Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ದೇವಸ್ಥಾನದೊಳಗೆ ಅಪ್ಪಿತಪ್ಪಿಯು ಈ ವಿಚಾರಗಳ ಕುರಿತು ಯೋಚಿಸಬೇಡಿ: ಅದರ ಪರಿಣಾಮ ಏನು ಗೊತ್ತಾ?
ಯಾವುದೇ ಧರ್ಮದವರಾಗಿದ್ದರು ಅವರು ತಮ್ಮ ತಮ್ಮ ಪವಿತ್ರ ಸ್ಥಳಕ್ಕೆ ಅಥವಾ ಪ್ರಾರ್ಥನ ಸ್ಥಳಗಳಿಗೆ ಭೇಟಿ ನೀಡುವುದು ಸಾಮಾನ್ಯ. ಅದರಂತೆ ಹಿಂದೂಗಳು ದೇವಾಲಯಕ್ಕೆ ಭೇಟಿ ನೀಡುವುದು ನೋಡಬಹುದು. ವಾರ ಎಲ್ಲಾ ದಿನದಲ್ಲೂ ದೇವಾಲಯ ಪ್ರವೇಶವಿರಲಿದೆ. ಹಾಗೆ ಕೆಲವೊಂದು ದೇವಾಲಯ ವಾರದ ಒಂದು ದಿನ ವಿಶೇಷ ಅಲಂಕಾರ ಪೂಜೆಗಳು ಹಾಗೆ ಭಕ್ತರಿಂದ ತುಂಬಿರಲಿದೆ.
ದೇವಾಲಯಕ್ಕೆ ತೆರಳಲು ಹಲವು ರೀತಿ ನಿಯಮಗಳ ಮಾಡಿಕೊಂಡಿರುವುದು ಸಹ ನೋಡಬಹುದು. ಅದ್ರಲ್ಲೂ ಸ್ನಾನ ಮಾಡಿ, ಶುದ್ಧ ಬಟ್ಟೆ ಧರಿಸಿ, ಸಾಂಪ್ರದಾಯಿಕ ಉಡುಗೆಯನ್ನು ತೊಟ್ಟು, ಪರಿಶುದ್ಧ ಮನಸ್ಸಿನಿಂದ ತೆರಳುತ್ತೇವೆ. ಹಾಗೆ ಹಲವು ವಿಚಾರಗಳನ್ನು ಗಮನದಲ್ಲಿ ಇಟ್ಟುಕೊಂಡಿರುತ್ತೇವೆ. ದೇವಾಲಯ ಹೋಗುವಾದ ಏನನ್ನು ಸೇವಿಸಬೇಕು? ಏನು ಮುಟ್ಟಬಾರದು, ಹೂವುಗಳನ್ನು ಎಲ್ಲಿ ಖರೀದಿಸಬೇಕು? ಹಣ್ಣುಗಳ ಕುರಿತಾದ ಹಲವು ಆಲೋಚನೆಗಳು ಬರುವುದು ಸಹಜ.

ಆದ್ರೆ ದೇವಾಲಯದ ಒಳಗೆ ಹೋದಾಗ ನಿಮ್ಮ ತಲೆಯಲ್ಲಿ ಹಲವು ರೀತಿ ಆಲೋಚನೆಗಳು ಬರಬಹುದು. ಪೂಜೆಯ ಸಮಯದಲ್ಲಿ ನೀವು ನಿಮ್ಮ ಬಯಕೆ, ಬೇಡಿಕೆಗಳನ್ನು ದೇವರ ಮುಂದಿಡಬಹುದು. ಆದ್ರೆ ದೇವಾಲಯದಲ್ಲಿ ಇದ್ದಾಗ ಕೆಲವೊಂದು ವಿಚಾರಗಳ ಕುರಿತಾಗಿ ಅಪ್ಪಿತಪ್ಪಿತೂ ಆಲೋಚಿಸಬಾರದಂತೆ. ಈ ವಿಚಾರಗಳನ್ನು ದೇವಸ್ಥಾನದಲ್ಲಿ ನೆನಪಿಸಿಕೊಳ್ಳುವುದು ಅಥವಾ ಆಲೋಚಿಸುವುದು ನಿಮ್ಮ ಪಾಪ ಕರ್ಮಗಳ ಹೆಚ್ಚಾಗುವಂತೆ ಮಾಡುತ್ತದೆ ಎಂದು ಪುರಾಣಗಳು ಹೇಳುತ್ತವೆ.
ಹಾಗಾದ್ರೆ ದೇವಾಲಯದೊಳಗೆ ಇದ್ದಾಗ ಯಾವ ವಿಚಾರದ ಕುರಿಯಾಗಿ ಆಲೋಚಿಸಬಾರದು? ಅದರಿಂದ ಆಗುವ ಪರಿಣಾಮ ಏನು ಎಂಬುದನ್ನು ನಾವಿಲ್ಲಿ ತಿಳಿದುಕೊಳ್ಳೋಣ.
ಬೇರೆಯವರಿಗೆ ಕೆಟ್ಟದ್ದು ಬಯಸುವುದು
ದೇವಾಲಯಕ್ಕೆ ತೆರಳುವುದು ನಮ್ಮ ಸಮಸ್ಯೆಗಳು, ಬೇಡಿಕೆಗಳು, ಬಯಕೆಗಳ ಕುರಿತು ಬೇಡಿಕೊಳ್ಳುವ ಅಥವಾ ಪ್ರಾರ್ಥನೆ ಸಲ್ಲಿಸುವ ಉದ್ದೇಶದಿಂದ. ಹಾಗೆ ಮನಸ್ಸಿಗೆ ಶಾಂತಿ, ನೆಮ್ಮದಿ ಸಿಗಲಿ ಎಂಬ ಉದ್ದೇಶದಿಂದ ದೇವಾಲಯಕ್ಕೆ ತೆರಳುತ್ತಾರೆ. ಆದ್ರೆ ದೇವಾಲಯದಲ್ಲಿ ನೀವು ಬೇರೆಯವರಿಗೆ ಕೆಟ್ಟದನ್ನು ಬಯಸಬಾರದಂತೆ, ಬೇರೆಯವರಿಂದ ನಿಮಗೆ ಸಮಸ್ಯೆಗಳಾಗಿದ್ದರೂ ಅವರ ಬಗ್ಗೆಯೂ ಒಳ್ಳೆಯದನ್ನೇ ಬಯಸುವುದು ಉತ್ತಮವಂತೆ. ನೀವು ಬೇರೆಯವರಿಗೆ ಕೆಟ್ಟದ್ದು ಬಯಸಿದರೆ ನಿಮ್ಮ ಕರ್ಮಫಲವು ನಿಮ್ಮನ್ನೇ ಕಾಡಬಹುದು ಎಂದು ಹೇಳಲಾಗಿದೆ.
ಮಾಂಸಾಹಾರ ಕುರಿತು ಆಲೋಚಿಸುವುದು
ದೇವಾಲಯದಲ್ಲಿ ನಿಂತು ನೀವು ಆಹಾರ ಕುರಿತಾಗಿ ಅದ್ರಲ್ಲೂ ಮಾಂಸಾಹಾರದ ಕುರಿತು ಆಲೋಚಿಸುವುದು, ಮಾತನಾಡುವುದು ನಿಮಗೆ ಕೆಡುಕು ತರಬಹುದು. ಕೆಲವು ದೇವಾಲಯದಲ್ಲಿ ನೀವು ಮಾಂಸಾಹಾರ ಸೇವನೆಯ ಪ್ರತೀತಿ ಇರಬಹುದು. ಆದ್ರೆ ಅಲ್ಲಿಯೂ ಕೂಡ ಈ ಕುರಿತಾಗಿ ಆಲೋಚಿಸಬಾರದು.
ಮಹಿಳೆ ಅಥವಾ ಪುರುಷರ ಕುರಿತು ಆಲೋಚಿಸುವುದು
ನೀವು ದೇವಾಲಯದಲ್ಲಿ ಏಕಾಗೃತೆಯಿಂದ ಪ್ರಾರ್ಥನೆ ಸಲ್ಲಿಸಬೇಕು. ದೇವಾಲಯದೊಳಗೆ ಇರುವಷ್ಟು ಸಮಯ ದೇವರ ನಾಮಸ್ಮರಣೆ, ಪ್ರಾರ್ಥನೆ ಮಾಡಬೇಕು. ಆದ್ರೆ ಆ ಸಮಯದಲ್ಲಿ ಮಹಿಳೆಯ ಕುರಿತಾಗಿ ಅಥವಾ ಪುರುಷರ ಕುರಿತಾದ ಕೆಟ್ಟ ಆಲೋಚನೆಗಳ ಮಾಡಬಾರದು. ಇದು ನಿಮಗೆ ಅಶುಭವಾಗಲಿದೆ.
ಶೌಚಾಲಯ ತೆರಳುವ ಕುರಿತು ಆಲೋಚಿಸುವುದು
ದೇವಾಲಯ ತೆರಳುವ ಮುನ್ನವೇ ಶೌಚಾಲಯ ವಿಚಾರಗಳಿಂದ ಮುಕ್ತಿ ಪಡೆದಿರಬೇಕು. ಒಮ್ಮೆ ದೇವಾಲಯಕ್ಕೆ ಪ್ರವೇಶಿಸಿದ ಬಳಿಕ ಸೌಚಾಲಯ ತೆರಳುವ ಕುರಿತಾಗಿ ಆಲೋಚಿಸಬಾರದು ಹಾಗೆ ಮಾತುಕತೆಯಲ್ಲಿ ಭಾಗಿಯಾಗಬಾರದು. ಇತ್ತೀಚಿಗೆ ಬಹುತೇಕ ದೇವಾಲಯದ ಆವರಣದಲ್ಲಿ ಶೌಚಾಲಯ ವ್ಯವಸ್ಥೆ ಇರುತ್ತದೆ. ದೇವಸ್ಥಾನದ ಒಳಗೆ ತೆರಳುವ ಮುನ್ನ ಈ ಎಲ್ಲಾ ಕೆಲಸಗಳ ಮುಗಿಸುವುದು ಬಹಳ ಉತ್ತಮ.
(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ಅದರ ವಿಶ್ವಾಸಾರ್ಹತೆಗೆ ಖಾತರಿ ಇಲ್ಲ. ಕನ್ನಡ ಬೋಲ್ಡ್ ಸ್ಕೈ ಲೇಖನಕ್ಕೆ ಸಂಬಂಧಿಸಿದ ಮಾಹಿತಿಯನ್ನು ದೃಢೀಕರಿಸುವುದಿಲ್ಲ. ಮತ್ತು ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ)



Click it and Unblock the Notifications