Latest Updates
-
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ
'ಬುರ್ಜ್ ಖಲೀಫಾ ಇನ್ಮುಂದೆ ಸತೀಶ್ ಶೆಣೈ' ಟವರ್ ಎಂದ ಕಮಿಡಿಯನ್! ಏಕೆ ಗೊತ್ತಾ?
ವಿಶ್ವದ ಅತ್ಯಂತ ಎತ್ತರದ ಹಾಗೂ ಇಂಜಿನಿಯರಿಂಗ್ ಅದ್ಭುತವಾಗಿರುವ ದುಬೈನ ಬುರ್ಜ್ ಖಲೀಫಾ ಕಟ್ಟಡ ಯಾರಿಗೆ ಗೊತ್ತಿಲ್ಲಾ ಹೇಳಿ. ಈ ಕಟ್ಟಡ ವಿಶ್ವದ ಕೋಟಿ ಕೋಟಿ ಜನರ ಅಚ್ಚರಿ ಹಾಗೂ ಪ್ರವಾಸಿ ತಾಣವಾಗಿ ಈ ಮಾರ್ಪಟ್ಟಿದೆ. ಈ ಕಟ್ಟಡದ ತುತ್ತ ತುದಿಗೆ ತೆರಳಿ ಇಡೀ ಭೂ ಮಂಡಲವನ್ನು ನೋಡಬೇಕು ಅನ್ನೋದು ಹಲವರ ಆಸೆಯಾಗಿರುತ್ತೆ. ಜೊತೆಗೆ ಸಾಹಸ ಪ್ರಿಯರಿಗೆ, ಪ್ರವಾಸಿ ಇಷ್ಟಪಡುವವರ ಹಾಟ್ ಫೇವರಿಟ್ ಸ್ಥಳ ಇದಾಗಿದೆ.
ಆದ್ರೆ ಈ ಟವರ್ ಅನ್ನು ಇನ್ನು ಮುಂದೆ ಬುರ್ಜ್ ಖಲೀಫಾ ಬದಲಿಗೆ ಸತೀಶ್ ಶೆಣೈ ಟವರ್ ಎಂದು ಕರೆಯಬೇಕಾಗಿದೆ ಎಂದು ಕಮಿಡಿಯನ್ ಒಬ್ಬರು ಹೇಳುತ್ತಿರುವುದು ವೈರಲ್ ಆಗಿದ್ದು, ಜನರಿಗೂ ಅಚ್ಚರಿಯಾಗಿದೆ. ಹೀಗೆ ಸತೀಶ್ ಶೆಣೈ ಹೆಸರಿಗೂ ಈ ಬುರ್ಜ್ ಖಲೀಫಾಗೂ ಏನು ಸಂಬಂಧ ಎಂಬುದು ಈಗ ಎಲ್ಲರ ಪ್ರಶ್ನೆಯಾಗಿದೆ.

ಹಾಗಾದ್ರೆ ಏನಿದು ಬುರ್ಜ್ ಖಲೀಫಾ ಹೆಸರು ಬದಲಾವಣೆ ಕಥೆ ಅನ್ನೋದನ್ನ ನಾವಿಂದು ತಿಳಿದುಕೊಳ್ಳೋಣ. ಕೌತುಕ್ ಶ್ರೀವಾಸ್ತವ್ ಎಂಬ ಸ್ಟ್ಯಾಂಡ್ ಅಪ್ ಕಮಿಡಿಯನ್ ಒಬ್ಬರು ಈ ಕುರಿತು ಮಾತನಾಡುತ್ತಾ ಸತೀಶ್ ಶೆಣೈ ಹೆಸರಿನ ಮೇಲೆ ಬೆಳಕು ಚೆಲ್ಲಿದ್ದಾರೆ. ಅವರು ಬುರ್ಜ್ ಖಲೀಫಾ ಫೋಟೋದಲ್ಲಿ ಸತೀಶ್ ಶೆಣೈ ಹೆಸರು ಗುರುತಿಸಿದ್ದಾರೆ.
ಹೌದು ನಿಮಗೆ ಹಾಲಿವುಡ್ ಸೂಪರ್ ಸ್ಟಾರ್ ಟಾಮ್ ಕ್ರೂಸ್ ಗೊತ್ತಿರಬಹುದು. ಆತ ಸಿನಿಮಾಗಳಿಗಿಂತ ಭಿನ್ನ, ಅಪಾಯಕಾರಿ ಸಾಹಸಗಳಿಂದಲೇ ಸುದ್ದಿಯಾಗುವ ಸಾಹಸಿಗ, ಆತ ಒಮ್ಮೆ ಬುರ್ಜ್ ಖಲೀಫಾದ ತುತ್ತ ತುದಿ ತಲುಪಿ ಹಗ್ಗದ ಸಹಾಯವಿಲ್ಲದೆ ಅದರ ಮೇಲೆ ಕುಳಿತು ಇಡೀ ವಿಶ್ವಕ್ಕೆ ಅಚ್ಚರಿ ಮೂಡಿಸಿದ್ದ. ಜನ ಆತನ ಸಾಹಸ ಕಂಡು ನಿಬ್ಬೆರಗಾಗಿದ್ದರು. ಈ ಕಟ್ಟಡ ಕಟ್ಟುವಾಗ ಕಾರ್ಮಿಕರು ಇಷ್ಟು ಎತ್ತರಕ್ಕೆ ತಲುಪಿದ್ದು ಬಿಟ್ಟರೆ ಮತ್ತಾರು ಈ ಎತ್ತರ ತಲುಪಿರಲಿಲ್ಲ.
ಆದ್ರೆ ಈ ಫೋಟೋ ಹತ್ತಿರದಿಂದ ಗಮನಿಸಿದ ಕಮಿಡಿಯನ್ ಕೌತುಕ್ ಆ ಟವರ್‌ನ ತುದಿಯಲ್ಲಿ ಸತೀಶ್ ಶೆಣೈ ಹೆಸರು ಬರೆದಿರುವುದನ್ನು ಪತ್ತೆ ಮಾಡಿದ್ದಾರೆ. ಅಚ್ಚರಿ ಎಂದರೆ ಅಲ್ಲಿಯವರೆಗೆ ಯಾರು ಆ ತುದಿ ತಲುಪಿಲ್ಲ ಎಂದರೆ ಈ ಸತೀಶ್ ಶೆಣೈ ಅಲ್ಲಿಗೆ ತಲುಪಿದ್ದು ಯಾವಾಗ ಎಂಬ ಪ್ರಶ್ನೆ ಎಲ್ಲರಲ್ಲೂ ಕಾಡಿದೆ.
ಅಲ್ಲದೆ ಭಾರತೀಯರ ಕೆಟ್ಟ ಚಾಳಿಯಂತೆ ಎಲ್ಲೆಂದರಲ್ಲಿ ಬರೆಯುವಂತೆ ಆತನೂ ಸಹ ಈ ಟವರ್ ಮೇಲೆ ಬರೆದಿದ್ದಾನೆ. ಕಟ್ಟಡ ಕಾರ್ಮಿಕರ ಬಹುಪಾಲು ಮಂದಿ ಭಾರತೀಯರಿದ್ದರು, ಈ ಸಾಲಿನಲ್ಲಿ ಸತೀಶ್ ಶೆಣೈ ಸಹ ಇದ್ದಿರಬಹುದು ಎಂದು ನಂಬಲಾಗಿದೆ. ಆತ ಈ ಕಟ್ಟಡ ನಿರ್ಮಾಣ ಕಾರ್ಯ ಮುಗಿದ ಬಳಿಕ ಕಟ್ಟಡದ ತುದಿಯಲ್ಲಿ ಕೊನೆಯ ದಿನದ ಕೆಲಸ ಮಾಡುವಾಗ ತನ್ನ ಹೆಸರು ಬರೆದಿದ್ದಾನೆ.
ಅಚ್ಚರಿ ಎಂದರೆ ಆತ ತನ್ನ ಹೆಸರು ಬರೆದು ಬಳಿಕ ಅದರ ಕೆಳಗೆ ಆ ದಿನಾಂಕವನ್ನೂ ಬರೆದಿದ್ದಾನೆ. 20-05-2005 ರಿಂದ 12-03-2010 ಎಂದು ಬರೆಯಲಾಗಿದೆ. ಜನವರಿ 4 2010 ರಿಂದ ಬುರ್ಜ್ ಖಲೀಫಾ ಆರಂಭಗೊಂಡಿತ್ತು. ಹಾಗೆ ನೋಡೋದಾದ್ರೆ., ಈ ಕಟ್ಟಡದ ತುದಿಯಲ್ಲಿ ಬರೆದಿರುವ ದಿನಾಂಕ ಹಾಗೂ ಇದಕ್ಕೂ ತಾಳೆಯಾಗುತ್ತಿದೆ. ಅಂದರೆ ಸತೀಶ್ ಶೆಣೈ ಎಂಬ ಕಟ್ಟಡ ಕಾರ್ಮಿಕ ತನ್ನ ಹೆಸರು ಬರೆದಿದ್ದಾನೆ ಎಂಬುದು ಮೇಲ್ನೋಟಕ್ಕೆ ದೃಢವಾಗುತ್ತದೆ.
ಸದ್ಯ ಈ ವಿಡಿಯೋವನ್ನು ಕೌತುಕ್ ವಾಸ್ತವ್ ತಮ್ಮ ಇನ್ಸ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದು, ಭಾರತೀಯರು ತನ್ನ ನೆನಪು ಹಾಗೂ ಬರಹ ಇಂತಹ ಕಟ್ಟಡವನ್ನೂ ಬಿಟ್ಟಿಲ್ಲ ಎಂದು ಅಚ್ಚರಿ ಹೊರಹಾಕಿದ್ದಾರೆ. ಜೊತೆಗೆ ಟಾಮ್ ಕ್ರೂಸ್‌ಗಿಂತ ಮೊದಲು ಸತೀಶ್ ಶೆಣೈ ಈ ಕಟ್ಟಡದ ತುತ್ತ ತುದಿ ತಲುಪಿದ್ದ ಎಂದು ಜನ ಕಮೆಂಟ್‌ಗಳ ಮೂಲಕ ಅಚ್ಚರಿ ಹೊರಹಾಕಿದ್ದಾರೆ.



Click it and Unblock the Notifications
