Latest Updates
-
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್! -
ನವರಾತ್ರಿ ಸಂಭ್ರಮ: ಅತ್ತೆ-ಮಾವಂದಿರ ಮನೆಗೆ ಹೋಗುವಾಗ ನವದಂಪತಿಗಳು ಮರೆಯದೆ ಪಾಲಿಸಬೇಕಾದ ಶಿಷ್ಟಾಚಾರಗಳಿವು!
ಕೈದಿ ನಂಬರ್ 6106 ಬಟ್ಟೆ ಹಾಕಿಸಿ ಮಗುವಿಗೆ ಫೋಟೋಶೂಟ್..!
ದರ್ಶನ್ ಕೊಲೆ ಆರೋಪದಲ್ಲಿ ಇದೀಗ ಜೈಲು ಸೇರಿದ್ದಾರೆ. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಈಗ ಒಂದೊಂದೆ ವಿಚಾರಗಳು ಹೊರಬರುತ್ತಿವೆ. ಅಲ್ಲದೆ ದರ್ಶನ್ ಅವರಿಗೆ ಈ ಪ್ರಕರಣದಲ್ಲಿ ಅತೀ ಹೆಚ್ಚು ದಿನಗಳ ಕಾಲ ಶಿಕ್ಷೆಯಾಗುವ ಸಂಭವವೂ ಇದೆ. ದರ್ಶನ್ ಅವರ ಪ್ರಕರಣದ ಬಗ್ಗೆ ಫ್ಯಾನ್ಸ್‌ಗೆ ಆತಂಕ ಶುರುವಾಗಿದೆ. ಹಾಗಿದ್ರೆ ಹೊಸ ಕಾನೂನಿನ ಪ್ರಕಾರ ಕೊಲೆ ಆರೋಪಿಯ ವಿರುದ್ಧ ಅಪರಾಧ ಸಾಬೀತು ಮಾಡಿದರೆ ಗರಿಷ್ಠ ಯಾವ ಶಿಕ್ಷೆಯ ವಿಧಿಸಬಹುದು.
ಇದೆಲ್ಲದರ ನಡುವೆ ನಟ ದರ್ಶನ್ ಅಭಿಮಾನಿಗಳು ಹೊರಗೆ ಅವರ ಪರವಾಗಿ ನಿಂತು ವಾದ ಪ್ರತಿವಾದದಲ್ಲಿ ಭಾಗಿಯಾಗುತ್ತಿದ್ದಾರೆ. ದರ್ಶನ ಪರವಾಗಿ ಪೋಸ್ಟ್‌ಗಳ ಹಂಚಿಕೊಳ್ಳುವ ಮೂಲಕ ಅವರ ಬೆನ್ನಿಗೆ ನಿಂತಿರುವುದಾಗಿ ಅವರು ಹೇಳಿಕೊಳ್ಳುತ್ತಿದ್ದಾರೆ. ಅಲ್ಲದೆ ಈ ಸಮಯದಲ್ಲಿ ದರ್ಶನ್ ಜೊತೆ ನಿಲ್ಲುವಂತೆ ಕರೆ ನೀಡುತ್ತಿದ್ದಾರೆ. ದರ್ಶನ್ ಅಭಿಮಾನಿಗಳು ಈಗ ವಿವಾದಗಳ ಹುಟ್ಟುಹಾಕುವ ಜೊತೆಗೆ ನಿತ್ಯ ಒಂದಲ್ಲಾ ಒಂದು ರೀತಿಯಲ್ಲಿ ಸುದ್ದಿಯಾಗುತ್ತಿದ್ದಾರೆ.

ಜೊತೆಗೆ ದರ್ಶನ್ ಅವರಿಗೆ ನೀಡಲಾಗಿರುವ ಕೈದಿ ಸಂಖ್ಯೆ 6106 ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಈ ಸಂಖ್ಯೆಗೆ ಈಗ ಭಾರೀ ಬೇಡಿಕೆ ಬಂದಿದ್ದು, ಹೊಸ ವಾಹನಗಳಿಗೆ ಈ ನಂಬರ್ ಹಾಕಿಸಲು ಅಭಿಮಾನಿಗಳು ತಾಮುಂದು ನಾಮುಂದು ಎನ್ನುತ್ತಿದ್ದರು. ಬಳಿಕ ತನ್ನ ವಾಹನಗಳಿಗೆ ಈ ನಂಬರ್‌ನ ಸ್ಟಿಕ್ಕರ್ ಕಟಿಂಗ್ ಮಾಡಿಸಿ ಸುದ್ದಿಯಾಗಿದ್ದರು.
ಈಗ ಇಲ್ಲೊಬ್ಬ ತಾಯಿ ಮತ್ತೊಂದು ಹೆಜ್ಜೆ ಮುಂದೆ ಹೋಗಿ ತಮ್ಮ ಚಿಕ್ಕ ಪುಟಾಣಿಗೆ 6106 ಸಂಖ್ಯೆ ಇರುವ ಬಿಳಿ ಬಟ್ಟೆ ಹಾಕಿಸಿ ಫೋಟೋಶೂಟ್ ಮಾಡಿಸಿದ್ದಾರೆ. ದರ್ಶನ್ ಮೇಲಿನ ಅಭಿಮಾನದಿಂದಾಗಿ ಅವರು ಮಗುವಿಗೆ ಜೈಲು ಬಟ್ಟೆ ಹಾಕಿಸಿ ಜೈ ಡಿ ಬಾಸ್ ಎಂದು ಬರೆದು ಫೋಟೋಶೂಟ್ ಮಾಡಿಸಿದ್ದಾರೆ.
ಸದ್ಯ ಈ ಫೋಟೋಶೂಟ್ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಒಂದಿಷ್ಟು ಮಂದಿ ದರ್ಶನ ಅವರ ಮೇಲಿರುವ ಅವರ ಅಭಿಮಾನಕ್ಕೆ ಪ್ರಶಂಸೆ ವ್ಯಕ್ತಪಡಿಸಿದ್ದರೆ ಮತ್ತೆ ಕೆಲವರು ಇದು ಹುಚ್ಚು ಅಭಿಮಾನ ಎನ್ನುತ್ತಿದ್ದಾರೆ. ಇದೇ ಸಂಖ್ಯೆಯನ್ನ ವಾಹನ ಮಾಲೀಕರು ಸಹ ತಮ್ಮ ವಾಹನಗಳ ಮೇಲೆ ಹಾಕಿಸಿ ಅಭಿಮಾನ ಮೆರೆದಿದ್ದರು. ಈಗ ಪೋಷಕರು ಈ ರೀತಿಯ ಫೋಟೋಶೂಟ್ ಮಾಡಿಸಿ ಗಮನ ಸೆಳೆದಿದ್ದಾರೆ.
ದರ್ಶನ್ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದು, ಅವರನ್ನು ಭೇಟಿಯಾಗಲು ಅವರ ಕುಟುಂಬಸ್ಥರು ಹಾಗೂ ಸ್ನೇಹಿತರು ಭೇಟಿ ನೀಡುತ್ತಿದ್ದಾರೆ. ಹೀಗಿದ್ದಾಗ ದರ್ಶನ್ ಅವರನ್ನ ನೋಡಲೆಂದು ಅವರ ತಾಯಿ & ತಮ್ಮ ಇಬ್ಬರೂ ಜೈಲಿಗೆ ಭೇಟಿ ನೀಡಿದ್ದರು. ದರ್ಶನ್ ತಮ್ಮ ದಿನಕರ್ ಕೂಡ ಸಿನಿಮಾ ರಂಗದಲ್ಲಿ ದೊಡ್ಡ ಹೆಸರು ಮಾಡಿದ್ದರು. ಆದರೆ ಒಂದು ಹಂತದಲ್ಲಿ ನಟ ದರ್ಶನ್ ಸ್ವಂತ ತಮ್ಮ ದಿನಕರ್ ತೂಗುದೀಪ್ ಜೊತೆಯಲ್ಲೂ ಜಗಳ ಮಾಡಿ, ಹಲ್ಲೆ ಮಾಡಿದ್ದರೆಂಬ ಆರೋಪ ಇದೆ. ಹೀಗಿದ್ದರೂ ಕೊಲೆ ಆರೋಪದ ಮೇಲೆ ಜೈಲು ಸೇರಿದ ಅಣ್ಣನ ನೋಡಲು ತಮ್ಮ ದಿನಕರ್ ಬಂದಿದ್ದು, ಈ ವೇಳೆ ಇಬ್ಬರೂ ಭಾವುಕರಾಗಿದ್ದಾರೆ ಎನ್ನಲಾಗಿದೆ. ಈ ವೇಳೆ ನಟ ದರ್ಶನ್ ಕಣ್ಣೀರು ಹಾಕಿದ್ದಾರೆ ಎಂದು ವರದಿಯಾಗಿದೆ.
ಸದ್ಯ ದರ್ಶನ್ ಹೊರಗಿದ್ದರು ಅವರ ಅಭಿಮಾನಿಗಳು ಹಬ್ಬ ಮಾಡುತ್ತಿದ್ದರು, ಈಗ ಜೈಲಿನೊಳಗಿದ್ದರು ಸಹ ಹೊರಗೆ ಅಭಿಮಾನಿಗಳು ಅವರನ್ನು ಮೆರೆಸುತ್ತಿದ್ದಾರೆ. ಅಲ್ಲದೆ ಅವರ ಬೆನ್ನಿಗೆ ನಿಂತಿದ್ದಾರೆ. ಅವರು ಸದ್ಯದಲ್ಲೇ ಜೈಲಿನಿಂದ ಹೊರಬರಲಿ ಎಂದು ಅವರ ಕೋಟಿ ಕೋಟಿ ಅಭಿಮಾನಿಗಳು ಪ್ರಾರ್ಥಿಸುತ್ತಿದ್ದಾರೆ. ಆದರೆ ಪ್ರಕರಣದಲ್ಲಿ ಅವರಿಗೆ ಶಿಕ್ಷೆಯಾಗುವುದು ಖಚಿತ ಎಂಬ ಅನುಮಾನ ಸಹ ಮೂಡಿದೆ.



Click it and Unblock the Notifications
