Latest Updates
-
ಶ್ರಾವಣ ಉಪವಾಸದಲ್ಲಿ ದಿನವಿಡೀ ಎನರ್ಜಿಯಿಂದ ಇರಬೇಕೆ? ಈ ಹೈ-ಪ್ರೋಟೀನ್ ಸಾತ್ವಿಕ ಆಹಾರ ಪದ್ಧತಿ ಫಾಲೋ ಮಾಡಿ! -
ಗುರು ಪೂರ್ಣಿಮೆ 2026: ಸರಳ ಪೂಜಾ ವಿಧಿ ಮತ್ತು ಕಡಿಮೆ ಬಜೆಟ್ನಲ್ಲಿ ಗುರುಗಳಿಗೆ ನೀಡಬಹುದಾದ ಬೆಸ್ಟ್ ಗಿಫ್ಟ್ ಐಡಿಯಾಗಳು! -
10 ನಿಮಿಷದ 'ಟೈಗರ್ ಫ್ಲೋ': ಬೆನ್ನುನೋವಿಗೆ ಮುಕ್ತಿ ನೀಡುವ ಅದ್ಭುತ ವ್ಯಾಯಾಮ ಇಲ್ಲಿದೆ! -
ಪ್ರತಿಭಟನೆಯಲ್ಲಿ ಪ್ರೀತಿ: 'ಪ್ರೊಟೆಸ್ಟ್ ನೇ ಬನಾ ದಿ ಜೋಡಿ' ಟ್ರೆಂಡ್ ಹಿಂದೆ ಅಡಗಿದೆ ದೊಡ್ಡ ಅಪಾಯ! -
ಮಳೆಗಾಲದಲ್ಲಿ ಮನೆಯಲ್ಲಿ ಬೂಷ್ಟು ಹರಡುತ್ತಿದೆಯೇ? ಈ 20 ನಿಮಿಷದ ಟಿಪ್ಸ್ ಪಾಲಿಸಿ, ಮನೆ ಫ್ರೆಶ್ ಆಗಿಡಿ! -
ಕೇವಲ 200 ರೂಪಾಯಿಯಲ್ಲಿ ಪರಿಸರ ಸ್ನೇಹಿ ಊಟ: ವಿಶ್ವ ಪ್ರಕೃತಿ ಸಂರಕ್ಷಣಾ ದಿನಕ್ಕೆ ನಿಮ್ಮ ಅಡುಗೆಮನೆಯೇ ಮೊದಲ ಹೆಜ್ಜೆ! -
CWG 2026: 6ನೇ ದಿನ ಭಾರತದ ಪದಕದ ಬೇಟೆ; ಮನೆಯಲ್ಲೇ ಕಮ್ಮಿ ಬಜೆಟ್ನಲ್ಲಿ ಅದ್ಭುತ ವಾಚ್ ಪಾರ್ಟಿ ಪ್ಲಾನ್! -
ವಿಶ್ವ ಹೆಪಟೈಟಿಸ್ ದಿನ: ಲಿವರ್ ಆರೋಗ್ಯ ಹೆಚ್ಚಿಸಲು ಈ 10 ನಿಮಿಷದ ಬೆಳಗಿನ ದಿನಚರಿ ಪಾಲಿಸಿ! -
ಮಳೆಗಾಲದ ರಜೆ: ವರ್ಕ್ ಫ್ರಮ್ ಹೋಮ್ ಪೋಷಕರಿಗೆ ಮಕ್ಕಳನ್ನು ನಿಭಾಯಿಸುವುದು ಹೇಗೆ? ಇಲ್ಲಿದೆ ಸರಳ ಟಿಪ್ಸ್ -
ಮಳೆಗಾಲದಲ್ಲಿ ನಿಮ್ಮ ಮನೆಯ ಗಿಡಗಳು ಸಾಯುತ್ತಿವೆಯೇ? ಈ 15 ನಿಮಿಷದ ಟಿಪ್ಸ್ ಪಾಲಿಸಿ!
ತೀರಿ ಹೋದವರು ಕನಸಿನಲ್ಲಿ ಯಾವ ರೀತಿ ಕಾಣಿಸಿದರೆ ಏನರ್ಥ?
ಕೆಲವೊಮ್ಮೆ ಕನಸಿನಲ್ಲಿ ತೀರಿ ಹೋದ ನಮ್ಮ ಅಜ್ಜ-ಅಜ್ಜಿ ಹೀಗೆ ನಮಗೆ ತುಂಬಾ ಬೇಕಾದವರು ಕಾಣಿಸಿಕೊಳ್ಳಬಹುದು. ಕನಸಿನಲ್ಲಿ ಅವರು ನಮ್ಮ ಜೊತೆ ಕೂತಿರುವಂತೆ, ಖುಷಿಯಾಗಿ ಮಾತನಾಡುವಂತೆ ಅಥವಾ ಅಳುತ್ತಿರುವಂತೆ ಕನಸು ಬೀಳಬಹುದು. ಈ ರೀತಿ ಕನಸು ಬಿದ್ದಾಗ ಅವರನ್ನು ತುಂಬಾ ನೆನೆಸಿಕೊಂಡಿದ್ದಕ್ಕೆ ಬಿದ್ದಿರಬಹುದು ಅಂದುಕೊಳ್ಳುತ್ತೇವೆ, ಆದರೆ ಕೆಲವೊಮ್ಮೆ ಅವರ ಬಗ್ಗೆ ಯೋಚನೆಯೂ ಮಾಡಿರಲ್ಲ ಆ ಸಮಯದಲ್ಲೂ ಕನಸು ಬೀಳುತ್ತದೆ. ಹೀಗೆ ಕನಸು ಬಿದ್ದಾಗ ಇದರ ಹಿಂದೆ ಏನಾದರೂ ಅರ್ಥವಿದೆಯೇ? ಎಂದು ಯೋಚಿಸುತ್ತೇವೆ. ವೈದಿಕ ಶಾಸ್ತ್ರವು ಗತಿಸಿದವರ ಕನಸು ಬಿದ್ದರೆ ಅದು ಒಂದೊಂದು ಅರ್ಥವನ್ನು ಸೂಚಿಸುತ್ತದೆ ಎಂದು ಹೇಳುತ್ತದೆ.

ಕನಸಿನಲ್ಲಿ ಮರಣವೊಂದಿದ ಹಿರಿಯರು ಕಾಣಿಸಿಕೊಂಡರೆ ಈ ಸೂಚನೆ ನೀಡುತ್ತದೆ ಎಂದು ಹೇಳಲಾಗುವುದು:
* ಮರಣವೊಂದಿದವರ ಕನಸು ಬಿದ್ದರೆ ಯಾವುದೋ ದೊಡ್ಡ ಆಪತ್ತು ಕಾದಿದೆ, ವೃತ್ತಿ ಜೀವನದಲ್ಲಿ ಸಮಸ್ಯೆಗಳಾಗಬಹುದು, ಆದರೆ ತುಂಬಾ ಬೇಕಾದವರನ್ನು ಕಳೆದುಕೊಳ್ಳಬಹುದು ಎಂದು ಹೇಳಲಾಗುವುದು.
* ನೀವು ನಿಜ ಜೀವನದಲ್ಲಿ ತುಂಬಾನೇ ಸಮಸ್ಯೆ ಎದುರಿಸುತ್ತಿದ್ದರೆ ನಿಮ್ಮ ಹಿರಿಯರು ಕನಸಿನಲ್ಲಿ ಕಾಣಿಸಿಕೊಂಡರೆ ಆ ಸಮಸ್ಯೆಗೆ ಪರಿಹಾರ ಸಿಗುವುದು ಎಂದು ಹೇಳಲಾಗುವುದು.
* ಇನ್ನು ಕೆಲವೊಮ್ಮೆ ನಿಮ್ಮಿಂದ ಏನಾದರೂ ತಪ್ಪಾಗುತ್ತಿದ್ದರೆ ಅದರಿಂದ ದೂರ ಸರಿಯಿರಿ ಎಂಬ ಸೂಚನೆಯೂ ಆಗಿರುತ್ತದೆ.
ಅವರು ನಿಮ್ಮ ಕನಸಿನಲ್ಲಿ ಯಾವ ರೀತಿ ಕಾಣಿಸಿಕೊಂಡರು ಎಂಬುವುದರ ಮೇಲೆ ಕೂಡ ಆ ಕನಸಿನ ಅರ್ಥ ಏನು ಎಂಬುವುದನ್ನು ಸೂಚಿಸುತ್ತದೆ
ನಿಮ್ಮನ್ನು ಬೈಯ್ಯುತ್ತಿರುವಂತೆ ಕಸನು ಕಂಡರೆ
ನಿಮ್ಮ ಹಿರಿಯರು ನಿಮ್ಮನ್ನು ಬೈಯ್ಯುತ್ತಿರುವಂತೆ ಕನಸು ಕಂಡರೆ ನೀವು ನಿಮ್ಮ ನಿರ್ಧಾರಗಳನ್ನು ಬದಲಾಯಿಸಿಕೊಳ್ಳಿ ಎಂಬ ಸೂಚನೆಯನ್ನು ನೀಡುತ್ತದೆ. ಈ ರೀತಿ ಕನಸು ಕಂಡರೆ ನಿಮ್ಮಿಂದ ಏನು ತಪ್ಪಾಗುತ್ತಿದೆ ಎಂದು ಯೋಚಿಸಿ ಆ ತಪ್ಪುಗಳಿಂದ ದೂರವಿರಿ. ನಿಮ್ಮ ಹಿರಿಯರು ಕನಸಿನಲ್ಲಿ ಬಂದು ನಿಮ್ಮನ್ನು ಎಚ್ಚರಿಸುವ ಪ್ರಯತ್ನ ಮಾಡುತ್ತಿದ್ದಾರೆ, ನಿರ್ಲಕ್ಷ್ಯ ಮಾಡಬೇಡಿ.
ನಿಮ್ಮ ಕಡೆಗೆ ಕೈ ಚಾಚುತ್ತಿದ್ದರೆ
ನೀವು ಏನೋ ದೊಡ್ಡ ಸಮಸ್ಯೆ ಎದುರಿಸುತ್ತಿದ್ದರೆ ಎಲ್ಲವೂ ಸರಿಯಾಗಲಿದೆ ಹೆದರಬೇಡ ಎಂಬ ಸೂಚನೆಯಾಗಿದೆ. ನೀವು ತುಂಬಾ ನೋವಿನಲ್ಲಿದ್ದಾಗ ಆ ನೋವಿನಿಂದ ಹೊರಬರುವಿರಿ ಎಂಬ ಸೂಚನೆಯನ್ನು ನೀಡುತ್ತದೆ.
ಅವರು ತುಂಬಾನೇ ಖುಷಿಯಾಗಿದ್ದರೆ
ಅವರು ತುಂಬಾ ಖುಷಿಯಲ್ಲಿದ್ದಂತೆ ಕಂಡರೆ ಅದು ಅದೃಷ್ಟದ ಸಂಕೇತ, ನಿಮ್ಮ ಹಿರಿಯರನ್ನು ಕಂಡರೆ ನಿಮಗೆ ಶೀಘ್ರದಲ್ಲಿಯೇ ಶುಭವಾಗಲಿದೆ ಎಂಬ ಸೂಚನೆ ಎಂದು ಹೇಳಲಾಗುವುದು. ಅಲ್ಲದೆ ನಿಮ್ಮ ಕುಟುಂಬ ದೊಡ್ಡದಾಗಲಿದೆ, ನಿಮ್ಮ ಮನೆಗೆ ಹೊಸ ಅತಿಥಿಯ ಆಗಮನವಾಗಲಿದೆ ಎಂಬುವುದರ ಸೂಚನೆಯಾಗಿದೆ.
ಪೂರ್ವಜರು ತುಂಬಾ ಬೇಸರದಲ್ಲಿ ಇದ್ದಂತೆ ಕಂಡು ಬಂದರೆ
ನಿಮ್ಮ ಕುಟುಂಬದಲ್ಲಿ ಯಾವುದೂ ಸರಿಯಿಲ್ಲ , ಯಾವುದೋ ದೊಡ್ಡ ಸಮಸ್ಯೆಯಿದೆ, ಕುಟುಂಬದಲ್ಲಿ ನೆಮ್ಮದಿಯಿಲ್ಲ ಎಂದಾಗ ಈ ರೀತಿ ಕನಸು ಬೀಳುವುದು.
ಅವರ ಜೊತೆ ಮಾತನಾಡುತ್ತಿರುವಂತೆ ಕಂಡರೆ
ನಿಮ್ಮ ಆಪ್ತರ ಜೊತೆ ಮನಸ್ತಾಪ ಉಂಟಾಗುವುದು ಎಂಬ ಸೂಚನೆಯನ್ನು ನೀಡುತ್ತದೆ ಎಂದು ಹೇಳಲಾಗುವುದು.
ಅವರ ಜೊತೆ ನಡೆದು ಹೋಗುವಂತೆ ಕಂಡರೆ
ನಿಮ್ಮ ಯಾವುದೇ ಕಷ್ಟದ ಸಂದರ್ಭವಿರಲಿ ಹೆದರಬೇಕಾಗಿಲ್ಲ, ನಿಮ್ಮವರು ಸದಾ ನಿಮ್ಮೊಂದಿಗೆ ಇರುತ್ತಾರೆ, ನೀವು ಆ ಕಷ್ಟಗಳಿಂದ ಹೊರಬರುತ್ತೀರಿ ಎಂಬುವುದರ ಸೂಚನೆಯಾಗಿದೆ.
ಅವರು ಅಳುತ್ತಿರುವವರಂತೆ ಕಂಡು ಬಂದರೆ
ಪೂರ್ವಜರ ಆಸ್ತಿಗೆ ಸಂಬಂಧಿಸಿದಂತೆ ಜಗಳ ಉಂಟಾಗುವುದು ಎಂಬುವುದರ ಸೂಚನೆಯಾಗಿದೆ.
ಪೂರ್ವಜರು ಜಗಳವಾಡುತ್ತಿರುವಂತೆ ಕಂಡು ಬಂದರೆ
ನಿಮ್ಮಲ್ಲಿ ತುಂಬಾನೇ ಗೊಂದಲವಿದೆ, ನಿಮ್ಮ ತಪ್ಪು ನಿರ್ಧಾರಗಳಿಂದ ತುಂಬಾನೇ ಸಮಸ್ಯೆಯಾಗುವುದು ಎಂಬುವುದರ ಸೂಚನೆಯಾಗಿದೆ.
ಅವರು ನಿಮ್ಮನ್ನು ಓಡಿಸುತ್ತಿರುವಂತೆ ಕಂಡರೆ
ಅವರು ನಿಮ್ಮನ್ನು ಓಡಿಸಿಕೊಂಡು ಬರುತ್ತಿರುವಂತೆ ಕಂಡರೆ ಯಾವುದೋ ತಪ್ಪು ಕಾರ್ಯ ಮಾಡಿದ್ದೀರಿ ಎಂಬುವುದನ್ನು ಸೂಚಿಸುತ್ತದೆ.
ಮನಶಾಸ್ತ್ರ ಏನು ಹೇಳುತ್ತದೆ?
ನಮ್ಮಲ್ಲಿರುವ ಭಾವನೆಗಳು ಕನಸು ರೂಪದಲ್ಲಿ ಕಾಣಿಸುವುದು ಎಂದು ಮನಶಾಸ್ತ್ರ ಹೇಳುತ್ತದೆ. ತಪ್ಪು ಮಾಡಿದರೆ ಹೊರ ಜಗತ್ತಿಗೆ ಸರಿ ಎಂದು ತೋರಿಸಲು ಪ್ರಯತ್ನಿಸಿದರೂ ನಾವು ತಪ್ಪು ಮಾಡುತ್ತಿದ್ದೇವೆ ಎಂಬುವುದು ನಮಗೆ ಗೊತ್ತಿರುತ್ತದೆ. ಆದ್ದರಿಂದ ನಮ್ಮ ಸುಪ್ತ ಮನಸ್ಸಿನ ಭಾವನೆಗಳು ಕನಸಿನ ರೀತಿಯಲ್ಲಿ ಕಾಣಬಹುದು.



Click it and Unblock the Notifications