Latest Updates
-
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ?
ಬಲಗೈ ಕಳೆದುಕೊಂಡರೂ ಎಡಗೈನಲ್ಲಿ ಪರೀಕ್ಷೆ ಬರೆದು ಶೇ.92 ಅಂಕ ಪಡೆದ ಗಟ್ಟಿಗಿತ್ತಿ..!
ಸಾಧಿಸುವ ಚಲವಿದ್ದರೆ ಎಂತಹ ಕಠಿಣ ಗುರಿಯನ್ನು ತಲುಪಬಹುದು ಎಂದು ಹಿರಿಯರು ಹೇಳುವುದನ್ನು ನಾವು ಕೇಳಿರುತ್ತೇವೆ. ಹಾಗೆ ಇಲ್ಲೊಬ್ಬ ವಿದ್ಯಾರ್ಥಿನಿಯೂ ಸಹ ತನ್ನ ವೈಕಲ್ಯದ ವಿರುದ್ಧವೇ ಹೋರಾಡಿ ಈಗ 10ನೇ ತರಗತಿಯ ಪರೀಕ್ಷೆ ಪಾಸ್ ಮಾಡಿ ಎಲ್ಲರಿಗೂ ಮಾದರಿಯಾಗಿದ್ದಾಳೆ.
ಮುಂಬೈನ ಗೋರೆಗಾಂವ್ ವೆಸ್ಟ್‌ನ ನಿವಾಸಿ ಅನಮ್ತಾ ಅಹ್ಮದ್ 9ನೇ ತರಗತಿಯಲ್ಲಿದ್ದಾಗ ನಡೆದಿದ್ದ ಒಂದು ದುರಂತ ಆಕೆ ಜೀವನ ಬದಲಾಯಿಸಿತ್ತು. ಈ ಅಪಘಾತದಲ್ಲಿ ಆಕೆಯ ಬಲಗೈ ಕಳೆದುಕೊಳ್ಳಬೇಕಾಯಿತು. ಇದಾದ ಬಳಿಕ ಆಕೆಯ ಎದುರು ಸವಾಲಿನ ದಿನಗಳು ಮಾತ್ರ ಎದುರಾದವು.

ಆಕೆ ಬಲಕೈನಲ್ಲಿ ಮಾಡಬೇಕಿದ್ದ ಕೆಲಸಗಳಿಗೆ ಎಡಗೈ ಬಳಸಬೇಕಾದ ಅನಿವಾರ್ಯತೆ ಎದುರಾಯಿತು. ಅದರಲ್ಲಿ ಬರವಣಿಗೆ ಸಹ ಆಕೆಗೆ ಸಂಕಷ್ಟ ತಂದಿತು. ಆಕೆ ಆಟವಾಡುವಾಗ ಆಕಸ್ಮಿಕವಾಗಿ ಹೈಟೆನ್ಷನ್ ವೈರ್ ಮುಟ್ಟಿದ ಪರಿಣಾಮವಾಗಿ ತನ್ನ ಕೈಯನ್ನೇ ಕಳೆದುಕೊಂಡಳು. ಟೆರೇಸ್ ಮೇಲೆ ಆಡುವಾಗ ಆಕಸ್ಮಿಕವಾಗಿ ವಿದ್ಯುತ್ ತಂತಿ ಮುಟ್ಟಿದ್ದಳು.
ನವೆಂಬರ್ 3 ರಂದು ಅವಳ ಬಲಗೈಯನ್ನು ಕತ್ತರಿಸಲಾಯಿತು. ಆದರೆ ಆಕೆಯ ಎಡಗೈ ಸಹ ಇದರಿಂದ ಶಕ್ತಿ ಕಳೆದುಕೊಂಡಿತು. ಆಕೆ 50 ದಿನಗಳ ಕಾಲ ಹಾಸಿಗೆ ಹಿಡಿದಳು. ಇದರ ಹೊರತಾಗಿ ಆಕೆ ಜೀವದಲ್ಲಿ ಹೋರಾಟದ ಹಾದಿ ಎದುರಿಸಲು ಸಿದ್ಧಳಾದಳು.
ಮೇ 6, 2024 ರಂದು, CICSE ಫಲಿತಾಂಶ ಹೊರಬಿತ್ತು ಆಕೆ ಇದರಲ್ಲಿ ಶೇ.92ರಷ್ಟು ಅಂಕಗಳಿಸಿ ಉತ್ತೀರ್ಣಳಾದಳು. ಹಿಂದಿಯಲ್ಲಿ ಶೇ.98 ರಷ್ಟು ಅಂಕಗಳಿಸಿ ಶಾಲೆಗೆ ಪ್ರಥಮ ಬಂದಳು. ಪ್ರಾಂಶುಪಾಲರಾದ ಮಾನ್ಸಿ ದೀಪಕ್ ಗುಪ್ತಾ ಅವರು ಅನಮ್ತಾ ಅವರ ಗಮನಾರ್ಹ ದೃಢತೆಯನ್ನು ಶ್ಲಾಘಿಸಿದರು. ಆಕೆಯ ಕುಟುಂಬ ಸಹ ಆಕೆ ಬೆನ್ನಿಗೆ ನಿಂತು ಆಕೆಯ ಸಾಧನೆಗೆ ಕಾರಣವಾಗಿತ್ತು.
ಆಕೆ ವಿದ್ಯುತ್ ಅವಘಡಕ್ಕೆ ಒಳಗಾದ ನಂತರ ವೈದ್ಯರು ಶಿಕ್ಷಣದಿಂದ ದೂರ ಉಳಿಯುವಂತೆ ಸೂಚಿಸಿದ್ದರು. ಆದರೆ ಆಕೆಗೆ ಓದು ಬಿಟ್ಟರೆ ಮತ್ಯಾವುದರ ಮೇಲೂ ಆಕರ್ಷಣೆ ಇರಲಿಲ್ಲ. ಓದಿನಲ್ಲೇ ಏನಾದರೂ ಸಾಧಿಸಬೇಕು ಎಂಬ ಚಲ ಆಕೆಯಲ್ಲಿತ್ತು. ಹೀಗಾಗಿ 50 ದಿನಗಳ ಕಾಲ ಆಸ್ಪತ್ರೆಯಲ್ಲಿದ್ದ ಆಕೆ ಅಲ್ಲಿಂದ ನೇರವಾಗಿ ಶಿಕ್ಷಣವನ್ನೇ ಮುಂದುವರೆಸಲು ನಿರ್ಧರಿಸಿದಳು.
ಹತ್ತಾರು ಮಂದಿಗೆ ಸ್ಫೂರ್ತಿಯಾಗಿದೆ ಅವಳ ಈ ಕಥೆ
ಆಸ್ಪತ್ರೆಯಿಂದ ಹಿಂದಿರುಗಿದ ನಂತರ, ಅವಳ ಮೊದಲ ಆದ್ಯತೆಯು ತನ್ನ ಎಡಗೈಯಲ್ಲಿ ಎಲ್ಲಾ ಕೆಲಸ ಮಾಡುವಂತಾಗಲು ಪ್ರಯತ್ನ ಮಾಡುವುದಾಗಿತ್ತು. ಇದಕ್ಕಾಗಿ ಆಕೆ ನಿತ್ಯವು ಚಿಕಿತ್ಸೆ, ವ್ಯಾಯಾಮ ಮಾಡುವುದು ಅನಿವಾರ್ಯವಾಗಿತ್ತು. ಇದಾದ ಬಳಿಕ ಆಕೆ ಎಡಗೈನಲ್ಲಿ ಬರವಣಿಗೆ ಅಭ್ಯಾಸ ಮಾಡಬೇಕಾಯಿತು. ಕಠಿಣ ಶ್ರಮ, ನಿರಂತರ ಅಭ್ಯಾಸ ಬಳಿಕ ಎಡಗೈನಲ್ಲಿ ಬರೆಯಲು ಮುಂದಾದಳು.
ಎಡಗೈನಲ್ಲಿ ಬರೆಯಲು ಆಕೆ ತಿಂಗಳುಗಳ ಕಾಲ ಅಭ್ಯಾಸ ಮಾಡಿದಳು. ನಿರಂತರ ಓದಲು ಮುಂದಾದಳು. ದಿನದಲ್ಲಿ 6ರಿಂದ 7 ಗಂಟೆಗಳ ಕಾಲ ಅಭ್ಯಾಸದಲ್ಲಿ ತೊಡಗುತ್ತಿದ್ದಳಂತೆ. ಇನ್ನೊಂದು ಕಡೆ ಆಕೆ ಎಡಗೈ ಬರವಣಿಗೆ ಸುಧಾರಿಸುತ್ತಾ ಹೋಗಿತ್ತು, ತನ್ನ ಎಡಗೈ ಮೂಲಕವೇ ಎಲ್ಲಾ ಕೆಲಸಗಳ ಮಾಡಲು ಆಕೆ ಸಮರ್ಥಳಾದಳು. ಬಳಿಕ 10ನೇ ತರಗತಿ ಪರೀಕ್ಷೆಯಲ್ಲಿ ಉತ್ತೀರ್ಣಳಾಗಿ ಎಲ್ಲರಿಗೂ ಮಾದರಿಯಾದಳು.
ಈಗ ಅವಳ ಕಥೆ ಹಲವರಿಗೆ ಸ್ಫೂರ್ತಿಯಾಗಿದೆ. ಅದರಲ್ಲೂ ವಿಕಲತೆಯ ನೆಪದಿಂದ ಶಿಕ್ಷಣದಿಂದ ಹೊರಗುಳಿದ ಮಂದಿಗೆ ಈಕೆ ಮಾದರಿಯಾಗಿದ್ದಾಳೆ. ಆಕೆಯ ಹೋರಾಟ ಹತ್ತಾರು ಮಂದಿಗೆ ಈಗ ಸ್ಫೂರ್ತಿಯಾಗಿದೆ. ಜೊತೆಗೆ ಎಲ್ಲ ಕಷ್ಟಗಳಿಗೂ ಒಂದಲ್ಲಾ ಒಂದು ಪರಿಹಾರ ಇದ್ದೇ ಇರುತ್ತದೆ ಆ ಕಷ್ಟ ಗೆಲ್ಲುವ ಚಲ ನಮ್ಮಲ್ಲಿರಬೇಕು ಎಂಬುದನ್ನು ಆಕೆ ನಿರೂಪಿಸಿದ್ದಾಳೆ.



Click it and Unblock the Notifications











