Latest Updates
-
UGC-NET ಪರೀಕ್ಷೆಯ ಗೊಂದಲ: ವಿದ್ಯಾರ್ಥಿಗಳ ಆತಂಕ ದೂರ ಮಾಡಲು ಪೋಷಕರಿಗೆ ಇಲ್ಲಿದೆ 48 ಗಂಟೆಗಳ ಸ್ಟಡಿ-ರಿಸೆಟ್ ಪ್ಲಾನ್! -
ದೆಹಲಿ ಮಳೆ: ಗುಡುಗು-ಮಿಂಚಿನಿಂದ ನಿಮ್ಮ ಎಲೆಕ್ಟ್ರಾನಿಕ್ ವಸ್ತುಗಳನ್ನು ರಕ್ಷಿಸಲು ಈ 15 ನಿಮಿಷದ ಟಿಪ್ಸ್ ಪಾಲಿಸಿ! -
ಎನರ್ಜಿ ಡ್ರಿಂಕ್ಸ್ ಕುಡಿಯುವ ಮುನ್ನ ಎಚ್ಚರ! FSSAI ಹೊಸ ನಿಯಮ ಮತ್ತು ಆರೋಗ್ಯಕರ ಪರ್ಯಾಯಗಳು -
ಗುರುಗ್ರಾಮದಲ್ಲಿ ವರುಣನ ಆರ್ಭಟ: ಕಚೇರಿಗೆ ಹೋಗ್ಬೇಡಿ, ಮನೆಯಿಂದಲೇ ಕೆಲಸ ಮಾಡಿ - ಪೊಲೀಸರ ಮಹತ್ವದ ಸೂಚನೆ -
ಮಳೆಗಾಲದ ಜಡತ್ವಕ್ಕೆ ಗುಡ್ ಬೈ: ಮುಂಬೈ-ಪುಣೆ ಜನರಿಗಾಗಿ 10 ನಿಮಿಷದ ಸರಳ ವ್ಯಾಯಾಮಗಳು -
ಮುಂಬೈ ಮಳೆ ಆರ್ಭಟ: ಸಂಗಾತಿಯ ಸುರಕ್ಷತೆಗಾಗಿ ನೀವು ಮಾಡಬೇಕಾದ ಪ್ರಮುಖ ಕೆಲಸಗಳಿವು! -
ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆಯ ಮಳೆನೀರು ಕೊಯ್ಲು ವ್ಯವಸ್ಥೆ ಹಾಳಾಗದಂತೆ ತಡೆಯುವುದು ಹೇಗೆ? -
ಮಳೆಗಾಲದಲ್ಲಿ ಮಕ್ಕಳ ಲಂಚ್ಬಾಕ್ಸ್ ಸುರಕ್ಷತೆ: ಆರೋಗ್ಯಕರ ಮತ್ತು ಹೈ-ಪ್ರೋಟೀನ್ ಆಹಾರದ ಟಿಪ್ಸ್ -
ಮುಂಬೈನಲ್ಲಿ ಭಾರೀ ಮಳೆ: ಇಂದು ಶಾಲೆ-ಕಾಲೇಜುಗಳಿಗೆ ರಜೆ ಘೋಷಣೆ, ಪೋಷಕರು ಗಮನಿಸಿ! -
ಕರಾವಳಿ ರೆಡ್ ಅಲರ್ಟ್: ಮನೆಯಲ್ಲೇ ಸುರಕ್ಷಿತವಾಗಿ ಫಿಟ್ ಆಗಿರಲು ಈ 12 ನಿಮಿಷಗಳ ವರ್ಕೌಟ್ ಟ್ರೈ ಮಾಡಿ!
ತಿರುಪತಿ ತಿಮ್ಮಪ್ಪನಿಗೆ ಬಂತು ಬೆಂಕಿ ಪೊಟ್ಟಣದಲ್ಲಿ ಸೀರೆ, ಸೀರೆಯಂತೂ ಅತ್ಯಾಕರ್ಷಕ
ಭಾರತದ ಶ್ರೀಮಂತ ದೇವಾಲಯಗಳಲ್ಲಿ ಒಂದು ತಿರುಪತಿ. ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಪ್ರತಿದಿನ ಲಕ್ಷಾಂತ ಅಭಿಮಾನಿಗಳು ಬೇಟಿ ಕೊಡುತ್ತಾರೆ. ಹೀಗೆ ಬರುವ ಭಕ್ತಾಧಿಗಳು ತಿರುಪತಿ ದೇವಾಲಯದಲ್ಲಿರುವ ಹುಂಡಿಗೆ ತಮ್ಮ ಶಕ್ತಿ ಅನುಸಾರ ಕಾಣಿಕೆ ಹಾಕುತ್ತಾರೆ. ಶ್ರೀಮಂತರು ದುಬಾರಿ ಬೆಲೆಯ ವಸ್ತುಗಳನ್ನು ತಿರುಪತಿ ತಿಮ್ಮಪ್ಪನಿಗೆ ಕಾಣಿಕೆಯಾಗಿ ನೀಡುತ್ತಾರೆ. ತಿರುಪತಿದೇವಾಲಯದ 2024-25ರ ಬಜೆಟ್ ರು. 5141. 74 ಕೋಟಿ ಹಾಗೂ ಬರುವ ಆದಾರ ರರು. 5, 141.74 ಎಂದು ಅಂದಾಜಿಸಲಾಗಿದೆ.

ತಿರುಪತಿ ತಿಮ್ಮಪ್ಪನಿಗೆ ಚಿನ್ನದ ಆಭರಣಗಳು, ಕಿರೀಟ ಹೀಗೆ ಅನೇಕ ದುಬಾರಿ ವಸ್ತುಗಳು ಕಾಣಿಕೆಯಾಗಿ ಬಂದಿವೆ ಅಲ್ಲದೆ ಪ್ರತಿನಿತ್ಯ ಇಲ್ಲಿ ದುಬಾರಿ ಬೆಲೆಯ ಕಾಣಿಕೆಗಳನ್ನು ಸಮರ್ಪಿಸಲಾಗುವುದು. ಧಾರ್ಮಿಕ ನಂಬಿಕೆಗಳ ಶ್ರೀ ವಿಷ್ಣುವೇ ತಿರುಪತಿಯ ವೆಂಕರಮಣ ಎಂದು ಹೇಳಲಾಗುವುದು.ಲಕ್ಷ್ಮಿಯನ್ನು ಹುಡುಕಿಕೊಂಡ ಬಂದ ಶ್ರೀವಿಷ್ಣು ತಿರುಪತಿಯಲ್ಲಿ ನೆಲೆನಿಂತಿದ್ದಾನೆ.
ಈ ವೆಂಕಟೇಶ್ವರನು ಪಾಪಗಳ ನಿವಾರಣೆ ಮಾಡುತ್ತಾನೆ, ವೆಂಕಟೇಶ್ವರನ ದರ್ಶನ ಮಾಡಿದರೆ ಪಾಪಗಳಿಂದ ಮುಕ್ತಿ ಹೊಂದಿ ಮುಕ್ತಿಯನ್ನು ಪಡೆಯುತ್ತಾನೆ, ಹೀಗಾಗಿ ಭಕ್ತರು ಸಹಸ್ರಾರು ಸಂಖ್ಯೆಯಲ್ಲಿ ಈ ದೇವಾಲಯಕ್ಕೆ ಭೇಟಿ ನೀಡುತ್ತಾರೆ. ಇಲ್ಲಿ ಪ್ರತಿ ನಿತ್ಯ ಎರಡೂವರೆ ಕೋಟಿಗೂ ಅಧಿಕ ಸಂಪತ್ತು ದೇಣಿಗೆ ರೂಪದಲ್ಲಿ ಬರುತ್ತದೆ ಎಂದು ಹೇಳಲಾಗುವುದು. ಇಲ್ಲಿಗೆ ಬರುವ ಎಲ್ಲಾ ದೇಣಿಗೆಗಳು ಸುದ್ದಿಯಾಗುವುದಿಲ್ಲ, ಏಕೆಂದರೆ ಅಂಥ ಕಾಣಿಕೆಗಳು ಪ್ರತಿನಿತ್ಯ ಬರ್ತಾ ಇರುತ್ತದೆ, ಆದರೆ ಕೆಲ ವಿಶೇಷ ಕಾಣಿಕೆಗಳು ಸುದ್ದಿ ಮಾಡುತ್ತದೆ. ಈಗ ಅಂಥ ಒಂದು ಕಾಣಿಕೆ ಸುದ್ದಿ ಮಾಡಿದೆ, ಇದು ವಾರದ ಹಿಂದೆ ನಡೆದಿರುವ ಘಟನೆಯಾಗಿದೆ.
ಬೆಂಕಿಪೊಟ್ಟಣದಲ್ಲಿ ಬಂತು ಸೀರೆ
ಆಂಧ್ರಪ್ರದೇಶದ ನಲ್ಲ ವಿಜಯ್ ಎಂಬ ವ್ಯಕ್ತಿ 10 ರುಪಾಯಿ ಬೆಂಕಿಪಟ್ಟಣದ ಬರುತ್ತದೆ ಅಲ್ವಾ , ಅದರಲ್ಲಿ ಸೀರೆ ತುಂಬಿ ಬಂದಿದ್ದಾರೆ. ಈ ಸೀರೆ ನೋಡಲಂತೂ ಅತ್ಯಾಕರ್ಷಕವಾಗಿದೆ. ಅತಿಯಾದ ಪಾರದರ್ಶಕ ಸೀರೆ ಇದಾಗಿದ್ದು ಇದನ್ನು ಕೈಯಿಂದಲೇ ನೇಯ್ದು ಮಾಡಲಾಗಿದ. 5 ಮೀಟರ್ ಉದ್ದ 48 ಇಂಚು ಅಗಲದ ಈ ಸೀರೆ ಮಾಡಲು 15 ದಿನ ಬೇಕಾಯ್ತು.
తిరుమల శ్రీవారికి కానుకగా అగ్గిపెట్టెలో పట్టే చీర..
— BIG TV Breaking News (@bigtvtelugu) January 5, 2025
తన తండ్రి స్ఫూర్తితో ప్రతి ఏడాది వేములవాడ రాజరాజేశ్వరి దేవి, తిరుమల శ్రీవారికి అగ్గిపెట్టెలో పట్టే చీరలను సమర్పిస్తున్న సిరిసిల్ల చేనేత కళాకారుడు నల్లా విజయ్ కుమార్ pic.twitter.com/AT96PN6WSt
ಪ್ರತಿವರ್ಷವೂ ಈ ವ್ಯಾಪಾರಿ ತಿರುಪತಿಗೆ ವಿಶೇಷ ರೇಷ್ಮೆ ಸೀರೆ ಸಮರ್ಪಿಸುತ್ತಾರೆ. ಇತ್ತೀಚೆಗಷ್ಟೇ 200 ಗ್ರಾಂ ಚಿನ್ನದಿಂದ ಸೀರೆ ತಯಾರಿಸಿದ್ದರು, ಆ ಸೀರೆ ತಯಾರಿಸಲು 20 ಲಕ್ಷ ಖರ್ಚಾಗಿತ್ತು.
ತಿರುಪತಿ ದೇವಾಲಯದ ಮಹತ್ವ
ತಿರುಮಲ ಜಾಗದಲ್ಲಿರುವ ಏಳು ಬೆಟ್ಟಗಳಲ್ಲಿ ಒಂದಾಗಿರುವ ವೆಂಕಟಾದ್ರಿ ಬೆಟ್ಟದ ಮೇಲೆ ಈ ದೇವಾಲಯವಿದೆ. ತಿರುಪತಿ ತಿಮ್ಮಪ್ಪನ ಬಳಿ ಏನಾದರು ಬೇಡಿಕೊಂಡರೆ ಖಂಡಿತ ಅದು ನೆರವೇರುವುದು ಎಂಬುವುದು ಭಕ್ತರ ಅಚಲ ನಂಬಿಕೆ.
ಇನ್ನು ತಿರುಪತಿ ತಿಮ್ಮಪ್ಪನನ್ನು ಪ್ರತಿದಿನವೂ ಅಲಂಕರಿಸಲಾಗುವುದು. ತಿರುಪತಿ ತಿಮ್ಮಪ್ಪನಿಗೆ ಅಲಂಕರಿಸಿದ ಉಡುಪುಗಳನ್ನು ಅತ್ಯಂತ ಪವಿತ್ರ ಉಡುಪುಗಳೆಂದು ಪರಿಗಣಿಸಲಾಗಿದ್ದು ಇದನ್ನು ನವ ದಂಪತಿಗಳಿಗೆ ಉಡುಗೊರೆಯಾಗಿ ನೀಡಲಾಗುವುದು. ಇದರಿಂದ ಅವರ ದಾಂಪ್ಯ ಜೀವನ ಚೆನ್ನಾಗಿರಲಿದೆ ಎಂಬುವುದು ನಂಬಿಕೆ.
ಗುರುವಾರದಂದು ನಿಜರೂಪ ದರ್ಶನ
ಪ್ರತಿವಾರ ಗುರುವಾರ ನಿಜರೂಪ ದರ್ಶನವಿರುತ್ತದೆ. ಈ ದಿನ ಬಿಳಿಯ ಮರದ ಕೊರಡನ್ನು ತೇದಿದ ಲೇಪನದಿಂದ ಅಲಂಕರಿಸಲಾಗುವುದು, ನಂತರ ಆ ಲೇಪನ ತೆಗೆದರೆ ಅದರಲ್ಲಿ ಲಕ್ಷ್ಮಿಯ ಚಿತ್ರವಿರುತ್ತದೆ.
ಅಖಂಡ ದೀಪ
ಇಲ್ಲಿ ವಿಗ್ರಹದೆದುರು ಇರುವ ದೀಪ ಸಾವಿರಾರು ವರ್ಷಗಳಿಂದಲೇ ಇರಿಯುತ್ತಲೇ ಇದೆ, ಈ ದೀಪ ಯಾವಾಗ ಹಚ್ಚಲಾಯ್ತು ಎಂಬುವುದು ಯಾರಿಗೂ ಗೊತ್ತಿಲ್ಲ. ಇಲ್ಲಿ ದೇವಾಲಯದ ವಿಗ್ರಹಕ್ಕೆ ಪಚ್ಚೆ ಕರ್ಪೂರ ಹಚ್ಚಲಾಗುವುದು, ಪಚ್ಚೆ ಕರ್ಪೂರ ಹಚ್ಚಿದರೆ ಕಲ್ಲೇ ಬಿರುಕು ಬರುತ್ತದೆ, ಆದರೆ ಇಲ್ಲಿಯ ವಿಗ್ರಹಕ್ಕೆ ಪ್ರತಿದಿನವೂ ಹಚ್ಚಲಾಗುವುದು.



Click it and Unblock the Notifications