Latest Updates
-
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ
ಸದನದಲ್ಲಿ ಆರ್‌ಎಸ್‌ಎಸ್ ಗೀತೆ ಹಾಡಿದ ಡಿಕೆಶಿ: ಈ ಹಾಡಿನ ಹಿಂದಿನ ಕುತೂಹಲಕಾರಿ ಸಂಗತಿ ಇಲ್ಲಿದೆ!
ವಿಧಾನಸಭೆಯಲ್ಲಿನ ಚರ್ಚೆಗಳು ಬಹಳ ಕುತೂಹಲಗಳ ನಡುವೆ ನಡೆಯುತ್ತಿದೆ. ನಿತ್ಯ ಒಂದಲ್ಲಾ ಒಂದು ಸ್ವಾರಸ್ಯಕರ ಚರ್ಚೆಗಳು ನಡೆಯುವುದು ನೋಡಬಹುದು. ಹಾಗೆ ನಿನ್ನೆ ನಡೆದ ಕಲಾಪದ ವೇಳೆ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಆರ್‌ಎಸ್‌ಎಸ್ ಗೀತೆ ಹಾಡಿ ಎಲ್ಲರ ಹುಬ್ಬೇರುವಂತೆ ಮಾಡಿದರು. ಬಿಜೆಪಿ ನಾಯಕರು ಮಾತ್ರ ಕಾಂಗ್ರೆಸ್ ನಾಯಕರೇ ಡಿಕೆಶಿ ನಡೆಯಿಂದ ಅಚ್ಚರಿಗೊಳಗಾದರು.
ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂ ಬಳಿ ನಡೆದಿದ್ದ ಕಾಲ್ತುಳಿತ ಪ್ರಕರಣ ಸಂಬಂಧವಾಗಿ ಮಾತನಾಡುತ್ತಿದ್ದ ಡಿ.ಕೆ ಶಿವಕುಮಾರ್ ಅವರು ಆರ್‌ಎಸ್ಎಸ್ ಗೀತೆಯಾಗಿರುವ ನಮಸ್ತೆ ಸದಾ ವತ್ಸಲೆ ಗೀತೆ ಹಾಡಿದರು. ಈ ವೇಳೆ ಬಿಜೆಪಿಗರು ಕೂಡ ಧ್ವನಿಗೂಡಿಸಿದ್ರು, ಹಾಗೆ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.

ಆರ್‌ಎಸ್‌ಎಸ್ ಈ ಗೀತೆಯನ್ನು ತಮ್ಮ ಪ್ರತಿಯೊಂದು ಕಾರ್ಯಕ್ರಮ, ಬೈಠಕ್‌ನಲ್ಲೂ ಹಾಡುವುದಿದೆ. ಇದು ಆರ್‌ಎಸ್‌ಎಸ್ ಧ್ಯೇಯ ಗೀತೆಯಾಗಿ ನಡೆದುಬಂದಿದೆ. ಇದೇ ಗೀತೆಯನ್ನು ಡಿಕೆ ಶಿವಕುಮಾರ್ ಸದನದಲ್ಲಿ ಹಾಡಿರುವುದು ಚರ್ಚೆಗೆ ಕಾರಣವಾಗಿದೆ. ಹಾಗಾದ್ರೆ ಆರ್‌ಎಸ್‌ಎಸ್ ಗೀತೆಯಾಗಿರುವ ಮನಸ್ತೆ ಸದಾ ವತ್ಸಲೆ ಬರೆದವರು ಯಾರು? ಆರ್‌ಎಸ್‌ಎಸ್ ಇದನ್ನು ಅಳವಡಿಸಿಕೊಂಡಿದ್ದು ಏಕೆ ಎಂಬುದನ್ನು ತಿಳಿದುಕೊಳ್ಳೋಣ.
ಆರ್‌ಎಸ್‌ಎಸ್ ಮೊದಲು ಈ ಗೀತೆ ಹಾಡಿದ್ದು ಯಾವಾಗ?
ರಾಷ್ಟ್ರೀಯ ಸ್ವಯಂ ಸೇವಕ ಸಂಘವು 1940 ಮೇ 18ರಂದು ನಾಗ್ಪುರದಲ್ಲಿ ನಡೆದ ಸಂಘ್ ಶಿಕ್ಷಾ ವರ್ಗ್ ಎಂಬ ಕಾರ್ಯಕ್ರಮದಲ್ಲಿ ಮೊದಲ ಬಾರಿಗೆ ಈ ಗೀತೆಯನ್ನು ಹಾಡಿತ್ತು. ಅಂದು ಆರ್‌ಎಸ್‌ಎಸ್‌ನ ಪ್ರಚಾರಕರಾಗಿದ್ದ ಯಾದವ್ ರಾವ್ ಜೋಶಿ ಮೊದಲ ಬಾರಿಗೆ ಈ ಗೀತೆಯನ್ನು ಹಾಡಿದ್ದರು. ತದನಂತರ ಪುಣೆಯಲ್ಲಿ ನಡೆದಿದ್ದ ಕಾರ್ಯಕ್ರಮದಲ್ಲೂ ಪ್ರಚಾರಕ ಅನಂತ್ ರಾವ್ ಕಾಳೆ ಈ ಹಾಡು ಹಾಡಿದ್ದರು. ಈ ಇಡೀ ಗೀತೆ ಸಂಸ್ಕೃತ ಭಾಷೆಯಲ್ಲಿದೆ ಹಾಡಿನ ಕೊನೆಯಲ್ಲಿ ಭಾರತ್ ಮಾತ ಕಿ ಜೈ ಎಂಬ ಘೋಷ ಮಾತ್ರವೇ ಹಿಂದಿಯಲ್ಲಿದೆ.
ಈಗ ಆರ್‌ಎಸ್‌ಎಸ್‌ನ ಎಲ್ಲಾ ಕಾರ್ಯಕ್ರಮದಲ್ಲಿಯೂ ಈ ಗೀತೆಯನ್ನು ಹಾಡುವುದು ಕಡ್ಡಾಯವಾಗಿದೆ. 1940 ರಲ್ಲಿ ಡಾ. ಕೆ. ಬಿ. ಹೆಡ್ಗೆವಾರ್ ಮತ್ತು ಮಾಧವ್ ಸದಾಶಿವ್ ಗೋಲ್ವಾಲ್ಕರ್ ಮತ್ತು ಇತರ ಹಿರಿಯ ಆರ್‌ಎಸ್‌ಎಸ್ ನಾಯಕರ ಮಾರ್ಗದರ್ಶನದಲ್ಲಿ ಸಂಸ್ಕೃತ ಪ್ರಾಧ್ಯಾಪಕ ನರಹರಿ ನಾರಾಯಣ್ ಭಿಡೆ ಅವರು ಈ ಪ್ರಾರ್ಥನಾ ಗೀತೆಯನ್ನು ಬರೆದಿದ್ದಾರೆ.
ಗೀತೆಯ ಸಂಪೂರ್ಣ ಸಾರಾಂಶವೇನು?
ಈ ಗೀತೆಯು ಭೂಮಿಯನ್ನು ಅಲಂಕಾರಿಕವಾಗಿ ವರ್ಣಿಸಲಿದೆ. ಈ ಮಾತೃಭೂಮಿಗೆ ನಾನು ಯಾವಾಗಲು ಚಿರಋಣಿ. ನೀನು ನನ್ನನ್ನು ಸಂತೋಷದಿಂದ ಬೆಳೆಸಿದ್ದೀಯ. ಓ ಶ್ರೇಷ್ಠ ಮತ್ತು ಆಶೀರ್ವದಿಸಿದ ಪವಿತ್ರ ಭೂಮಿಯೇ, ನನ್ನ ಜೀವನವು ನಿನ್ನ ಧರ್ಮದಲ್ಲಿಯೇ ಇಡಲ್ಪಡಲಿ. ನಾನು ನಿನ್ನ ತಾಯಿಗೆ ಮತ್ತೆ ಮತ್ತೆ ನಮಸ್ಕರಿಸುತ್ತೇನೆ ಎಂಬ ಅರ್ಥದೊಂದಿಗೆ ಆರಂಭಗಾಗುತ್ತದೆ. ದೇವರೇ, ಹಿಂದೂ ರಾಷ್ಟ್ರದ ಮಕ್ಕಳಾದ ನಾವು ಭಕ್ತಿಯಿಂದ ನಿನಗೆ ಮಸ್ಕರಿಸುತ್ತೇವೆ ಎಂಬ ಸಾಲುಗಳಿವೆ.
ನಮಸ್ತೇ ಸದಾ ವತ್ಸಲೇ ಮಾತೃಭೂಮಿ
ತ್ವಯಾ ಹಿಂದೂಭೂಮೇ ಸುಖವಂ ವರ್ಧಿತೋ ⁇ ಯಹಮ್ ।
ಮಹಾಮಂಗಳೆ ಪುಣ್ಯಭೂಮಿ ತ್ವದರ್ಥೆ
ಪತತ್ವೇಷ ಕಾಯೋ ನಮಸ್ತೇ ನಮಸ್ತೇ॥೧॥
ಪ್ರಭೋ ಶಕ್ತಿಮಾನ್ ಹಿಂದೂರಾಷ್ಟ್ರಾಂಗಭೂತ
ಇಮೇ ಸಾಧಾರಣ ತ್ವಾಂ ನಮಮೋ ವಯಮ್
ತ್ವದೀಯಾಯ ಕಾರ್ಯ ಬದ್ಧ ಕಟೀಯಂ
ಶುಭಾಮಾಶಿಷಂ ದೇಹಿ ತತ್ಪೂರ್ತಯೇ ।
ಅಜಯ್ಯಾಂ ಚ ವಿಶ್ವಸ್ಯ ದೇಹೀಶ ಶಕ್ತಿಮ್
ಸುಶೀಲಂ ಜಗದ್ಯೇನ ನಮ್ರಂ ಭವೇತ್
ಶ್ರುತಂ ಚೈವ ಯತ್ಕಂಟಕಕೀರ್ಣಮಾರ್ಗಮ್
ಸ್ವಯಂ ಸ್ವೀಕೃತಂ ನಃ ಸುಗಂಕಾರಯೇತ್॥2॥
ಸಮುತ್ಕರ್ಷ ನಿಃಶ್ರೇಯಸಸ್ಯಕಮುಗ್ರಮ್
ಪರಂ ಸಾಧನಂ ನಾಮ ವೀರವ್ರತಮ್
ತದನ್ತಃ ಸ್ಫುರತ್ವಕ್ಷಯಾ ಧ್ಯೇಯನಿಷ್ಠಾ ॥
ಹೃದನ್ತಃ ಪ್ರಜಾಗರ್ತು ತೀವ್ರನಿಶಮ್ ।
ವಿಜೇತ್ರೀ ಚ ನಃ ಸಂಹತಾ ಕಾರ್ಯಶಕ್ತಿ
ವಿಧಾಯಸ್ಯ ಧರ್ಮಸ್ಯ ಸಂರಕ್ಷಣೆಮ್
ಪರಂ ವೈಭವಂ ನೇತುಮೇತತ್ ಸ್ವರಾಷ್ಟ್ರಂ
ಸಮರ್ಥಾ ಭವತ್ವಾಶಿಷಾ ತೇ ಭೃಶಮ್॥3॥



Click it and Unblock the Notifications
