Latest Updates
-
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ
ಸಂಕ್ರಾಂತಿ ದಿನ ಈ ವಸ್ತು ದಾನ ಮಾಡಿದ್ರೆ ಆರ್ಥಿಕ, ಸಂಪತ್ತು ವೃದ್ಧಿ..! ಯಾವೆಲ್ಲಾ ವಸ್ತು?
ಹಿಂದೂಗಳ ಹಬ್ಬಸ ಸೀಸನ್ ಆರಂಭವಾಗುವುದು ಸಂಕ್ರಾಂತಿಯಿಂದ ಹಾಗೆ ವರ್ಷದ ಮೊದಲ ಹಬ್ಬ ಕೂಡ ಇದಾಗಿದೆ. ನಾಳೆ ಇಡೀ ದೇಶದಲ್ಲಿ ಮಕರ ಸಂಕ್ರಾಂತಿ ಆಚರಿಸಲಾಗುತ್ತಿದೆ. ಮಕರ ಸಂಕ್ರಾಂತಿ ಪ್ರಮುಖವಾಗಿ ರೈತಾಪಿ ವರ್ಗದ ಹಬ್ಬ ಎಂದು ಕೂಡ ಕರೆಯಲಾಗುತ್ತೆ. ಹಾಗೆ ಈ ಹಬ್ಬದ ದಿನದಂದು ವಿವಿಧ ರೀತಿಯ ಖಾದ್ಯಗಳು, ಆಚರಣೆಗಳ ಮಾಡುವುದು ನೋಡುಬಹುದು.
ಸೂರ್ಯನು ಧನು ರಾಶಿಯಿಂದ ಮಕರ ರಾಶಿಗೆ ಪ್ರವೇಶಿಸುವುದರಿಂದಾಗಿ ಈ ದಿನ ವಿಶೇಷ ಎಂದು ಪರಿಗಣಿಸಲಾಗಿದೆ. ಅದರಲ್ಲೂ ದಕ್ಷಿಣದಲ್ಲಿ ಈ ದಿನಕ್ಕೆ ಬಹಳ ಮಹತ್ವವಿದೆ. ಗುಜರಾತ್‌ನಲ್ಲಿ ಉತ್ತರಾಯಣ ಎಂಬುದಾಗಿಯೂ ಆಚರಿಸಲಾಗುತ್ತದೆ. ಇನ್ನು ಇದೇ ದಿನ ಶಬರಿಮಲೆಯಲ್ಲಿ ಅಯ್ಯಪ್ಪಸ್ವಾಮಿಯ ಮಕರ ಜ್ಯೋತಿ ದರ್ಶನ ಆಗುವುದರಿಂದ ಈ ದಿನ ಬಹಳ ಮುಖ್ಯವಾಗಿದೆ.

ಇನ್ನು ಈ ದಿನನಂದು ಎಳ್ಳು ಬೆಲ್ಲವನ್ನು ಸವಿದು ಒಳ್ಳೆಯ ಮಾತನಾಡುವಂತೆ ಹೇಳಲಾಗುತ್ತದೆ. ಹಾಗೆ ಮನೆಯಲ್ಲಿ ವಿಶೇಷವಾಗಿ ಸಂಜೆ ಪೂಜೆಯ ಬಳಿಕ ಹಣತೆಯ ದೀಪ ಬೆಳಗಲಾಗುತ್ತದೆ. ಹಾಗೆ ಈ ದಿನದಂದು ಕೆಲವೊಂದು ವಸ್ತುಗಳನ್ನು ದಾನ ಮಾಡುವುದರಿಂದ ಪುಣ್ಯ ಲಭಿಸಲಿದೆ, ಹಾಗೆ ಸಿರಿ ಸಂಪತ್ತು ವೃದ್ಧಿಯಾಗುತ್ತದೆ ಎಂದು ನಂಬಲಾಗಿದೆ. ಹಾಗಾದ್ರೆ ಸಂಕ್ರಾಂತಿಯ ದಿನ ಏನನ್ನು ದಾನ ಮಾಡಬೇಕು ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಎಳ್ಳು ಬೆಲ್ಲ
ಮೊದಲು ಈ ಹಬ್ಬದ ದಿನದಂದು ಎಳ್ಳು ಬೆಲ್ಲವನ್ನು ಬೇರೆಯವರಿಗೂ ನೀಡಿ ಸವಿಯಬೇಕು, ಆದ್ರೆ ಇದು ದಾನ ಎನಿಸಿಕೊಳ್ಳುವುದಿಲ್ಲ ಆದ್ರೆ ಬರಿ ಎಳ್ಳನ್ನು ಈ ದಿನ ದಾನ ನೀಡುವುದು ಉತ್ತಮ ಸಂಪತ್ತು ವೃದ್ಧಿಗೆ ಕಾರಣವಾಗಲಿದೆ ಎಂದು ಹೇಳಲಾಗುತ್ತದೆ. ಎಳ್ಳು ದಾನ ಮಾಡುವುದು ಸಂಪತ್ತು ವೃದ್ಧಿಯ ಸಂಕೇತವಂತೆ. ಎಳ್ಳು ಬೆಲ್ಲ ನೀಡುವುದರ ಜೊತೆಗೆ ಕಪ್ಪು ಎಳ್ಳು ದಾನವಾಗಿ ನೀಡುವುದು ಉತ್ತಮ ಎಂದು ಹೇಳಲಾಗುತ್ತದೆ.
ಮೊಸರು
ಈ ಹಬ್ಬದ ದಿನದಂದು ಮೊಸರು ದಾನ ಮಾಡಿದರೆ ಮನೆಯಲ್ಲಿ ದರಿದ್ರ, ದೋಷ ನಿವಾರಣೆಯಾಗುತ್ತದೆ ಎಂದು ನಂಬಲಾಗಿದೆ. ಹಾಗೆ ಹಣದ ಸಮಸ್ಯೆ, ಅನಾರೋಗ್ಯ ಸಮಸ್ಯೆಗಳು ದೂರಾಗುತ್ತವೆ ಎಂಬುದು ನಂಬಿಕೆಯಾಗಿದೆ.
ಹಸಿರು ಬಳೆಗಳು
ಈ ಸಂಕ್ರಾಂತಿಯಂದು ಮುತೈದೆಯರಿಗೆ ಹಸಿರು ಬಳೆಯನ್ನು ದಾನ ಮಾಡಬೇಕಂತೆ ಇದರಿಂದ ನಿಮ್ಮ ಮಾಂಗಲ್ಯ ಭಾಗ್ಯ ಗಟ್ಟಿಯಾಗುತ್ತದೆ ಎಂಬ ನಂಬಿಕೆ ಇದೆ. ಹಸಿರು ಬಳೆಯನ್ನು ಪೂಜೆಯಲ್ಲಿ ಇಟ್ಟು ಅನಂತರ ದಾನ ಮಾಡಬೇಕಂತೆ. ಇದರಿಂದ ನಿಮ್ಮ ಪತಿಯ ಆಯಸ್ಸು ವೃದ್ಧಿಯಾಗುತ್ತದೆ ಎಂದು ನಂಬಲಾಗಿದೆ.
ದೀಪ ದಾನ
ಸಂಕ್ರಾಂತಿ ಆಚರಿಸಿದ ಮಾರನೆ ದಿನ ದೀಪವನ್ನು ದಾನವಾಗಿ ನೀಡಬೇಕಂತೆ. ಹೀಗೆ ದೀಪದಾನ ಮಾಡಿದರೆ ಶತ್ರುನಾಶದ ಯೋಗ ಪ್ರಾಪ್ತಿಯಾಗುತ್ತದೆ ಎಂದು ಹೇಳಲಾಗಿದೆ. ಹಾಗೆ ನಿಮ್ಮ ಪ್ರಗತಿಗೆ ಇದು ಕಾರಣವಾಗಲಿದೆಯಂತೆ.
ಬೆಲ್ಲ ಮತ್ತು ಕಬ್ಬು
ಸಂಕ್ರಾಂತಿ ಹಬ್ಬದಂದು ಬೆಲ್ಲ ಹಾಗೂ ಕಬ್ಬನ್ನು ದಾನ ಮಾಡುವುದರಿಂದ ಅದೃಷ್ಟ ಒಲಿಯಲಿದೆ ಎಂದು ಹೇಳಲಾಗಿದೆ. ಹಾಗೆ ಈ ದಾನವು ಪವಿತ್ರದಾನ ಎಂದು ಹೇಳಲಾಗಿದೆ. ಇದು ನಿಮ್ಮ ಆರ್ಥಿಕ ಪ್ರಗತಿಗೂ ಕಾರಣವಾಗುತ್ತದೆಯಂತೆ.
ತುಪ್ಪ
ಮಕರ ಸಂಕ್ರಾಂತಿಯಂದು ತುಪ್ಪ ದಾನ ಮಾಡುವುದು ಶುಭವೆಂದು ಪರಿಗಣಿಸಲಾಗಿದೆ. ತುಪ್ಪ ದಾನ ಮಾಡುವುದರಿಂದ ಆರ್ಥಿಕ ಪ್ರಗತಿ ಮನೆಯಲ್ಲಿ ಐಶ್ವರ್ಯ ಹೆಚ್ಚಳವಾಗುತ್ತದೆ ಎಂದು ಹೇಳಲಾಗುತ್ತದೆ.



Click it and Unblock the Notifications
