Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಲಕ್ಷ ಲಕ್ಷ ಸಂಬಳವಿದ್ದರೂ ಸಾಲ ಮಾಡುವುದೇಕೆ..? ಚಾಣಕ್ಯ ಹೇಳುವ ಈ ದರಿದ್ರ ಗುಣಗಳ ಬಿಡಿ..!!
ನೀವು ಜೀವನದ ಬಹುಮುಖ್ಯ ಉದ್ದೇಶ ಏನು ಅಂದ್ರೆ ಹಣ ಮಾಡೋದು ಎನ್ನಬಹುದು. ಜೀವನದಲ್ಲಿ ಪ್ರತಿಯೊಬ್ಬರು ಹಣ ಮಾಡುವ ಉದ್ದೇಶದಿಂದಲೇ ಕೆಲಸ ಮಾಡುವುದು ನೋಡಬಹುದು. ಹಾಗೆ ಪ್ರತಿಯೊಬ್ಬರು ಹಣ ಮಾಡಲು ಒಂದೊಂದು ಕೆಲಸ, ಉದ್ಯೋಗ, ಮಾರ್ಗ ಕಂಡುಕೊಂಡಿರುತ್ತಾರೆ. ಹಾಗೆ ಹಣ ಉಳಿತಾಯ ಮಾಡುವುದು ಕೂಡ ಈಗ ಬಹಳ ಮುಖ್ಯವಾದ ವಿಚಾರವಾಗಿದೆ. ನಾವು ಹಣ ಉಳಿತಾಯಕ್ಕಾಗಿ ಏನೆಲ್ಲಾ ಮಾಡಬೇಕು ಅನ್ನೋದನ್ನು ತಿಳಿದಿರುತ್ತೇವೆ. ಅಂತಹ ಕೆಲವು ಮಾರ್ಗಗಳ ಅನುಸರಿಸುವುದು ಕೂಡ ಇದೆ.
ಹಾಗೆ ನೀವು ಎಷ್ಟು ಹಣ ಸಂಪಾದನೆ ಮಾಡಿದರೂ ಕೂಡ ಹಲವರು ಹೇಳುವ ಆರೋಪ ಎಂದರೆ ಕೈನಲ್ಲಿ ಹಣ ಉಳಿಯುವುದಿಲ್ಲ ಎಂದು. ಎಷ್ಟು ದುಡಿದರು ಹಣ ನಿಲ್ಲುವುದಿಲ್ಲ ಎಂದು ಬಹುತೇಕರು ಹೇಳುತ್ತಿರುತ್ತಾರೆ. ಹಾಗಾದ್ರೆ ಇದಕ್ಕೆ ಕಾರಣ ಏನಿರಬಹುದು ಎಂಬುದನ್ನು ನೀವು ಆಲೋಚಿಸಿದ್ದೀರಾ? ಲಕ್ಷ ಲಕ್ಷ ದುಡಿದರು ಹಲವರು ಸಾಲದ ಸುಳಿಗೆ ಸಿಲುಕುತ್ತಾರೆ. ಇದಕ್ಕೆಲ್ಲಾ ಚಾಣಕ್ಯ ತನ್ನ ಶಾಸ್ತ್ರದಲ್ಲಿ ಕಾರಣಗಳನ್ನು ಕೂಟ ಪಟ್ಟಿ ಮಾಡಿರುತ್ತಾರೆ. ಚಾಣಕ್ಯ ಜಗತ್ತು ಕಂಡ ಶ್ರೇಷ್ಠ ವಿದ್ವಾಂಸ ಮತ್ತು ದಾರ್ಶನಿಕ. ಕೌಟಿಲ್ಯ ಮತ್ತು ವಿಷ್ಣು ಗುಪ್ತಾ ಮುಂತಾದ ಹೆಸರುಗಳಿಂದ ಕರೆಯಲ್ಪಡುವ ಅವರ ಚಿಂತನೆಗಳು ಇಂದಿಗೂ ಬಹಳ ಪ್ರಸ್ತುತವಾಗಿವೆ.

ಚಾಣಕ್ಯ ಹೇಳುವಂತೆ ನಿಮ್ಮ ಸಾಲ ಹೆಚ್ಚಾಗಲು ಕೆಲವು ಕಾರಣಗಳಿವೆಯಂತೆ, ಈ ಕಾರಣಗಳು ಜನ್ಮದತ್ತವಾಗಿ ಬಾರದೆ ಇದ್ದರೂ ನೀವಾಗಿಯೇ ಇದನ್ನು ನಿಮ್ಮಲ್ಲಿ ರೂಪಿಸಿಕೊಂಡಿರುದಾಗಿ ಅವರು ಹೇಳುತ್ತಾರೆ. ಚಾಣಕ್ಯ ತನ್ನ ಆರ್ಥಿಕ ವಿಚಾರಗಳ ಕುರಿತು ಹೇಳುವಾಗ ಈ ಸಾಲದ ಸಮಸ್ಯೆಯ ಕುರಿತಂತೆಯೂ ಹೇಳಿದ್ದಾರೆ. ವ್ಯಕ್ತಿಯೊಬ್ಬ ಜೀವನದಲ್ಲಿ ಯಶಸ್ವಿಯಾಗಬೇಕಾದರೆ ಹಾಗೆ ಹಣಕಾಸು ವಿಚಾರದಲ್ಲಿ ಸಮೃದ್ಧಿ ಪಡೆಯಬೇಕಾದರೆ ಕೆಲವು ಅಭ್ಯಾಸಗಳನ್ನು ಬಿಡಬೇಕಂತೆ.
ಬೇರೆಯವರ ಯಶಸ್ಸಿಗೆ ಅಸೂಯೆ
ಎಲ್ಲರು ಯಶಸ್ಸಿಗಾಗಿಯೇ ಸ್ಪರ್ಧೆಗಿಳಿಯುತ್ತಾರೆ. ಆದ್ರೆ ನಿಮ್ಮ ಮುಂದೆ ಬೇರೆಯವರು ಯಶಸ್ಸು ಗಳಿಸುವುದನ್ನು ನೋಡಿ ನೀವು ಅಸೂಯೆ ಪಟ್ಟುಕೊಂಡರೆ ನಿಮ್ಮ ಜೀವನ ಕೂಡ ಕಷ್ಟವಾಗಬಹುದಂತೆ, ಆತ ಶ್ರಮ ಪಟ್ಟು ಯಶಸ್ಸಿನ ಹಿಂದೆ ಹೋಗಿರುತ್ತಾನೆ. ಆತನ ಶ್ರಮ, ಕಷ್ಟಗಳ ನಡುವೆ ಯಶಸ್ಸು ನೋಡಿ ನೀವು ಅಸೂಯೆ ಪಟ್ಟುಕೊಂಡರೆ ನೀವು ಹಣಕಾಸಿನಲ್ಲಿ ಎಂದಿಗೂ ಯಶಸ್ಸು ಪಡೆಯುವುದಿಲ್ಲ. ನಿಮ್ಮಲ್ಲಿ ಆತನ ಮೇಲೆ ಗೌರವ ಹೆಚ್ಚಾಗಬೇಕೆ ವಿನಃ ಆತನ ನೋಡಿ ಹೊಟ್ಟೆ ಉರಿದುಕೊಳ್ಳಬಾರದು ಎಂದು ಚಾಣಕ್ಯ ಹೇಳಿದ್ದಾರೆ.
ಹಣದ ಕುರಿತ ನಿರ್ಲಕ್ಷ್ಯ
ಹಣದ ವಿಚಾರದಲ್ಲಿ ಎಂದಿಗೂ ನಿರ್ಲಕ್ಷ್ಯ ಮಾಡಬಾರದಂತೆ. ಅಂದರೆ ಹಣ ಬಂದಾಗ ಅದರ ಬಗ್ಗೆ ಗಮನ ನೀಡದೆ ಅನಗತ್ಯವಾಗಿ ಖರ್ಚು ಮಾಡುವುದು. ಹಣವನ್ನು ನಿಕೃಷ್ಟವಾಗಿ ನೋಡುವುದು ಮಾಡಿದರೆ ನಿಮಗೆ ಎಷ್ಟೆ ವೇತನ ಇದ್ದರೂ ಎಷ್ಟೇ ಸಂಬಂಳ ಬಂದರೂ ಸಾಲ ಮಾಡುವುದು ತಪ್ಪುವುದಿಲ್ಲ. ಹೀಗಾಗಿ ಹಣ ಬಂದಾಗ ಅದನ್ನು ಉಳಿತಾಯ ಮಾಡುವುದು ಹೇಗೆ ಅನ್ನೋದನ್ನು ನಾವು ಅರಿತಿರಬೇಕು. ಹಣ ಬಂದಾಗ ರಾಜನಂತೆ ಮೆರೆದು ಇಲ್ಲದಾಗ ಸಾಲ ಮಾಡುವುದು ಆತನ ಜೀವನದಲ್ಲಿ ರೂಢಿಯಾಗುತ್ತದೆ. ಇದರಿಂದ ಆತನಲ್ಲಿ ಹಣ ಎಷ್ಟು ದುಡಿದರು ಸಾಲ ಮಾಡುವುದು ಖಚಿತ.
ಸೋಮಾರಿತನ
ವ್ಯಕ್ತಿಯೊಬ್ಬ ಎಷ್ಟು ಸೋಮಾರಿಯಾಗಿರುತ್ತಾನೋ ಆತನಲ್ಲಿ ಹಣ ಉಳಿಯುವುದಿಲ್ಲ. ಆತ ತನ್ನ ಕೆಲಸದಲ್ಲಿ ಗಮನವಿಡುವುದಿಲ್ಲ. ಆದ್ರೆ ವೇತನ ಪಡೆಯಲು ಯಾವಾಗಲು ಮುಂದೆ ಇರುವ ಮನಸ್ಸು ಆತನಿಗೆ ಕೆಲಸದಲ್ಲಿ ಇರುವುದಿಲ್ಲ. ಹೀಗಿರುವಾಗ ಆತ ಹಣ ಉಳಿತಾಯ ಮಾಡುವುದಿಲ್ಲ, ಇದರಿಂದ ಆತ ಎಷ್ಟು ಹಣ ದುಡಿದರು ಕೂಡ ಬಹಳ ಸಮಯ ಆತನಲ್ಲಿ ಉಳಿಯುವುದಿಲ್ಲ ಸಾಲ ಹೆಚ್ಚಾಗುವುದು ಇದೇ ಕಾರಣಕ್ಕೆ ಎಂಬುದನ್ನು ಚಾಣಕ್ಯ ಹೇಳಿದ್ದಾರೆ.



Click it and Unblock the Notifications
