Latest Updates
-
ಕೋಲ್ಕತ್ತಾ ದುರ್ಗಾ ಪೂಜೆ: ಟ್ರಾಫಿಕ್ ಕಿರಿಕಿರಿ ತಪ್ಪಿಸಿ, ಪಂಡಾಲ್ ಹಾಪಿಂಗ್ಗೆ ಇಲ್ಲಿದೆ ಸ್ಮಾರ್ಟ್ ಪ್ಲಾನ್! -
ದೆಹಲಿಯಲ್ಲಿ ಡೆಂಗ್ಯೂ ಭೀತಿ: ನಿಮ್ಮ ಮನೆಯನ್ನು ಸೊಳ್ಳೆ ಮುಕ್ತವಾಗಿಸಲು 20 ನಿಮಿಷಗಳ ಈ ಚೆಕ್ಲಿಸ್ಟ್ ಬಳಸಿ -
ಹಬ್ಬದ ಸೀಸನ್ನಲ್ಲಿ ಎಚ್ಚರ! ಕಲಬೆರಕೆ ಸಿಹಿತಿಂಡಿ ಪತ್ತೆ ಹಚ್ಚುವುದು ಹೇಗೆ? ಆರೋಗ್ಯಕರ ಟಿಪ್ಸ್ ಇಲ್ಲಿದೆ -
ನವರಾತ್ರಿ 4ನೇ ದಿನ: ರಾಯಲ್ ಬ್ಲೂ ಡ್ರೆಸ್ ಕೋಡ್ನಲ್ಲಿ ಮಿಂಚಲು ಇಲ್ಲಿದೆ ಸಿಂಪಲ್ ಸ್ಟೈಲಿಂಗ್ ಟಿಪ್ಸ್! -
ನವರಾತ್ರಿ 4ನೇ ದಿನ: ಉಪವಾಸದ ನಡುವೆಯೂ ಗರ್ಬಾ ಆಡಲು ಬೇಕಾದ ಶಕ್ತಿ ಮತ್ತು ಆರೋಗ್ಯದ ರಹಸ್ಯ ಇಲ್ಲಿದೆ! -
ನವರಾತ್ರಿ ಗರ್ಬಾ ಸಂಭ್ರಮ: ಬೆಂಗಳೂರಿನ ಕಪಲ್ಸ್ ಎಂಜಾಯ್ ಮಾಡಲು ಇಲ್ಲಿದೆ ಬೆಸ್ಟ್ ಸೇಫ್ಟಿ ಟಿಪ್ಸ್ -
ದೆಹಲಿ ವಾಯು ಮಾಲಿನ್ಯ: ಮನೆಯೊಳಗೆ ಶುದ್ಧ ಗಾಳಿ ಪಡೆಯಲು 20 ನಿಮಿಷದ ಈ ಸರಳ ಟ್ರಿಕ್ಸ್ ಫಾಲೋ ಮಾಡಿ -
ಹಣದುಬ್ಬರದ ಬಿಸಿ: ₹120ರ ಬಜೆಟ್ನಲ್ಲಿ ಪೌಷ್ಟಿಕ ಹೈ-ಪ್ರೋಟೀನ್ ಊಟ ತಯಾರಿಸುವುದು ಹೇಗೆ? -
ನವರಾತ್ರಿ 3ನೇ ದಿನ: ಕೆಂಪು ಬಣ್ಣದ ಲುಕ್ನಲ್ಲಿ ಆಫೀಸ್ನಿಂದ ನೇರ ಗರ್ಬಾಗೆ ಮಿಂಚುವ ಸ್ಮಾರ್ಟ್ ಟಿಪ್ಸ್! -
ಮುಂಬೈನಲ್ಲಿ ಕಳಪೆ ಗಾಳಿ: ವಾಕಿಂಗ್ ಹೋಗುವ ಮುನ್ನ ಈ ಎಚ್ಚರಿಕೆ ಮರೆಯದಿರಿ, ಇಲ್ಲದಿದ್ದರೆ ಅಪಾಯ!
ಆರ್ಥಿಕ ಸಂಕಷ್ಟ ದೂರಾಗಲು 10 ದಿನ ಈ 4 ಮಂತ್ರಗಳನ್ನು ಪಠಿಸಿ
ಶ್ರೀ ಗಣೇಶನ ಆಶೀರ್ವಾದ ಸದಾ ನಿಮ್ಮ ಮೇಲಿರಲಿ. ಗಣೇಶನನ್ನು ಸೆಪ್ಟೆಂಬರ್ 19ರಂದು ಪ್ರತಿಷ್ಠಾಪಿಸಲಾಗಿದೆ, ಸೆಪ್ಟೆಂಬರ್ 28ರಂದು ವಿಸರ್ಜನೆ ಮಾಡಲಾಗುವುದು. ಈ ಸಮಯದಲ್ಲಿ ನೀವು ಗಣೇಶನ ಭಕ್ತಿಯಿಂದ ಆರಾಧಿಸಿದರೆ ಗಣೇಶ ನಿಮ್ಮೆಲ್ಲಾ ಇಷ್ಟಾರ್ಥಗಳನ್ನು ನೆರವೇರಿಸುತ್ತಾನೆ ಎಂದು ಹೇಳಲಾಗುವುದು. ಇನ್ನು ಆರ್ಥಿಕ ಸಂಕಟದಲ್ಲಿ ಇರುವವರು ಈ ಸಮಯದಲ್ಲಿ ಪ್ರತಿ ದಿನ ಗಣೇಶನ ಈ 4 ಮಂತ್ರಗಳನ್ನು 108 ಬಾರಿ ಪಠಿಸಿದರೆ ಗಣೇಶ ಕೃಪೆಯಿಂದ ನಿಮ್ಮೆಲ್ಲಾ ಕಷ್ಟಗಳು ದೂರಾಗಲಿದೆ.

ಗಣೇಶ ಮಂತ್ರವನ್ನು ಹೇಗೆ ಪಠಿಸಬೇಕು?
ನೀವು ಗಣೇಶ ಮಂತ್ರದ ಸಂಪೂರ್ಣ ಪ್ರಯೋಜನ ಪಡೆಯಲು ಕೆಲವೊಂದು ನಿಯಮಗಳನ್ನು ಅನುಸರಿಸಿದರೆ ಒಳ್ಳೆಯದು
* ನೀವು ಮಂತ್ರ ಪಠಣೆ ಮಾಡುವ ಮುನ್ನ ಸ್ನಾನ ಮಾಡಬೇಕು, ಮಡಿ ಬಟ್ಟೆ ಧರಿಸಬೇಕು. ಮನಸ್ಸು ಹಾಗೂ ದೇಹ ಶುದ್ಧವಾಗಿರಬೇಕು.
* ಮನಸ್ಸು ಸಂಪೂರ್ಣವಾಗಿ ಗಣೇಶನ ಮೇಲಿರಬೇಕು, ಶ್ರದ್ಧೆಯಿಂದ ಮಂತ್ರವನ್ನು ಪಠಣೆ ಮಾಡಬೇಕು.
* ಮಂತ್ರವನ್ನು ಪಠಣೆ ಮಾಡುವಾಗ ನಿಮ್ಮೆಲ್ಲಾ ಚಿಂತೆ ದೂರಾಗುವುದು, ಮಂತ್ರ ಹೇಳುವಾಗ ಮಧ್ಯದಲ್ಲಿ ಮಾತನಾಡಬೇಡಿ.
ಮಂತ್ರ 1
ವಕ್ರತುಂಡ ಮಹಾಕಾಯ ಕೋಟಿ ಸೂರ್ಯ ಸಮಪ್ರಭ
ನಿರ್ವಿಘ್ನಂ ಕುರು ಮೇ ದೇವ ಸರ್ವ ಕಾರ್ಯೇಷು ಸರ್ವದ
ವಕ್ರತುಂಡ ಗಣೇಶ ಮಂತ್ರದ ಪ್ರಯೋಜನಗಳು
* ಇದು ನಿಮ್ಮೆಲ್ಲಾ ವಿಘ್ನಗಳನ್ನು ದೂರ ಮಾಡುತ್ತದೆ
* ಈ ಮಂತ್ರವನ್ನು ಪಠಣೆ ಮಾಡುವುದರಿಂದ ವೃತ್ತಿ ಜೀವನದಲ್ಲಿ ಉತ್ತಮ ಅವಕಾಶಗಳು ದೊರೆಯಲಿದೆ.
* ಈ ಮಂತ್ರ ಪಠಣೆ ಮಾಡುವುದರಿಂದ ಆತ್ಮವಿಶ್ವಾಸ ಹೆಚ್ಚಾಗುವುದು, ಮನಸ್ಸಿಗೆ ನೆಮ್ಮದಿ ಸಿಗುವುದು
ಮಂತ್ರ 2
ಓಂ ಏಕದಂತಾಯ ವಿಧ್ಮಹೆ
ವಕ್ರತುಂಡಾಯ ಧೀಮಹಿ
ತನ್ನೋ ದಂತಿ ಪ್ರಚೋದಯಾತ್
ಗಣೇಶ ಗಾಯತ್ರಿ ಮಂತ್ರದ ಪ್ರಯೋಜನಗಳು
* ಈ ಮಂತ್ರ ಪಠಣೆ ಮಾಡುವುದರಿಂದ ಮಾನಸಿಕ ಒತ್ತಡ ದೂರಾಗುವುದು
* ತುಂಬಾ ಸಮಯದಿಂದ ಕಾಡುತ್ತಿರುವ ಕಾಯಿಲೆಯಿಂದ ಮುಕ್ತಿ ಪಡೆಯಬಹುದು
* ಐಶ್ವರ್ಯ ಹೆಚ್ಚಾಗುವುದು, ಸೌಲಭ್ಯಗಳು ಹೆಚ್ಚಾಗುವುದು
ಮಂತ್ರ 3
ಗಜಾನನಂ ಭೂತ ಗಾಣಧಿ ಸೇವಿತಂ
ಕಪಿಥ ಜಂಬೋ ಫಲ ಸಾರ ಭಕ್ಷಿತಂ
ಉಮಾಸುತಂ ಶೋಕ ವಿನಾಶಕಾರಣಂ
ನಮಾಮಿ ವಿಘ್ನೇಶ ಪಾದ ಪಂಕಜಂ.
ಈ ಮಂತ್ರದ ಪ್ರಯೋಜನಗಳು
* ಈ ಮಂತ್ರ ಪಠಣೆ ಮಾಡುವುದರಿಂದ ಮನಸ್ಸಿಗೆ ಶಾಂತಿ ಸಿಗುವುದು
* ಈ ಮಂತ್ರ ಪಠಣೆ ಮಾಡುವುದರಿಂದ ಒತ್ತಡ ಕಡಿಮೆಯಾಗುವುದು, ಧೈರ್ಯ ಹೆಚ್ಚಾಗುವುದು.
* ಆರ್ಥಿಕ ಸಮಸ್ಯೆ ದೂರಾಗುವುದು
ಮಂತ್ರ 4
ಗಣೇಶ ಮೂಲ ಮಂತ್ರ
"ಓಂ ಶ್ರೀಂ ಹ್ರೀಂ ಕ್ಲೀಂ ಗ್ಲೌಂ ಗಂ ಗಣಪತಯೇ ವರ ವರದ ಸರ್ವಜನ ಜನ್ಮಯಾ ವಶಮಾನಾಯೇ ಸ್ವಾಹಾ
ತತ್ಪುರುಷಾಯಾ ವಿದ್ಮಹೇ
ವಕ್ರತುಂಡಾಯ ಧೀಮಹಿ
ತನ್ನೋ ದಂತಿ ಪ್ರಚೋದಯಾತ್
ಓಂ ಶಾಂತಿಃ ಶಾಂತಿಃ ಶಾಂತಿಃ"
ಮೂಲ ಮಂತ್ರದ ಪ್ರಯೋಜನಗಳು
* ಇದು ತುಂಬಾ ಪರಿಣಾಮಕಾರಿಯಾದ ಮಂತ್ರವಾಗಿದೆ, ಇದನ್ನು ಪಠಣೆ ಮಾಡುವುದರಿಂದ ಮನಸ್ಸಿನಲ್ಲಿ ಧನಾತ್ಮಕ ಭಾವನೆಗಳು ಹೆಚ್ಚಾಗುವುದು.
* ಈ ಮಂತ್ರವನ್ನು ಸಂಪೂರ್ಣ ಭಕ್ತಿಯಿಂದ ಪಠಿಸಬೇಕು.
ಗಣೇಶ ಮಂತ್ರವನ್ನು ಹೇಗೆ ಪಠಿಸಬೇಕು?
* ಗಣೇಶ ಮಂತ್ರವನ್ನು ಗಣೇಶ ಮೂರ್ತಿ ಅಥವಾ ಫೋಟೋದ ಮುಂದೆ ಪಠಿಸಿ
* ಪೂರ್ವಕ್ಕೆ ಮುಖ ಮಾಡಿ ಕೂತು ಮಂತ್ರ ಪಠಣೆ ಮಾಡಿ
* ಮಂತ್ರವನ್ನು 108 ಬಾರಿ ಪಠಿಸಿ.



Click it and Unblock the Notifications
