Latest Updates
-
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI!
ಗೋಡೌನ್‌ಗೆ ನುಗ್ಗಿ ತನ್ನ ಪಾಲಿನ ಅಕ್ಕಿ ತಿಂದ ಆನೆ..! ನೋಡಿದವರು ಶಾಕ್..!
ಪ್ರಾಣಿಗಳು ಆಹಾರ ಹುಡುಕಿ ನಗರದತ್ತ ಬರುವುದು, ಮನುಷ್ಯ ಮತ್ತು ಪ್ರಾಣಿಗಳ ನಡುವಿನ ಸಂಘರ್ಷ ನಡೆಯುತ್ತಲೇ ಇದೆ. ಮಾನವ ಕಾಡುಗಳ ಕಡಿದು ಜಮೀನು, ಕಟ್ಟಡ, ಬೇಲಿ ಹಾಕಿ ನಾಶ ಮಾಡಿದಂತೆಲ್ಲಾ ಪ್ರಾಣಿಗಳು ಕಾಡು ಬಿಟ್ಟು ನಾಡಿನತ್ತ ಹೆಜ್ಜೆಹಾಕುವುದು ಸಾಮಾನ್ಯ ಎನ್ನುವಂತಾಗಿದೆ. ಅದರಲ್ಲೂ ಆನೆಗಳು, ಚಿರತೆಗಳು, ಕರಡಿ ಹೀಗೆ ಅಪಾಯಕಾರಿ ಪ್ರಾಣಿಗಳು ಜನವಾಸ ಪ್ರದೇಶದ ಮೇಲೆ ದಾಳಿ ಮಾಡುವುದನ್ನು ನಾವು ನೋಡಿದ್ದೇವೆ.
ಇನ್ನು ಇವುಗಳಲ್ಲಿ ಬುದ್ಧಿವಂತ ಪ್ರಾಣಿ ಅಂತಲೇ ಕರೆಸಿಕೊಳ್ಳುವ ಆನೆಗಳು ಸಹ ನಾಡಿನತ್ತ ಹೆಜ್ಜೆ ಹಾಕುತ್ತವೆ. ದೇಹ ದೊಡ್ಡದಾಗಿರುವ ಕಾರಣ ಅವುಗಳಿಗೆ ಆಹಾರವು ಹೆಚ್ಚಾಗಿಯೇ ಬೇಕು. ಕಾಡನ್ನು ನಾಶ ಮಾಡಿ, ಅವುಗಳು ಓಡಾಡುತ್ತಿದ್ದ ದಾರಿಯಲ್ಲಿ ಕಟ್ಟಡ, ರಸ್ತೆ ನಿರ್ಮಿಸಿದ ಮೇಲಂತೂ ಆನೆಗಳು ನಗರಗಳಲ್ಲಿ ದಾಳಿ ಮಾಡಲು ಮುಂದಾಗಿದೆ. ಅದರಲ್ಲೂ ಕಾಡಂಚಿನ ಗ್ರಾಮ, ನಗರಗಳಲ್ಲಿ ಇವುಗಳ ದಾಳಿ ಮಿತಿ ಮೀರಿದೆ.

ಈಗ ಸಾಮಾಜಿಕ ಜಾಲತಾಣದಲ್ಲಿಯೂ ಇಂತಹದೊಂದು ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಕಾಡಿನಿಂದ ನಾಡಿಗೆ ಬಂದ ಆನೆಯೊಂದು ಅಕ್ಕಿ ಮೂಟೆಗಳ ಇಟ್ಟಿದ್ದ ಗೋಡೌನ್ ಶಟರ್ ಮುರಿದು ಅಕ್ಕಿ ತಿನ್ನುತ್ತಿರುವ ವಿಡಿಯೋ ಇದಾಗಿದೆ. ಕೇರಳ ಗಡಿಭಾಗದ ಗುಂಡ್ಲುಪೇಟೆಯಲ್ಲಿ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ.
ಹಸಿವಿನಿಂದ ಕಂಗೆಟ್ಟಿದ್ದ ಆನೆ ನಾಡಿನಲ್ಲಿದ್ದ ಅಕ್ಕಿ ಮೂಟೆಗಳ ಗೋಡೌನ್‌ಗೆ ನುಗ್ಗಿದೆ. ಅಲ್ಲಿ ಆಹಾರಕ್ಕಾಗಿ ಹುಡುಕಾಡಿ ಒಂದು ಚೀಲ ಅಕ್ಕಿಯನ್ನು ಹೊರಗೆಳೆದು ತಿನ್ಜುತ್ತಿರುವುದನ್ನು ನಾವು ನೋಡಬಹುದು. ಆದರೆ ಆ ಆನೆಯ ಹಿಂದೆ ಜನರು ಓಡುತ್ತಿದ್ದು, ಆನೆಯನ್ನು ಓಡಿಸಲು ಮುಂದಾಗಿದ್ದಾರೆ, ಅದರೆ ಆನೆ ನಡೆದದ್ದೇ ದಾರಿ ಎನ್ನುವಂತೆ ತನ್ನ ಆಹಾರ ಹುಡುಕುವ ಕಾರ್ಯದಲ್ಲಿ ನಿರತವಾಗಿದೆ.
ವಿಡಿಯೋದಲ್ಲಿ ಏನಿದೆ?
ಆನೆಯೊಂದು ಆಹಾರ ಅರಸುತ್ತ ಅಡ್ಡಾಡುತ್ತಿರುವುದನ್ನು ನಾವು ವಿಡಿಯೋದಲ್ಲಿ ನೋಡಬಹುದು. ತುಂಬಾ ದಿನದಿಂದ ಆನೆ ಹಸಿದಿರುವಂತೆ ಕಾಣುತ್ತಿದ್ದು, ಜನರ ಕೂಗಾಟದ ನಡುವೆಯೂ ಅದು ತನ್ನ ಹೊಟ್ಟೆ ತುಂಬಿಸಿಕೊಳ್ಳಲು ಆಹಾರ ಹುಡುಕುತ್ತಿದೆ. ಆದರೆ ಏನು ಸಿಗದಿದ್ದಾಗ ಅಕ್ಕಿ ಗೋಡೌನ್‌ನಿಂದ ಅದರ ಮೂಗಿದೆ ಅಕ್ಕಿ ವಾಸನೆ ತಟ್ಟಿದೆ.
ತಡಮಾಡದೆ ಅದು ಶಟರ್ ಮುರಿದು ತನ್ನ ಪಾಲಿನ ಒಂದೇ ಒಂದು ಅಕ್ಕಿ ಮೂಟೆ ಎತ್ತಿಕೊಂಡು ಹೊರಗೆ ಎಳೆದು ಅದನ್ನು ತಿನ್ನಲು ಆರಂಭಿಸಿದೆ. ಆದರೆ ಈ ವೇಳೆ ಯಾರೊಬ್ಬರ ಮೇಲೂ ದಾಳಿಗೆ ಯತ್ನಿಸದೆ ಅತ್ಯಂತ ಶಾಂತ ರೀತಿಯಲ್ಲಿ ತನ್ನ ಆಹಾರ ಹುಡುಕುತ್ತಿರುವುದು ಹಲವರಿಗೆ ಅಚ್ಚರಿ ಮೂಡಿಸಿದೆ.
ನರೇಶ್ ನಂಬೀಸನ್ ಅವರು X (ಟ್ವಿಟರ್)ನಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ವೀಡಿಯೋದಲ್ಲಿ ಆನೆಯು ಶಟರ್ ಅನ್ನು ಒಡೆದು ತನ್ನ ಸೊಂಡಿಲಿನಿಂದ ಗೋಣಿಚೀಲದಲ್ಲಿದ್ದ ಅಕ್ಕಿಯನ್ನು ಹೊರಗೆಳೆದು ಅದನ್ನು ಕಾಲಿನಿಂದ ಒದ್ದು ಬಳಿಕ ಸೊಂಡಿಲಿನಿಂದ ಅಕ್ಕಿ ಸೇವಿಸುತ್ತಿರುವುದನ್ನು ನಾವು ನೋಡಬಹುದು.
ವಿಡಿಯೋ ವೀಕ್ಷಿಸಿದ ಕೆಲವು ಮಂದಿಯ ಆತಂಕಕ್ಕೂ ಇದು ಕಾರಣವಾಗಿದೆ. ಕಾಡಾನೆಯ ಬಳಿ ವಿಡಿಯೋ ಮಾಡುವ ಉದ್ದೇಶದಿಂದ ಇಷ್ಟು ಹತ್ತಿರಕ್ಕೆ ತೆರಳಿರುವವರ ಮೇಲೆ ಆನೆ ತಿರುಗಿ ಬೀಳಬಹುದು. ಇಲ್ಲವೆ ಆಹಾರ ಸಿಗದಿರುವ ಕಾರಣ ಅದು ಕೋಪಗೊಂಡು ಸಿಕ್ಕಸಿಕ್ಕವರ ಮೇಲೆ ದಾಳಿ ಮಾಡಬಹುದು. ಹೀಗೆ ಕಾಡಿನಿಂದ ಆನೆ ಬಂದಾಗ ಅದರಿಂದ ಆದಷ್ಟು ಅಂತರ ಕಾಪಾಡಿಕೊಳ್ಳುವ ಜೊತೆಗೆ ಅರಣ್ಯ ಇಲಾಖೆ ಸಿಬ್ಬಂದಿಗೆ ಮಾಹಿತಿ ಮುಟ್ಟಿಸಬೇಕು ಎಂಬುದು ನೆಟ್ಟಿಗರ ವಾದವಾಗಿದೆ.
ಆದ್ರೆ ಇಲ್ಲಿ ಆನೆಯ ಬುದ್ಧಿವಂತಿಕೆ ಕಂಡು ಜನ ನಿಬ್ಬೆರಗಾಗಿದ್ದಾರೆ. ಆನೆಗೆ ಎಲ್ಲಿ ಆಹಾರ ಸಿಗುತ್ತೆ ಅನ್ನೋದು ಮೊದಲೇ ತಿಳಿದಿರುತ್ತಾ? ಅಥವಾ ಅದಕ್ಕೇನಾದರು ವಿಶೇಷ ಶಕ್ತಿ ಇದೆಯೇ? ಆಹಾರ ಇಟ್ಟಿರುವ ಜಾಗ ಹೇಗೆ ತಿಳಿಯುತ್ತೇ ಅನ್ನೋದು ಕುತೂಹಲ ಮೂಡಿಸಿದೆ.



Click it and Unblock the Notifications
