Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ಐನ್‌ಸ್ಟೈನ್ ಮೆದುಳು ಕದ್ದು 240 ಪೀಸ್ ಮಾಡಿದ್ದ ವೈದ್ಯ..! ಆಮೇಲೆ ಆಗಿದ್ದೇನು ಗೊತ್ತಾ?
ನಮಗೆ ವಿಶ್ವದ ಅತ್ಯಂತ ಬುದ್ಧಿವಂತ ವ್ಯಕ್ತಿ ಯಾರು ಅಂತ ಕೇಳಿದ್ರೆ ನೆನೆಪಾಗೋದೇ ಆಲ್ಬರ್ಟ್ ಐನ್‌ಸ್ಟೈನ್. ಅವರಲ್ಲಿ 160ರ ಆಸುಪಾಸಿನ IQ ಇತ್ತು. ಇದರಿಂದ ಅವರು ಅತ್ಯಂತ ಬುದ್ದಿವಂತ ವ್ಯಕ್ತಿ ಎನಿಸಿಕೊಂಡಿದ್ದರು. ಅಲ್ಲದೆ ಹತ್ತಾರು ಸಿದ್ದಾಂತಗಳು, ಅನ್ವೇಷಣೆಗಳು ಅವರನ್ನು ಉತ್ತುಂಗಕ್ಕೆ ಏರಿಸಿದ್ದವು.
ಐನ್‌ಸ್ಟೈನ್ ಒಟ್ಟಾರೆ ತಮ್ಮ ಜೀವಿತಾವಧಿಯಲ್ಲಿ ಐನ್‌ಸ್ಟೈನ್ 300ಕ್ಕೂ ಹೆಚ್ಚು ಸಂಶೋಧನಾ ಪ್ರಬಂಧಗಳು ಮತ್ತು ಇತರ 150 ಕ್ಕೂ ಹೆಚ್ಚು ಪ್ರಬಂಧಗಳನ್ನು ಬರೆದಿದ್ದಾರೆ. ಭಾರತದ ಸತ್ಯೇಂದ್ರನಾಥ್ ಬೋಸ್ ಜೊತೆಗೂಡಿ ನೀಡಿದ 'ಬೋಸ್-ಐನ್‌ಸ್ಟೈನ್ ಸ್ಟಾಟಿಸ್ಟಿಕ್ಸ್' ಸೇರಿದಂತೆ 'ಐನ್‌ಸ್ಟೈನ್ ರೆಫ್ರಿಜರೇಟರ್', 'ಐನ್‌ಸ್ಟೈನ್-ಕಾರ್ಟನ್ ಸಿದ್ಧಾಂತ', 'ಐನ್‌ಸ್ಟೈನ್-ಇನ್ಫೆಲ್ಡ್-ಹಾಫ್ಮನ್ ಇಕ್ವೇಷನ್ಸ್', 'ಐನ್‌ಸ್ಟೈನ್-ಪೊಡೊಲೊಸ್ಕಿ-ರೋಸೆನ್ ಪ್ಯಾರಾಡಾಕ್ಸ್' ಇವುಗಳಲ್ಲಿ ಪ್ರಮುಖವಾದವು.

ಆದರೆ ಅವರ ಮೆದುಳು ಹಾಗೂ ಬುದ್ಧಿವಂತಿಕೆ ಕುರಿತು ಹತ್ತು ಹಲವು ವಾದಗಳಿವೆ ಹಲವು ಕಥೆಗಳಿವೆ. ಅವರು 1879ರಲ್ಲಿ ಜರ್ಮನಿಯ ಉಲ್ಮ್ ನಗರದಲ್ಲಿ ಜನಿಸಿದರು. 1955ರಲ್ಲಿ ಕೊನೆಯುಸಿರೆಳೆದರು. ಅಂದಿನಿಂದ ಇಂದಿನವರೆಗೂ ಅವರ ಮೆದುಳು ಹಾಗೂ ಅದರ ಕಾರ್ಯಕ್ಷಮತೆ ಬಗ್ಗೆ ಹಲವು ವಾದಗಳಿವೆ. ಅವರ ಮೆದುಳನ್ನು ಬೇರೆಯವರಿಗೆ ಜೋಡಿಸಲು ಯತ್ನಿಸಲಾಗಿದೆ. ಅವರ ಮೆದುಳನ್ನು ಪರೀಕ್ಷೆಗೆ ಒಳಪಡಿಸಲಾಗಿದೆ ಹೀಗೆ ಹತ್ತಾರು ಕಥೆಗಳಿವೆ.
ಆದರೆ ಈ ಕಥೆಗಳ ಜೊತೆ ಇನ್ನೊಂದು ಅಚ್ಚರಿಯ ಅಂಶ ಬೆಳಕಿಗೆ ಬಂದಿದೆ. ಅದೇನೆಂದರೆ ಐನ್‌ಸ್ಟೈನ್ ಮರಣದ ಬಳಿಕ ಅವರ ಮೆದುಳನ್ನು 4 ದಶಕಗಳ ಕಾಲ ವೈದ್ಯರೊಬ್ಬರು ತೆಗೆದುಕೊಂಡು ಹೋಗಿದ್ದರಂತೆ. ಯಾರ ಅನುಮತಿಯನ್ನು ಪಡೆಯದೇ ವೈದ್ಯರು ಆ ಮೆದುಳನ್ನು ತಮ್ಮ ಬಳಿಯೇ ಇಟ್ಟುಕೊಂಡಿದ್ದರಂತೆ.
ಏನಿದು ಐನ್‌ಸ್ಟೈನ್ ಮೆದುಳು ಕದ್ದ ಕಥೆ
ಐನ್‌ಸ್ಟೈನ್ ಏಪ್ರಿಲ್ 18, 1955 ರಂದು ತಮ್ಮ 76ನೇ ವಯಸ್ಸಿನಲ್ಲಿ ಅನಾರೋಗ್ಯಕ್ಕೆ ತುತ್ತಾಗಿ ನಿಧನರಾದರು. ಡಾ. ಥಾಮಸ್ ಸ್ಟೋಲ್ಟ್ಜ್ ಹಾರ್ವೆ ಎಂಬಾತ ಐನ್‌ಸ್ಟೈನ್ ನಿಧನರಾದ ದಿನ ಪ್ರಿನ್ಸ್‌ಟನ್ ಆಸ್ಪತ್ರೆಯಲ್ಲಿ ಮುಖ್ಯ ರೋಗಶಾಸ್ತ್ರಜ್ಞರಾಗಿದ್ದರು.
ಹಾರ್ವೆಗೆ ಒಂದು ಅಸಾಮಾನ್ಯ ಕಲ್ಪನೆ ಇತ್ತು. ಐನ್‌ಸ್ಟೈನ್‌ನ ಮೆದುಳನ್ನು ತೆಗೆದುಕೊಳ್ಳುವ ಮೂಲಕ ತಾನು ಸಹ ಬುದ್ಧವಂತನಾಗಬಹುದು. ವೈದ್ಯಕೀಯ ಲೋಕದಲ್ಲಿ ಇನ್ನಿಲ್ಲದ ಅನ್ವೇಷಣೆಗಳ ಮಾಡಬಹುದು. ಇದರಿಂದ ಇಡೀ ವೈದ್ಯಕೀಯ ಲೋಕ ನನ್ನನ್ನು ಸತ್ತ ಮೇಲೂ ನೆನಪಿಟ್ಟುಕೊಳ್ಳಲಿದೆ ಎಂಬುದು ಆತನ ನಂಬಿಕೆಯಾಗಿತ್ತು.
1955ರಲ್ಲಿ ಐನ್‌ಸ್ಟೈನ್‌ನ ಶವಪರೀಕ್ಷೆಯ ಸಮಯದಲ್ಲಿ, ಹಾರ್ವೆ ಐನ್‌ಸ್ಟೈನ್ ಕುಟುಂಬವನ್ನು ಮೊದಲು ಕೇಳದೆ ವೈಜ್ಞಾನಿಕ ಅಧ್ಯಯನಕ್ಕಾಗಿ ಮೆದುಳಿನ ಭಾಗಗಳನ್ನು ಇಟ್ಟುಕೊಂಡನು. ಅವರು ಆಲ್ಬರ್ಟ್‌ನ ಹಿರಿಯ ಮಗ ಹ್ಯಾನ್ಸ್ ಐನ್‌ಸ್ಟೈನ್‌ನಿಂದ ಮಾತ್ರ ಅನುಮತಿ ಪಡೆದಿದ್ದ ಎಂದು ತಿಳಿದುಬಂದಿದೆ.
ಮೆದುಳನ್ನು ಕತ್ತರಿಸಿ, ಚಿತ್ರಗಳನ್ನು ತೆಗೆದುಕೊಂಡು ಅದನ್ನು ಸಂರಕ್ಷಿಸಿದ
ಹಾರ್ವೆ ಆ ಮೆದುಳನ್ನು ತನ್ನ ಮನೆಯಲ್ಲಿದ್ದ ಪ್ರಯೋಗಾಲಯಕ್ಕೆ ತೆಗೆದುಕೊಂಡು ಬಂದಿದ್ದ. ಅಲ್ಲಿಯೇ ಅದರ ಚಿತ್ರಗಳ ತೆಗೆದುಕೊಂಡು ಬರೋಬ್ಬರಿ 240 ತುಂಡುಗಳಾಗಿ ಕತ್ತರಿಸಿದ್ದ. ಬಳಿಕ ಆ ಮೆದುಳನ್ನು ಇಟ್ಟುಕೊಂಡು ಅದರ ಮೇಲೆ ಪರೀಕ್ಷೆಗಳ ನಡೆಸಲು ಆತ ಮುಂದಾಗಿದ್ದ. ಹಗಲು ರಾತ್ರಿ ಮೆದುಳಿನ ನ್ಯೂರಾನ್ ಪ್ರತಿಕ್ರಿಯೆಗಳು, ವಿದ್ಯುತ್ಕಾಂತೀಯ ಚಲನೆ, ನರಕೋಶಗಳು ಹೀಗೆ ಎಲ್ಲಾ ವಿಚಾರಗಳ ಒಂದೊಂದಾಗಿಯೇ ಅಧ್ಯಯನ ಮಾಡಿದ್ದ.
ಬಳಿಕ ಈ ಎಲ್ಲಾ ಅಧ್ಯಯನಗಳ ಒಟ್ಟುಗೂಡಿಸಿ ತನ್ನದೇ ಒಂದು ಸಿದ್ಧಾಂತ ರಚಿಸಿದ ಆದರೆ ಈ ಸಿದ್ಧಾಂತವನ್ನು ತಜ್ಞರು ಅಲ್ಲಗೆಳೆದರು. ಇದು ಅರ್ಥಹೀನ ಅಧ್ಯಯನ ಎಂದು ಕರೆದರು, ಅಲ್ಲದೆ ವೈದ್ಯ ಹಾರ್ವೆ ವಿರುದ್ಧ ಭಾರೀ ಟೀಕೆಗಳು ಕೇಳಿಬಂದವು. ಅಲ್ಲದೆ ಐನ್‌ಸ್ಟೈನ್ ಮೆದುಳು ವಾಪಾಸು ಮಾಡುವಂತೆ ಅವರ ಮೇಲೆ ಒತ್ತಡ ಹೇರಲಾಗಿತ್ತು. ಹೀಗಾಗಿ 2008ರಲ್ಲಿ ಅವರು ಐನ್‌ಸ್ಟೈನ್ ಕುಟುಂಬಕ್ಕೆ ಮೆದುಳನ್ನು ವಾಪಾಸು ನೀಡಿದರು.



Click it and Unblock the Notifications
