Latest Updates
-
ಗಣೇಶೋತ್ಸವದ ಸಂಭ್ರಮದಲ್ಲಿ ದಂಪತಿಗಳ ಜಗಳ ಬೇಡ: ಸಮಯ ಮತ್ತು ಬಜೆಟ್ ನಿರ್ವಹಣೆಗೆ ಇಲ್ಲಿದೆ ಸಿಂಪಲ್ ಪ್ಲಾನ್! -
ಗಣೇಶೋತ್ಸವ 2026: ಮಳೆಯ ನಡುವೆಯೂ ಪರಿಸರ ಸ್ನೇಹಿ ಹಬ್ಬ ಆಚರಣೆಗೆ ಇಲ್ಲಿದೆ ಸರಳ ಟಿಪ್ಸ್! -
ಪ್ಯಾಕ್ ಮಾಡಿದ ಆಹಾರದಲ್ಲಿ ಸಕ್ಕರೆ, ಉಪ್ಪು ಹೆಚ್ಚಿದ್ದರೆ ಕೆಂಪು ಲೇಬಲ್: ಸುಪ್ರೀಂ ಕೋರ್ಟ್ ಪ್ರಶ್ನೆ, ಗ್ರಾಹಕರಿಗೆ ಸಿಗುತ್ತಾ ಪರಿಹಾರ? -
ಝೊಮ್ಯಾಟೋದಲ್ಲಿ 'ಪೇ ಆನ್ ಡೆಲಿವರಿ' ಶುಲ್ಕದ ಶಾಕ್: ನಿಮ್ಮ ಬಿಲ್ ಹೆಚ್ಚಾಗುತ್ತಿದೆಯೇ? ಬಚಾವ್ ಆಗೋದು ಹೇಗೆ? -
ಗಣೇಶೋತ್ಸವದ ಮಳೆ ಮತ್ತು ದರ್ಶನದ ಕ್ಯೂ: ಆಯಾಸವಿಲ್ಲದೆ ಬಪ್ಪನ ದರ್ಶನ ಪಡೆಯಲು ಇಲ್ಲಿದೆ ಬೆಸ್ಟ್ ಟಿಪ್ಸ್! -
ಅಮಾವಾಸ್ಯೆಯ ದಿನ ಜಗಳ ಬೇಡ: ದಂಪತಿಗಳ ನಡುವಿನ ಪ್ರೀತಿ ಹೆಚ್ಚಿಸಲು ಈ ಸಂಭಾಷಣೆ ಸೂತ್ರಗಳು -
ಆರೆಂಜ್ ಅಲರ್ಟ್: ಭಾರಿ ಮಳೆಯಿಂದ ಮನೆ ರಕ್ಷಿಸಲು ಈ 5 ಟಿಪ್ಸ್ ಪಾಲಿಸಿ, ಸುರಕ್ಷಿತವಾಗಿರಿ! -
ಪ್ರೊಟೀನ್ ಪೌಡರ್ನಲ್ಲಿ ಹುಳುಗಳು! ಬಾಲಿವುಡ್ ನಟಿಯ ಆತಂಕ, ಎಫ್ಡಿಎ ತನಿಖೆ ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಟಿಪ್ಸ್ -
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ! -
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ
ಬೆಂಗಳೂರಿನ ಮಹಿಳೆಗೆ ತಣ್ಣನೆಯ ದೋಸೆ ನೀಡಿದ ಹೋಟೆಲ್‌ಗೆ ಬಿತ್ತು 7 ಸಾವಿರ ದಂಡ
ಮಸಾಲೆ ದೋಸೆ ಆರ್ಡರ್ ಮಾಡಿದ ಮಹಿಳೆಗೆ ತಣ್ಣಗಿರುವ ದೋಸೆ ನೀಡಲಾಗಿದೆ. ಪ್ರಶ್ನಿಸಿದರೆ ಹೊಟೆಲ್ ಸಿಬ್ಬಂದಿಗಳು ಗದರಿಸಿದ್ದಾರೆ. ಆದರೆ ಮಹಿಳೆ ಕಳೆದೆರಡು ವರ್ಷದಿಂದ ಹೋರಾಟ ಮಾಡಿ ಇದೀಗ ಹೊಟೆಲ್‌ಗೆ ಗ್ರಾಹಕರ ಕಮಿಷನ್ ನ್ಯಾಯಾಲಯ 7,000 ರೂಪಾಯಿ ದಂಡ ವಿಧಿಸಿದೆ.
ಗ್ರಾಹಕರಿಗೆ ತಣ್ಣನೆಯ ದೋಸೆ ನೀಡಿ ಹೋಟೆಲ್ 7000 ರುಪಾಯಿ ದಂಡ ಹಾಕಿಸಿಕೊಂಡಿರುವ ಘಟನೆ ನಮ್ಮ ಬೆಂಗಳೂರಿನಲ್ಲಿ ನಡೆದಿದೆ. ಹೋಟೆಲ್‌ನಲ್ಲಿ ನಾವು ಕೇಳಿದ ಫುಡ್ ಬದಲಿಗೆ ಬೇರೆ ತಂದು ಕೊಡುವುದು ಅಥವಾ ತಂದು ಕೊಟ್ಟು ಆಹಾರದಲ್ಲಿ ಹುಳ, ಮತ್ತಿತ್ತರ ವಸ್ತುಗಳು ಬಿದ್ದು ಸುದ್ದಿಯಾಗಿರುವ ಅನೇಕ ಘಟನೆಗಳನ್ನು ನೋಡಿದ್ದೇವೆ, ಆದರೆ ಈ ಘಟನೆ ಮಾತ್ರ ಅಪರೂಪವಾಗಿದೆ, ಬಿಸಿ ದೋಸೆ ಸವಿಯಲು ಕಾಯುತ್ತಿದ್ದ ಮಹಿಳೆಗೆ ತಣ್ಣನೆಯ ದೋಸೆ ದಂಡ ಪಾವತಿಸಬೇಕಾದ ಗತಿ ಬಂದಿದೆ.

ಆಕೆ ಕುಟುಂಬದ ಜೊತೆಗೆ ದೋಸೆ ಸವಿಯಲು ಹೋಟೆಲ್‌ಗೆ ಬಂದು ಇಷ್ಟದ ದೋಸೆ ಆರ್ಡರ್ ಕೊಡ್ತಾಳೆ, ದೋಸೆ ಆರ್ಡರ್ ಮಾಡಿಆಗ ಹೋಟೆಲ್‌ನವರು ಆಗಷ್ಟೇ ಮಾಡಿ ದೋಸೆ ಕೊಡುತ್ತಾರೆ. ದೋಸೆಯನ್ನು ನಮ್ಮಿಂದ ಆರ್ಡರ್ ಪಡೆದ ಬಳಿಕವಷ್ಟೇ ಮಾಡುವುದು ಮೊದಲೇ ಮಾಡಿಡಲ್ಲ, ಹಾಗಾಗಿ ನಾವು ಬಿಸಿ ದೋಸೆ ಕೊಡಿ ಎಂದು ಪ್ರತ್ಯೇಕವಾಗಿ ಕೇಳಬೇಕಾಗಿಲ್ಲ, ಕೇಳದೆಯೇ ಬಿಸಿ ಬಿಸಿ ದೋಸೆ ನಮಗೆ ಸಿಗುತ್ತದೆ, ಈಕೆ ಕೂಡ ಅಷ್ಟೇ ಬಿಸಿ ದೋಸೆಗಾಗಿ ಕಾಯುತ್ತಿದ್ದಾಗ ಹೋಟೆಲ್‌ನವರು ನೀಡಿದ್ದು ಮೊದಲೇ ರೆಡಿಮಾಡಿಟ್ಟ ತಣ್ಣನೆಯ ದೋಸೆಯನ್ನು.
ಇದು ಬೇಡ ಬಿಸಿ ಕೊಡಿ ಎಂದಾಗ ನಕಾರ ಮಾಡಿದ ಹೋಟೆಲ್ ಸಿಬ್ಬಂದಿ
ಆಕೆಗೆ ದೋಸೆ ನೋಡಿ ಶಾಕ್ ಆಗುತ್ತೆ, ಇವರೇನು ಈ ರೀತಿ ತಂದು ಕೊಡ್ತಾ ಇದ್ದಾರಲ್ಲ ಎಂದು ಇದು ಬೇಡ ಬೇರೆ ಬಿಸಿ ದೋಸೆ ತನ್ನಿ ಎಂದಾಗ ಸಾಮಾನ್ಯವಾಗಿ ಹೋಟೆಲ್‌ನವರು ತಪ್ಪಾಯ್ತು ಅಂತ ಆರ್ಡರ್ ಬದಲಾಯಿಸುತ್ತಾರೆ, ಆದರೆ ಇವರು ಮಾತ್ರ ಬೇರೆ ದೋಸೆ ಹಾಕಿ ಕೊಡಲು ರೆಡಿ ಇರಲಿಲ್ಲ, ಈಕೆ ಮತ್ತೊಮ್ಮೆ ಅವರ ಬಳಿ ಕೇಳಿದಾಗ ತಮ್ಮ ಬಳಿ ತಪ್ಪು ಇಟ್ಟುಕೊಂಡು ಈಕೆಯನ್ನು ಗದರಿದ್ದಾರೆ. ಇದರ ವೀಡಿಯೋ ಕೂಡ ಇತ್ತು.
ಅವರು ಬೇರೆ ದೋಸೆ ಕೊಡದೆ ಸತಾಯಿಸಿದಾಗ ಈಕೆಗೆ ಕೋಪ ಬಂದಿದೆ, ಅದರಲ್ಲಿ ಬಿಪಿ, ಶುಗರ್ ಏರುಪೇರಾಗಿ ಆಸ್ಪತ್ರೆ ಸೇರಬೇಕಾಯ್ತು, ನಂತರ ಗ್ರಾಹಕರ ಹಿತ ರಕ್ಷಣಾ ವೇದಿಕೆಗೆ ದೂರು ಕೊಡುತ್ತಾರೆ, ಅಷ್ಟು ಮಾತ್ರವಲ್ಲ ನಿರಂತರ ಎರಡು ವರ್ಷ ಹೋರಾಟ ಮಾಡುತ್ತಾರೆ, ಕೊನೆಗೂ ಗ್ರಾಹಕರಿಗೆ ಮೋಸ ಮಾಡಿದ ಹೋಟೆಲ್‌ಗೆ ತಕ್ಕ ಬುದ್ಧಿ ಕಲಿಸಿದ್ದಾರೆ, ಗ್ರಾಹಕರ ಕಮಿಷನ್ ಆ ಹೋಟೆಲ್‌ಗೆ 7 ಸಾವಿರ ರುಪಾಯಿ ದಂಡ ವಿಧಿಸಿದೆ. ಸುಮ್ಮನೆ ಒಂದು ದೋಸೆ ಹಾಕಿದರೆ ಈ ರಂಪಾಟವೇ ಇರಲಿಲ್ಲ, ಈಗ ದಂಡ ಕಟ್ಟಬೇಕಾಗಿದೆ.
ಈಕೆಯ ಹೆಸರು ತಹರಾ ಅಂತ ಬೆಂಗಳೂರಿನ ಕೋರಮಂಗಲದ ನಿವಾಸಿ, ಇವರು ಬೆಂಗಲೂರಿನಿಂದ ಹಾಸನಕ್ಕೆ ಹೋಗುವ ಮಾರ್ಗದಲ್ಲಿ ಬೆಂಗಳೂರಿನ ಹೊರವಲಯದ ಉಡುಪಿ ಗಾರ್ಡನ್‌ಗೆ ದೋಸೆ ತಿನ್ನಲು ಹೋಗಿದ್ದಾರೆ, ಆವಾಗ ಈ ಘಟನೆ ನಡೆದಿದೆ. ಹೋಟೆಲ್‌ನವರ ತಪ್ಪಿದೆ ಎಂದು ಸಿಸಿಟಿವಿಯಿಂದ ಗೊತ್ತಾಯ್ತು, ನಂತರ ಗ್ರಾಹಕರ ಕಮಿಷನ್ 5,000 ರೂಪಾಯಿ ದಂಡ ಹಾಗೂ 2,000 ರೂಪಾಯಿ ವ್ಯಾಜ್ಯಕ್ಕಾಗಿ ಖರ್ಚು ಮಾಡಿದ ವೆಚ್ಚ ಒಟ್ಟು 7,000 ರೂಪಾಯಿ ದಂಡ ಪಾವತಿಸುವಂತೆ ಉಡುಪಿ ಗಾರ್ಡನ್ ಹೊಟೆಲ್‌ಗೆ ಆದೇಶ ನೀಡಿದೆ, ಮಾಡಿದುಣ್ಣೋ ಮಹರಾಯ ಅಷ್ಟೇ...



Click it and Unblock the Notifications
