11ನೇ ತರಗತಿಯಲ್ಲಿ ಫೇಲ್ ಆದರೂ ಉಪ ವಿಭಾಗಾಧಿಕಾರಿ ಆದ ಯುವತಿ..! ಆಕೆ ಕಥೆ ಎಲ್ಲರಿಗೂ ಸ್ಫೂರ್ತಿ!

ಸಾಧಿಸುವ ಗುರಿ ಹಾಗೂ ಚಲವಿದ್ದರೆ ಎಂತಹ ಕಠಿಣ ಶಿಖರವನ್ನು ಏರಬಹುದು ಅನ್ನೋದಕ್ಕೆ ಹಲವಾರು ಉದಾಹರಣೆಗಳಿವೆ. ಅದರಲ್ಲೂ ಒಮ್ಮೆ ವಿಫಲತೆ ಅನುಭವಿಸಿ ಮತ್ತೆ ಪುಟಿದೆದ್ದ ಅದೆಷ್ಟೋ ಸಾಹಸ ಕಥೆಗಳ ನಾವು ಕೇಳಿದ್ದೇವೆ ನೋಡಿದ್ದೇವೆ ಕೂಡ. ಹಾಗೆ ಇಲ್ಲೊಬ್ಬಾಕೆ ಸಹ ಇಂತಹ ವಿಶೇಷ ಮತ್ತು ಸೋತು ಗೆದ್ದ ಸಾಧನೆಗೆ ಹೆಸರಾಗಿದ್ದಾರೆ.

ಈ ದೇಶದ ಅತ್ಯನ್ನತ ಹುದ್ದೆಗಳ ಅಲಂಕರಿಸಬೇಕು ಅನ್ನೋದು ಹಲವರ ಆಸೆಯಾಗಿರುತ್ತೆ. ಹೀಗಾಗಿ ಅವರು ಐಎಎಸ್‌-ಐಪಿಎಸ್ ಕನಸು ಹೊತ್ತು ದೇಹಲಿ, ಮುಂಬೈ ಸೇರಿ ದೊಡ್ಡ ನಗರದಲ್ಲಿ ಕೋಚಿಂಗ್ ಪಡೆದು ಪರೀಕ್ಷೆ ಸಹ ಬರೆಯುತ್ತಾರೆ, ಆದ್ರೆ ಬೆರಳೆಣಿಕೆ ಮಂದಿ ಮಾತ್ರ ಇದರಲ್ಲಿ ಉತ್ತೀರ್ಣರಾಗಿ ದೇಶ ಸೇವೆಗೆ ಮುಂದಾಗುತ್ತಾರೆ.

Despite Failing In Class 11 A Young Woman Became DC

ಆದ್ರೆ ಈ ಪ್ರಿಯಾಲ್ ಯಾದವ್ ಎಂಬಾಕೆ 11ನೇ ತರಗತಿಯಲ್ಲು ಅನುತ್ತೀರ್ಣ ಆಗಿದ್ದರು ಶ್ರಮ ಬಿಡದೆ ಕಠಿಣ ಅಭ್ಯಾಸ, ಹಗಲಿರುಳು ಪಟ್ಟ ಶ್ರಮದಿಂದ ಈಗ ಉಪ ವಿಭಾಗಾಧಿಕಾರಿಯಾಗಿ ಸೇವೆಗೆ ಮುಂದಾಗಿದ್ದಾರೆ. ಪ್ರಿಯಾಲ್ 11 ನೇ ತರಗತಿಯಲ್ಲಿದ್ದಾಗ ವೈಯಕ್ತಿಕ ಕಾರಣದಿಂದಾಗಿ ಅಭ್ಯಾಸ ಮೊಟಕುಗೊಳಿಸಬೇಕಾಗಿ ಬಂದಿತ್ತು. ಆದ್ರೆ ಆಕೆಯಲ್ಲಿದ್ದ ಚಲ ಈಗ ಡಿಸಿಯಾಗಿ ಮಾಡಿದೆ.

ಜೂನ್ 6, 2024 ರಂದು ಪ್ರಕಟಿಸಲಾದ ಮಧ್ಯಪ್ರದೇಶ ಪಬ್ಲಿಕ್ ಸರ್ವಿಸ್ ಕಮಿಷನ್ (MPPSC) 2021 ರ ಫಲಿತಾಂಶಗಳಲ್ಲಿ, ಪ್ರಿಯಾಲ್ ಆರನೇ ಶ್ರೇಣಿ ಪಡೆದು ಉತ್ತೀರ್ಣರಾಗುವ ಮೂಲಕ ಕೀರ್ತಿ ತಂದಿದ್ದಾರೆ. ಇಡೀ ಕುಟುಂಬ ಕೃಷಿ ಹಿನ್ನೆಲೆಯಲ್ಲಿ ಕೆಲಸ ಮಾಡಿಕೊಂಡು ಬಂದಿದ್ದರೂ ಪ್ರಿಯಾಲ್ ಮಾತ್ರ ಸರ್ಕಾರಿ ಹುದ್ದೆ ಅಲಂಕರಿಸುವ ಆಸೆ ಹೊಂದಿದ್ದರು. ಆಕೆಯ ಕುಟುಂಬ ಸಹ ಆಕೆಯ ಬೆನ್ನಿಗೆ ನಿಂತಿತ್ತು ಸಂಬಂಧಿಕರು ಮದುವೆ ಪ್ರಸ್ತಾಪ ಮುಂದಿಟ್ಟಾಗಲು ಮಗಳ ಓದಿನ ಕಡೆಗೆ ಪೋಷಕರು ಒಲವು ಹೊಂದಿದ್ದರಂತೆ.

"ನಾನು ಗ್ರಾಮೀಣ ಪ್ರದೇಶದಿಂದ ಬಂದಿದ್ದೇನೆ, ಅಲ್ಲಿ ಹುಡುಗಿಯರು ಸಾಮಾನ್ಯವಾಗಿ ಚಿಕ್ಕ ವಯಸ್ಸಿನಲ್ಲೇ ಮದುವೆಯಾಗುತ್ತಾರೆ, ಆದರೆ ನನ್ನ ಶಿಕ್ಷಣವನ್ನು ಮುಂದುವರಿಸಲು ನನ್ನ ಪೋಷಕರು ನನಗೆ ಸ್ವಾತಂತ್ರ್ಯ ನೀಡಿದರು" ಎಂದು ಪ್ರಿಯಾಲ್ ಹೇಳಿಕೊಂಡಿದ್ದಾರೆ. "ನಾನು 10 ನೇ ತರಗತಿಯವರೆಗೆ ಕ್ಲಾಸ್ ಟಾಪರ್ ಆಗಿದ್ದೆ. ಆದರೆ, ಸಂಬಂಧಿಕರ ಒತ್ತಡದಿಂದಾಗಿ, ನಾನು ಈ ವಿಷಯಗಳಲ್ಲಿ ಆಸಕ್ತಿಯ ಕೊರತೆ ಮತ್ತು ಭೌತಶಾಸ್ತ್ರದಲ್ಲಿ ವಿಫಲವಾದ ಹೊರತಾಗಿಯೂ 11 ನೇ ತರಗತಿಯಲ್ಲಿ ಭೌತಶಾಸ್ತ್ರ, ರಸಾಯನಶಾಸ್ತ್ರ ಮತ್ತು ಗಣಿತವನ್ನು ಆರಿಸಿಕೊಂಡೆ. ಶೈಕ್ಷಣಿಕ ಜೀವನವೇ ನನ್ನ ಮೊದಲ ಹಾಗೂ ಕೊನೆಯ ತಪ್ಪು ಎಂದು ಆಕೆ ಹೇಳಿಕೊಂಡಿದ್ದಾರೆ.

2019 ರ MPPSC ಪರೀಕ್ಷೆಯಲ್ಲಿ, ಅವರು 19 ನೇ ರ್ಯಾಂಕ್ ಗಳಿಸಿದರು ಮತ್ತು ಜಿಲ್ಲಾ ರಿಜಿಸ್ಟ್ರಾರ್ ಆದರು. ಆದರೆ ಇಷ್ಟಕ್ಕೆ ಸುಮ್ಮನಾಗದ ಆಕೆ ತನ್ನ ಶ್ರಮ ಮುಂದುವರೆಸಿದ್ದಳು ಬಳಿಕ 2020 ರಲ್ಲಿ 34 ನೇ ರ್ಯಾಂಕ್ ಗಳಿಸಿ ಸಹಕಾರಿ ಇಲಾಖೆಯಲ್ಲಿ ಸಹಾಯಕ ಆಯುಕ್ತರಾಗಿ ನೇಮಕಗೊಂಡರು. ಪ್ರಸ್ತುತ ಇಂದೋರ್‌ನಲ್ಲಿ ಉಪವಿಭಾಗಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಅವರ ಈ ಸಾಹಸ ಕಥೆ ಈಗ ಎಲ್ಲೆಡೆ ಮಾತಾಗುತ್ತಿದೆ. ಕೆಲವರು ಒಮ್ಮೆ ಜೀವನದಲ್ಲಿ ವಿಫಲತೆ ಎದುರಿಸಿದರೆ ಎಲ್ಲವೂ ಮುಗಿದೇ ಹೋಯಿತು ಎನ್ನುವಂತೆ ಆಗತ್ಮಹತ್ಯೆ ಮಾಡುಕೊಳ್ಳುವುದು, ಖಿನ್ನತೆಗೆ ಒಳಗಾಗುವುದು ನಾವು ನೋಡಿದ್ದೇವೆ. ಆದರೆ ವೈಫಲ್ಯದ ಮುಂದೆ ಯಶಸ್ಸಿನ ಗರಿ ನಮ್ಮ ಮುಂದೆ ನಿಲ್ಲುತ್ತದೆ ಎಂಬುದನ್ನು ಅವರು ಮರೆತಿರುತ್ತಾರೆ, ಆದರೆ ಪ್ರಿಯಾಲ್ ಅವರ ಈ ಕಥೆ ಎಂತವರಿಗೂ ಸ್ಫೂರ್ತಿಯಾಗುತ್ತೆ. ಜೀವನ ವೈಫಲ್ಯ ಆದ ತಕ್ಷಣ ನಿಂತು ಬಿಡುವುದಿಲ್ಲ. ಅದೊಂದು ಪಾಠವಾಗುತ್ತದೆ. ಮತ್ತೆಂದು ಆ ತಪ್ಪು ಮಾಡದಂತೆ ತಡೆಯುವ ಶಿಕ್ಷಣವಾಗುತ್ತೆ.

English summary

Despite Failing In Class 11 A Young Woman Became District Collector..!

Priyal Yadav had failed in class 11, practiced hard without giving up, and now is ready to serve as a district collector. Priyal had to cut practice short due to personal reasons when he was in class 11. But the chala she had now made her a DC.
Story first published: Monday, June 10, 2024, 12:00 [IST]
X
Desktop Bottom Promotion