ಯಾರೂ ಸಿದ್ಧವಿರಲ್ಲ ಅಂಥ ನೀರಿಗೆ ಇಳಿಯುವ ಧೈರ್ಯ ಮಾಡಿರುವುದು ಕಡಿಮೆ ಸಾಹಸವಂತೂ ಅಲ್ವೇ ಅಲ್ಲ. ಅರ್ಜುನ್ ಆದಷ್ಟೂ ಬೇಗ ಇವರಿಗೆ ಸಿಗುವಂತಾಗಲಿ...
ಮಗನನ್ನು ಕೊನೆಯ ಬಾರಿ ನೋಡುವ ಪೋಷಕರ ಆಸೆ ಈಡೇರಲಿ
ಅರ್ಜುನ್ ಮಡದಿ, ಪೋಷಕರು, ಸಹೋದರಿಯರು ಕೊನೆಯ ಬಾರಿಯಾದರೂ ಅರ್ಜುನ್‌ನ ನೋಡುವಂತಾದರೆ ಎಂದು ಬಯಸುತ್ತಿದ್ದಾರೆ, ಪ್ರತಿದಿನವೂ ಅರ್ಜುನ್ ನೆನಪಿನಲ್ಲಿ ಕಳೆಯುತ್ತಿದ್ದಾರೆ, ಅರ್ಜುನ್ ಸಿಕ್ಕರೆ ಆತನಿಗೆ ಎಲ್ಲಾ ಕರ್ಮಗಳನ್ನು ಮಾಡಿ ಮುಕ್ತಿ ನೀಡಿದ ಸಮಧಾನವಾದರೂ ಸಿಗಲಿದೆ. ಇವರ ಈ ಸಂಕಷ್ಟ ಅರಿತ ಈಶ್ವರ್ ಮಲ್ಪೆ ತಮ್ಮ ಪ್ರಾಣವನ್ನು ಲೆಕ್ಕಿಸದೆ ಅರ್ಜುನ್ ಹುಡುಕಾಟಕ್ಕೆ ಮುಂದಾಗಿದ್ದಾರೆ.
ಕೆಲವರಿಗೆ ವಿಶೇಷ ಸಾಮರ್ಥ್ಯ ನೀಡುತ್ತಾನೆ ದೇವರು
ಹೌದು, ಈಶ್ವರ್ ಮಲ್ಪೆಗೆ ದೇವರ ವಿಶೇಷ ಆಶೀರ್ವಾದವಿದೆ, ಹಾಗಾಗಿಯೇ ಅವರಿಗೆ ಈ ಸಾಮರ್ತ್ಯ ಒದಗಿದೆ, ಅವರನ್ನು ಆ ದೇವರಿ ಸದಾ ರಕ್ಷಣೆ ಮಾಡಲಿ, ಸಮಾಜಕ್ಕೆ ಅವರ ಸೇವೆ ಮುಂದುವರೆಯಲಿ..



Click it and Unblock the Notifications