Latest Updates
-
ಉತ್ತರಾಖಂಡದಲ್ಲಿ ಆರೆಂಜ್ ಅಲರ್ಟ್: ಹೋಟೆಲ್ ರೂಮ್ನಲ್ಲೇ ಫಿಟ್ ಆಗಿರಲು ಈ ಸರಳ ವ್ಯಾಯಾಮಗಳನ್ನು ಮಾಡಿ! -
UGC-NET ಪರೀಕ್ಷೆಯ ಗೊಂದಲ: ವಿದ್ಯಾರ್ಥಿಗಳ ಆತಂಕ ದೂರ ಮಾಡಲು ಪೋಷಕರಿಗೆ ಇಲ್ಲಿದೆ 48 ಗಂಟೆಗಳ ಸ್ಟಡಿ-ರಿಸೆಟ್ ಪ್ಲಾನ್! -
ದೆಹಲಿ ಮಳೆ: ಗುಡುಗು-ಮಿಂಚಿನಿಂದ ನಿಮ್ಮ ಎಲೆಕ್ಟ್ರಾನಿಕ್ ವಸ್ತುಗಳನ್ನು ರಕ್ಷಿಸಲು ಈ 15 ನಿಮಿಷದ ಟಿಪ್ಸ್ ಪಾಲಿಸಿ! -
ಎನರ್ಜಿ ಡ್ರಿಂಕ್ಸ್ ಕುಡಿಯುವ ಮುನ್ನ ಎಚ್ಚರ! FSSAI ಹೊಸ ನಿಯಮ ಮತ್ತು ಆರೋಗ್ಯಕರ ಪರ್ಯಾಯಗಳು -
ಗುರುಗ್ರಾಮದಲ್ಲಿ ವರುಣನ ಆರ್ಭಟ: ಕಚೇರಿಗೆ ಹೋಗ್ಬೇಡಿ, ಮನೆಯಿಂದಲೇ ಕೆಲಸ ಮಾಡಿ - ಪೊಲೀಸರ ಮಹತ್ವದ ಸೂಚನೆ -
ಮಳೆಗಾಲದ ಜಡತ್ವಕ್ಕೆ ಗುಡ್ ಬೈ: ಮುಂಬೈ-ಪುಣೆ ಜನರಿಗಾಗಿ 10 ನಿಮಿಷದ ಸರಳ ವ್ಯಾಯಾಮಗಳು -
ಮುಂಬೈ ಮಳೆ ಆರ್ಭಟ: ಸಂಗಾತಿಯ ಸುರಕ್ಷತೆಗಾಗಿ ನೀವು ಮಾಡಬೇಕಾದ ಪ್ರಮುಖ ಕೆಲಸಗಳಿವು! -
ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆಯ ಮಳೆನೀರು ಕೊಯ್ಲು ವ್ಯವಸ್ಥೆ ಹಾಳಾಗದಂತೆ ತಡೆಯುವುದು ಹೇಗೆ? -
ಮಳೆಗಾಲದಲ್ಲಿ ಮಕ್ಕಳ ಲಂಚ್ಬಾಕ್ಸ್ ಸುರಕ್ಷತೆ: ಆರೋಗ್ಯಕರ ಮತ್ತು ಹೈ-ಪ್ರೋಟೀನ್ ಆಹಾರದ ಟಿಪ್ಸ್ -
ಮುಂಬೈನಲ್ಲಿ ಭಾರೀ ಮಳೆ: ಇಂದು ಶಾಲೆ-ಕಾಲೇಜುಗಳಿಗೆ ರಜೆ ಘೋಷಣೆ, ಪೋಷಕರು ಗಮನಿಸಿ!
ಆಪರೇಷನ್ ಥಿಯೇಟರ್ ಒಳಗೆ ಪ್ರಿ ವೆಡ್ಡಿಂಗ್ ಫೋಟೋಶೂಟ್...ವೈದ್ಯ ವಜಾ..!
ಮದುವೆಯ ಮುನ್ನ ಪ್ರಿ ವೆಡ್ಡಿಂಗ್ ಫೋಟೋ ಶೂಟ್ ಮಾಡಿಸುವುದು ಒಂದು ಟ್ರೆಂಡ್ ಆಗಿದೆ. ಅದ್ರಲ್ಲೂ ಚಿತ್ರ ವಿಚಿತ್ರ ರೀತಿಯ ಫೋಟೋ ಶೂಟ್ ಮಾಡಿಸುವುದು ಇತ್ತೀಚಿಗೆ ವ್ಯಾಪಕವಾಗಿದೆ. ಈ ರೀತಿ ಶೂಟ್ ಮಾಡಿಸುವುದು ಯುವಜೋಡಿಯ ಕನಸೂ ಆಗಿರುತ್ತದೆ. ಆದರೆ ಕೆಲವೊಮ್ಮೆ ಇಂತಹ ಫೋಟೋಶೂಟ್‌ಗಳ ಮಾಡುವಾಗ ಯಡವಟ್ಟು ಆಗುವುದನ್ನು ನಾವು ನೋಡಿದ್ದೇವೆ.
ಆದ್ರೆ ಇಲ್ಲೊಬ್ಬ ವೈದ್ಯ ಪ್ರಿ ವೆಡ್ಡಿಂಗ್ ಫೋಟೋಶೂಟ್ ಮಾಡಿಸಿ ಸುದ್ದಿಯಾಗಿರುವುದಲ್ಲದೆ, ಸೇವೆಯಿಂದಲೇ ವಜಾಗೊಂಡಿದ್ದಾರೆ. ಹೌದು ಹಾಗಾದರೆ ಆತ ಮಾಡಿದ ಯಡವಟ್ಟೇನು? ಯಾವ ಕಾರಣಕ್ಕಾಗಿ ವಜಾ ಮಾಡಲಾಗಿದೆ ಎಂಬುದನ್ನು ನೋಡಿ.

ಚಿತ್ರದುರ್ಗ ಜಿಲ್ಲೆಯ ಸರ್ಕಾರಿ ಆಸ್ಪತ್ರೆಯಲ್ಲಿ ಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿರುವ ವೈದ್ಯ ಪ್ರಿ ವೆಡ್ಡಿಂಗ್ ಫೋಟೋ ಶೂಟ್ ಅನ್ನು ಆಸ್ಪತ್ರೆಯಲ್ಲೇ ನಡೆಸಿದ್ದಾನೆ. ಆಸ್ಪತ್ರೆಯಾದರು ಪರವಾಗಿಲ್ಲ ಆತ ನೇರವಾಗಿ ಆಪರೇಷನ್ ಥಿಯೇಟರ್ ಓಳಗೆ ಫೋಟೋಶೂಟ್ ನಡೆಸಿದ್ದಾನೆ.
ರೋಗಿಯಂತೆ ಒಬ್ಬನನ್ನು ಮಲಗಿಸಿ ಆತನ ಹೊಟ್ಟೆ ಭಾಗದಲ್ಲಿ ಆಪರೇಷನ್ ನಡೆಸುತ್ತಿರುವಂತೆ ಆಪರೇಷನ್ ನಾಗಪ್ಪ ಎಂಬ ಬರಹದಡಿ ವಿಡಿಯೋ ಹರಿಬಿಡಲಾಗಿತ್ತು. ಈ ವಿಡಿಯೋ ವೈರಲ್ ಆಗಿತ್ತು. ಆಪರೇಷನ್ ಥಿಯೇಟರ್ ವ್ಯಾಪ್ತಿಯಲ್ಲಿ ಪ್ರಿ ವೆಡ್ಡಿಂಗ್ ಫೋಟೋಶೂಟ್‌ನಲ್ಲಿ ತೊಡಗಿಸಿ ವಜಾಗೊಳಿಸಲಾಗಿದೆ.
ಡಾ ಅಭಿಷೇಕ್ ಅವರು ರೋಗಿಗೆ "ಶಸ್ತ್ರಚಿಕಿತ್ಸೆ" ಮಾಡುವುದನ್ನು ವಿಡಿಯೋ ತೋರಿಸಲಾಗಿದೆ, ಅಲ್ಲಿ ನವ ವಧು-ವರರು ವೈದ್ಯಕೀಯ ಉಪಕರಣಗಳನ್ನು ಬಳಸುತ್ತಿದ್ದಾರೆ ಮತ್ತು ವೃತ್ತಿಪರ ಬೆಳಕಿನ ಸಾಧನಗಳಿಂದ ಸುತ್ತುವರಿದಿದ್ದಾರೆ. ಕ್ಯಾಮರಾ ಪರ್ಸನ್‌ಗಳು ಮತ್ತು ತಂತ್ರಜ್ಞರು ಸಹ ಆಪರೇಷನ್ ಥಿಯೇಟರ್‌ನೊಳಗೆ ಇದ್ದಾರೆ.
ಹೀಗಾಗಿ ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಭಾರೀ ಟೀಕೆ ಕೇಳಿಬಂದಿತ್ತು. ಸರ್ಕಾರಿ ಆಸ್ತಿಯನ್ನು ಸ್ವಂತಕ್ಕೆ ಬಳಸಿದ್ದೂ ಅಲ್ಲದೆ, ಆಪರೇಷನ್ ಥಿಯೇಟರ್ ಅನ್ನೇ ವಿಡಿಯೋಗಾಗಿ ಬಳಸಲಾಗಿದೆ. ಅಲ್ಲಿಯೂ ಸಾರ್ವಜನಿಕ ಆಸ್ತಿಗಳ ಬಳಸಲಾಗಿದೆ.
ಆನ್‌ಲೈನ್‌ನಲ್ಲಿ ವ್ಯಾಪಕ ಟೀಕೆಗಳ ನಂತರ, ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಡಾ ಅಭಿಷೇಕ್ ಅವರನ್ನು ತಕ್ಷಣವೇ ವಜಾಗೊಳಿಸುವಂತೆ ಆದೇಶಿಸಿದ್ದಾರೆ, "ಸರ್ಕಾರಿ ಆಸ್ಪತ್ರೆಗಳು ಸಾರ್ವಜನಿಕರ ಸೇವೆಗಾಗಿಯೇ ಹೊರತು ವೈಯಕ್ತಿಕ ತೊಡಗಿಸಿಕೊಳ್ಳಲು ಅಲ್ಲ" ಎಂದು ಒತ್ತಿ ಹೇಳಿದ ಸಚಿವರು ಇಂತಹ ಅಶಿಸ್ತಿನ್ನು ಸಹಿಸುವುದಿಲ್ಲ ಎಂದಿದ್ದಾರೆ.
ಚಿತ್ರದುರ್ಗದ ಭರಮಸಾಗರ ಸರ್ಕಾರಿ ಆಸ್ಪತ್ರೆಯ ಆಪರೇಷನ್ ಥಿಯೇಟರ್‌ನಲ್ಲಿ ವಿವಾಹ ಪೂರ್ವ ಚಿತ್ರೀಕರಣ ನಡೆಸಿದ ವೈದ್ಯರನ್ನು ಸೇವೆಯಿಂದ ವಜಾಗೊಳಿಸಲಾಗಿದೆ. ಸರ್ಕಾರಿ ಆಸ್ಪತ್ರೆ ಇರುವುದು ಜನರ ಆರೋಗ್ಯ ರಕ್ಷಣೆಗಾಗಿಯೇ ಹೊರತು ವೈಯಕ್ತಿಕ ಕೆಲಸಕ್ಕಲ್ಲ, ವೈದ್ಯರಿಂದ ಇಂತಹ ಅಶಿಸ್ತು ಸಹಿಸಲು ಸಾಧ್ಯವಿಲ್ಲ ಎಂದು ಸಚಿವರು ಟ್ವೀಟ್‌ನಲ್ಲಿ ಬರೆದಿದ್ದಾರೆ.
ಆರೋಗ್ಯ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ವೈದ್ಯರು ಮತ್ತು ಸಿಬ್ಬಂದಿ ಸೇರಿದಂತೆ ಎಲ್ಲ ಗುತ್ತಿಗೆ ನೌಕರರು ಸರ್ಕಾರಿ ಸೇವಾ ನಿಯಮಗಳ ಪ್ರಕಾರ ಕರ್ತವ್ಯ ನಿರ್ವಹಿಸಬೇಕು ಎಂದು ಸಚಿವರು ಪತ್ರ ಬರೆದಿದ್ದಾರೆ. ಸರಕಾರಿ ಆಸ್ಪತ್ರೆಗಳಲ್ಲಿ ಇಂತಹ ದೌರ್ಜನ್ಯಗಳು ನಡೆಯದಂತೆ ಎಚ್ಚರಿಕೆ ವಹಿಸುವಂತೆ ಸಂಬಂಧಪಟ್ಟ ವೈದ್ಯರು ಹಾಗೂ ಎಲ್ಲ ಸಿಬ್ಬಂದಿಗೆ ಈಗಾಗಲೇ ಸೂಚನೆ ನೀಡಿದ್ದೇನೆ.
''ಸರ್ಕಾರದ ಆಸ್ಪತ್ರೆಗಳಿಗೆ ಸರ್ಕಾರವು ಒದಗಿಸುವ ಸೌಲಭ್ಯಗಳು ಸಾಮಾನ್ಯ ಜನರ ಆರೋಗ್ಯಕ್ಕಾಗಿ ಎಂದು ತಿಳಿದು ಪ್ರತಿಯೊಬ್ಬರೂ ಕರ್ತವ್ಯವನ್ನು ನಿರ್ವಹಿಸುವತ್ತ ಗಮನಹರಿಸಬೇಕು'' ಎಂದಿದ್ದಾರೆ.
ವಿದ್ಯಾರ್ಥಿಗಳೂ ಅಮಾನತು
ಗದಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಜಿಐಎಂಎಸ್) ಆವರಣದಲ್ಲಿ ರೀಲ್ಸ್ ವಿಡಿಯೋ ಮಾಡಿದ 38 ವೈದ್ಯಕೀಯ ವಿದ್ಯಾರ್ಥಿಗಳನ್ನು 10 ದಿನಗಳ ಕಾಲ ಅಮಾನತುಗೊಳಿಸಲಾಗಿದೆ. ಜಿಮ್ಸ್ ನಿರ್ದೇಶಕ ಡಾ.ಬಸವರಾಜ ಬೊಮ್ಮನಹಳ್ಳಿ ಶನಿವಾರ ಅಮಾನತು ನೋಟಿಸ್ ಜಾರಿ ಮಾಡಿದ್ದಾರೆ.
ಜಿಲ್ಲಾ ಆಸ್ಪತ್ರೆ ಕಾರಿಡಾರ್‌ನಲ್ಲಿ ವೈದ್ಯಕೀಯ ವಿದ್ಯಾರ್ಥಿಗಳು ಹಿಂದಿ ಮತ್ತು ಕನ್ನಡ ಹಾಡುಗಳ ಟ್ಯೂನ್‌ಗೆ ನೃತ್ಯ ಮಾಡಿದ ನಂತರ ಈ ಘಟನೆಯು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ರೀಲ್‌ಗಳನ್ನು ನೋಡಿದ ನಂತರ, ನೆಟಿಜನ್‌ಗಳು ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ ಮತ್ತು ಅವರ ಕರ್ತವ್ಯ ಬದ್ಧತೆಯ ಬಗ್ಗೆ ಟೀಕಿಸಿದ್ದರು.



Click it and Unblock the Notifications